PRABHAVAA.COM

ಕೆ.ಎಸ್.ಡಿ.ಎಲ್.ಗೆ ಪ್ರತಿಷ್ಠಿತ ಝೆಪ್ಟೋ ಉತ್ಕೃಷ್ಟತಾ ಪುರಸ್ಕಾರ: ಎಂ ಬಿ ಪಾಟೀಲ

Karnataka:

Font size:

ತ್ವರಿತ ವಹಿವಾಟು, ಇ-ಕಾಮರ್ಸ್ ವಿಭಾಗದಲ್ಲಿ ಹೆಮ್ಮೆಯ ಸಾಧನೆ

ಕೆ.ಎಸ್.ಡಿ.ಎಲ್.ಗೆ ಪ್ರತಿಷ್ಠಿತ ಝೆಪ್ಟೋ ಉತ್ಕೃಷ್ಟತಾ ಪುರಸ್ಕಾರ: ಎಂ ಬಿ ಪಾಟೀಲ

ತ್ವರಿತ ವಹಿವಾಟು, ಇ-ಕಾಮರ್ಸ್ ವಿಭಾಗದಲ್ಲಿ ಹೆಮ್ಮೆಯ ಸಾಧನೆ

ಬೆಂಗಳೂರು: ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆ.ಎಸ್.ಡಿ.ಎಲ್) ಸಂಸ್ಥೆಯು ತನ್ನ ಪಾರಂಪರಿಕ ಉತ್ಪನ್ನವಾಗಿರುವ ಮೈಸೂರು ಸ್ಯಾಂಡಲ್ ಸೋಪ್ ವಹಿವಾಟು ಉಪಕ್ರಮಕ್ಕಾಗಿ ತ್ವರಿತ ವಾಣಿಜ್ಯ ವಹಿವಾಟು (ಕ್ವಿಕ್ ಕಾಮರ್ಸ್) ವಿಭಾಗದಲ್ಲಿ ಪ್ರತಿಷ್ಠಿತ ಝೆಪ್ಟೋ ಕಂಪನಿಯ "ಪೂರೈಕೆ ಸರಪಳಿ ಉತ್ಕೃಷ್ಟತಾ ಪುರಸ್ಕಾರ'ಕ್ಕೆ (ಸಪ್ಲೈ ಚೈನ್ ಎಕ್ಸಲೆನ್ಸ್ ಅವಾರ್ಡ್) ಪಾತ್ರವಾಗಿದೆ.

ಇದಕ್ಕಾಗಿ ಬೃಹತ್ ಮತ್ತು ಮಧ್ಯಮ‌ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಸಂಸ್ಥೆಯ ಅಧ್ಯಕ್ಷ ಸಿ ಎಸ್ ಅಪ್ಪಾಜಿ ನಾಡಗೌಡ, ವ್ಯವಸ್ಥಾಪಕ ನಿರ್ದೇಶಕ ಪಿ ಕೆ ಎಂ ಪ್ರಶಾಂತ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವನ್ನು ಅಭಿನಂದಿಸಿದ್ದಾರೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಚಿವರು, ಮೂರು ವರ್ಷಗಳ ಹಿಂದೆ ಕೆ.ಎಸ್.ಡಿ.ಎಲ್ ಸಂಸ್ಥೆಯ ಇ-ಕಾಮರ್ಸ್ ವಹಿವಾಟು ಕೇವಲ 28 ಕೋಟಿ ರೂಪಾಯಿ ಇತ್ತು. ನಾನು ಸಚಿವನಾದ ಮೇಲೆ ತೆಗೆದುಕೊಂಡ ದಿಟ್ಟ ಮಾರುಕಟ್ಟೆ ವಿಸ್ತರಣೆ ನಿರ್ಧಾರದ ಫಲವಾಗಿ ಇದು ಈಗ 122 ಕೋಟಿ ರೂಪಾಯಿ ತಲುಪಿದೆ. ಇದೇ ರೀತಿ ಝೆಪ್ಟೋ ತ್ವರಿತ ವಹಿವಾಟು ವೇದಿಕೆಗಳಲ್ಲಿ ಎರಡು ವರ್ಷಗಳ ಹಿಂದೆ ತಿಂಗಳಿಗೆ ಕೇವಲ 10 ಲಕ್ಷ ರೂಪಾಯಿ ಮೌಲ್ಯದ ಮೈಸೂರು ಸ್ಯಾಂಡಲ್ ಸೋಪ್ ಮಾರಾಟವಾಗುತ್ತಿತ್ತು. ಈಗ ಇದು 2 ಕೋಟಿ ರೂಪಾಯಿ ತಲುಪಿದೆ. ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಈಗ ಪ್ರಥಮ ಸ್ಥಾನದಲ್ಲಿದೆ ಎಂದಿದ್ದಾರೆ.

ಕೆ.ಎಸ್.ಡಿ.ಎಲ್ ಸಂಸ್ಥೆಯು ತನ್ನ ಪರಂಪರೆ ಮತ್ತು ನಂಬಿಕೆಗಳನ್ನು ಬಿಟ್ಟುಕೊಡದೆ, ಇ-ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ವಹಿವಾಟು ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಅದರಲ್ಲಿ ಯಶಸ್ಸು ಸಾಧಿಸಿರುವುದನ್ನು ಈ ಪ್ರಶಸ್ತಿಯು ಪ್ರತಿಫಲಿಸುತ್ತಿದೆ. ಡಿಜಿಟಲ್ ವಹಿವಾಟು ವೇದಿಕೆಗಳಲ್ಲಿ ಕೆ.ಎಸ್ ಡಿ.ಎಲ್ ಉತ್ಪನ್ನಗಳು ಅಗ್ರಗಣ್ಯ ಬ್ರ್ಯಾಂಡ್ ಆಗಿದ್ದು, ಈ ಮೂಲಕ ಎಫ್ಎಂಸಿಜಿ ವಿಭಾಗದಲ್ಲಿ ಮುಂಚೂಣಿಯಲ್ಲಿವೆ. ಇದಕ್ಕೆ ನಾವು ತಂದಿರುವ ಸುಧಾರಣೆಗಳು, ನಿರ್ದಿಷ್ಟ ಉತ್ಪಾದನಾ ವಿಧಾನ, ತಂತ್ರಜ್ಞಾನ ಆಧಾರಿತ ಪೂರೈಕೆ ವ್ಯವಸ್ಥೆ ಮತ್ತು ಝೆಪ್ಟೋ ಮುಂತಾದ ಕಂಪನಿಗಳ ಜತೆ ಹೊಂದಿರುವ ಸಹಭಾಗಿತ್ವ ಮುಂತಾದ ಉಪಕ್ರಮಗಳು ಕಾರಣವಾಗಿವೆ. ಇ-ಕಾಮರ್ಸ್ ವಹಿವಾಟಿಗೆಂದೇ ಕಳೆದ ಮೂರು ವರ್ಷಗಳಲ್ಲಿ ಸಂಸ್ಥೆಯು ಪ್ರತ್ಯೇಕ ಪೂರೈಕೆದಾರರನ್ನು ನೇಮಿಸಿಕೊಂಡಿದೆ ಎಂದು ಪಾಟೀಲ ತಿಳಿಸಿದ್ದಾರೆ.

ಸಂಸ್ಥೆಯು ಡಿಜಿಟಲ್ ಮಾರುಕಟ್ಟೆ ಬಲವರ್ಧನೆಗೆಂದೇ ಕೀವರ್ಡ್ ಜಾಹೀರಾತು, ಆನ್ಲೈನ್ ಪ್ರಚಾರ, ಬ್ಯಾನರ್ ಆಂದೋಲನ, ಬ್ರ್ಯಾಂಡ್ ವಿಸಿಬಲಿಟಿ ಮತ್ತು ಗ್ರಾಹಕ ಸಂಶೋಧನೆ ಮುಂತಾದ ಹೆಜ್ಜೆಗಳನ್ನು ಇಟ್ಟಿದೆ ಎಂದು ಅವರು‌ ನುಡಿದಿದ್ದಾರೆ.

Comments

Leave a Comment

Prev Post ಜಿ.ಪರಮೇಶ್ವರ್ ಅಧ್ಯಕ್ಷತೆಯ‌ ಪ್ರಣಾಳಿಕೆ ಸಮಿತಿ ಸಿದ್ದಪಡಿಸಿದ್ದ ಪ್ರಣಾಳಿಕೆಯಲ್ಲಿನ‌ 580 ಭರವಸೆಗಳಲ್ಲಿ 290 ಕ್ಕೂ ಹೆಚ್ಚು ಭರವಸೆ ಈಡೇರಿಸಿದ್ದೇವೆ: ಸಿ.ಎಂ ಸಿದ್ದರಾಮಯ್ಯ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News