PRABHAVAA.COM

ಜಪಾನ್‌ನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರ ಭೇಟಿ ಮಾಡಿದ ಸಿಎಂ ಡಿಕೆ‌ ಶಿವಕುಮಾರ್

:

Font size:

ಕರ್ನಾಟಕ ಜಪಾನ್ ಹೂಡಿಕೆಗಳಿಗೆ ಪ್ರಮುಖ ತಾಣ- ಯಸುತಾಕಾ ನಕಸೋನ್‌ ಶ್ಲಾಘನೆ

ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ‌ಪಾಲ್ಗೊಳ್ಳಲು ಆಹ್ವಾನ

ಟೋಕಿಯ (ಜಪಾನ್), ನ.25:

​ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಟೋಕಿಯೊದಲ್ಲಿ ಜಪಾನ್‌ನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಯಸುತಾಕಾ ನಕಸೋನ್ ಅವರನ್ನು ಬುಧವಾರ ಭೇಟಿಯಾಗಿ ಮಾತುಕತೆ ನಡೆಸಿದರು.

ಕರ್ನಾಟಕದಲ್ಲಿ ಹೂಡಿಕೆ ಮಾಡಲು ಬನ್ನಿ

​ಜಪಾನ್ ಮತ್ತು ಕರ್ನಾಟಕದ ನಡುವಿನ ಆರ್ಥಿಕ ಸಹಕಾರ ಹಾಗೂ ದ್ವಿಪಕ್ಷೀಯ ಸಹಭಾಗಿತ್ವವನ್ನು ಬಲಪಡಿಸುವ ಅಗತ್ಯವನ್ನು ಹಾಗೂ
​ಕರ್ನಾಟಕ‌ದಲ್ಲಿ ಜಪಾನ್ ಹೂಡಿಕೆಗಳನ್ನು ಉತ್ತೇಜಿಸಲು ಸರ್ಕಾರ ಬದ್ದವಾಗಿದೆ ಎಂಬುದನ್ನು ಸಿಎಂ ಒತ್ತಿ ಹೇಳಿದರು.

ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ‌ಪಾಲ್ಗೊಳ್ಳಲು ಆಹ್ವಾನಿಸಿದ ಸಿಎಂ

ಮುಂದಿನ ತಿಂಗಳು ನಡೆಯುವ 'ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ 2027' ರಲ್ಲಿ 'ಜಪಾನ್ ಕಂಟ್ರಿ ಪೆವಿಲಿಯನ್' ಜೊತೆಗೆ ಭಾಗವಹಿಸುವಂತೆ ಜಪಾನ್ ಸರ್ಕಾರದ ಉನ್ನತ ಮಟ್ಟದ ನಿಯೋಗವನ್ನು ಸಿಎಂ ಆಹ್ವಾನ ನೀಡಿದರು.

​ಬೆಂಗಳೂರು ಮೆಟ್ರೋ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಜಪಾನ್ ನೀಡುತ್ತಿರುವ ನಿರಂತರ ಬೆಂಬಲಕ್ಕೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದ ಸಿಎಂ, 'ಕರ್ನಾಟಕದ ಅಭಿವೃದ್ಧಿ ಆದ್ಯತೆಗಳಿಗೆ ಜಪಾನ್ ಸರ್ಕಾರ ಸಹಕಾರವನ್ನು ವಿಸ್ತರಿಸುವಂತೆ ಸಹಕಾರ ಕೋರಿದರು.

​ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಯಸುತಾಕಾ ನಕಸೋನ್ ಭಾರತ-ಜಪಾನ್ ನಡುವಿನ ನಿರಂತರ ಬಾಂಧವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ,

'ಕರ್ನಾಟಕ ಜಪಾನ್ ಹೂಡಿಕೆಗಳಿಗೆ ಪ್ರಮುಖ ತಾಣವಾಗಿದೆ. ಜಪಾನ್ ಮತ್ತು ಕರ್ನಾಟಕದ ನಡುವಿನ ನಿರಂತರ ಸಹಭಾಗಿತ್ವ ವ್ಯವಹಾರಿಕ ಅಭಿವೃದ್ಧಿ ಮೈಲಿಗಲ್ಲು‌' ಎಂದು ಶ್ಲಾಘಿಸಿದರು

Comments

Leave a Comment

Prev Post ಕರ್ನಾಟಕದ ಒಂದು ಕಡೆ ಜಪಾನ್ ಮಾದರಿ ರೈಲ್ವೆ ನಿಲ್ದಾಣ ನಿರ್ಮಿಸುವ ಅಭಿಲಾಷೆ: ಸಿಎಂ ಡಿ ಕೆ ಶಿವಕುಮಾರ್
Next Post ಡಾ. ಶಂಕರಪ್ಪ ವಣಿಕ್ಯಾಳ ,ಪ್ರಭುರೆಡ್ಡಿ, ವಿ.ಎಸ್. ಬಣಗಾರ್ ,ರಮಾಮಣಿ ವಿ.ಕೆ ಮತ್ತಿತರ KAS ಅಧಿಕಾರಿಗಳ ವರ್ಗಾವಣೆ:

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟಕ್ಕೆ ₹10.61 ಕೋಟಿ ಲಾಭ.

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟಕ್ಕೆ ₹10.61 ಕೋಟಿ ಲಾಭ.

ಬಾಗ್ಮನೆ ಸಾಧನೆ ದೇಶವೇ ಹೆಮ್ಮೆಪಡುವಂತದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

ಬಾಗ್ಮನೆ ಸಾಧನೆ ದೇಶವೇ ಹೆಮ್ಮೆಪಡುವಂತದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

₹6,000 ಕೋಟಿ ಹೂಡಿಕೆಗೆ ಆ್ಯಕ್ಸಿಸ್‌ಕೇಡ್ಸ್‌ ಏರೊಸ್ಪೇಸ್‌ ಒಲವು: ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ

* ಮೂರು ವರ್ಷಗಳಲ್ಲಿ ವೈಮಾಂತರಿಕ್ಷ, ರಕ್ಷಣೆ, ಎಂಆರ್‌ಒ, ತಯಾರಿಕಾ ಕ್ಲಸ್ಟರ್‌ ಅಭಿವೃದ್ಧಿ * 20 ಸಾವಿರ ಪ್ರತ್ಯಕ್ಷ ಹಾಗೂ 54 ಸಾವಿರ ಪರೋಕ್ಷ ಉದ್ಯೋಗ ಅವಕಾಶಗಳು ಸೃಷ್ಟಿ

ಎಂ.ಸಿ.ಸಿ.ಬ್ಯಾಂಕ್ ಕಾರ್ಯವ್ಯಾಪ್ತಿ ರಾಜ್ಯಕ್ಕೆ ವಿಸ್ತರಣೆ: ಅಧ್ಯಕ್ಷ ಅನಿಲ್ ಲೋಬೋ

ಎಂಸಿಸಿ ಬ್ಯಾಂಕ್: ದೇರಳಕಟ್ಟೆ ಮತ್ತು ಕಟಪಾಡಿಯಲ್ಲಿ ಹೊಸ ಶಾಖೆಗಳ ಉದ್ಘಾಟನೆ, 1,535 ಕೋಟಿ ರೂ. ವ್ಯವಹಾರ ಮೈಲಿಗಲ್ಲು

ಬ್ಯಾಂಕ್ ನೀಡುವ ಸಾಲದಿಂದ ಗ್ರಾಹಕರು ಆದಾಯ ಹೆಚ್ಚಿಸಿಕೊಳ್ಳಬೇಕು: ಬಸವರಾಜ ಬೊಮ್ಮಾಯಿ

ಬ್ಯಾಂಕ್ ನೀಡುವ ಸಾಲದಿಂದ ಗ್ರಾಹಕರು ಆದಾಯ ಹೆಚ್ಚಿಸಿಕೊಳ್ಳಬೇಕು: ಬಸವರಾಜ ಬೊಮ್ಮಾಯಿ

ಹೂಡಿಕೆ ಆಕರ್ಷಣೆಗೆ ಕೋಲ್ಕತ್ತಾದಲ್ಲಿ ರೋಡ್ ಶೋ ನಡೆಸಿದ ಸಚಿವ ಎಂ.ಬಿ.ಪಾಟೀಲ

ಹೂಡಿಕೆ ಆಕರ್ಷಣೆಗೆ ಕೋಲ್ಕತ್ತಾದಲ್ಲಿ ರೋಡ್ ಶೋ ನಡೆಸಿದ ಸಚಿವ ಎಂ.ಬಿ.ಪಾಟೀಲ

Read all News