ಅಂಗನವಾಡಿ ಕಾರ್ಯಕರ್ತೆಯರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ (BLO) ನೇಮಕ ಮಾಡುವುದನ್ನು ವಿರೋಧಿಸಿ ಐಎಫ್‌ಟಿಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ
ಅಂಗನವಾಡಿ ಕಾರ್ಯಕರ್ತೆಯರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ (BLO) ನೇಮಕ ಮಾಡುವುದನ್ನು ವಿರೋಧಿಸಿ ಐಎಫ್‌ಟಿಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ
ಬೆಂಗಳೂರು . ಜು. ೮-ಚುನಾವಣಾ ಆಯೋಗವು BLO ನೇಮಕಾತಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿರುವಾಗಲೂ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅವುಗಳನ್ನು ಕಡೆಗಣಿಸಿ ಅಂಗನವಾಡಿ ಕಾರ್ಯಕರ್ತೆಯರನ್ನು BLOಗಳಾಗಿ ನೇಮಕ ಮಾಡಲಾಗುತ್ತಿದೆ. ಇದು ಕಾನೂನುಬದ್ಧತೆಗೂ, ಚುನಾವಣಾ ವ್ಯವಸ್ಥೆಯ ಪಾವಿತ್ರ್ಯಕ್ಕೂ ಧಕ್ಕೆಯಾಗಿದೆ ಎಂದು ಭಾರತೀಯ ಕಾರ್ಮಿಕ ಸಂಘಗಳ ಒಕ್ಕೂಟ (IFTU) ಅಧ್ಯಕ್ಷರಾದ ಕಾಂ. ಎಸ್. ಬಾಲನ್ ಆರೋಪಿಸಿದ್ದಾರೆ,
"ಅಂಗನವಾಡಿ ಕಾರ್ಯಕರ್ತೆಯರನ್ನು ಬೂತ್ ಮಟ್ಟದ ಅಧಿಕಾರಿಗಳಾಗಿ (BLO) ನೇಮಕ ಮಾಡುತ್ತಿರುವ ಕ್ರಮವು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ನೀಡಬೇಕಾದ ಪೌಷ್ಟಿಕಾಂಶ, ಆರೋಗ್ಯ ಹಾಗೂ ಶಿಶು ಅಭಿವೃದ್ಧಿ ಸೇವೆಗಳನ್ನು ಹಿಂಸಿಸುವಂತೆಯೇ ಈ ಕ್ರಮವು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನೂ ಹಾಳುಮಾಡುತ್ತದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
IFTU ಯು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, BLO ನೇಮಕಾತಿ ಪ್ರಕ್ರಿಯೆಯನ್ನು ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರವೇ ನಡೆಸುವಂತೆ ಹಾಗೂ ಈಗಾಗಲೇ ನಡೆದಿರುವ ಅಸಂಗತ ನೇಮಕಾತಿಗಳನ್ನು ರದ್ದುಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗಲಾಗಿದೆ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ, ಚುನಾವಣಾ ಆಯೋಗದ ಮಾರ್ಗಸೂಚಿಗಳು ಮತ್ತು ಕಾನೂನುಬದ್ಧ ಚೌಕಟ್ಟಿನ ಅನುಸಾರವೇ ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಐಎಫ್‌ಟಿಯು ನ್ಯಾಯಾಲಯವನ್ನು ಕೋರಿದೆ. ಅಲ್ಲದೆ, ರಾಜ್ಯ ಅಥವಾ ಸ್ಥಳೀಯ ಸಂಸ್ಥೆಗಳ ಅರ್ಹ ನಿಯಮಿತ ನೌಕರರು ಲಭ್ಯವಿಲ್ಲ ಎಂಬ ಕಡ್ಡಾಯ ಪ್ರಮಾಣೀಕರಣವಿಲ್ಲದೆ ಈಗಾಗಲೇ ಮಾಡಲಾಗಿರುವ ಅಂಗನವಾಡಿ ಕಾರ್ಯಕರ್ತೆಯರ ಬಿಎಲ್‌ಒ ನೇಮಕಾತಿಗಳನ್ನು ರದ್ದುಗೊಳಿಸುವಂತೆಯೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಭಾರತ ಚುನಾವಣಾ ಆಯೋಗವು ಬೂತ್ ಮಟ್ಟದ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಂತೆ, 2025ರ ಜೂನ್ 5ರಂದು ಹೊರಡಿಸಿದ ಇತ್ತೀಚಿನ ಸಂಬಂಧಿತ ಮತದಾರರ ಭಾಗದಲ್ಲಿ ನಿರ್ದೇಶನದಲ್ಲಿ, ನೋಂದಾಯಿತರಾಗಿರುವ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳ ನಿಯಮಿತ ಗುಂಪು-'ಸಿ' ಮತ್ತು ಆದ್ಯತೆಯಾಗಿ ಮೊದಲ ಅದಕ್ಕಿಂತ ಮೇಲಿನ ಹುದ್ದೆಯ ನೌಕರರನ್ನೇ ಬಿಎಲ್‌ಒಗಳಾಗಿ ನೇಮಕ ಮಾಡಬೇಕೆಂದು ಸೂಚಿಸಲಾಗಿರುವುದನ್ನು ಬಾಲನ್ನು ಇದೇ ಸಂದರ್ಭದಲ್ಲಿ ವಿವರಿಸಿದರು.



Comments
Leave a Comment