PRABHAVAA.COM

ಕೆಪಿಎಸ್ಸಿ ಮುಚ್ಚುವೆ ಎಂದ ಮುಖ್ಯಮಂತ್ರಿಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆ

India:

Font size:

ಮುಖ್ಯಮಂತ್ರಿ ಶಾಸನದ ಗಂಧಗಾಳಿ ಗೊತ್ತಿಲ್ಲ ಎಂದು ಕಿಡಿ

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ; ನೆಗಡಿ ಬಂದರೆ ಮೂಗಿಗೇ ಕತ್ತರಿ ಹಾಕಿದಂತೆ

ನವದೆಹಲಿ 23 ಸೆಪ್ಟೆಂಬರ್ 2026

ಕೆಪಿಎಸ್‌ಸಿಯನ್ನು ಮುಚ್ಚಲು ಕಾನೂನು ತಜ್ಞರ ಜತೆ ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಮುಖ್ಯಮಂತ್ರಿಗೆ ಶಾಸನದ ಮಹತ್ವವೇ ಗೊತ್ತಿಲ್ಲದಂತಿದೆ ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ಕರ್ನಾಟಕ ಲೋಕಸೇವಾ ಆಯೋಗ (KPSC) ವನ್ನು ಶಾಸನಬದ್ಧವಾಗಿ ಮುಚ್ಚುತ್ತೇವೆ ಎನ್ನುವ ಮುಖ್ಯಮಂತ್ರಿ ಹೇಳಿಕೆ ಕೇವಲ ಹತಾಶೆಯಿಂದಷ್ಟೇ ಕೂಡಿಲ್ಲ, ಅದು ಬುದ್ಧಿಗೇಡಿತನ, ಹೊಣೆಗೇಡಿತನ ಮತ್ತು ಅಜ್ಞಾನದ ಪರಮಾವಧಿ. ಇವರ ವರಸೆ ಹೇಗಿದೆ ಎಂದರೆ 'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ!'; 'ನೆಗಡಿ ಬಂದರೆ ಮೂಗಿಗೇ ಕತ್ತರಿ ಹಾಕಿದಂತೆ!!' ಎಂದು ಲೇವಡಿ ಮಾಡಿದ್ದಾರೆ.

ಕೆಪಿಎಸ್ಸಿ ಸಂಸ್ಥೆ ಚೆನ್ನಾಗಿಯೇ ಇದೆ, ಕೆಟ್ಟ ಜನ ಬಂದು ಕೂತಿದ್ದಾರಷ್ಟೇ. ಬೇಲಿಯೇ ಹೊಲ ಮೇಯುತ್ತಿದೆ. ಅಲ್ಲಿಗೆ ಖದೀಮರನ್ನು ನೇಮಕ ಮಾಡಿದ್ದು ಯಾರು? ವಸೂಲಿಗೆ ಅಂಗಡಿ ತೆರೆಯಲು ಅವಕಾಶ ಕೊಟ್ಟಿದ್ದು ಯಾರು? ವಿಧಾನಸೌಧದ 3ನೇ ಮಹಡಿಯಲ್ಲಿ ಕೂತವರೇ ಎಸಗಿದ ಪಾಪವಲ್ಲವೇ ಇದು? ಆ ಲೆಕ್ಕಕ್ಕೆ ಬಂದರೆ ವಿಧಾನಸೌಧವನ್ನೇ ಮುಚ್ಚಬೇಕು. ನಿಮ್ಮ ಸಾರಥ್ಯದಲ್ಲಿ ಅದೂ ನಡೆದುಹೋಗಲಿ ಎಂದು ಮುಖ್ಯಮಂತ್ರಿಗೆ ಕೇಂದ್ರ ಸಚಿವರು ಟಾಂಗ್ ನೀಡಿದ್ದಾರೆ.

ಬೇಜವಾಬ್ದಾರಿಯಿಂದ ಚಪಲಕ್ಕೆ ನಾಲಿಗೆ ಜಾರುವ ಮೊದಲು ಕೆಪಿಎಸ್ಸಿ ಎಂದರೆ ಏನು? ಅದರ ಸಂರಚನೆ, ಸ್ವರೂಪ ಹೇಗಿರುತ್ತದೆ? ಸಾಂವಿಧಾನಿಕವಾಗಿ ಅದಕ್ಕಿರುವ ರಕ್ಷಣೆ ಏನು? ಆ ಸಂಸ್ಥೆ ನಡೆದುಬಂದ ಹಾದಿ, ಹೆಗ್ಗಳಿಕೆ ಬಗ್ಗೆ ತಿಳಿದುಕೊಳ್ಳಿ. ಹೊಲಕ್ಕೆ ಕಳೆ ಬಿದ್ದರೆ ಅದನ್ನು ಕಿತ್ತೆಸೆಯಬೇಕು, ಹೊಲಕ್ಕೇ ವಿಷವುಣಿಸುವ ಕೆಲಸ ಆಗಬಾರದು ಎಂದು ಕಿವಿಮಾತು ಹೇಳಿದ್ದಾರೆ.

Comments

Leave a Comment

Prev Post ಕಸ್ತೂರಿ ರಂಗನ್‌ ವರದಿ ನ್ಯೂನ್ಯತೆ ಮಾರ್ಪಾಡು ಸೂಚಿಸಲು ಸಮಿತಿ ರಚನೆಗೆ ವಿಧಾನ ಮಂಡಲದ ಒಮ್ಮತದ ನಿರ್ಣಯ
Next Post ಆರ್ಥಿಕ ಪರಿಸ್ಥಿತಿ ಶ್ವೇತಪತ್ರಕ್ಕೆ ವಿಜಯೇಂದ್ರ ಒತ್ತಾಯ

ರೈತರ ಸಬಲೀಕರಣಕ್ಕಾಗಿ "PM ಕುಸುಮ್-2.0'ಗೆ ಕೇಂದ್ರ ಸಿದ್ಧತೆ

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಮಾಹಿತಿ * 500 GW ಪಳೆಯುಳಿಕೆ ರಹಿತ ಇಂಧನ ಗುರಿ ಸಾಧಿಸಲು ಕೃಷಿ ಭೂಮಿ, ಛಾವಣಿಗಳು ಮತ್ತು ಗ್ರಾಮೀಣ ಉದ್ಯಮಗಳಲ್ಲಿ ವಿಕೇಂದ್ರೀಕೃತ ನವೀಕರಿಸಿದ ಇಂಧನ ಸಂಪನ್ಮೂಲಗಳು ಅಗತ್ಯ. * PM-KUSUM ಅಡಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಸ್ವತಂತ್ರ ಸೌರ ಪಂಪ್ ಸ್ಥಾಪನೆ * 13 ಲಕ್ಷ ಗ್ರಿಡ್-ಸಂಪರ್ಕಿತ ಪಂಪ್‌ಗಳ ಸೌರೀಕರಣ

ಸೋಮವಾರದಿಂದಲೇ ತಂಬಾಕು ಖರೀದಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಭರವಸೆ ಕೊಟ್ಟ ಕೇಂದ್ರ ಸಚಿವ ಪಿಯೂಷ್ ಗೋಯಲ್

ವಿದೇಶ ಮಾರುಕಟ್ಟೆಗಳಿಗೆ ರಫ್ತು, ಹೊಸ ವಿದೇಶಿ ಮಾರುಕಟ್ಟೆಗಳ ಅನ್ವೇಷಣೆಗೆ ವಾಣಿಜ್ಯ ಸಚಿವರ ಸೂಚನೆ ಸಭೆಯಲ್ಲಿ ಮೈಸೂರು, ಚಾಮರಾಜನಗರ ಹಾಸನ ಜಿಲ್ಲೆಗಳ ಜನಪ್ರತಿನಿಧಿಗಳು, ನಾಯಕರು ಭಾಗಿ ಸಚಿವ ಹೆಚ್ಡಿಕೆ ಅವರ ಪಾರ್ಲಿಮೆಂಟ್ ಭವನದ ಕಚೇರಿಯಲ್ಲಿ ನಡೆದ ಸಭೆ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕಳಕಳಿಗೆ ಕೇಂದ್ರ ಸ್ಪಂದನೆ ಎತ್ತಿನಹೊಳೆ ಯೋಜನೆಗೆ ಅರಣ್ಯ ಪ್ರದೇಶ ಬಳಕೆಗೆ ಷರತ್ತಿನ ಒಪ್ಪಿಗೆ ಕೊಟ್ಟ ಕೇಂದ್ರ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕಳಕಳಿಗೆ ಕೇಂದ್ರ ಸ್ಪಂದನೆ ಎತ್ತಿನಹೊಳೆ ಯೋಜನೆಗೆ ಅರಣ್ಯ ಪ್ರದೇಶ ಬಳಕೆಗೆ ಷರತ್ತಿನ ಒಪ್ಪಿಗೆ ಕೊಟ್ಟ ಕೇಂದ್ರ

ನಾಡು, ನುಡಿ, ಜಲ ವಿಚಾರದಲ್ಲಿ ಪಕ್ಷ ಭೇದ ಮರೆತು ಒಂದಾಗಿರುತ್ತೇವೆ:ಬಸವರಾಜ ಬೊಮ್ಮಾಯಿ

ನಾಡು, ನುಡಿ, ಜಲ ವಿಚಾರದಲ್ಲಿ ಪಕ್ಷ ಭೇದ ಮರೆತು ಒಂದಾಗಿರುತ್ತೇವೆ:ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ಪ್ರೀತಿ, ಮೋದಿ ಜತೆ ಮದುವೆ ಎಂದು ಟೀಕಿಸಿದ್ದ ಖರ್ಗೆಗೆ ಹೆಚ್.ಡಿ. ದೇವೇಗೌಡರ ತಿರುಗೇಟು ರಾಜ್ಯಸಭೆಯಲ್ಲಿಯೇ ಖರ್ಗೆಗೆ ಖಡಕ್ ಉತ್ತರ ಕೊಟ್ಟ ಮಾಜಿ ಪ್ರಧಾನಿಗಳು

ಕಾಂಗ್ರೆಸ್ ಎಸಗಿದ ದ್ರೋಹದ ವಿವರ ಕೊಟ್ಟ ಗೌಡರು ನನ್ನ ಮತ್ತು ಮೋದಿ ನಡುವಿನ ಮೈತ್ರಿ 2014ರಲ್ಲಿಯೇ ಆರಂಭವಾಯಿತು

ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಆತ್ಮೀಯ ಬೀಳ್ಕೊಡುಗೆ

ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಆತ್ಮೀಯ ಬೀಳ್ಕೊಡುಗೆ

Read all News