PRABHAVAA.COM

ಕಾವೇರಿ ನೀರು – ತಮಿಳುನಾಡಿಗೆ ಬಿಡುವ ನಿರ್ಧಾರ ವಿರುದ್ಧ ಮಂಡ್ಯದಲ್ಲಿ ಜು.31ರಂದು ಬೃಹತ್ ಹೋರಾಟಕ್ಕೆ ವಿಜಯೇಂದ್ರ ಕರೆ

Shivamogga:

Font size:

ಕಾವೇರಿ ನೀರು – ತಮಿಳುನಾಡಿಗೆ ಬಿಡುವ ನಿರ್ಧಾರ ವಿರುದ್ಧ ಮಂಡ್ಯದಲ್ಲಿ ಜು.31ರಂದು ಬೃಹತ್ ಹೋರಾಟಕ್ಕೆ ವಿಜಯೇಂದ್ರ ಕರೆ

ಶಿವಮೊಗ್ಗ,ಜು. 29- ರೈತರ ಪರವಾಗಿ ಇರಬೇಕಾದ ಮುಖ್ಯಮಂತ್ರಿಗಳು ತಮಿಳುನಾಡಿನ ಪರವಿದ್ದಂತೆ ಕಾಣುತ್ತಿದೆ. ಈ ವಿಚಾರವಾಗಿ ಮಂಡ್ಯದಲ್ಲಿ ಬೃಹತ್ ಹೋರಾಟಕ್ಕೆ ನಾವು ಕರೆ ನೀಡುತ್ತಿದ್ದೆವೆ. ಮಂಡ್ಯದಲ್ಲಿ ಜು. 31 ರಂದು ಬೃಹತ್ ಹೋರಾಟ ರೂಪಿಸಲಾಗಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನಾಡಿನ ಜನತೆಗೆ ಗುರುಪೂರ್ಣಿಮೆಯ ಶುಭಾಶಯ ಕೋರಿದರು. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಬಿ.ವೈ. ವಿಜಯೇಂದ್ರ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಹೋರಾಟದ ಸ್ವರೂಪವನ್ನು ನಾಯಕರು ಕುಳಿತು ತೀರ್ಮಾನಿಸಲಿದ್ದೇವೆ; ಕಾವೇರಿ ಕೊಳ್ಳದ ಭಾಗದ ರೈತರ ಪರವಾಗಿ ನಾವು ಹೋರಾಟ ಮಾಡುತಿದ್ದೇವೆ. ಕಾವೇರಿ ಕೊಳ್ಳದ ರೈತರ ಪರವಾಗಿ ನಾವು ಇದ್ದೇವೆ ಎಂದು ರೈತರಿಗೆ ಧೈರ್ಯ ತುಂಬಿದರು.
ಸರಕಾರದ ಏಕಪಕ್ಷೀಯ ತೀರ್ಮಾನ ಕಾವೇರಿ ಕೊಳ್ಳದ ರೈತರಿಗೆ ಬರೆ ಎಳೆದಂತಾಗಿದೆ. ಕಾವೇರಿ ಕೊಳ್ಳದ ರೈತರು ಬಿತ್ತನೆ ಮಾಡಬೇಡಿ ಎಂದು ಇತ್ತೀಚೆಗೆ ಮುಖ್ಯಮಂತ್ರಿಗಳು ಹೇಳಿದ್ದರು. ಆತ್ಮಸ್ಥೈರ್ಯ ತುಂಬಬೇಕಾದ ಸಿಎಂ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.
ನೀರು ಬಿಡಬೇಕೆಂಬ ಈ ತೀರ್ಮಾನ ಬರುವ ಮುನ್ನವೇ ಹೇಳಿಕೆ ನೀಡಿ ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಯತ್ನ ಮಾಡಿದ್ದಾರೆ ಎಂದ ಅವರು, ಮುಖ್ಯಮಂತ್ರಿಗಳೇ ಯಾಕೆ ಇಂತಹ ಕಪಟ ನಾಟಕ ಮಾಡುತ್ತಿದ್ದಿರಾ ? ಎಂದು ಕೇಳಿದರು.
17.39 ಟಿಎಂಸಿ ನೀರು ಇದ್ದು 5 ಟಿಎಂಸಿ ಡೆಡ್ ಸ್ಟೋರೇಜ್ ನೀರು ಇರಲೇಬೇಕು. ಇರುವ 13 ಟಿಎಂಸಿ ನೀರು ಬಿಟ್ಟರೆ ನಮ್ಮ ರೈತರ ಪರಿಸ್ಥಿತಿ ಏನಾಗಬೇಕು? ಎಂದು ಪ್ರಶ್ನೆ ಹಾಕಿದರು. ಸಿಡಬ್ಲೂಆರ್ ಸಿಗೆ ಮತ್ತೆ ಅರ್ಜಿ ಹಾಕಿ ಸರಿಯಾಗಿ ವಾದ ಮಾಡಬೇಕು ಎಂದು ಆಗ್ರಹಿಸಿದರು. ಸಂಪುಟ ವಿಸ್ತರಣೆಗಾಗಿ ಪದೇ, ಪದೇ ದೆಹಲಿಗೆ ಹೋಗುವ ಸಿಎಂ ಶಿವಕುಮಾರ್ ವಕೀಲರನ್ನು ಕರೆಸಿ ಏಕೆ ಮಾತನಾಡಿಲ್ಲ ಎಂದ ಅವರು, ಶಿವಕುಮಾರ್ ಅವರೇ ರೈತರಿಗೆ ದ್ರೋಹ ಬಗೆಯುವ ಕೆಲಸ ಮಾಡಬೇಡಿ ಎಂದು ಆಗ್ರಹಿಸಿದರು.
ಬಾಂಗ್ಲಾ ಅಕ್ರಮ ನುಸುಳುಕೋರರ ವಿರುದ್ಧ ದನಿ ಎತ್ತಿರುವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ, ವೈದ್ಯರೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರಿನ ವೈದ್ಯ ಟಿ. ನಾಗೇಂದ್ರಪ್ಪ ವಿರುದ್ಧ ಎಫ್.ಐ.ಆರ್. ದಾಖಲಿಸಿದ್ದಾರೆ. ಯಾರನ್ನುÉ ಓಲೈಸಲು ಈ ತೀರ್ಮಾನ ಮಾಡಿದ್ದಿರಾ? ಎಂದು ಕೇಳಿದರು. ಇದು ದೇಶದ್ರೋಹದ ಕೆಲಸವಾಗಿದೆ ಎಂದು ಟೀಕಿಸಿದರು.
ಅಲ್ಪಸಂಖ್ಯಾತರ ಓಲೈಕೆಗೆ ಇಷ್ಟು ಕೀಳು ಮಟ್ಟಕ್ಕೆ ಹೋಗುತ್ತೀರಾ ಎಂದರಲ್ಲದೇ, ಜನರೇ ನಿಮ್ಮ ಕ್ರಮವನ್ನು ತೀರ್ಮಾನಿಸಲಿದ್ದಾರೆ ಎಂದರು. ರಾಜ್ಯ ಕಾಂಗ್ರೆಸ್ ಸರ್ಕಾರ ಹೋರಾಟಗಾರರನ್ನು ದಮನಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಬಿಜೆಪಿ ಮುಖಂಡರಿಗೆ ಬೆದರಿಸುವುದು ಸರಿಯಲ್ಲ
ಸಿಇಟಿ ಪರೀಕ್ಷೆ - ಮುಲ್ಲಾ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಅವರು, ಎಂ.ಎಲ್.ಸಿ. ಸಿ.ಟಿ. ರವಿ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಅನ್ನೋದು ಗಮನಿಸಿ. ಪ್ರಿಯಾಂಕ್ ಖರ್ಗೆ ಅವರು ಈ ರಾಜ್ಯದ ಗೃಹಮಂತ್ರಿ ಅನ್ನೋದು ಮರೆತಿದ್ದಾರೆ. ಪ್ರಿಯಾಂಕ್ ಖರ್ಗೆ ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದು ಮರೆತಿದ್ದಾರೆ. ಅವರು ಈ ರಾಜ್ಯದ ಗೃಹಮಂತ್ರಿಯಾಗಿ ಯಾವ ಕೆಲಸ ಮಾಡಬೇಕೆನ್ನುವುದೇ ಮರೆತಂತಿದೆ. ಈ ರೀತಿ ಬಿಜೆಪಿ ಮುಖಂಡರಿಗೆ ಬೆದರಿಸುವುದು ಸರಿಯಲ್ಲ ಎಂದು ತಿಳಿಸಿದರು.

ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ
ಬಾಂಗ್ಲಾ ಅಕ್ರಮ ನುಸುಳುಕೋರರನ್ನು ತಡೆಯುವ ಸಲುವಾಗಿ ದನಿ ಎತ್ತಿದರೆ ಅಂತಹ ವೈದ್ಯರನ್ನೇ ದಮನಿಸುವ ಕೆಲಸ ಮಾಡಿದ್ದಾರೆ. ವೈದ್ಯರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ. ಇದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವು ಸ್ಪಷ್ಟವಾಗುತ್ತಿದೆ. ರಾಜ್ಯ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಸ್ಥಾನ ಕುಸಿತ..

ಸಿದ್ಧರಾಮಯ್ಯ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ವಿಚಾರದ ಬಗ್ಗೆ ಪ್ರಸ್ತಾಪಿಸಿ, 2028 ರ ಚುನಾವಣೆಗೆ 80 ಸ್ಥಾನ ಗೆಲ್ಲುವ ಆಶಯ ಕಾಂಗ್ರೆಸ್ ಹೊಂದಿತ್ತು. ಸಿದ್ಧರಾಮಯ್ಯನವರ ಈ ತೀರ್ಮಾನದಿಂದ 50 ಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದರು.

Comments

Leave a Comment

Prev Post ನಾಡಗೀರ್ ಸಂಜೆ ಡಿಪ್ಲೊಮಾ ಕಾಲೇಜಿನ ಅಕ್ರಮ ಪ್ರವೇಶ – ಕಿರಿಯ ಅಭಿಯಂತರರ ನೇಮಕಾತಿ ಅಧಿಸೂಚನೆ ರದ್ದುಪಡಿಸುವಂತೆ ಜನಪರ ವೇದಿಕೆಯ ಆಗ್ರಹ
Next Post ಪರಿಸರ ಸಂಬಂಧಿ ಅನುಮತಿ ಸಿಕ್ಕರೆ 3 ತಿಂಗಳಲ್ಲಿ ವಿಜಯಪುರ ಏರ್‌ಪೋರ್ಟ್ ಕಾರ್ಯಾರಂಭ: ಎಂ ಬಿ ಪಾಟೀಲ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News