PRABHAVAA.COM

ಕ್ರಾಂತಿ ಆಗುವ ಮೊದಲು ಕಾಂಗ್ರೆಸ್ಸಿನವರು ಅಧಿಕಾರ ಬಿಟ್ಟು ತೊಲಗಲಿ: ಶೋಭಾ ಕರಂದ್ಲಾಜೆ ಆಗ್ರಹ

Bengaluru Urban:

Font size:

ಕ್ರಾಂತಿ ಆಗುವ ಮೊದಲು ಕಾಂಗ್ರೆಸ್ಸಿನವರು ಅಧಿಕಾರ ಬಿಟ್ಟು ತೊಲಗಲಿ: ಶೋಭಾ ಕರಂದ್ಲಾಜೆ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಕ್ರಾಂತಿ ಆಗುವ ಮೊದಲು ಕಾಂಗ್ರೆಸ್ಸಿನವರು ಅಧಿಕಾರ ಬಿಟ್ಟು ತೊಲಗಲಿ. ಇಲ್ಲದೇ ಇದ್ದರೆ ಏರಿಸಿರುವ ಎಲ್ಲ ಬೆಲೆಯನ್ನು ಕಡಿಮೆ ಮಾಡಿ, ನಮ್ಮ ರೈತರಿಗೆ ನ್ಯಾಯ ಕೊಡಿ ಎಂದು ಕೇಂದ್ರ ಸಚಿವೆÀ ಕು. ಶೋಭಾ ಕರಂದ್ಲಾಜೆ ಅವರು ಆಗ್ರಹಿಸಿದ್ದಾರೆ.
ಹಾಲಿನ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ವತಿಯಿಂದ ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯ ಸರಕಾರದ ಆಡಳಿತ ಶೂನ್ಯಕ್ಕೆ ಬಂದಿದೆ. ಇವತ್ತು ತಳಮಟ್ಟಕ್ಕೆ ಬಂದಿದೆ. ಆ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣ ಆಗಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳೇ ಕನ್ನಡ ರಾಜ್ಯೋತ್ಸವದ ಕೊಡುಗೆ ಏನು? ಎಂದು ಕೇಳಿದ ಅವರು, ನೀವು ಬಹಳ ದುಡ್ಡಿರುವವರು; ನಿಮ್ಮ ಮನೆಯಲ್ಲಿ ಬಿಸ್ಲೇರಿ ಕುಡಿಯಬಹುದು, ಆದರೆ ನಾವ್ಯಾರೂ ಬಿಸ್ಲೇರಿಯನ್ನು ಕುಡಿಯುವವರಲ್ಲ. ನಾವು ನಮ್ಮ ತಾಯಿ ಕಾವೇರಿಯ ನೀರನ್ನೇ ಕುಡಿಯುತ್ತೇವೆ ಎಂದು ತಿಳಿಸಿದರು.
ನಿಮ್ಮ ಅಂತಸ್ತನ್ನು ನೋಡಿ ರಾಜ್ಯದ ಜನರ ಅಂvಸ್ತು ನಿರ್ಧರಿಸದಿರಿ. ಹಾಲಿಗೆ ನೀವು ದುಡ್ಡು ಕೊಡಬಹುದು, ಆದರೆ ಯಾರು ಇವತ್ತು ದುಡಿದು ತಿಂತಿದ್ದಾರೋ, ಯಾರು ಹೋಟೆಲಲ್ಲಿ ಕೆಲಸ ಮಾಡಿ ಚಿಕ್ಕಪುಟ್ಟ ಸಂಬಳ ತಗೊಂಡು, ಟ್ಯಾಕ್ಸಿ ಓಡಿಸಿಕೊಂಡು, ಆಟೋರಿಕ್ಷಾ ಓಡಿಸಿಕೊಂಡು, ಬೀದಿಬದಿ ವ್ಯಾಪಾರ ಮಾಡಿಕೊಂಡು ಬದುಕುವವರಿಗೆ ಕಷ್ಟವಾಗಿದೆ. ಸಿಕ್ಕಿದ ಸಂಬಳದಲ್ಲಿ ಮನೆ ಬಾಡಿಗೆ ಕಟ್ಟಬೇಕು, ವಿದ್ಯುತ್ ಬಿಲ್ ಕಟ್ಟಬೇಕು, ನೀರಿನ ಬಿಲ್ ಕಟ್ಟಬೇಕು, ನೀವು ಹಾಕಿದಂತ ಕಸದ ಬಿಲ್ ಕಟ್ಟಬೇಕು. ಅದರ ಜೊತೆಗೆ ಪ್ರತಿವರ್ಷ ನೀವು ಏರಿಸುವ ಹಾಲಿನ ದರಕ್ಕೆ, ಮೊಸರಿನ ದರಕ್ಕೆ ದುಡ್ಡು ಕೊಡಬೇಕಾಗಿದೆ ಎಂದು ಆಕ್ಷೇಪಿಸಿದರು.

ಬರಗಾಲದ ಪರಿಹಾರಕ್ಕೆ ಹಲವಾರು ಷರತ್ತು..

ರಾಜ್ಯದಲ್ಲಿ ಮಳೆ ಬಂದಿಲ್ಲ; ತೀವ್ರ ಬರಗಾಲ ಇದೆ. ಸರಕಾರವು ರೈತರಿಗೆ ಎಕರೆಗೆ ಭಿಕ್ಷೆ ಕೊಟ್ಟ ಹಾಗೆ ಎರಡುವರೆ ಸಾವಿರ ರೂಪಾಯಿ ಕೊಟ್ಟಿದೆ ಎಂದು ಟೀಕಿಸಿದರು. ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಕೇಂದ್ರ ಕೊಡುವ ಕಿಸಾನ್ ಸಮ್ಮಾನ್ ಯೋಜನೆಯ ಜೊತೆ 4000 ರೂಪಾಯಿ ಕೊಡುತ್ತಿತ್ತು. ಇವರು ಅಧಿಕಾರಕ್ಕೆ ಬಂದ ತಕ್ಷಣ ನಮ್ಮ ರೈತರಿಗೆ ಯಡಿಯೂರಪ್ಪನವರು ಕೊಡುವ ದುಡ್ಡನ್ನು ನಿಲ್ಲಿಸಿದ್ದಾರೆ. ಎರಡುವರೆ ಸಾವಿರ ಭಿಕ್ಷೆಗೆ 17-18 ನಿಯಮಾವಳಿ, ಷರತ್ತು ಹಾಕಿದ್ದಾರೆ ಎಂದು ಆಕ್ಷೇಪಿಸಿದರು.

ಗೃಹಲಕ್ಷ್ಮಿಯ 5000 ಕೋಟಿ ನಾಪತ್ತೆ

ಹಾಲಿನ ದರವನ್ನು ಹಲವು ಬಾರಿ ಏರಿಸಿದ್ದಾರೆ. ಗ್ಯಾರಂಟಿಗಳೂ ಸರಿಯಾಗಿ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ಹಣ ನಾಪತ್ತೆ ಆಗಿದೆ, ಇವತ್ತಿನ ತನಕ ಲೆಕ್ಕ ಕೊಟ್ಟಿಲ್ಲ ಎಂದು ಅವರು ದೂರಿದರು.
ಬಸ್ಸು ಫ್ರೀ ಎಂದರು. ಬಸ್ಸುಗಳೇ ನಿಂತು ಹೋಗಿವೆ. ಕೆಎಸ್‍ಆರ್‍ಟಿಸಿ ಮತ್ತು ಬೇರೆ ಬೇರೆ ವಿಭಾಗಗಳಲ್ಲಿರುವ ಸರಕಾರಿ ಬಸ್ ರಿಪೇರಿ ಮಾಡಲು ದುಡ್ಡಿಲ್ಲ ಮತ್ತು ಡೀಸೆಲ್ ಹಾಕೋಕೆ ದುಡ್ಡಿಲ್ಲ. ಇದು ನಿಮ್ಮ ಸರ್ಕಾರದ ಪರಿಸ್ಥಿತಿ ಎಂದು ಟೀಕಿಸಿದರು.

ಏರಿಸಿದ ದರ ಹಿಂಪಡೆಯಲು ಭಾರತಿ ಶೆಟ್ಟಿ ಒತ್ತಾಯ

ವಿಧಾನಪರಿಷತ್ ಮಾಜಿ ಸದಸ್ಯೆ ಶ್ರೀಮತಿ ಭಾರತಿ ಶೆಟ್ಟಿ ಅವರು ಮಾತನಾಡಿ, ರಾಜ್ಯ ಸರಕಾರವು ಹಾಲಿನ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರವು ಹಾಲಿಗೆ ಸಬ್ಸಿಡಿಯನ್ನು ಸರಕಾರದ ಖಜಾನೆಯಿಂದ ನೀಡುತ್ತಿತ್ತು. ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಹಾಲಿಗೆ ಸಬ್ಸಿಡಿ ನೀಡಬೇಕು. ಆದರೆ, ಅದಕ್ಕಾಗಿ ಗ್ರಾಹಕರಿಗೆ ಶಾಕ್ ಟ್ರೀಟ್‍ಮೆಂಟ್ ಕೊಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈಗ ನಾವೆಲ್ಲರೂ ಇಡೀ ರಾಜ್ಯದ ಉದ್ದಗಲಕ್ಕೂ ಹೋರಾಟ ಮಾಡುತ್ತಿದ್ದೇವೆ. ಪ್ರತಿಯೊಂದು ಜಿಲ್ಲೆ, ಮಂಡಲ, ವಾರ್ಡ್‍ಗಳಲ್ಲಿ ಕೂಡ ಈ ಬೆಲೆ ಏರಿಕೆಯ ವಿರುದ್ಧ ಹೋರಾಟವನ್ನು ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ಹಮ್ಮಿಕೊಂಡಿದೆ ಎಂದು ಅವರು ವಿವರಿಸಿದರು.
ಹಾಲಿನ ದರವನ್ನು ಈ ಸರಕಾರವು ನಾಲ್ಕು ಬಾರಿ ಏರಿಸಿದೆ. ಒಂದು ಲೀಟರ್ ಹಾಲಿಗೆ 4 ರೂಪಾಯಿ ಏರಿಸಿದ್ದರು. ಬಳಿಕ 3 ರೂಪಾಯಿ ಏರಿಸಿದ್ದರು. ನಂತರ 2 ರೂಪಾಯಿ ಹೆಚ್ಚಿಸಿದ್ದರು. ಆಮೇಲೆ ಈಗ 8 ರೂಪಾಯಿ ಹೇಳಿದ್ದಾರೆ. ಆದರೆ, ಲೆಕ್ಕ ಮಾಡಿದರೆ ಅದು 12 ರೂಪಾಯಿ ಹೆಚ್ಚಾಗಿದೆ ಎಂದು ಆಕ್ಷೇಪಿಸಿದರು.
ಸಿದ್ದರಾಮಣ್ಣನವರು ಮೂರು ಬಾರಿ ನಮಗೆ ಶಾಕ್ ಟ್ರೀಟ್‍ಮೆಂಟ್ ಕೊಟ್ಟಿದ್ದರು. ಡಿ.ಕೆ. ಅಣ್ಣ ಮಾತ್ರ ಒಂದೇ ಬಾರಿ "ದಡಕ್" ಅಂತ ಶಾಕ್ ಟ್ರೀಟ್‍ಮೆಂಟ್ ಕೊಟ್ಟಿದ್ದಾರೆ. ಇದನ್ನು ನಾವು ನಿರೀಕ್ಷೆ ಮಾಡಿಲ್ಲ ಎಂದು ತಿಳಿಸಿದರು.
ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಭಾರತಿ ಮಲ್ಲಿಕಾರ್ಜುನ, ಮುಖಂಡರಾದ ಪೂರ್ಣಿಮಾ ಪ್ರಕಾಶ್, ಬೆಂಗಳೂರು ಉತ್ತರ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಜುಳಾ ದೇವಿ, ಬೆಂಗಳೂರು ಕೇಂದ್ರ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ನೀತು ಎನ್.ಎಂ. ರೆಡ್ಡಿ, ಬೆಂಗಳೂರು ದಕ್ಷಿಣ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಶ್ವೇತಾ ರಾಘವೇಂದ್ರ, ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Comments

Leave a Comment

Prev Post ದಾಖಲೆಯಿಲ್ಲದ ಗ್ರಾಮಠಾಣಾ ಆಸ್ತಿಗೆ ಇ-ಸ್ವತ್ತು, ನ.2ರಿಂದ ಅರ್ಜಿ ಸ್ವೀಕಾರ: ಈಶ್ವರ ಖಂಡ್ರೆ
Next Post ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾಗಿ 30ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿಗೆ ಸ್ಥಾನಪನ್ನ ಪದೋನ್ನತಿ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News