PRABHAVAA.COM

ಬಳ್ಳಾರಿ ಚಲೋ ಪಾದಯಾತ್ರೆ: ವಿಜಯೇಂದ್ರ ನೇತೃತ್ವದಲ್ಲಿ ಆರನೇ ದಿನವೂ ಜನಸಾಗರ, ಹಾಡು-ನೃತ್ಯ-ಬ್ಯಾನರ್‌ಗಳೊಂದಿಗೆ ಉತ್ಸಾಹದ ಅಲೆ

Koppal:

Font size:

ಬಳ್ಳಾರಿ ಚಲೋ ಪಾದಯಾತ್ರೆ: ವಿಜಯೇಂದ್ರ ನೇತೃತ್ವದಲ್ಲಿ ಆರನೇ ದಿನವೂ ಜನಸಾಗರ, ಹಾಡು-ನೃತ್ಯ-ಬ್ಯಾನರ್‌ಗಳೊಂದಿಗೆ ಉತ್ಸಾಹದ ಅಲೆ

ಗಂಗಾವತಿ (ಕೊಪ್ಪಳ ಜಿ.): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಆರಂಭವಾಗಿರುವ ಬಳ್ಳಾರಿ ಚಲೋ ಪಾದಯಾತ್ರೆ ಇಂದು ಆರನೇ ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆಯ ಜೊತೆಗೆ ಪ್ರತಿ ದಿನವೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಆರಂಭಿಸಿರುವ ಪಾದಯಾತ್ರೆಗೆ ಜನರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ಎಲ್ಲಾ ಕಡೆಯಿಂದಲೂ ಜನರು ಪಾದಯಾತ್ರೆಗೆ ಸೇರಿಕೊಂಡು ರಂಗೇರಿಸುತ್ತಿದ್ದಾರೆ.

ಗಮನ ಸೆಳೆದ ಹಾಡುಗಳು...

ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ, ಭ್ರμÁ್ಟಚಾರ, ನಿರ್ಲಕ್ಷ್ಯವನ್ನು ಕುರಿತು ಹಾಡುಗಳು ಗಮನಸೆಳೆಯುತ್ತಿದೆ. ಸ್ಕ್ಯಾಮ್ ಸರ್ಕಾರ ಇದು ಕಾಂಗ್ರೆಸ್ ಸರ್ಕಾರ, ಉದ್ದಾರ ಮಾಡ್ಕೊತ್ತಾರೆ ಅವರ ಸಂಸಾರ ಎಂಬ ಗೀತೆಗಳನ್ನು ಗುನುಗುನಿಸುತ್ತಾ ಜನರು ಹೆಜ್ಜೆ ಹಾಕುತ್ತಿದ್ದಾರೆ. ಹಾಡಿನ ಜೊತೆಗೆ ಡೊಳ್ಳು ಬಾರಿಸುತ್ತಾ, ನೃತ್ಯ ಮಾಡುತ್ತಾ, ಶಿಳ್ಳೆ ಹಾಕುತ್ತಾ ಜನರು ಬೆಂಬಲ ಸೂಚಿಸುತ್ತಿದ್ದಾರೆ. ವಿವಿಧ ವೇಷಧಾರಿಗಳು ಗಮನ ಸೆಳೆಯುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಮಾಡಿರುವ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ, ಹಿಂದೂ ಕಾರ್ಯಕರ್ತರ ಹತ್ಯೆ, ಬಿಡದಿ ಟೌನ್‍ಶಿಪ್ ಮತ್ತಿತರ ವಿಷಯಗಳ ಹಾಡುಗಳು ಪ್ರತಿಧ್ವನಿಸುತ್ತಿವೆ. ಇನ್ನು ಉಳುವ ಯೋಗಿಯ ನೋಡಲ್ಲಿ ಹಾಡುಗಳು ಪಾದಯಾತ್ರೆಯಲ್ಲಿ ಸಾಗುವವರಿಗೆ ಶಕ್ತಿ ನೀಡುತ್ತಿವೆ. ಕೆಲವು ಸರ್ಕಲ್‍ಗಳಲ್ಲಿ ಪಟಾಕಿ ಸಿಡಿಸಲಾಗುತ್ತಿದೆ.

ಕುರಿಗಾಯಿಗಳ ಜೊತೆ ಸಂವಾದ...

ಇಂದು ಮುಂಜಾನೆ ಪಾದಯಾತ್ರೆಗೆ ಮುನ್ನ ಬೆಳಗ್ಗೆ ಬಿ.ವೈ.ವಿಜಯೇಂದ್ರ ಅವರು, ಮರಳಿ ಗ್ರಾಮದಲ್ಲಿ ನೆಲೆಸಿರುವ ಕುರಿಗಾಯಿಗಳ ಜೊತೆ ಸಂವಾದ ನಡೆಸಿದರು. ಕುರಿಗಾಹಿಗಳೊಂದಿಗೆ ಚಹಾ ಸೇವಿಸಿ ಅವರ ತೊಂದರಗಳ ಬಗ್ಗೆ ವಿಚಾರಿಸಿದರು. ಈ ವೇಳೆ ಕುರಿಗಾಹಿಗಳು ಅಧ್ಯಕ್ಷರಿಗೆ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡರು. ಕುರಿಗಳನ್ನು ಸಾಕುವ ಕಷ್ಟ, ಮಳೆ ಬಂದರೆ ಉಂಟಾಗುವ ಅನಾನುಕೂಲಗಳ ಬಗ್ಗೆಯೂ ಹೇಳಿಕೊಂಡರು.
ಕುರಿಗಾಹಿಗಳ ಮಕ್ಕಳಿಗೆ ಸಿಹಿತಿಂಡಿ, ಬಿಸ್ಕತ್, ಹಣ್ಣುಗಳನ್ನು ನೀಡಿದ ವಿಜಯೇಂದ್ರ ಅವರು, ಕಂಬಳಿ ಹೊದ್ದು, ಕುರಿ ಮರಿ ಹಿಡಿದುಕೊಂಡು ಗಮನ ಸೆಳೆದರು. ಕುರಿಗಾಹಿಗಳ ಬಿಡಾರದಲ್ಲೇ ಸ್ವಲ್ಪ ಹೊತ್ತು ಸಮಯ ಕಳೆದು ಧೈರ್ಯ ತುಂಬಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಮತ್ತಿತರರು ಉಪಸ್ಥಿತರಿದ್ದರು.

ರೈತರ ಜೊತೆ ಸಂವಾದ- ಚರ್ಚೆ

ಪಾದಯಾತ್ರೆ ಸಾಗುವ ಮಾರ್ಗದಲ್ಲಿ ವಿಜಯೇಂದ್ರ ಅವರು, ರೈತರ ಹೊಲಗಳಿಗೆ ಭೇಟಿ ನೀಡಿ ಅವರ ಸಂಕಷ್ಟವನ್ನು ಆಲಿಸುತ್ತಿದ್ದಾರೆ. ಮಳೆಹಾನಿಯಿಂದಾಗಿ ಉಂಟಾಗಿರುವ ಬೆಳೆ ನಷ್ಟದ ಬಗ್ಗೆಯೂ ಅನ್ನದಾತರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಶನಿವಾರ ಪಾದಯಾತ್ರೆ ವೇಳೆ ನವಲಿ ಸಮಾನಾಂತರ ಜಲಾಶಯದ ಅಗತ್ಯದ ಕುರಿತು ರೈತರೊಂದಿಗೆ ಸಂವಾದ ನಡೆಸಿದ್ದರು. ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಶಿಕ್ಷಕರನ್ನು ಗೌರವಿಸಿದ್ದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಾರಟಗಿಯಲ್ಲಿ ಗೋಪೂಜೆ ನೆರವೇರಿಸಿದ್ದರು.

ಎತ್ತಿನ ಗಾಡಿ, ಹಸಿರು ಶಾಲು...

ಗುಡದೂರಿನಲ್ಲಿ ನಡೆದ ಪಾದಯಾತ್ರೆ ವೇಳೆ ವಿಜಯೇಂದ್ರ ಅವರು, ಹಸಿರು ಶಾಲು ಧರಿಸಿ, ಎತ್ತಿನಗಾಡಿಯಲ್ಲಿ ತೆರಳಿ ನೇಗಿಲು ಹೊತ್ತು ಗಮನ ಸೆಳೆದಿದ್ದರು. ಬಾರುಕೋಲು ಬೀಸಿ ಪಾದಯಾತ್ರೆಗೆ ಚಾಲನೆ ನೀಡಿದ್ದರು. ಮಧ್ಯಾಹ್ನ ರೈತ ಕುಟುಂಬದ ಜೊತೆ ಊಟ ಸೇವಿಸಿ ಅವರ ಅಹವಾಲು ಆಲಿಸಿದ್ದರು. ಇದಕ್ಕೂ ಮೊದಲು ಅವರು ರೈತರ ಜೊತೆ ಭತ್ತದ ಸಸಿ ನಾಟಿ ಮಾಡಿದ್ದರು.

ಮೇರೆ ಮೀರಿದ ಉತ್ಸಾಹ...
ಒಟ್ಟಾರೆ ಮೊದಲ ದಿನದಿಂದಲೂ ಪಾದಯಾತ್ರೆ ವಿಭಿನ್ನವಾಗಿ ಸಾಗುತ್ತಿದೆ. ಕೇವಲ ನಡಿಗೆ ಮಾತ್ರವಲ್ಲ ಇತರ ಕಾರ್ಯಕ್ರಮಗಳಲ್ಲೂ ಸಾಕಷ್ಟು ಜನರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಎಲ್ಲಾ ಕಡೆಯಿಂದಲೂ ಜನರು ವಿಶಿಷ್ಟ ಪೆÇೀμÁಕು ಧರಿಸಿ ಹೆಜ್ಜೆ ಹಾಕುತ್ತಿದ್ದಾರೆ. ನಡಿಗೆಯ ದಾರಿಯಲ್ಲಿ ಬಿಸಿಲಿದ್ದರೂ ಯಾರ ಮುಖದಲ್ಲೂ ಬಳಲಿಕೆಯಾಗಲಿ, ಆಯಾಸವಾಗಲಿ ಕಾಣುತ್ತಿಲ್ಲ.

ರಾರಾಜಿಸುತ್ತಿವೆ ಬ್ಯಾನರ್‍ಗಳು, ಕಟೌಟ್‍ಗಳು....

ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಪಾದಯಾತ್ರೆಗೆ ಶುಭ ಕೋರಿದ ಬ್ಯಾನರ್‍ಗಳು, ಕಟೌಟ್‍ಗಳು ರಾರಾಜಿಸುತ್ತಿವೆ. ಮಾರ್ಗದುದ್ದಕ್ಕೂ ಸ್ವಾಗತ ಕೋರುವ ಬ್ಯಾನರ್‍ಗಳನ್ನು ಹಾಕಲಾಗಿದೆ. ಪಕ್ಷದ ಅಭಿಮಾನಿಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಕಡೆಗಳಲ್ಲಿ ಜನರು ಸ್ವಯಂಪ್ರೇರಿತರಾಗಿ, ಈ ಪಾದಯಾತ್ರೆ ತಮ್ಮದು ಎಂಬ ಭಾವದಲ್ಲಿ ಬ್ಯಾನರ್‍ಗಳನ್ನು ಹಾಕಿಸಿದ್ದಾರೆ. ಆಕಾಶದಿಂದ ದಿಟ್ಟಿಸಿದರೆ ಇಡೀ ಪಾದಯಾತ್ರೆಯ ಮಾರ್ಗವೇ ಕೇಸರಿಮಯವಾಗಿ ಕಾಣುತ್ತಿದೆ.

ಮಹಿಳೆಯರೂ ಭಾಗಿ....

ಪಾದಯಾತ್ರೆಯಲ್ಲಿ ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಪಾದಯಾತ್ರೆಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡುತ್ತಿದ್ದಾರೆ. ಕೇಸರಿ ಸೀರೆ, ಕೇಸರಿ ಕ್ಯಾಪ್ ಧರಿಸಿ ಪಾದಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಪಾದಯಾತ್ರೆ ಜನಾಂದೋಲನವಾಗಿ ಪರಿವರ್ತನೆಯಾಗುವಲ್ಲಿ ಎಲ್ಲರ ಕೊಡುಗೆಯೂ ಸೇರುತ್ತಿದೆ.

ಪಾದಯಾತ್ರೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ವಿಧಾನಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆಯ ಮುಖ್ಯ ಸಚೇತಕರಾದ ದೊಡ್ಡನಗೌಡ ಹೆಚ್. ಪಾಟೀಲ್, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕರಾದ ಎನ್. ರವಿಕುಮಾರ್, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಮಾಜಿ ಸಚಿವರು ಮತ್ತು ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ, ಶಾಸಕರಾದ ಸಿದ್ದು ಪಾಟೀಲ್, ಸುರೇಶ್, ಸಿದ್ದು ಸವದಿ, ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ, ಶ್ರೀಮತಿ ಹೇಮಲತಾ ನಾಯ್ಕ್, ಬಿಜೆಪಿ ರಾಜ್ಯ ಉಪಾಧ್ಯಕ್ಷÀ ರಾಜುಗೌಡ ನಾಯಕ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ Àಬಂಗಾರು ಹನುಮಂತು, ಮಾಜಿ ಸಚಿವ ಶಿವನಗೌಡ ನಾಯಕ, ಮಾಜಿ ಶಾಸಕರಾದ ಬಸವರಾಜ್ ದಡೆಸೂಗೂರು, ಈರಪ್ಪ, ತಿಪ್ಪರಾಜು ಹವಾಲ್ದಾರ್, ಹಾಲಪ್ಪ ಆಚಾರ್, ಮುಖಂಡ ಡಾ. ಬಸವರಾಜ್ ಕ್ಯಾವಟರ್, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು, ಮಾಜಿ ಶಾಸಕರು, ಮಾಜಿ ವಿಧಾನಪರಿಷತ್ ಸದಸ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾರ್ಯಕರ್ತರು ಮತ್ತು ಜನರು ಉಪಸ್ಥಿತರಿರಲಿದ್ದಾರೆ.

Comments

Leave a Comment

Prev Post "ಜಾಗತಿಕ ಶಿಕ್ಷಣದತ್ತ ಕರ್ನಾಟಕದ ಹೆಜ್ಜೆ – ಸಿಎಂ ಡಿ.ಕೆ. ಶಿವಕುಮಾರ್ ‘ವಿದೇಶದಲ್ಲಿ ಅಧ್ಯಯನ 2026’ ಕಾರ್ಯಕ್ರಮಕ್ಕೆ ಚಾಲನೆ"
Next Post ಭದ್ರಾವತರಣ: ದಶಕಗಳ ಕನಸು ಸಾಕಾರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News