Tr – ಶಿಕ್ಷಕರಿಗೆ ಹೊಸ ಗೌರವದ ಚಿಹ್ನೆ: ಕರ್ನಾಟಕ ಸರ್ಕಾರದ ಇತಿಹಾಸಾತ್ಮಕ ನಿರ್ಧಾರ”
Tr – ಶಿಕ್ಷಕರಿಗೆ ಹೊಸ ಗೌರವದ ಚಿಹ್ನೆ: ಕರ್ನಾಟಕ ಸರ್ಕಾರದ ಇತಿಹಾಸಾತ್ಮಕ ನಿರ್ಧಾರ”
Tr – ಶಿಕ್ಷಕರಿಗೆ ಹೊಸ ಗೌರವದ ಚಿಹ್ನೆ: ಕರ್ನಾಟಕ ಸರ್ಕಾರದ ಇತಿಹಾಸಾತ್ಮಕ ನಿರ್ಧಾರ”
ಬೆಂಗಳೂರು .ಸೆ. 5-
ಕರ್ನಾಟಕ ಸರ್ಕಾರವು ಶಿಕ್ಷಕರಿಗೆ ನೀಡಿರುವ ಹೊಸ ಗೌರವವು ಸಮಾಜದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಾಷ್ಟ್ರವನ್ನು ರೂಪಿಸುವ ಶಕ್ತಿಯು ಶಿಕ್ಷಕರ ಕೈಯಲ್ಲಿದೆ ಎಂಬುದನ್ನು ಒತ್ತಿ ಹೇಳುತ್ತಾ, ಸರ್ಕಾರವು ಶಿಕ್ಷಕರ ಹೆಸರಿನ ಪೂರ್ವದಲ್ಲಿ "Tr" (Teacher) ಎಂಬ ಶೀರ್ಷಿಕೆಯನ್ನು ಬಳಸಲು ಅಧಿಕೃತ ಅನುಮತಿ ನೀಡಿದೆ.
ಈ ನಿರ್ಧಾರವು ಕೇವಲ ಒಂದು ಆಡಳಿತಾತ್ಮಕ ಆದೇಶವಲ್ಲ , ಇದು ಶಿಕ್ಷಕರ ಜೀವನಪರ್ಯಂತದ ತ್ಯಾಗ, ಶ್ರಮ ಮತ್ತು ಸಮಾಜ ನಿರ್ಮಾಣದ ಮಹತ್ವವನ್ನು ಪ್ರತಿನಿಧಿಸುವ ಗೌರವದ ಚಿಹ್ನೆ. "Tr." ಎಂಬ ಎರಡು ಅಕ್ಷರಗಳು, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರನ್ನು ಗುರುತಿಸುವ ಅಮರ ಮನ್ನಣೆ.
ಶಿಕ್ಷಕರು ಮಕ್ಕಳಲ್ಲಿ ಜ್ಞಾನವನ್ನಷ್ಟೇ ಅಲ್ಲ, ಸಂಸ್ಕಾರ, ಶಿಸ್ತು, ಪ್ರಾಮಾಣಿಕತೆ, ಧೈರ್ಯ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತುವವರು. ಅವರು ಮೂಢನಂಬಿಕೆಗಳನ್ನು ಹೋಗಲಾಡಿಸಿ, ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಮೂಲಕ ಸಮಾಜದ ಪ್ರಗತಿಗೆ ದಾರಿ ತೋರಿಸುತ್ತಾರೆ. ಪ್ರತಿಯೊಬ್ಬ ವೈದ್ಯ, ಇಂಜಿನಿಯರ್, ವಿಜ್ಞಾನಿ, ನಾಯಕ, ಉದ್ಯಮಿ — ಇವರ ಹಿಂದೆ ನಿಂತಿರುವುದು ಒಬ್ಬ ಶಿಕ್ಷಕ.
ಈ ಆದೇಶದ ಮೂಲಕ, ಸರ್ಕಾರವು ಶಿಕ್ಷಕರಿಗೆ ನೀಡಿರುವ ಗೌರವವು ಸಾಂವಿಧಾನಿಕ ಮೌಲ್ಯಗಳ ರಕ್ಷಣೆ, ಸಾಮಾಜಿಕ ಸಾಮರಸ್ಯ, ಮತ್ತು ಮುಂದಿನ ಪೀಳಿಗೆಗೆ ಸಂಸ್ಕೃತಿ ದಾಟಿಸುವ ಕಾರ್ಯದಲ್ಲಿ ಅವರ ಪಾತ್ರವನ್ನು ಶಾಶ್ವತವಾಗಿ ಗುರುತಿಸುತ್ತದೆ.






Comments
Leave a Comment