ಪದ್ಮನಾಭ ಆ್ಯಂಡ್ ಫ್ಯಾಮಿಲಿ" ಸಿನಿಮಾದ ಟೀಸರ್ ಬಿಡುಗಡೆ
*"ಪದ್ಮನಾಭ ಆ್ಯಂಡ್ ಫ್ಯಾಮಿಲಿ" ಸಿನಿಮಾದ ಟೀಸರ್ ಬಿಡುಗಡೆ*
*ಪದ್ಮನಾಭ ಆ್ಯಂಡ್ ಫ್ಯಾಮಿಲಿ" ಸಿನಿಮಾದ
ಟೀಸರ್ ಬಿಡುಗಡೆ*
From Jayaram Udupi
ಮಂಗಳೂರು:
ನವದುರ್ಗ ಫಿಲ್ಮ್ಸ್ ಲಾಂಛನದಲ್ಲಿ ಕರಾವಳಿ ಮೂಲದ ಉದ್ಯಮಿ ಡಾ. ಕನ್ಯಾನ ಸದಾಶಿವ ಶೆಟ್ಟಿ ನಿರ್ಮಾಣದಲ್ಲಿ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ಪದ್ಮನಾಭ ಆ್ಯಂಡ್ ಫ್ಯಾಮಿಲಿ ಚಲನ ಚಿತ್ರದ ಟೀಸರ್ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ನಡೆಯಿತು.
ಅತಿಥಿಗಳು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಟೀಸರ್ ಮತ್ತು ಸಿನಿಮಾದ ಹಾಡಿನ ಪ್ರದರ್ಶನ ನಡೆಯಿತು.
ಈ ಸಂದರ್ಭ ಮಾತನಾಡಿದ ನಿರ್ಮಾಣದ ಮೇಲುಸ್ತುವಾರಿ ವಹಿಸಿದ್ದ ಹಾಗೂ ಅಭಿಮತ ಟಿವಿಯ ಮುಖ್ಯಸ್ಥೆಯೂ ಆಗಿರುವ ಡಾ ಮಮತಾ ಪಿ ಶೆಟ್ಟಿ ಅವರು ನಿರ್ಮಾಪಕರು ಕಲಾವಿದರಿಗೆ ಅನ್ನದಾತರು. ಪದ್ಮನಾಭ ಆ್ಯಂಡ್ ಫ್ಯಾಮಿಲಿ ಸಿನಿಮಾಕ್ಕೆ 54 ದಿನಗಳ ಕಾಲ ಚಿತ್ರಿಕರಣ ನಡೆದಿದೆ. ನಿರ್ಮಾಪಕರು ಚಿತ್ರತಂಡಕ್ಕೆ ಯಾವುದೇ ರೀತಿಯ ಕೊರತೆ ಬಾರದ ನಿಟ್ಟಿನಲ್ಲಿ ಸಹಕಾರ ನೀಡಿದ್ದಾರೆ ಎಂದರು.
ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಅವರು ನಿರ್ಮಾಪಕರಿಗೆ ಒಳ್ಳೆಯ ಕತೆ ಹೇಳಿದರು. ಸಮಾಜ ಸೇವೆಯ ಜೊತೆಗೆ ಸಿನಿಮಾದ ಬಗ್ಗೆ ಕಾಳಜಿ ವಹಿಸಿ, ಕಲಾವಿದರ ಕಷ್ಟಸುಖಗಳಿಗೆ ಸ್ಪಂದಿಸ ಬೇಕು ಮತ್ತು ರಜತ ಪರದೆಯ ಹಿಂದಿನ ಶ್ರಮಜೀವಿಗಳಿಗೆ ಆಸರೆಯಾಗಬೇಕು ಎಂಬ ನಿಟ್ಟಿನಲ್ಲಿ ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ಅವರು ಸಿನಿಮಾಕ್ಕೆ ಬಂಡವಾಳ ಹೂಡಿದರು ಎಂದರು.
ಸಿನಿಮಾ ಚಿತ್ರೀಕರಣದ ವೇಳೆ ಬಹಳಷ್ಟು ಮಂದಿ ತೆರೆಯ ಹಿಂದೆ ಕೆಲಸ ಮಾಡಿದ್ದಾರೆ. ಈ ಚಿತ್ರದಿಂದ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಅವರ ಅದೃಷ್ಟ ಬದಲಾಗಲಿದೆ. ಅವರು ಸತತ ನಾಲ್ಕು ವರ್ಷಗಳಿಂದ ನಿರ್ಮಾಪಕರಿಗಾಗಿ ಕಾದು ಕುಳಿತಿದ್ದರು. ಅವರ ಕಾಯುವಿಕೆಗೆ ಇಲ್ಲಿ ಫಲ ದೊರೆಯಲಿದೆ ಎಂದು ಡಾ ಮಮತಾ ಪಿ ಶೆಟ್ಟಿ ತಿಳಿಸಿದರು.
ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಮಾತನಾಡಿ ಈವರೆಗೆ ನಾಲ್ಕು ಸಿನಿಮಾ ಮಾಡಿದ್ದೇನೆ. ಒಳ್ಳೆಯ ಕತೆಯನ್ನು ಸಿನಿಮಾ ಮಾಡಲು ಪ್ರಯತ್ನಿಸಿದಾಗ ಆಕಸ್ಮಿಕವಾಗಿ ಡಾ ಕನ್ಯಾನ ಸದಾಶಿವ ಶೆಟ್ಟಿಯವರ ಪರಿಚಯ ಆಯಿತು. ಅವರಿಗೆ ಕಥೆ ಇಷ್ಟ ಆಯಿತು. ಸಿನಿಮಾನೂ ಆಯಿತು. ಜನವರಿ 15 ಕ್ಕೆ ಸಿನಿಮಾ ತೆರೆಗೆ ಬರಲಿದೆ. ಕುಟುಂಬ ಸಮೇತ ನೋಡುವಂತಹ ಹಾಸ್ಯ ಸಿನಿಮಾವನ್ನು ನಿರ್ಮಿಸಿದ್ದೇವೆ. ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು.
ಮುಖ್ಯ ಅತಿಥಿ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ ಟೀಸರ್ ಚೆನ್ನಾಗಿದೆ. ಹಾಡೂ ಚೆನ್ನಾಗಿತ್ತು. ಇಸ್ಮಾಯಿಲ್ ಕನ್ನಡದಲ್ಲಿ ನಿರ್ದೇಶಿಸುತ್ತಿರುವ ಎರಡನೆ ಸಿನಿಮಾ ಕೂಡಾ ಜನರ ಮನಗೆಲ್ಲಲಿ ಎಂದರು.
ಪಣಂಬೂರು ಠಾಣಾ ಇನ್ಸ್ ಪೆಕ್ಟರ್ ಸಲೀಮ್ ಅಬ್ಬಾಸ್ ವಲಾಲ್ ಮಾತನಾಡಿ ಸಿನಿಮಾದ ಟೀಸರ್ ನ ಗುಣಮಟ್ಟ ಚೆನ್ನಾಗಿದೆ. ನಿರ್ದೇಶಕ, ನಿರ್ಮಾಪಕರು ಪ್ರೇಕ್ಷಕರಿಗೆ ಒಂದು ಒಳ್ಳೆಯ ಸಿನಿಮಾ ನೀಡಿದ್ದಾರೆ ಎಂದರು. ಟೀಸರ್ ಇಷ್ಟ ಆಯಿತು ಸಿನಿಮಾ ಯಶಸ್ವಿಯಾಗಲಿ ಎಂದು ನ್ಯಾಯವಾದಿ ಅರುಣ್ ಬಂಗೇರ ತಿಳಿಸಿದರು.
ಸಮಾರಂಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ತಮ್ಮ ಲಕ್ಷ್ಮಣ್, ಅಡ್ಯಾರ್ ಮಾಧವ ನಾಯ್ಕ್, ಸತೀಶ್ ಬಂದಲೆ, ಪಮ್ಮಿ ಕೊಡಿಯಾಲ್ ಬೈಲ್, ಡಾ ಅಬೂಬಕರ್ ಸಿದ್ದಿಕ್ ಅಡ್ಡೂರು, ಡಾ ಕಿರಣ್ ಕುಮಾರ್, ಎನ್ ನಾಗರಾಜ್, ಶರಣ್ ರಾಜ್ ಕಾಸರಗೋಡು, ನಿತಿನ್ ರೈ ಕುಕ್ಕುವಳ್ಳಿ, ಪತ್ರಕರ್ತರಾದ ಶ್ರೀನಿವಾಸ್ ನಾಯಕ್ ಇಂದಾಜೆ, ಬಾಳ ಜಗನ್ನಾಥ ಶೆಟ್ಟಿ, ಶಮೀರ್ ಮುಡಿಪು ಎಕೆ ಕಾರ್ಲ ಮೊದಲಾದವರು ಉಪಸ್ಥಿತರಿದ್ದರು.
ಸಿನಿಮಾಕ್ಕೆ ಎ ಕೆ ಕಾರ್ಲ ಸಂಪೂರ್ಣ ಸಹಕಾರ ನೀಡಿದ್ದಾರೆ. ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ.
ಸಿನಿಮಾದ ಹಾಡು ಇತಿಹಾಸ ಬರೆಯಲಿದೆ. ಹಾಡಿನ ಚಿತ್ರೀಕರಣಕ್ಕಾಗಿ ಒಂದು ಕೋಟಿ ಖರ್ಚು ಮಾಡಲಾಗಿದೆ. ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿದೆ. ರಿಕ್ಷಾ ಚಾಲಕರು ಅಸಹಾಯಕರಲ್ಲ ಅವರು ಸ್ವಾಭಿಮಾನಿಗಳು ಎಂಬ ಕಥಾ ಹಂದರವನ್ನು ಚಿತ್ರ ಹೊಂದಿದೆ. ಷಷ್ಠೀಶ್ ಪಿ ಶೆಟ್ಟಿ ಸ್ವಾಗತಿಸಿದರು. ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.
ದೀಪಕ್ ರೈ ಪಾಣಾಜೆ, ಬಿಗ್ ಬಾಸ್ ಖ್ಯಾತಿಯ ಸಂಗೀತ ಶೃಂಗೇರಿ, ಹೃದನ್ ಶೆಟ್ಟಿ, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ರವಿರಾಮಕುಂಜ, ಪುಷ್ಪರಾಜ ಬೊಳ್ಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಮೈಮ್ ರಾಮ್ ದಾಸ್, ಉಮೇಶ್ ಮಿಜಾರ್, ಅನಿಲ್ ರಾಜ್ ಉಪ್ಪಳ, ಮಾನಸಿ ಸುಧೀರ್, ಸಾಯಿಕೃಷ್ಣ, ಸತೀಶ್ ಬಂದಲೆ ಮುಖ್ಯ ತಾರಾಗಾಣದ ಈ ಚಿತ್ರದಲ್ಲಿ ಕರಾವಳಿಯ ಹೆಸರಾಂತ ಹಾಸ್ಯ ಕಲಾವಿದರು ಅಭಿನಯಿಸಿದ್ದಾರೆ. ಮಣಿಕಾಂತ್ ಕದ್ರಿ ಮತ್ತು ಸಮೀರ್ ಮುಡಿಪು ಸಂಗೀತ ನೀಡಿದ್ದಾರೆ.
ಈ ಚಿತ್ರವನ್ನು ಅಖಿಲ ಕರ್ನಾಟಕ ಆಟೋ ರಿಕ್ಷಾ ಚಾಲಕರಿಗೆ ಅರ್ಪಣೆ ಮಾಡಲಾಗಿದೆ ಎಂದು ಸಿನಿಮಾ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ತಿಳಿಸಿದ್ದಾರೆ.







Comments
Leave a Comment