PRABHAVAA.COM

ಸೆ.28 ರಿಂದ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ 'ರೈತ ಸ್ವಾಭಿಮಾನ ಯಾತ್ರೆ' - ಪ್ರತಿ ಜಿಲ್ಲೆಗೂ ಪ್ರವಾಸ

Bengaluru Urban:

Font size:

ರಾಜ್ಯ ಸಚಿವರಲ್ಲಿ ರೀಲ್ಸ್ ಕಾಂಪಿಟೇಷನ್, ರೈತ ಬೀದಿಯಲ್ಲಿದ್ದಾರೆ: ನಿಖಿಲ್ ಆಕ್ರೋಶ

ಬಂಡೆಗೆ ಎಂದಾದರೂ ಭಾವನೆ ಬರುತ್ತಾ? ಸಿಎಂಗೆ ನಿಖಿಲ್ ಕುಮಾರಸ್ವಾಮಿ ಟಾಂಗ್

ಬೆಂಗಳೂರು:

ರಾಜ್ಯದಲ್ಲಿ ರೈತರು ಭೀಕರ ಬರಗಾಲದಿಂದ ಕಣ್ಣೀರು ಹಾಕುತ್ತಿದ್ದರೆ, ರಾಜ್ಯ ಸರ್ಕಾರದ ಸಚಿವರು ಜನಸೇವೆ ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ಯಾರಿಗೆ ಹೆಚ್ಚು ವ್ಯೂಸ್ ಬರುತ್ತೆ ಎಂದು ರೀಲ್ಸ್ ಕಾಂಪಿಟೇಷನ್ ನಲ್ಲಿ ತೊಡಗಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಜನರ ಭಾವನೆ ಮೇಲೆ ಅಲ್ಲ, ಬದುಕಿನ ಮೇಲೆ ರಾಜಕಾರಣ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಬಂಡೆಗೆ ಎಂದಾದರೂ ಭಾವನೆ ಬರುತ್ತಾ? ರೈತರ ಬದುಕು ಉಳಿಸಬೇಕಾದರೆ ತಕ್ಷಣ ಎಕರೆಗೆ 25 ಸಾವಿರ ಪರಿಹಾರ ಕೊಡಿ" ಎಂದು ಆಗ್ರಹಿಸಿದರು.

ರೈತರು ಮಳೆ-ಬೆಳೆ ಇಲ್ಲದೆ, ವಿದ್ಯುತ್ ಅಭಾವದಿಂದ ಮತ್ತು ಸಾಲದ ಸುಳಿಯಲ್ಲಿ ಸಿಲುಕಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರೂ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದು ವೈಯಕ್ತಿಕವಾಗಿ ಹೆಚ್ಚು ನೋವು ತಂದಿದೆ. ಈ ಹಿನ್ನೆಲೆಯಲ್ಲಿ ಸೆ.28 ರಿಂದ ರಾಜ್ಯದ ಬರಪೀಡಿತ ತಾಲ್ಲೂಕುಗಳ ರೈತರನ್ನು ಭೇಟಿ ಮಾಡಿ, ಅವರ ನೋವನ್ನು ಆಲಿಸಿ, ನಿಷ್ಕ್ರಿಯ ಸರ್ಕಾರವನ್ನು ಎಚ್ಚರಿಸಲು ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.

ಕಳೆದ ಮೂರೂವರೆ ವರ್ಷದಲ್ಲಿ 3500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಶೇ.85 ಅಂದರೆ 3,014 ರೈತರು ಸಾಲಬಾಧೆ ಮತ್ತು ಬೆಳೆ ನಷ್ಟದಿಂದಲೇ ಸಾವನ್ನಪ್ಪಿದ್ದಾರೆ. ಈ ವರ್ಷ ರೈತರು ಹಾಕಿದ ಬೆಳೆ ಸಂಪೂರ್ಣ ಹಾಳಾಗಿದೆ. ಮಲೆನಾಡಿನಲ್ಲಿಯೂ ನಿರೀಕ್ಷೆಯಂತೆ ಮಳೆ ಆಗಿಲ್ಲ. ಮಳೆಯ ನಿರೀಕ್ಷೆಯಲ್ಲಿ ರೈತರು ಎರಡು ಬಾರಿ ಬಿತ್ತನೆ ಮಾಡಿ ತಮ್ಮ ಸಂಪೂರ್ಣ ಬಂಡವಾಳ ಕಳೆದುಕೊಂಡಿದ್ದಾರೆ ಎಂದರು.

234 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು

ಸರ್ಕಾರ ಕೇವಲ 124 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಆದರೆ ಅವರದೇ ಪಕ್ಷದ ಶಾಸಕರು ಮತ್ತು ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರೇ ತಮ್ಮ ಗದಗ ಜಿಲ್ಲೆಯನ್ನು ಘೋಷಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಎಲ್ಲಾ 234 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು. ರೈತರಿಗೆ ಪಂಪ್ ಸೆಟ್ ಓಡಿಸಲು ಕರೆಂಟ್ ಕೊಡುತ್ತಿಲ್ಲ. ಕನಿಷ್ಠ 8 ಗಂಟೆ ಕರೆಂಟ್ ಕೊಡಬೇಕು ಎಂದು ಆಗ್ರಹಿಸಿದರು.

ಸಿಎಂ ರೀಲ್ಸ್ ಪ್ರಚಾರದಲ್ಲೇ ಕಾಲ ಕಳೆಯುತ್ತಿದ್ದಾರೆ

ಮುಖ್ಯಮಂತ್ರಿಗಳ ಬರ ಅಧ್ಯಯನ ಪ್ರವಾಸ ಕೇವಲ ಫೋಟೋ-ಆಪ್ ಮತ್ತು ಪಿಆರ್ ಗೆ ಸೀಮಿತವಾಗಿದೆ. ಸಿಎಂ ಮತ್ತು ಅವರ ಆಡಳಿತ ಯಂತ್ರ ಕೇವಲ ರಿಯಲ್ ಎಸ್ಟೇಟ್ ಹಿತಾಸಕ್ತಿ ಮತ್ತು ರೀಲ್ಸ್ ಪ್ರಚಾರದಲ್ಲೇ ಕಾಲ ಕಳೆಯುತ್ತಿದೆ. ರೀಲ್ಸ್ ಮಾಡಲು ನೀಡುವ ಗಮನದಲ್ಲಿ ಶೇ.50ರಷ್ಟು ರೈತರ ಸಮಸ್ಯೆಗೆ ನೀಡಿದ್ದರೆ ರೈತ ಬೀದಿಗೆ ಬೀಳುತ್ತಿರಲಿಲ್ಲ. ಸಿಎಂ ಅವರು ಭಾವನೆ ಮೇಲೆ ರಾಜಕಾರಣ ಮಾಡಲ್ಲ, ಬದುಕಿನ ಮೇಲೆ ಮಾಡುತ್ತೇನೆ ಎನ್ನುತ್ತಾರೆ. ನೀವೇ ಎಲ್ಲರೂ ಹೆಸರು ಇಟ್ಟಿದ್ದೀರಾ ಸಿಎಂಗೆ - ಬಂಡೆಗೆ ಎಂದಾದರೂ ಭಾವನೆ ಬರುತ್ತಾ ಎಂದು ನಿಖಿಲ್ ಪ್ರಶ್ನಿಸಿದರು.

ಘೋಷಣೆಗಳಿಂದ ರೈತರ ಬದುಕು ಬದಲಾಗುವುದಿಲ್ಲ

ಘೋಷಣೆಗಳಿಂದ ರೈತರ ಬದುಕು ಬದಲಾಗುವುದಿಲ್ಲ. ರೈತರಿಗೆ ತಕ್ಷಣ ಎಕರೆಗೆ 25,000 ಪರಿಹಾರ ಕೊಡಿ. ಕಲಬುರಗಿಗೆ ಹೋಗಿ ವಿಶೇಷ ಘೋಷಣೆ ಮಾಡಿದ್ರು, ಎಲ್ಲಿ ಇದೆ ಅದು? ಮಂಗಳೂರಿಗೆ 34 ಸಾವಿರ ಕೋಟಿ, ಚನ್ನಪಟ್ಟಣಕ್ಕೆ 500 ಕೋಟಿ ಎಂದು ಕೇವಲ ಘೋಷಣೆ ಮಾಡುವುದು ಬೇಡ ಎಂದು ಟೀಕಿಸಿದರು.

ನಾವು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಜೊತೆ ಚರ್ಚೆ ಮಾಡಿದ್ದೇವೆ. ರೈತರ ಬಳಿ ಹೋಗಿ ಅವರ ಜೊತೆ ಸಂವಾದ ಮಾಡಲು ಮತ್ತು ಸರ್ಕಾರವನ್ನು ಎಚ್ಚರಿಸಲು ಇದೇ ತಿಂಗಳ 28ರಿಂದ ರೈತ ಸ್ವಾಭಿಮಾನ ಯಾತ್ರೆಯನ್ನು ಆರಂಭ ಮಾಡುತ್ತೇವೆ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಈ ಯಾತ್ರೆ ನಡೆಯಲಿದ್ದು, ಪ್ರತಿ ಜಿಲ್ಲೆಗೂ ಹೋಗಿ ರೈತರನ್ನು ಒಗ್ಗೂಡಿಸುತ್ತೇವೆ. ಪ್ರತಿ ಜಿಲ್ಲೆಯಲ್ಲೂ ರೈತ ಸಂವಾದ, ಪಾದಯಾತ್ರೆ ಮತ್ತು ಬೃಹತ್ ಸಮಾವೇಶ ಮಾಡುತ್ತೇವೆ ಎಂದು ಘೋಷಿಸಿದರು.

ಎಲ್ಲದಕ್ಕೂ ಕೇಂದ್ರದ ಕಡೆ ಬೊಟ್ಟು ಮಾಡುತ್ತಾರೆ. ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದಾಗ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರ ಇದ್ದಾಗಲೂ ಕೇಂದ್ರದ ಬಳಿ ಹೋಗಿ ಅಂಗಲಾಚಿದ್ರಾ? ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ ಅಂದರೆ, ದಿವಾಳಿಯಾಗಿದೆ ಎಂದು ಬಹಿರಂಗವಾಗಿ ಜನರ ಮುಂದೆ ಒಪ್ಪಿಕೊಳ್ಳಿ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಕೋರ್ ಕಮಿಟಿ ಅಧ್ಯಕ್ಷರಾದ ಜೆ.ಕೆ. ಕೃಷ್ಣಾರೆಡ್ಡಿ, ಶಾಸಕರಾದ ಎ. ಮಂಜು, ಜಿ.ಕೆ. ವೆಂಕಟಶಿವಾರೆಡ್ಡಿ, ರಾಜುಗೌಡ ಪಾಟೀಲ್, ಕರೆಮ್ಮ ನಾಯಕ್, ಶಾರದಾ ಪೂರ್ಯಾನಾಯಕ್, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಶರವಣ್, ಟಿ.ಎನ್. ಜವರಾಯಿಗೌಡ ಅವರು ಉಪಸ್ಥಿತರಿದ್ದರು.

Comments

Leave a Comment

Prev Post ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆ; ಪರಿಸ್ಥಿತಿಗೆ ಅನುಗುಣವಾಗಿ ಮತ್ತಷ್ಟು ತಾಲೂಕುಗಳ ಸೇರ್ಪಡೆ: ಡಾ. ಜಿ. ಪರಮೇಶ್ವರ
Next Post "ಬರ ತೀವ್ರಗೊಳ್ಳುತ್ತಿರುವ ಕರ್ನಾಟಕ — ‘ಕ್ರಾಪ್ ಲಾಸ್ ಜಿಟಿ’ ಆಪ್ ಮೂಲಕ 7 ಜಿಲ್ಲೆಗಳ 11 ತಾಲ್ಲೂಕುಗಳಲ್ಲಿ ನೆಲದ ಪರಿಶೀಲನೆ"

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News