PRABHAVAA.COM

ರೈತರ ನಷ್ಟ ತಡೆಯಲು ಹಾಲಿನ ದರ ಏರಿಕೆ: ಸಿಎಂ ಡಿ ಕೆ ಶಿವಕುಮಾರ್

Bengaluru Urban:

Font size:

ರೈತರ ನಷ್ಟ ತಡೆಯಲು ಹಾಲಿನ ದರ ಏರಿಕೆ: ಸಿಎಂ ಡಿ ಕೆ ಶಿವಕುಮಾರ್

ರೈತರ ನಷ್ಟ ತಡೆಯಲು ಹಾಲಿನ ದರ ಏರಿಕೆ: ಸಿಎಂ ಡಿ ಕೆ ಶಿವಕುಮಾರ್

12 ರಿಂದ 15 ರೂಗಳ ವರೆಗೆ ಹೆಚ್ಚಳಕ್ಕೆ ಬೇಡಿಕೆ

ಹಾಲಿನ ದರ ಏರಿಕೆಗೆ ಪಕ್ಷಾತೀತ ಬೇಡಿಕೆ

ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ

ಬಸ್ ದರ ಏರಿಕೆ: ಸಾರಿಗೆ ಇಲಾಖೆ ತೀರ್ಮಾನ

ಬೆಂಗಳೂರು, ಅ.29:

“ಕಳೆದ ಒಂದೆರಡು ವರ್ಷದಿಂದ ಹಾಲಿನ ದರ ಏರಿಸಲು ಬೇಡಿಕೆ ಇತ್ತು. ರೈತರ ನಷ್ಟ ತಡೆಯಲು ಹಾಲಿನ ದರ ಏರಿಕೆ ಮಾಡಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದರು.

ನಗರದ ಖಾಸಗಿ ಹೋಟೆಲ್ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

“ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು 8 ರೂ. ಹೆಚ್ಚಿಸಿರುವ ಬಗ್ಗೆ ಕೇಳಿದಾಗ, “ಸರ್ಕಾರ ರೈತರಿಗೆ ಸಹಾಯ ಮಾಡುತ್ತಿದೆ. ರೈತರು ನಮಗೆ ಮುಖ್ಯ” ಎಂದು ತಿಳಿಸಿದರು,

12 ರಿಂದ 15 ರೂಗಳ ವರೆಗೆ ಹೆಚ್ಚಳಕ್ಕೆ ಬೇಡಿಕೆ
ಜನಸಾಮಾನ್ಯರಿಗೆ ಹಾಲಿನ ಬೆಲೆ ಹೆಚ್ಚಳದಿಂದ ಹೊರೆಯಾಗುವುದಿಲ್ಲವೆ ಎಂದು ಕೇಳಿದಾಗ, “ರೈತರಿದ್ದರೆ ಹಾಲು ಕುಡಿಯಬಹುದು. ಇಲ್ಲದಿದ್ದರೆ ಹಾಲು ಕುಡಿಯಲು ಸಾಧ್ಯವೇ ಎಂದು ಪ್ರಶ್ನಿಸಿದರು.ಈಗಾಗಲೇ ನಮ್ಮ ಸಚಿವರು ಈ ಬಗ್ಗೆ ತಿಳಿಸಿದ್ದು, ಅದರ ಮೇಲೆ ಹೆಚ್ಚಿಗೆ ಹೇಳುವಂತದ್ದು ಏನು ಇಲ್ಲ. ಪ್ಲಾಸ್ಟಿಕ್ ಕವರ್, ಡೀಸೆಲ್, ಪೆಟ್ರೋಲ್ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಾಗಿದೆ. ಹಾಲಿನ ಸಾರಿಗೆ ವೆಚ್ಚವೂ ಏರಿಕೆಯಾಗಿದೆ. 12 ರಿಂದ 15 ರೂಗಳ ವರೆಗೆ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ನಾವು ಎಲ್ಲರೊಂದಿಗೆ ಚರ್ಚಿಸಿ ಈ ತೀರ್ಮಾನ ಮಾಡಲಾಗಿದೆ” ಎಂದರು.

ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ

“ಪ್ರತಿ ಲೀಟರ್ ನೀರಿಗೆ 30-35 ರೂ ಗಳನ್ನು ನೀಡಲಾಗುತ್ತಿದೆ. ಪಕ್ಕದ ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ಬೆಲೆ ಕಡಿಮೆ ಇದೆ. ನಮ್ಮಲ್ಲಿ ಬೆಲೆ ಕಡಿಮೆ ಇದ್ದಿದ್ದರಿಂದ ಆಂಧ್ರ, ಮಹಾರಾಷ್ಟ್ರಕ್ಕೂ, ಹಾಲು ಹೋಗುತ್ತಿತ್ತು. ಅದನ್ನು ತಡೆಯಬೇಕಿತ್ತು. ತಿರುಪತಿಗೆ ನಂದಿನಿ ತುಪ್ಪವನ್ನೇ ಖರೀದಿ ಮಾಡುತ್ತಾರೆ. ಅವರು ಅಲ್ಲಿಯೇ ಖರೀದಿಸಬಹುದು. ಆದರೆ ನಂದಿನಿ ಬಗ್ಗೆ ಅವರಿಗೆ ನಂಬಿಕೆ ಇದೆ. ಮೈಸೂರು ಪಾಕ್ ಸೇರಿದಂತೆ ಇತರೆ ಪದಾರ್ಥಗಳಿಗೆ ನಂದಿನ ತುಪ್ಪದ ಬೇಡಿಕೆ ಇದೆ. ಇದರ ಜೊತೆಗೆ ಸರ್ಕಾರದಿಂದಲೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ರೈತರಿಗೆ ನಷ್ಟವಾಗುತ್ತಿರುವುದರಿಂದ ಸರ್ಕಾರ ಈ ತೀರ್ಮಾನವನ್ನು ಮಾಡಿದೆ” ಎಂದು ಸ್ಪಷ್ಟಪಡಿಸಿದರು.

ಹಾಲಿನ ದರ ಏರಿಕೆಗೆ ಪಕ್ಷಾತೀತ ಬೇಡಿಕೆ

“ವಿಧಾನಸಭೆ ವಿಧಾನಪರಿಷತ್ತಿನಲ್ಲಿಯೂ ಹಾಲಿನ ದರ ಹೆಚ್ಚಳ ಮಾಡಬೇಕೆಂದು ಪಕ್ಷಾತೀತವಾಗಿ ಎಲ್ಲ ಶಾಸಕರು ಬೇಡಿಕೆ ಇಟ್ಟಿದ್ದರು. ಚುನಾವಣೆ ಇದ್ದುದ್ದರಿಂದ ತೀರ್ಮಾನ ಮಾಡಲಾಗಲಿಲ್ಲ. ಈಗ ಚುನಾವಣೆ ಮುಗಿದಿರುವುದರಿಂದ ತೀರ್ಮಾನ ಕೈಗೊಳ್ಳಲಾಗಿದೆ” ಎಂದರು.

ಬಸ್ ದರ ಏರಿಕೆ: ಸಾರಿಗೆ ಇಲಾಖೆ ತೀರ್ಮಾನಿಸಲಿದೆ

ಬಸ್ ದರವನ್ನು ಏರಿಕೆ ಮಾಡುವ ಬಗ್ಗೆ ಸಾರಿಗೆ ಇಲಾಖೆಯೇ ತೀರ್ಮಾನ ಮಾಡಲಿದೆ ಎಂಬ ಬಗ್ಗೆ ಕೇಳಿದಾಗ, “ಸಾರಿಗೆ ಇಲಾಖೆಯಲ್ಲಿ ಬಹಳ ನಷ್ಟವಾಗಿದ್ದು, ಡೀಸಲ್ ಗೆ ಕೂಡ ಅನುದಾನವಿರಲಿಲ್ಲ. ಮಹಿಳೆಯರಿಗೆ ಬಸ್ ಪ್ರಯಾಣವನ್ನು ಉಚಿತವಾಗಿ ಸರ್ಕಾರ ನೀಡಲಾಗುತ್ತಿದೆ. ಹಾಗಾಗಿ ಸಾರಿಗೆ ಇಲಾಖೆಯವರೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ತಿಳಿಸಲಾಗಿದೆ” ಎಂದರು.

Comments

Leave a Comment

Prev Post ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭೂಪರಿವರ್ತನೆ ಸರಳ: ಅಧ್ಯಕ್ಷ ಸಂತೋಷ್ ಕುಮಾರ್
Next Post ಪ್ರಿಯಾಂಕ್ ಖರ್ಗೆಗೆ ನಿಂದಕ ಮಂತ್ರಿ ಎಂದು ಕರೆದ ಹೆಚ್ ಡಿ ಕುಮಾರಸ್ವಾಮಿ!

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News