PRABHAVAA.COM

ಕಾಂಗ್ರೆಸ್ ಆಡಳಿತದಲ್ಲಿ ಖಜಾನೆ ಲೂಟಿ: ನರೇಂದ್ರ ಮೋದಿ

Bengaluru Urban:

Font size:

ಕಾಂಗ್ರೆಸ್ ಆಡಳಿತದಲ್ಲಿ ಖಜಾನೆ ಲೂಟಿ: ನರೇಂದ್ರ ಮೋದಿ

ಕಾಂಗ್ರೆಸ್ ಆಡಳಿತದಲ್ಲಿ ಖಜಾನೆ ಲೂಟಿ: ನರೇಂದ್ರ ಮೋದಿ

ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಖಜಾನೆ ಲೂಟಿ ಆಗುತ್ತಿದೆ ಎಂದು ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಜೀ ಅವರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ಜಯಭೇರಿ ಬಾರಿಸಿದ ಬಳಿಕ ಕರ್ನಾಟಕಕ್ಕೆ ಆಗಮಿಸಿದ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಹೆಚ್.ಎ.ಎಲ್ ವಿಮಾನ ನಿಲ್ದಾಣದ ಬಳಿ ಅಭಿನಂದಿಸುವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ಶಾಲು ಹಾಕಿ, ಮೈಸೂರು ಪೇಟ ತೊಡಿಸಿ ಮೋದಿಜೀ ಅವರ ಪುತ್ಥಳಿ ನೀಡಿ ಗೌರವಿಸಲಾಯಿತು.
ನಿಮಗೆಲ್ಲ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿಯವರು, ನಾನು ಕರ್ನಾಟಕಕ್ಕೆ ಬಹಳ ಸಲ ಬಂದಿದ್ದೇನೆ. ವಿಮಾನನಿಲ್ದಾಣದಲ್ಲಿ ಆಯೋಜಿಸಿದ ದೊಡ್ಡ ಕಾರ್ಯಕ್ರಮವಿದು ಎಂದು ಮೆಚ್ಚುಗೆ ಸೂಚಿಸಿದರು. ಇಲ್ಲಿ ಕೇಸರಿಯಷ್ಟೇ ಕಾಣುತ್ತಿದೆ. ಬಿಜೆಪಿ ಕಾರ್ಯಕರ್ತರಷ್ಟೇ ಇಷ್ಟು ಬೇಗ ಇಂಥ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಬರಲು ಸಾಧ್ಯ ಎಂದರು. ಬಂಗಾಲದ ಬಿಜೆಪಿ ಗೆಲುವು ಕಾರ್ಯಕರ್ತರ ಶ್ರಮದ ಪರಿಣಾಮ ಎಂದು ವಿಶ್ಲೇಷಿಸಿದರು.
1857ರಲ್ಲಿ ಇದೇ ದಿನ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಸಮರ ನಡೆದಿತ್ತು. ಬಳಿಕ ಶೌರ್ಯ ಮತ್ತು ಸಾಮಥ್ರ್ಯದಿಂದ ದೇಶದ ಗುಲಾಮಿತನವನ್ನು ದೂರ ಮಾಡಲಾಯಿತು. ಆಪರೇಷನ್ ಸಿಂಧೂರದ ವರ್ಷವನ್ನು ನೆನಪಿಸಿಕೊಳ್ಳಲಾಗಿದೆ. ಗುಜತಾತ್‍ನ ಸೋಮನಾಥ ಮಂದಿರದ ಪುನರ್ ನಿರ್ಮಾಣದ ಉತ್ಸವ ನಡೆಯಲಿದೆ. ಅಲ್ಲಿಗೆ ತೆರಳುವುದಾಗಿ ಹೇಳಿದರು.
ಮಾತೆ ಅಣ್ಣಮ್ಮನಿಗೆ ಪ್ರಣಾಮಗಳು. ಕೆಂಪೇಗೌಡರಿಗೆ ನಮನಗಳು ಎಂದು ತಿಳಿಸಿದ ಅವರು, ಬಂಗಾಲದಲ್ಲಿ ಮೊದಲ ಬಾರಿ ಬಿಜೆಪಿಗೆ ಇಷ್ಟು ದೊಡ್ಡ ಆಶೀರ್ವಾದ ಲಭಿಸಿದೆ. ಗುಜರಾತ್‍ನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ದಾಖಲೆ ಗೆಲುವು ಲಭಿಸಿದೆ ಎಂದು ವಿವರಿಸಿದರು. ಇದು ಹೊಸ ಇತಿಹಾಸ ಬರೆಯುವ ಘಟನೆಗಳು ಎಂದು ವಿಶ್ಲೇಷಿಸಿದರು.
ಭಾರತದ ಜನರು ಸ್ಥಿರತೆಯ ಮಂತ್ರ ಜಪಿಸುತ್ತಿದ್ದಾರೆ. ಹಗರಣಗಳು ಬೇಡ; ಸಮಸ್ಯೆಗಳಿಗೆ ಪರಿಹಾರ ಬೇಕು. ರಾಷ್ಟ್ರವಾದದ ರಾಜನೀತಿಯನ್ನು ಜನತೆ ಬಯಸುತ್ತಿದ್ದಾರೆ. ಬಿಜೆಪಿಯ ರಾಷ್ಟ್ರನೀತಿಯೊಂದಿಗೆ ಜನತೆ ನಡೆಯುತ್ತಿದ್ದಾರೆ. ಕರ್ನಾಟಕವು ಬಿಜೆಪಿ ಆಡಳಿತ ಬಯಸುತ್ತಿದೆ ಎಂದು ನುಡಿದರು. ಆಂಧ್ರದಲ್ಲಿ ಎನ್‍ಡಿಎ ಸರಕಾರ ಇದೆ. ಕರ್ನಾಟಕವು ಲೋಕಸಭಾ ಸದಸ್ಯರ ಸ್ಥಾನದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಗಮನ ಸೆಳೆದರು.
ಪಶ್ಚಿಮ ಬಂಗಾಲದಲ್ಲಿ 10 ವರ್ಷದ ಹಿಂದೆ 3 ಶಾಸಕರಿದ್ದುದು ಈಗ 200ಕ್ಕೂ ಹೆಚ್ಚಾಗಿದೆ. ಕೇರಳಂನಲ್ಲಿ 3 ಶಾಸಕರಿದ್ದಾರೆ. ಮುಂದೆ ಬಿಜೆಪಿ- ಎನ್‍ಡಿಎ ಶಾಸಕರ ಸಂಖ್ಯೆ ಮುಂದೆ ಬಹುಮತದತ್ತ ಮುನ್ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದ ವಿಕಾಸದ ಜೊತೆ ದೇಶದ ವಿಕಾಸವನ್ನು ನಾವು ಬಯಸುತ್ತೇವೆ. 40 ವರ್ಷದ ಹಿಂದೆ 400ಕ್ಕೂ ಹೆಚ್ಚು ಸಂಸದರಿದ್ದ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಾಣುತ್ತಿದೆ. ಆದರೂ, ಅವರ ಅಹಂಕಾರವು ಮಿತಿ ಮೀರಿದೆ. ಸಂವಿಧಾನ, ಪ್ರಜಾಪ್ರಭುತ್ವ, ಸಾಂವಿಧಾನಿಕ ಪ್ರಕ್ರಿಯೆಯನ್ನು ಕಡೆಗಣಿಸುತ್ತಾರೆ ಎಂದು ಟೀಕಿಸಿದರು.
ಎಲ್ಲರ ಜೊತೆ ಎಲ್ಲರ ವಿಕಾಸವೇ ನಮ್ಮ ಮಂತ್ರ ಎಂದ ಅವರು, ಇದೇ ಕಾರಣಕ್ಕೆ ನಮಗೆ 3ನೇ ಬಾರಿ ದೇಶದಲ್ಲಿ ಆಡಳಿತದ ಅವಕಾಶ ಸಿಕ್ಕಿದೆ. ಕಾಂಗ್ರೆಸ್ ಹಾಗಲ್ಲ ಎಂದ ಅವರು, ಕಾಂಗ್ರೆಸ್ ಆಡಳಿತಕ್ಕೆ ಬಂದ ಕೆಲವೇ ಸಮಯದಲ್ಲಿ ವಿಶ್ವಾssಸದ್ರೋಹದಿಂದ ಆಡಳಿತ ವಿರೋಧಿ ಅಲೆ ಆರಂಭವಾಗುತ್ತದೆ ಎಂದರು.
ಕರ್ನಾಟಕದಲ್ಲೂ ಆಡಳಿತ ವಿರೋಧಿ ಅಲೆಯನ್ನೇ ನೋಡುತ್ತಿದ್ದೇವೆ. ಪರಸ್ಪರ ಜಗಳದಲ್ಲಿ ಕರ್ನಾಟಕ ಕಾಂಗ್ರೆಸ್ ತೊಡಗಿಕೊಂಡಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಒಳಜಗಳ ನಡೆದಿದೆ. ತಮಿಳುನಾಡು, ಕೇರಳದಲ್ಲೂ ಆಡಳಿತದ ವಿಚಾರದಲ್ಲಿ ಸಮಸ್ಯೆ ಇದೆ ಎಂದು ವಿವರಿಸಿದರು. ಹಿಮಾಚಲ ಪ್ರದೇಶದಲ್ಲಿ ಸರಕಾರಿ ನೌಕರರರಿಗೆ ವೇತನ ಕೊಡಲೂ ಸಾಧ್ಯವಾಗುತ್ತಿಲ್ಲ. ತೆಲಂಗಾಣದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಖಜಾನೆ ಲೂಟಿ ಆಗುತ್ತಿದೆ. ಕಾಂಗ್ರೆಸ್ ಪ್ರಾದೇಶಿಕ ಪಕ್ಷವಾಗುತ್ತಿದೆ ಎಂದು ವಿಶ್ಲೇಷಿಸಿದರು.
ತಮಿಳುನಾಡಿನಲ್ಲಿ ಡಿಎಂಕೆ ಜೊತೆಗೆ ಇದ್ದ ಕಾಂಗ್ರೆಸ್ ಪಕ್ಷವು ಇದೀಗ ಆಡಳಿತದ ಲಾಲಸೆಯಿಂದ ಡಿಎಂಕೆಯ ಮೈತ್ರಿ ತೊರೆದು ಟಿವಿಕೆ ಜೊತೆಗೂಡಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿ ವಿಚಾರದಲ್ಲಿ ತಾಯಂದಿರು, ಸೋದರಿಯರಿಗೆ ವಿಶ್ವಾಸದ್ರೋಹ ಮಾಡಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ನಾರಿ ವಿರೋಧಿ ಪಕ್ಷವಾಗಿ ಹೊರಹೊಮ್ಮಿದೆ ಎಂದು ಟೀಕಿಸಿದರು. ಕಾಂಗ್ರೆಸ್ಸನ್ನು ಮಹಿಳೆಯರು ಎಂದೂ ಕ್ಷಮಿಸುವುದಿಲ್ಲ ಎಂದು ನುಡಿದರು.
ಬಿಜೆಪಿಗೆ ದೇಶಹಿತವೇ ಸರ್ವಪ್ರಥಮ ಎಂದ ಅವರು, ಯುದ್ಧದಿಂದ ಭಾರತದ ಮೇಲೂ ಪರಿಣಾಮ ಆಗಿದೆ; ನಾವು ಸಂಯಮದಿಂದ ಕೆಲಸ ಮಾಡಬೇಕೆಂದು ಜನರಿಗೆ ಮನವಿ ಮಾಡಿದರು. ಕೋವಿಡ್ ಸಂದರ್ಭದಲ್ಲಿ ಸಂಯಮದಿಂದ ನಾವು ಇದ್ದೆವು. ಅದೇ ಮಾದರಿಯಲ್ಲಿ ನಾವು ಈ ಸಂಕಷ್ಟದಿಂದ ಹೊರಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವರಾದ ಕು. ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಕರ್ನಾಟಕ ರಾಜ್ಯ ಉಸ್ತುವಾರಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ರಾಧಾಮೋಹನ್ ದಾಸ್ ಅಗ್ರವಾಲ್, ಮಾಜಿ ಮುಖ್ಯಮಂತ್ರಿ ಮತ್ತು ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ. ಮೋಹನ್, ಶಾಸಕರಾದ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಉಪಸ್ಥಿತರಿದ್ದರು.

Comments

Leave a Comment

Prev Post ಕರ್ನಾಟಕ ಸರ್ಕಾರದಿಂದ ಒಳಮೀಸಲಾತಿ ಕುರಿತ ಹೊಸ ಆದೇಶ: ಪರಿಶಿಷ್ಟ ಜಾತಿಗೆ ಶೇ.17ರ ಮೀಸಲಾತಿ ಶೇ.15ಕ್ಕೆ ಸೀಮಿತ, ಒಟ್ಟು ಮೀಸಲಾತಿ ಪ್ರಮಾಣ ಶೇ.50ಕ್ಕೆ ನಿಗದಿ
Next Post *ಅದ್ದೂರಿಯಾಗಿ ಪ್ರದರ್ಶನಗೊಂಡ “ಸಂಪೂರ್ಣ ರಾಮಾಯಣ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News