ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಶೂ-ಸಾಕ್ಸ್ ವಿತರಣೆ: ಆಯುಕ್ತರಿಂದ ಸುತ್ತೋಲೆ, ವಿತರಣಾ ಕಾರ್ಯಾಚರಣೆ ಆರಂಭ
ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಶೂ-ಸಾಕ್ಸ್ ವಿತರಣೆ: ಆಯುಕ್ತರಿಂದ ಸುತ್ತೋಲೆ, ವಿತರಣಾ ಕಾರ್ಯಾಚರಣೆ ಆರಂಭ
ಬೆಂಗಳೂರು ಜುಲೈ 9– ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಮತ್ತು ಪಾದರಕ್ಷೆಗಳನ್ನು ವಿತರಿಸುವ ಮಹತ್ವದ ಯೋಜನೆಗೆ ಚಾಲನೆ ದೊರೆತಿದೆ. ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಹೊರಡಿಸಿದ ಹೊಸ ಸುತ್ತೋಲೆಯ ಮೂಲಕ ಈ ಕಾರ್ಯಾಚರಣೆ ರಾಜ್ಯದಾದ್ಯಂತ ಸುಗಮವಾಗಿ ನಡೆಯುವಂತೆ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಆರಾಮ ಮತ್ತು ಸ್ವಚ್ಛತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಮುಂದಿಟ್ಟಿದೆ.
ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಪಾದರಕ್ಷೆಗಳನ್ನು ವಿತರಿಸುವ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ. 2026-27ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ಹಾಗೂ ಪಾದರಕ್ಷೆಗಳನ್ನು ಒದಗಿಸಲು ಸರಬರಾಜುದಾರರನ್ನು ಗುರುತಿಸಲಾಗಿದ್ದು, ಸರಬರಾಜು ಪ್ರಾರಂಭವಾಗಿದೆ. ಮುಂದಿನ ಒಂದು-ಎರಡು ದಿನಗಳಲ್ಲಿ ಸಾಮಗ್ರಿಗಳು ಪ್ರತಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತಲುಪಲಿದ್ದು, ಅಲ್ಲಿಂದ ಶಾಲೆಗಳಿಗೆ ವಿತರಣೆ ಆಗಲಿದೆ.
ಸುತ್ತೋಲೆಯ ಪ್ರಕಾರ, ಸರಬರಾಜಾದ ಸಾಮಗ್ರಿಗಳನ್ನು ದಾಸ್ತಾನು ಇಡುವ ಸ್ಥಳವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಂಚಿತವಾಗಿ ಗುರುತಿಸಿ, ಸ್ವಚ್ಛಗೊಳಿಸಿ, ಮಳೆ ನೀರು ನುಗ್ಗದಂತೆ ಮುಂಜಾಗ್ರತೆ ವಹಿಸಬೇಕು. ಸ್ಥಳದ ವಿವರಗಳನ್ನು ಸರಬರಾಜುದಾರರಿಗೆ ತಿಳಿಸಬೇಕು. ಶಾಲಾವಾರು ಹಾಗೂ ವಿದ್ಯಾರ್ಥಿಗಳ ತರಗತಿವಾರು, ಅಳತೆವಾರು ವಿಂಗಡಿಸಿ ಪ್ಯಾಕಿಂಗ್ ಮಾಡಲು ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಬೇಕು. ವಿತರಣೆಗೆ ವೇಳಾಪಟ್ಟಿ ಸಿದ್ದಪಡಿಸಿ, ಶಾಲಾವಾರು ಮಾರ್ಗಸೂಚಿ ರೂಪಿಸಿ, ತಕ್ಷಣವೇ ವಿದ್ಯಾರ್ಥಿಗಳಿಗೆ ವಿತರಣೆ ಮಾಡುವಂತೆ ಸೂಚಿಸಲಾಗಿದೆ.
ವಿತರಣೆಯ ನಂತರ ಅಳತೆ ಸಂಬಂಧ ವ್ಯತ್ಯಾಸಗಳು ಕಂಡುಬಂದರೆ, ಲಭ್ಯವಿರುವ ದಾಸ್ತಾನಿನಲ್ಲಿ ಇತ್ಯರ್ಥಪಡಿಸಬೇಕು. ಎಲ್ಲಾ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಲು ನೋಡಲ್ ಅಧಿಕಾರಿಯನ್ನು ನೇಮಿಸಿ, ಕಾರ್ಯಗಳ ಮೇಲ್ವಿಚಾರಣೆ ಜವಾಬ್ದಾರಿ ನೀಡಬೇಕು. ಶೂ-ಸಾಕ್ಸ್ ಹಾಗೂ ಸ್ಯಾಂಡಲ್‌ಗಳ ಸ್ಪೆಸಿಫಿಕೇಶನ್‌ಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಇ-ಮೇಲ್ ಮೂಲಕ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಲಾಗಿದೆ.
ಸುತ್ತೋಲೆಯಂತೆ, ಯಾವುದೇ ಸಮಸ್ಯೆಗಳು ಉದ್ಭವಿಸಿದರೆ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು ಹಾಗೂ ನಿರ್ದೇಶಕರ ಗಮನಕ್ಕೆ ತಕ್ಷಣ ತರುವಂತೆ ಸೂಚಿಸಲಾಗಿದೆ. ಈ ಕ್ರಮದಿಂದ ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಶೂ-ಸಾಕ್ಸ್ ಹಾಗೂ ಪಾದರಕ್ಷೆಗಳ ವಿತರಣೆ ಸುಗಮವಾಗಿ ನಡೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಈ ಕ್ರಮದಿಂದ ಶಾಲಾ ಮಕ್ಕಳಿಗೆ ಅಗತ್ಯವಾದ ಪಾದರಕ್ಷೆ ಸೌಲಭ್ಯ ದೊರೆಯುವುದರ ಜೊತೆಗೆ, ಶಾಲಾ ಶಿಕ್ಷಣ ಇಲಾಖೆಯ ಕಾರ್ಯಪದ್ಧತಿಯಲ್ಲಿ ಶಿಸ್ತಿನ ನಿರ್ವಹಣೆ ಮತ್ತು ಪಾರದರ್ಶಕತೆ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ. ರಾಜ್ಯದಾದ್ಯಂತ ಶೂ-ಸಾಕ್ಸ್ ವಿತರಣೆ ಯಶಸ್ವಿಯಾಗಿ ಪೂರ್ಣಗೊಳ್ಳುವ ಮೂಲಕ ವಿದ್ಯಾರ್ಥಿಗಳ ದಿನನಿತ್ಯದ ಶಾಲಾ ಜೀವನದಲ್ಲಿ ಹೊಸ ಉತ್ಸಾಹ ಮೂಡುವುದು ಖಚಿತ.



Comments
Leave a Comment