ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾಗಿ 30ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿಗೆ ಸ್ಥಾನಪನ್ನ ಪದೋನ್ನತಿ
https://prabhavaa.com/media/documents/family_health_transfers_copy.pdf
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಹಾಗೂ ಪದವೀಧರ ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹುದ್ದೆಗೆ ಸ್ಥಾನಪನ್ನ ಪದೋನ್ನತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಇಲಾಖೆಯು ಈ ಹಿಂದೆ ಪ್ರಕಟಿಸಿದ್ದ ಅಂತಿಮ ಜೇಷ್ಠತಾ ಪಟ್ಟಿಯನ್ನು ಆಧರಿಸಿ ಇಲಾಖಾ ಮುಂಬಡ್ತಿ ಸಮಿತಿಯ ಶಿಫಾರಸಿನಂತೆ ಅರ್ಹ ನೌಕರರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ, 2026ರ ಅಕ್ಟೋಬರ್ 30ರಂದು ನಡೆದ ಆನ್‌ಲೈನ್ ಸಮಾಲೋಚನೆಯಲ್ಲಿ ಭಾಗವಹಿಸಿ ಸ್ಥಳ ಆಯ್ಕೆ ಮಾಡಿಕೊಂಡ ನೌಕರರಿಗೆ ಈ ಪದೋನ್ನತಿ ಅವಕಾಶ ಕಲ್ಪಿಸಲಾಗಿದೆ.
ಆದೇಶದಂತೆ ಆಯ್ಕೆಯಾದ ಸಿಬ್ಬಂದಿಗೆ ಕರ್ನಾಟಕ ನಾಗರೀಕ ಸೇವಾ ನಿಯಮ 42(ಬಿ) ಅನ್ವಯ ವೇತನ ಶ್ರೇಣಿ ರೂ.49,050 ರಿಂದ ರೂ.92,500ರವರೆಗಿನ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹುದ್ದೆಗೆ ಸ್ಥಾನಪನ್ನ ಪದೋನ್ನತಿ ನೀಡಲಾಗಿದೆ. ಸರ್ಕಾರ ನಿಗದಿಪಡಿಸಿರುವ ಷರತ್ತುಗಳು ಹಾಗೂ ನಿಯಮಗಳಿಗೆ ಒಳಪಟ್ಟು ಈ ಪದೋನ್ನತಿ ಜಾರಿಗೊಳಿಸಲಾಗಿದೆ.
link ; https://prabhavaa.com/media/documents/family_health_transfers_copy.pdf
#HealthDepartment #HealthAndFamilyWelfare #HealthOfficerPromotion #FieldHealthEducationOfficer #GovernmentJobs #KarnatakaGovernment #HealthOfficials #PromotionOrder #PublicHealth #HealthcareAdministration #KarnatakaHealthDepartment #EmployeePromotion #HealthSector #GovernmentOrder #KarnatakaNews







Comments
Leave a Comment