PRABHAVAA.COM

ಕರ್ನಾಟಕ ಜೈನ ಧರ್ಮದ ಕರ್ಮ ಭೂಮಿ: ಸಿಎಂ ಡಿ ಕೆ ಶಿವಕುಮಾರ್

Bengaluru Urban:

Font size:

ಜೈನ ಸಮುದಾಯವನ್ನು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿಸಿದ್ದು ಕಾಂಗ್ರೆಸ್ ಸರ್ಕಾರ

ಶ್ರವಣಬೆಳಗೊಳ ಜೈನ ಧರ್ಮದ ಕಾಶಿ

ಕ್ಷಮೆಯಿಂದ ಮನಸ್ಸು ಶುದ್ಧ, ಶಾಂತಿಯಿಂದ ಬದುಕು ಪಾವನ

ಜೈನ ಸಮುದಾಯದ ಹಿತ ಕಾಪಾಡಲು ಕಾಂಗ್ರೆಸ್ ಸರ್ಕಾರ ಬದ್ಧ

ಬೆಂಗಳೂರು, ಸೆ.27:

"ಕರ್ನಾಟಕ ಜೈನ ಧರ್ಮದ ಕರ್ಮ ಭೂಮಿ. ಕರ್ನಾಟಕವನ್ನು ಆಳಿದ ಹೊಯ್ಸಳ, ರಾಷ್ಟ್ರಕೂಟರು, ಕನ್ನಡದ ಆದಿಕವಿ ಪಂಪ ಕೂಡ ಜೈನ ಸಮುದಾಯದವರು" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಬಣ್ಣಿಸಿದರು.

ಶ್ರೀ ಜ್ಞಾನೋದಯ ದಿಗಂಬರ ಜೈನ ಮಂದಿರ ವತಿಯಿಂದ ವೈಟ್ ಫೀಲ್ಡ್ ನ ತೂಬರಹಳ್ಳಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕ್ಷಮಾವಾಣಿ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.

"ನಾವು ನೀವೆಲ್ಲರೂ ಧರ್ಮ ಗುರುಗಳ ಸಮ್ಮುಖದಲ್ಲಿ ಅವರ ಆಶೀರ್ವಚನ ಕೇಳುತ್ತಿರುವುದು ನಮ್ಮ ಭಾಗ್ಯ. ಪ್ರಪಂಚಕ್ಕೆ ಅಹಿಂಸೆ ಮಹತ್ವ ಸಾರಿದ ಭಗವಾನ್ ಮಹಾವೀರರಿಗೆ ನಮಿಸುತ್ತೇನೆ. ತನ್ನನ್ನು ತಾನು ಜಯಿಸುವವನೇ ನಿಜವಾದ ಜಯಶಾಲಿ ಎಂದು ಮಾರ್ಗದರ್ಶನ ನೀಡಿದ್ದಾರೆ" ಎಂದರು.

"ಅಹಿಂಸೆ ಸರ್ವೋಚ್ಚ ಧರ್ಮ, ಸತ್ಯ ಶಾಶ್ವತ ಎಂದು ಭಗವಾನ್ ಮಹಾವೀರರು ನಮಗೆ ಸಂದೇಶ ನೀಡಿದ್ದಾರೆ. ಸುಳ್ಳು ಸದ್ಯಕ್ಕೆ ಗೆಲ್ಲಬಹುದು, ಅಂತಿಮವಾಗಿ ಗೆಲ್ಲುವುದು ಸತ್ಯ. ಸುಳ್ಳಿಗೆ ದೀರ್ಘಾವಧಿ ಜೀವ ಇರುವುದಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ದೊಡ್ಡ ಇತಿಹಾಸ ಪರಂಪರೆ ಇದೆ. ಭಗವಾನ್ ಮಹಾವೀರರ ತತ್ವ ಪ್ರತಿಯೊಬ್ಬ ಮಾನವನ ತತ್ವ. ಇಂದು ನಾವು ಅಹಿಂಸೆ, ಸರ್ವೋದಯ ಹೆಸರಿನಲ್ಲಿ ಅವರು ನೀಡಿದ ಪ್ರೀತಿ ವಿಶ್ವಾಸದಲ್ಲಿ ಬದುಕುತ್ತಿದ್ದೇವೆ" ಎಂದು ತಿಳಿಸಿದರು.

"ನಾವು ದೇವರನ್ನು ವಿವಿಧ ಹೆಸರಲ್ಲಿ ಕಾಣುವ ಪ್ರಯತ್ನ ಮಾಡುತ್ತೇವೆ. ನಾವು ಬೇರೆಯವರಿಗೆ ತೊಂದರೆ ನೀಡಬಾರದು ಎಂಬ ತತ್ವವನ್ನು ಎಲ್ಲಾ ಧರ್ಮಗಳು ಸಾರುತ್ತವೆ. ಅಹಿಂಸೆಯೇ ಮೂಲ ತತ್ವ ಎಂದು ಪ್ರತಿಪಾದಿಸಿಕೊಂಡು ಬಂದಿದ್ದೇವೆ" ಎಂದರು.

ಶ್ರವಣಬೆಳಗೊಳ ಜೈನ ಧರ್ಮದ ಕಾಶಿ

"ಕರ್ನಾಟಕದ ಶ್ರವಣಬೆಳಗೊಳ ಜೈನ ಧರ್ಮದ ಕಾಶಿ ಇದ್ದಂತೆ. ನಮ್ಮ ರಾಜ್ಯದಲ್ಲಿ ನೂರಾರು ಜೈನ ತೀರ್ಥಂಕರ ದೇವಾಲಯಗಳು ಇವೆ ಎಂಬುದನ್ನು ಇತಿಹಾಸ ಹೇಳುತ್ತದೆ. ಕರ್ನಾಟಕದ ಮುಖ್ಯಮಂತ್ರಿಯಾಗಿ, ಪ್ರಜಾ ಸೇವಕನಾಗಿ ಜೈನ್ ಬಾಂಧವರ ಜತೆ ಇದ್ದೇನೆ ಎಂದು ಹೇಳಲು ಬಂದಿದ್ದೇನೆ. ನಿಮ್ಮ ಕಷ್ಟ, ಸುಖ, ಶ್ರಮ ಏನೇ ಇರಲಿ. ನಮ್ಮ ಸರ್ಕಾರ ನಿಮ್ಮ ಜತೆಗಿದೆ" ಎಂದು ಭರವಸೆ ನೀಡಿದರು.

ಜೈನ ಸಮುದಾಯವನ್ನು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿಸಿದ್ದು ಕಾಂಗ್ರೆಸ್ ಸರ್ಕಾರ

"ಜೈನ ಸಮುದಾಯವನ್ನು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿಸಿದ್ದು ಕಾಂಗ್ರೆಸ್ ಸರ್ಕಾರ ಎಂಬುದನ್ನು ಮರೆಯುವಂತಿಲ್ಲ. ನಿಮ್ಮ ಪ್ರೀತಿ ಹಂಚಿಕೊಂಡು ಹೋಗುತ್ತಿದ್ದೇವೆ. ಈ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಈ ಪ್ರೀತಿ ಮುಂದುವರಿಸಿಕೊಂಡು ಹೋಗೋಣ. ಗಾಂಧೀಜಿ ಅವರು ಜೈನ ಧರ್ಮದ ತತ್ವ ಆದರ್ಶವನ್ನು ಪಾಲಿಸಿ ನಮಗೆ ಪ್ರೇರಣೆಯಾಗಿದ್ದಾರೆ" ಎಂದು ತಿಳಿಸಿದರು.

"ಪ್ರಪಂಚದಲ್ಲಿ ಜೈನ ಸಮುದಾಯ ಕರುಣೆ ತೋರಿ, ಕ್ಷಮಾಪಣೆ ಗುಣವನ್ನು ಸಾರಿ, ಕ್ಷಮೆಯೇ ಶಾಂತಿಯ ಮೊದಲ ಹೆಜ್ಜೆ ಎಂದು ಸಂದೇಶ ಕೊಟ್ಟಿದೆ. ತಪ್ಪಿಗೆ ಕ್ಷಮೆ, ಮನಸ್ಸಿಗೆ ಶಾಂತಿ, ಕ್ಷಮೆ ಕೇಳುವುದು ವಿನಯ, ಕ್ಷಮಿಸುವುದು ಮಹತ್ವವಾಗಿದೆ. ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿಗೆ ಕ್ಷಮೆ ಕೇಳುವುದು ಪವಿತ್ರ ಸಂದೇಶ. ನಾನು ನಿಮ್ಮ ಸಮಾಜದ ಅನೇಕ ಧರ್ಮಗುರುಗಳನ್ನು ಭೇಟಿ ಮಾಡಿದ್ದೇನೆ" ಎಂದು ಹೇಳಿದರು.

ಕ್ಷಮೆಯಿಂದ ಮನಸ್ಸು ಶುದ್ಧ, ಶಾಂತಿಯಿಂದ ಬದುಕು ಪಾವನ

"ಮಹಾರಾಜರು ಆಶೀರ್ವಾದ ಮಾಡುವಾಗ ಮನಸ್ಸುಪೂರ್ತಿಯಾಗಿ ಆಶೀರ್ವಾದ ಮಾಡಿದ್ದು, ಅವರಿಗೆ ತಲೆಬಾಗಿ ನಮಿಸುವೆ. ಕ್ಷಮೆಯಿಂದ ಮನಸ್ಸು ಶುದ್ಧ, ಶಾಂತಿಯಿಂದ ಬದುಕು ಪಾವನವಾಗುತ್ತದೆ. ಧರ್ಮದ ಬೇರು ಗಟ್ಟಿಯಾಗಿ, ಸಮಾಜದ ಮೌಲ್ಯಗಳು ಮತ್ತಷ್ಟು ಬಲವಾಗಬೇಕು. ನಾಡಿದ್ದರೆ ನುಡಿ, ನುಡಿ ಇದ್ದರೆ ನಡೆ. ನಡೆ ಹಾಗೂ ನುಡಿ ಒಂದಾಗಲಿ. ನಮ್ಮ ಗುರುಗಳಿಂದ ನಾವು ಬಂಧುಗಳಾಗಿದ್ದು, ಗುರುಗಳಿಂದ ದೈವವನ್ನು ಕಾಣುತ್ತೇವೆ. ಗುರುಗಳಿಂದ ಮುಕ್ತಿ ಸಿಗುತ್ತದೆ ಎಂದು ಸೇರಿದ್ದೇವೆ. ಗುರು ಎಂದರೆ ಜ್ಞಾನ ನೀಡುವವರು ಮಾತ್ರವಲ್ಲ, ಬದುಕಿನ ದಾರಿ ತೋರುವವರು" ಎಂದು ಅಭಿಪ್ರಾಯಪಟ್ಟರು.

"ನಾನು ಇಲ್ಲಿಗೆ ಬರುವ ಮುನ್ನ ಗುರುಗಳನ್ನು ಗುರುಪೀಠದಲ್ಲಿ ಭೇಟಿ ಮಾಡಿದಾಗ ಸಮಾಜದ ಬೇಡಿಕೆ ಬಗ್ಗೆ ಗಮನಸೆಳೆದಿದ್ದಾರೆ. ಈ ಸರ್ಕಾರ ನಿಮ್ಮ ಜತೆಗಿರುತ್ತದೆ. ನಿಮಗೆ ಯಾವ ರೀತಿ ಸಹಾಯ ಮಾಡಬಹುದು ಎಂಬುದನ್ನು ಮುಂದಿನ ದಿನಗಳಲ್ಲಿ ಘೋಷಣೆ ಮಾಡುವೆ. ನನ್ನ ಘೋಷಣೆ ಮಾತಿಗೆ ಸೀಮಿತವಾಗಬಾರದು. ನಾನು ನಿಮ್ಮ ಜತೆಗಿರುವೆ, ನೀವು ನಮ್ಮ ಜತೆಗಿರಬೇಕು" ಎಂದು ಮನವಿ ಮಾಡಿದರು.

ಜೈನ ಸಮುದಾಯದ ಹಿತ ಕಾಪಾಡಲು ಕಾಂಗ್ರೆಸ್ ಸರ್ಕಾರ ಬದ್ಧ

"ನನ್ನ ಮಿತ್ರ ಸುಧಾಕರ್ ನಮ್ಮೊಂದಿಗೆ ಇಲ್ಲ. ಭಗವಂತ ಅವನನ್ನು ಕರೆಸಿಕೊಂಡ. ಅವನು ನನಗೆ ಶಕ್ತಿಯಾಗಿದ್ದ. ಬೆಂಗಳೂರು ನಗರದಲ್ಲಿ ಹೊರ ರಾಜ್ಯಗಳಿಂದ ಬಂದು ಬದುಕು ಕಟ್ಟಿಕೊಂಡಿದ್ದಾರೆ. ನಾನು ಅಭಿಮಾನ ಪೂರ್ವಕವಾಗಿ ಬಂದಿದ್ದೇನೆ. ನೀವು ನನಗೆ ಶಕ್ತಿ ಕೊಟ್ಟರೆ, ನಾವು ನಿಮಗೆ ಶಕ್ತಿ ನೀಡುತ್ತೇವೆ. ಸರ್ವರಿಗೂ ಸಮಪಾಲು, ಸಮಬಾಳು ತತ್ವದ ಮೇಲೆ ಸಾಗುತ್ತಿದ್ದೇವೆ. ನಿಮ್ಮ ಹಿತ ಕಾಪಾಡುವ ಸರ್ಕಾರ ನಮ್ಮದು. ನಿಮ್ಮ ಸರ್ಕಾರವನ್ನು ರಕ್ಷಿಸಿಕೊಳ್ಳುವುದು ನಿಮ್ಮ ಕರ್ತವ್ಯ. ನಮ್ಮ ಸರ್ಕಾರಕ್ಕೆ ಆಶೀರ್ವಾದ ನೀಡಲು ಶ್ರೀಗಳು ಬಹು ದೂರದಿಂದ ಬಂದಿದ್ದಾರೆ" ಎಂದು ತಿಳಿಸಿದರು.

Comments

Leave a Comment

Prev Post 108 ಶಿಕ್ಷಕರು ಹಾಗೂ ಅಭಿಯಂತರರಿಗೆಶಾಸಕ ಕೃಷ್ಣಪ್ಪರವರಿಂದ ಗೌರವ
Next Post AI ಮೂಲಕ ಪ್ರವಾಸೋದ್ಯಮವನ್ನು ಹೆಚ್ಚು ಸಮಗ್ರ, ಸುಸ್ಥಿರ ಮತ್ತು ಅರ್ಥಪೂರ್ಣವಾಗಿಸಲ ಸಚಿವ ಕೆ.ಜೆ. ಜಾರ್ಜ್ ಕರೆ

‎ನಾಡಿನ ಜನರ ಹೃದಯದಲ್ಲಿ ಯಡಿಯೂರಪ್ಪರಿಗೆ ಶಾಶ್ವತ ಸ್ಥಾನ- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಎಲೆಕೊಡಿಗೇಹಳ್ಳಿ ಶ್ರೀನಂದಿಬಸವೇಶ್ವರ ನೂತನ ದೇವಾಲಯದ ಮಂಡಲ ಪೂಜೆ

ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಕಾಯ್ದೆ ಜಾರಿಗೆ

ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಕಾಯ್ದೆ ಜಾರಿಗೆ

ಕೇರಳದಲ್ಲೊಂದು ಗೋಶಾಲೆ ಸಹಿತ ಮನೆ.

ಕೇರಳದಲ್ಲೊಂದು ಗೋಶಾಲೆ ಸಹಿತ ಮನೆ.

ಕಾಸರಗೋಡು: ದೇವರ ನಾಡಿನ ಸಂಪ್ರದಾಯದ ಭವ್ಯತೆ

ಕಾಸರಗೋಡು: ದೇವರ ನಾಡಿನ ಸಂಪ್ರದಾಯದ ಭವ್ಯತೆ

ಮಂಗಳೂರು: ತಮಿಳುನಾಡು ಮುಖ್ಯಮಂತ್ರಿ-ನಟ ವಿಜಯ್ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ, ಭಾರೀ ಭದ್ರತೆ

ಮಂಗಳೂರು: ತಮಿಳುನಾಡು ಮುಖ್ಯಮಂತ್ರಿ-ನಟ ವಿಜಯ್ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ, ಭಾರೀ ಭದ್ರತೆ

ಯಡಿಯೂರು ಕೆರೆಯ ಎದುರು ‘ಅ.ನ.ಕೃ. ಕನ್ವೆನ್ಷನ್ ಸೆಂಟರ್’ ಹಾಗೂ ‘ಡಾ|| ಪುನೀತ್ ರಾಜ್ ಕುಮಾರ್ ಸಭಾಂಗಣ’ ಭವ್ಯ ಲೋಕಾರ್ಪಣೆ

ಯಡಿಯೂರು ಕೆರೆಯ ಎದುರು ‘ಅ.ನ.ಕೃ. ಕನ್ವೆನ್ಷನ್ ಸೆಂಟರ್’ ಹಾಗೂ ‘ಡಾ|| ಪುನೀತ್ ರಾಜ್ ಕುಮಾರ್ ಸಭಾಂಗಣ’ ಭವ್ಯ ಲೋಕಾರ್ಪಣೆ

Read all News