ಮಂಗಳೂರಿನಲ್ಲಿ ಇನ್ಫ್ಲೂಯೆನ್ಸರ್‌ಗಳೊಂದಿಗೆ ಉಪಾಹಾರ ಕೂಟದಲ್ಲಿ ಭಾಗಿಯಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ – ಡಿಜಿಟಲ್ ಯುಗಕ್ಕೆ ಸ್ಪಷ್ಟ ಸಂದೇಶ"
From Jayaram Udupi
ಮಂಗಳೂರು:
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಕ್ರವಾರ ಬೆಳಿಗ್ಗೆ ಸಾಮಾಜಿಕ ಮಾಧ್ಯಮಗಳ ಇನ್ಫ್ಲೂಯೆನ್ಸರ್ ಗಳ ಜೊತೆ ಬೆಳಗ್ಗಿನ ಉಪಾಹಾರ ಕೂಟದಲ್ಲಿ ಭಾಗಿಯಾದರು.
ಮೇಲ್ನೋಟಕ್ಕೆ ಇದು ಸಣ್ಣ ಅಂಚಿನ ಸುದ್ದಿ ಎನಿಸಬಹುದು.ಆದರೆ ಭವಿಷ್ಯದ ಪ್ರಭಾವಿ ಮಾಧ್ಯಮಗಳ ಜತೆ ಡಿ.ಕೆ. ಅವರು ಹತ್ತಿರದ ನಂಟು ಬೆಸೆಯುವ ಯತ್ನ ಮಾಡುತ್ತಿರುವುದಕ್ಕೆ ಇದೊಂದು ನಿದರ್ಶನ.
ಇದುವರೆಗೆ ಸಾಂಪ್ರದಾಯಿಕ ಮಾಧ್ಯಮಗಳ ಸಂಪಾದಕರಿಗೆ, ಹಿರಿಯ ವರದಿಗಾರರಿಗೆ, ಹಿಂಬಾಲಕರಿಗೆ ಮುಖ್ಯಮಂತ್ರಿ ಭೋಜನ ಕೂಟ , ಉಪಾಹಾರ ಕೂಟ ಪ್ರತಿಷ್ಠೆಯ ವಿಷಯವಾಗಿತ್ತು.
ಮುಖ್ಯಮಂತ್ರಿ ಅವರ ಈ ನಡೆ ಸಾಂಪ್ರದಾಯಕ ಮಾಧ್ಯಮಗಳ ಘರ್ಜನೆ ಮುಗಿಯಿತು, ಇನ್ನೇನಿದ್ದರೂ ಡಿಜಿಟಲ್ ಯುಗ ಎಂಬ ಸಂದೇಶವನ್ನು ಬಹಿರಂಗವಾಗಿ ಸಾರಿದಂತಿದೆ.ಜೊತೆಗೆ ಈ ನಡೆ ಯುವ ಪ್ರತಿಭಾವಂತ ಕಂಟೆಂಟ್ ಕ್ರಿಯೇಟರ್ ಗಳಿಗೆ ಆದ್ಯತೆ ನೀಡಿ ಶ್ರೇಣೀಕೃತ ಮಾಧ್ಯಮ ವರ್ಗ ವಲಯದಲ್ಲಿ ಪ್ರಜಾಪ್ರಭುತ್ವೀಕರಣದ ಹಾದಿಗೆ ಮುನ್ನುಡಿ ಬರೆದಂತಿದೆ.







Comments
Leave a Comment