PRABHAVAA.COM

ಲಕ್ಕುಂಡಿಯನ್ನು ಜಾಗತಿಕ ಪಾರಂಪರಿಕ ತಾಣವನ್ನಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ: ಸಚಿವ ಎಚ್‌.ಕೆ. ಪಾಟೀಲ್

Bengaluru Urban:

Font size:

ಲಕ್ಕುಂಡಿಯನ್ನು ಜಾಗತಿಕ ಪಾರಂಪರಿಕ ತಾಣವನ್ನಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ: ಸಚಿವ ಎಚ್‌.ಕೆ. ಪಾಟೀಲ್

ಬೆಂಗಳೂರು, ಮೇ 16-ಲಕ್ಕುಂಡಿಯನ್ನು ಜಾಗತಿಕ ಪಾರಂಪರಿಕ ತಾಣವನ್ನಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರವು ಎಲ್ಲಾ ಹಂತಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್‌.ಕೆ. ಪಾಟೀಲ್ ತಿಳಿಸಿದರು.

ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗದಗ ಜಿಲ್ಲೆಯ ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ರಾಜ್ಯಮಟ್ಟದ ಸಭೆಯ ಪ್ರಮುಖ ನಿರ್ಣಯಗಳನ್ನು ವಿವರಿಸಿ, ಕಳೆದ ಒಂದು ವರ್ಷದಲ್ಲಿ ಲಕ್ಕುಂಡಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸಲಾಗಿದೆ. 2024ರ ನವೆಂಬರ್‌ನಲ್ಲಿ ನಡೆದ “ಪಲ್ಲಕ್ಕಿ ಉತ್ಸವ”ದ ವೇಳೆ ಸಾರ್ವಜನಿಕರಿಂದ ಅವರ ಬಳಿ ಲಭ್ಯವಿದ್ದ ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸುವ ಮೂಲಕ ಈ ಕಾರ್ಯವನ್ನು ಜನಾಂದೋಲನವಾಗಿ ಪರಿವರ್ತಿಸಲಾಗಿದೆ. 2026ರ ಮೇ ಮೊದಲ ವಾರದಲ್ಲಿ ನಡೆದ “ಪ್ರಾಚ್ಯಾವಶೇಷಗಳ ಅನ್ವೇಷಣೆ” ಆಂದೋಲನದ ವೇಳೆ 1500ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು, ಐದು ಪುರಾತನ ದೇವಾಲಯಗಳು ಮತ್ತು ಐದು ಭಾವಿಗಳನ್ನು ಅನಾವರಣಗೊಳಿಸಲಾಗಿದೆ ಎಂದು ಅವರು ಹೇಳಿದರು.

ಲಕ್ಕುಂಡಿಯ 16 ದೇವಾಲಯಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ 100 ಭಾವಿಗಳು ಮತ್ತು 100 ಪುರಾತನ ದೇವಾಲಯಗಳನ್ನು ಅನಾವರಣಗೊಳಿಸುವ ಕ್ರಮಕ್ಕೆ ರಾಜ್ಯ ಸರ್ಕಾರ ಹೆಜ್ಜೆಯಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಇಷ್ಟು ದೊಡ್ಡ ಪ್ರಮಾಣದ ಪ್ರಾಚ್ಯಾವಶೇಷ ಸಂಗ್ರಹ ಮತ್ತು ಅನ್ವೇಷಣೆ ನಡೆದಿರುವುದು ಐತಿಹಾಸಿಕ ಬೆಳವಣಿಗೆ ಎಂದು ಪಾಟೀಲ್ ಹೇಳಿದರು.

ಅವರು ಆಂಧ್ರಪ್ರದೇಶದ ವಾರಂಗಲ್‌ನಲ್ಲಿ ಕಾಕತೀಯ ಯುಗದ ದೇವಾಲಯಗಳ ಅಳಿದುಳಿದ ಸ್ಥಂಭಗಳು ಮತ್ತು ಅಲಂಕಾರಿಕ ದ್ವಾರಗಳು ಸೇರಿದಂತೆ 1200 ಪ್ರಾಚ್ಯಾವಶೇಷಗಳು ಪತ್ತೆಯಾಗಿರುವುದನ್ನು ಉಲ್ಲೇಖಿಸಿ, ಲಕ್ಕುಂಡಿಯ ವಿಜಯನಗರ ಶೈಲಿಯ ದೇವಾಲಯಗಳು ಚಾಲುಕ್ಯರ ಕಾಲದ ಶಿಲ್ಪಕಲಾ ನೈಪುಣ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. ಲಕ್ಕುಂಡಿಯು ಸಾವಿರ ವರ್ಷಗಳ ಹಿಂದೆಯೇ ಉನ್ನತ ಸ್ಥಿತಿಯನ್ನು ತಲುಪಿದ ಪ್ರಮುಖ ನಗರವಾಗಿದ್ದು, 50ಕ್ಕೂ ಹೆಚ್ಚು ದೇವಾಲಯಗಳು ಮತ್ತು ಭಾವಿಗಳು ಗ್ರಾಮದುದ್ದಕ್ಕೂ ಹರಡಿವೆ. ಚಾಲುಕ್ಯರು, ಕಲಚೂರಿಗಳು, ದೇವಗಿರಿಯ ಯಾದವರು, ಸೇವಣರು ಮತ್ತು ಹೊಯ್ಸಳರ ಆಳ್ವಿಕೆಯಲ್ಲಿ ನಿರ್ಮಿಸಲಾದ ಅನೇಕ ಶಾಸನಗಳು ಇಲ್ಲಿ ದೊರೆತಿವೆ ಎಂದು ಅವರು ವಿವರಿಸಿದರು.

ಪಾಟೀಲ್ ಅವರು ಕಾಶಿ ವಿಶ್ವನಾಥ ದೇವಾಲಯದ ಅಲಂಕೃತ ಶಿಲ್ಪಕಲೆ, ಜೈನ ದೇವಾಲಯದ ಪುರಾತನತೆ ಹಾಗೂ ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪದ ವೈಶಿಷ್ಟ್ಯವನ್ನು ಉಲ್ಲೇಖಿಸಿದರು. ಲಕ್ಕುಂಡಿಯು ತನ್ನ ಕಲಾತ್ಮಕ ಬಾವಿಗಳಿಂದ ಪ್ರಸಿದ್ಧವಾಗಿದ್ದು, ಬಾವಿಗಳ ಗೋಡೆಗಳಲ್ಲಿ ಲಿಂಗಾಕೃತಿಯ ಶಿಲ್ಪಗಳು ಕಾಣಸಿಗುತ್ತವೆ ಎಂದು ಹೇಳಿದರು.

ಅವರು ಮುಂದುವರೆದು, ಲಕ್ಕುಂಡಿಯ ಕಲಾ ಶಿಲ್ಪ ಗ್ಯಾಲರಿಯನ್ನು ಭಾರತದ ಪುರಾತತ್ವ ಇಲಾಖೆ ನಿರ್ವಹಿಸುತ್ತಿದ್ದು, ಪುರಾತತ್ವ ಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವ ಪ್ರವಾಸಿಗರಿಗೆ ಇದು ಭೇಟಿ ನೀಡಲೇಬೇಕಾದ ತಾಣವಾಗಿದೆ ಎಂದು ಹೇಳಿದರು. ನವದೆಹಲಿಯ ರಾಷ್ಟ್ರೀಯ ಪ್ರಾಚ್ಯಾವಸ್ತು ಸಂಗ್ರಹಾಲಯದಲ್ಲಿ 50 ವರ್ಷಗಳ ಹಿಂದೆ ಲಕ್ಕುಂಡಿಯಿಂದ ತೆಗೆದುಕೊಂಡು ಹೋಗಿರುವ ಪ್ರಾಚ್ಯಾವಶೇಷಗಳನ್ನು ಮರಳಿ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಟೀಲ್ ಘೋಷಿಸಿದರು.

, “ಲಕ್ಕುಂಡಿಯು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಜೀವಂತ ಸಾಕ್ಷಿಯಾಗಿದೆ. ಸರ್ಕಾರವು ಈ ತಾಣವನ್ನು ಜಾಗತಿಕ ಪಾರಂಪರಿಕ ತಾಣವಾಗಿ ರೂಪಿಸಲು ಬದ್ಧವಾಗಿದೆ.”ಎಂದರು .

Comments

Leave a Comment

Prev Post ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಬೆಂಗಳೂರು-ವಿಜಯಪುರ ವಿಶೇಷ ರೈಲು: ಎಂ ಬಿ ಪಾಟೀಲ ಸಂತಸ
Next Post ವಿಕಲಚೇತನ ಮಕ್ಕಳಿಗಾಗಿ ಉಡುಪಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ವಿಶಿಷ್ಟ ‘ಸಾಮರ್ಥ್ಯ ವನ ಪಾರ್ಕ್’ ನಿರ್ಮಾಣ ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶಿಲಾನ್ಯಾಸ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News