Font size:
ಕೆನಡಾ ಹೂಡಿಕೆ ಉತ್ಸಾಹ: ಸಿಎಂ ಸಿದ್ದರಾಮಯ್ಯ ಜೊತೆ ಕ್ರಿಸ್ ಕೂಟರ್ ಮಾತುಕತೆ
ಕೆನಡಾ ದೇಶದ ಹೈ ಕಮೀಷನರ್ ಕ್ರಿಸ್ ಕೂಟರ್ ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಸೌಹಾರ್ದ ಭೇಟಿ ಮಾಡಿ ಶಿಕ್ಷಣ, ತಂತ್ರಜ್ಞಾನ, ಏರೋಸ್ಪೇಸ್ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಬಾಂಧವ್ಯ ವೃದ್ಧಿ ಕುರಿತು ಮಾತುಕತೆ ನಡೆಸಿತು. ರಾಜ್ಯದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಕೆನಡಾ ಉತ್ಸುಕವಾಗಿರುವ ಬಗ್ಗೆ ಕ್ರಿಸ್ ಕೂಟರ್ ತಿಳಿಸಿದರು.
ಸಚಿವರಾದ ಎಂ ಬಿ ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಉಪಸ್ಥಿತರಿದ್ದರು.
Posted 1 month, 2 weeks ago





Comments
Leave a Comment