PRABHAVAA.COM

ಕೊಟ್ಟಾರ ಇನ್ಫೋಸಿಸ್ ಕಟ್ಟಡ ಮುಕುಂದ್ ಸಂಸ್ಥೆಯ ತೆಕ್ಕೆಗೆ

Dakshina Kannada:

Font size:

ಕೊಟ್ಟಾರ ಇನ್ಫೋಸಿಸ್ ಕಟ್ಟಡ ಮುಕುಂದ್ ಸಂಸ್ಥೆಯ ತೆಕ್ಕೆಗೆ

From ; Jarayaram Udupi

ಮಂಗಳೂರು:

ಮಂಗಳೂರಿಗೆ ದೊಡ್ಡ ಪ್ರಮಾಣದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮ ಬರಲು ಕಾರಣವಾದ ಇನ್ಫೋಸಿಸ್ ತನ್ನ ಕೊಟ್ಟಾರದಲ್ಲಿರುವ ಕ್ಯಾಂಪಸ್ ಮಾರಾಟ ಮಾಡಿದೆ.

ಅಕ್ಟೋಬರ್ ೨೩ರಂದು ಅಧಿಕೃತವಾಗಿ ಮಾರಾಟ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಲ್ಯಾಂಡ್ ಮಾರ್ಕ್ ಕ್ಯಾಂಪಸನ್ನು ಮಂಗಳೂರಿನ ಮುಕುಂದ್ ಎಂ.ಜಿ.ಎಂ. ರಿಯಾಲಿಟಿ ಸಂಸ್ಥೆ ಖರೀದಿಸಿದೆ.

ಕ್ಯಾಂಪಸ್ ೨.೭೫ ಎಕರೆ ಭೂಮಿಯನ್ನು ಹೊಂದಿದೆ.
ಕಟ್ಟಡವನ್ನು ವರ್ಟೆಕ್ಸ್ ವರ್ಕ್ ಸ್ಪೇಸಸ್ ನಿರ್ವಹಣೆ ಮಾಡಲಿದೆ. ಸುಮಾರು ಒಂದು ಸಾವಿರ ಆಸನ ಸಾಮರ್ಥ್ಯವನ್ನು ಸಂಸ್ಥೆ ನಿರ್ಮಾಣ ಮಾಡಲಿದೆ. ಇಲ್ಲಿ ತಂತ್ರಜ್ಞಾನ ಪಾರ್ಕ್ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಲಾಗಿದೆ.

ಭರತ್ ಲಾಲ್ ಮೀನಾ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗ ಈ ಭೂಮಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಯೋಜನೆ ರೂಪಿಸಿದ್ದರು.

ಅಂದು ಮೂಡಾ ನಿರ್ಮಿಸಿದ ಈ ಕಟ್ಟಡವನ್ನು ಬಳಿಕ ಭೂಮಿ ಸಹಿತ ಇನ್ಷೋಸಿಸ್ ಖರೀದಿಸಿತ್ತು. ನಾವು ಸರಕಾರಕ್ಕೆ ಯೋಗ್ಯ ಬೆಲೆ ಕೊಟ್ಟು ಇದನ್ನು ಖರೀದಿಸಿದ್ದೇವೆ ಎಂದು ಇನ್ಫೋಸಿಸ್ ನ ಆಗಿನ ಮುಖ್ಯಸ್ಥ ನಾರಾಯಣ ಮೂರ್ತಿ ಹೇಳಿದ್ದರು. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ. ಇನ್ಫೋಸಿಸ್ ನ ಈ ಸೌಲಭ್ಯವನ್ನು ಉದ್ಘಾಟಿಸಲಾಗಿತ್ತು. ಸಂಸ್ಥೆಯ ಅಗತ್ಯಕ್ಜೆ ತಕ್ಕಂತೆ ಕಟ್ಟಡವನ್ನು ಇನ್ಫೋಸಿಸ್ ಅಂದು ಮರುವಿನ್ಯಾಸಗೊಳಿಸಿ ಅಭಿವೃದ್ಧಿ ಮಾಡಿತ್ತು.

ಅಂದು ಅಭಿವೃದ್ಧಿಯನ್ನು ಸಿಂಗಾಪುರದ ಜೊತೆ ಸಮೀಕರಿಸುವುದರ ಮೂಲಕ ರಾಜ್ಯದ ಮೂಲಸೌಕರ್ಯಗಳನ್ನು ಆ ಮಟ್ಟಕ್ಕೆ ಕೊಂಡೊಯ್ಯುವುದು ತಮ್ಮ ಇರಾದೆ ಎಂದು ಎಸ್.ಎಂ.ಕೃಷ್ಣ ಭಾಷಣಗಳಲ್ಲಿ ಹೇಳುತ್ತಿದ್ದರು. ಇನ್ಫೋಸಿಸ್ ಜಿಲ್ಲೆಯಲ್ಲಿ ಉದ್ಯೋಗ ಕ್ರಾಂತಿ ಮಾಡಲಿದೆ ಎಂದು ಅವರು ಅಂದು ಹೇಳಿದ್ದರು.

ಸದ್ಯ ಮುಡಿಪು ಎಸ್.ಇ.ಝಡ್.ನಲ್ಲಿ ತನ್ನ ಬೃಹತ್ ಕ್ಯಾಂಪಸ್ ಹೊಂದಿರುವ ಇನ್ಫೋಸಿಸ್ ಇಂದಿನವರೆಗೂ ಮಾಸ್ ಹಯರರ್ ಆಗಿ ತನ್ನ ಬಧ್ದತೆಯನ್ನು ಉಳಿಸಿಕೊಂಡಿದೆ. ದೊಡ್ಡ ದೊಡ್ಡ ಸಂಸ್ಥೆಗಳು ಬೆಳಗ್ಗಿನ ಜಾವ ಇಲೆಕ್ಟ್ರಾನಿಕ್ ಮೈಲ್ ಮೂಲಕ ಉದ್ಯೋಗಿಗಳಿಗೆ ವಜಾ ಆದೇಶಗಳನ್ನು ಕಳುಹಿಸುತ್ತಿದ್ದರೆ, ಇನ್ಫೋಸಿಸ್ ಆ ಹಾದಿಯನ್ನು ಇಂದಿಗೂ ಅನುಸರಿಸಿಲ್ಲ.

ಅದರ ಹೆಜ್ಜೆಗುರುತಿನಲ್ಲಿ ಮುನ್ನಡೆಯಲು ಹೊರಟಿರುವ ಮುಕುಂದ್ ರಿಯಾಲಿಟಿಯ ಸೌಲಭ್ಯ ಮಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಬೆಳವಣಿಗೆಗೆ ಹೊಸ ಹುರುಪು ತುಂಬಲಿದೆ ಎಂದು ಭಾವಿಸಲಾಗುತ್ತಿದೆ.

Comments

Leave a Comment

Prev Post 38 ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದಿಂದ ಲಾಭ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News