PRABHAVAA.COM

ಇ-ಸ್ವತ್ತು 2.0 ಅಭಿಯಾನ: ಗ್ರಾಮೀಣ ಆಸ್ತಿ ದಾಖಲೆಗಳ ಡಿಜಿಟಲ್ ವಿತರಣೆ ಆರಂಭ.

Bengaluru Urban:

Font size:

ಇ-ಸ್ವತ್ತು 2.0 ಅಭಿಯಾನ: ಗ್ರಾಮೀಣ ಆಸ್ತಿ ದಾಖಲೆಗಳ ಡಿಜಿಟಲ್ ವಿತರಣೆ ಆರಂಭ.

ಇ-ಸ್ವತ್ತು 2.0 ಅಭಿಯಾನ: ಗ್ರಾಮೀಣ ಆಸ್ತಿ ದಾಖಲೆಗಳ ಡಿಜಿಟಲ್ ವಿತರಣೆ ಆರಂಭ.

#eSwathu2_0 #DigitalPropertyRecords #BhugaaranteeYojane #SmartVillageKarnataka #TransparentGovernance #CitizenEmpowerment #SecureLandRecords #DigitalRuralDevelopment #PropertyTaxReforms #KarnatakaInnovation #VillageDigitalDrive #RuralTransparency #eGovernanceKarnataka #LandAndPropertySecurity #GramPanchayatDigital

ಇ-ಸ್ವತ್ತು 2.0 ಅಭಿಯಾನ: ಗ್ರಾಮೀಣ ಆಸ್ತಿ ದಾಖಲೆಗಳ ಡಿಜಿಟಲ್ ವಿತರಣೆ ಆರಂಭ.

ಬೆಂಗಳೂರು, ಸೆ. 15, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಗಳಿಗೆ ಸಂಬಂಧಿಸಿದ ತೆರಿಗೆ ನಿರ್ಧರಣೆ ಪಟ್ಟಿ ಹಾಗೂ ದಾಖಲೆಗಳನ್ನು ‘ಇ-ಸ್ವತ್ತು 2.0’ ತಂತ್ರಾಂಶದ ಮೂಲಕ ವಿತರಿಸಲು ಮಹತ್ವದ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನವನ್ನು ಭೂ-ಗ್ಯಾರಂಟಿ ಯೋಜನೆಯಡಿ ಸಚಿವ ಸಂಪುಟದ ಅನುಮೋದನೆಯೊಂದಿಗೆ ಕೈಗೊಳ್ಳಲಾಗಿದ್ದು, ಪ್ರತಿಯೊಬ್ಬ ನಾಗರೀಕರಿಗೂ ಸುರಕ್ಷಿತ, ನಿಖರ, ಡಿಜಿಟಲೀಕರಿಸಿದ ಮತ್ತು ಭೌಗೋಳಿಕವಾಗಿ ಉಲ್ಲೇಖಿಸಲಾದ ಭೂಮಿ ಹಾಗೂ ಆಸ್ತಿ ದಾಖಲೆಗಳನ್ನು ನೀಡುವ ಉದ್ದೇಶ ಹೊಂದಿದೆ.

ಸರ್ಕಾರದ ಅಧಿಸೂಚನೆ ಸಂಖ್ಯೆ ಸಂವ್ಯಶಾಇ 23 ಶಾಸನ 2025 ದಿನಾಂಕ 07.04.2025 ರಲ್ಲಿ ಪ್ರಕರಣ 199 ಕ್ಕೆ ಹೊಸದಾಗಿ ಪ್ರಕರಣ 199(ಬಿ) ಹಾಗೂ 199(ಸಿ) ಸೇರಿಸಲಾಗಿದೆ. 2025-26 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 272(i) ಪ್ರಕಾರ ಕ್ರಮಬದ್ಧ ಆಸ್ತಿಗಳಿಗೆ ನಮೂನೆ 9 ಮತ್ತು 11ಎ ಹಾಗೂ ಕ್ರಮಬದ್ಧವಲ್ಲದ ಆಸ್ತಿಗಳಿಗೆ ನಮೂನೆ 11ಬಿ ಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ವಿತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 2025ರ ಅಕ್ಟೋಬರ್ 17ರಂದು ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳ ನಿಯಮಗಳನ್ನು ಅಧಿಸೂಚಿಸಲಾಗಿದ್ದು, 2025ರ ನವೆಂಬರ್ 13ರಂದು ಆಯವ್ಯಯ ಮತ್ತು ಲೆಕ್ಕಪತ್ರಗಳ ತಿದ್ದುಪಡಿ ನಿಯಮಗಳಲ್ಲಿ ನಮೂನೆ 11ಎ ಮತ್ತು 11ಬಿ ಗಳನ್ನು ಅಧಿಸೂಚಿಸಲಾಗಿದೆ.

ಅಭಿಯಾನದಲ್ಲಿ ಸ್ವೀಕರಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ಅಧಿಕಾರಿಗಳಿಂದಲೇ ನಡೆಯಲಿದ್ದು, ಅರ್ಜಿ ಸ್ವೀಕರಿಸಿದ 7 ದಿನಗಳೊಳಗೆ ತಂತ್ರಾಂಶದ ಮೂಲಕ ನೋಟಿಸ್ ಸೃಜಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ಆಕ್ಷೇಪಣೆಗಳ ಪರಿಶೀಲನೆಯ ನಂತರ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ಸ್ಥಳ ಪರಿಶೀಲನೆ ನಡೆಸಿ ದಿಶಾಂಕ್ ಆಪ್ ಮೂಲಕ ಆಸ್ತಿಯ ಛಾಯಾಚಿತ್ರ, GPS, ಅಳತೆ ಹಾಗೂ ಇತರೆ ವಿವರಗಳನ್ನು ದಾಖಲಿಸುತ್ತಾರೆ. ಪರಿಶೀಲನೆಯ ನಂತರ ದಾಖಲೆಗಳನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಕಳುಹಿಸಲಾಗುತ್ತದೆ.

ಗ್ರಾಮ ಠಾಣಾ ಆಸ್ತಿಗಳಿಗೆ ಸಂಬಂಧಿಸಿದಂತೆ ದಿಶಾಂಕ್ ಆಪ್ ಮೂಲಕ ಖಾತರಿಪಡಿಸಿಕೊಂಡು ಸಂಬಂಧಿಸಿದ ಶುಲ್ಕವನ್ನು ತೆರಿಗೆ ಲೆಕ್ಕಾಚಾರದ ಸಮಯದಲ್ಲಿ ಅಧಿಭೋಗದಾರರಿಂದ ಸಂಗ್ರಹಿಸಲಾಗುತ್ತದೆ. ಬಫರ್ ಪ್ರದೇಶದ ವ್ಯಾಪ್ತಿಯಲ್ಲಿರುವ ಆಸ್ತಿಗಳಿಗೆ ನಿಯಮಾನುಸಾರ ಮೋಜಿಣಿ ಶುಲ್ಕವನ್ನು ಸಂಗ್ರಹಿಸಿ ಮೋಜಿಣಿಗೆ ವರ್ಗಾಯಿಸಲಾಗುತ್ತದೆ. ಸಕ್ಷಮ ಪ್ರಾಧಿಕಾರಗಳಿಂದ ವಿತರಿಸಲಾದ ಹಕ್ಕುಪತ್ರಗಳ ಆಧಾರದ ಮೇಲೆ ತಂತ್ರಾಂಶದ ಮೂಲಕ ನಮೂನೆ ವಿತರಿಸಲಾಗುತ್ತದೆ. ಇತರೆ ವರ್ಗೀಕರಣದ ಆಸ್ತಿಗಳಿಗೆ ಕೂಡ ತಂತ್ರಾಂಶದ ಮೂಲಕ ನಮೂನೆ ವಿತರಿಸಲಾಗುತ್ತದೆ.

ಬಡಾವಣೆ ಮತ್ತು ಅಪಾರ್ಟಮೆಂಟ್ ಆಸ್ತಿಗಳಿಗೆ Bulk Uploading ವ್ಯವಸ್ಥೆ ಕಲ್ಪಿಸಲಾಗಿದ್ದು, ನಿಯಮಾನುಸಾರ ನಮೂನೆ-11ಎ ವಿತರಿಸಲಾಗುತ್ತದೆ. 2025ರ ಏಪ್ರಿಲ್ 7ರ ಪೂರ್ವದಲ್ಲಿ ವಿನ್ಯಾಸ ಅನುಮೋದಿತ ಬಡಾವಣೆಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಲಾದ ಬಹುಮಾಲೀಕತ್ವದ ಕಟ್ಟಡಗಳು ಹಾಗೂ ಫ್ಲಾಟ್‌ಗಳಿಗೆ ನಮೂನೆ-11ಬಿ ವಿತರಿಸಲಾಗುತ್ತದೆ. ಸಾರ್ವಜನಿಕರಿಗೆ ಅರಿವು ಮೂಡಿಸಿ Citizen Interface ಮೂಲಕ ತಂತ್ರಾಂಶದಲ್ಲಿ ಮಾಹಿತಿ ಹಾಗೂ ದಾಖಲೆಗಳನ್ನು ಇಂಧೀಕರಿಸಿ ತೆರಿಗೆ ಪಾವತಿಸಿದ ನಂತರ ನಮೂನೆಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಗ್ರಾಮ ಪಂಚಾಯತಿಗಳು 2026ರ ಸೆಪ್ಟೆಂಬರ್ 21ರಿಂದ ಅಭಿಯಾನ ಆರಂಭಿಸಬೇಕಾಗಿದ್ದು, ಗ್ರಾಮವಾರು ಹಾಗೂ ವಾರ್ಡ್‌ವಾರು ಅರ್ಹ ಆಸ್ತಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಅಭಿಯಾನ ನಡೆಸಲು ಆಸ್ತಿಗಳ ಸಂಖ್ಯೆ ಹಾಗೂ ಸಿಬ್ಬಂದಿಗಳ ಲಭ್ಯತೆ ಆಧಾರದ ಮೇಲೆ ಸ್ಥಳ, ಸಮಯ ಹಾಗೂ ದಿನಾಂಕದೊಂದಿಗೆ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಕರಪತ್ರದಲ್ಲಿ ಅಭಿಯಾನದ ವೇಳಾಪಟ್ಟಿ ಹಾಗೂ ಸಲ್ಲಿಸಬೇಕಾದ ದಾಖಲೆಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ನಿಗದಿತ ದಿನಾಂಕದಲ್ಲಿ ಸ್ಥಳದಲ್ಲಿಯೇ ನಮೂನೆಗಳನ್ನು ಪಡೆಯಲು ಸಾಧ್ಯವಾಗದ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳ ಸಹಕಾರದಿಂದ ಮುಂದಿನ ದಿನಗಳಲ್ಲಿ ವಿತರಣೆ ಮಾಡಲಾಗುತ್ತದೆ. ಅಭಿಯಾನದ ಪ್ರಗತಿ ಮೇಲ್ವಿಚಾರಣೆಗೆ ತಾಲ್ಲೂಕು ಮಟ್ಟದಲ್ಲಿ ಒಬ್ಬ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ಹಾಗೂ ಜಿಲ್ಲಾ ಮಟ್ಟದಲ್ಲಿ ಮತ್ತೊಬ್ಬರನ್ನು ನೇಮಿಸಲಾಗುತ್ತದೆ. ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಪೂರ್ಣ ಮೇಲ್ವಿಚಾರಣೆ ನಡೆಸಲಿದ್ದಾರೆ.

ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿರುವ ಈ ಅಭಿಯಾನದ ಮೂಲಕ ಗ್ರಾಮೀಣ ಭಾಗದಲ್ಲಿ ಆಸ್ತಿ ದಾಖಲೆಗಳ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ಡಿಜಿಟಲೀಕರಣವನ್ನು ಬಲಪಡಿಸುವುದು ಉದ್ದೇಶವಾಗಿದೆ. ಸಾರ್ವಜನಿಕರಿಗೆ ತಮ್ಮ ಆಸ್ತಿಗಳ ತೆರಿಗೆ ಪಾವತಿ, ದಾಖಲೆಗಳ ಪರಿಶೀಲನೆ ಹಾಗೂ ನಮೂನೆಗಳ ವಿತರಣೆಯ ಪ್ರಕ್ರಿಯೆ ಸುಗಮವಾಗಲಿದ್ದು, ಗ್ರಾಮೀಣ ಆಡಳಿತದಲ್ಲಿ ಪಾರದರ್ಶಕತೆ ಮತ್ತು ನೈತಿಕತೆ ಹೆಚ್ಚುವ ನಿರೀಕ್ಷೆಯಿದೆ.

Comments

Leave a Comment

Prev Post ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ
Next Post ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News