ಬೆಂಗಳೂರು ಜಕ್ಕೂರು ರಾಜಯೋಗ ಭವನದಲ್ಲಿ ಆಗಸ್ಟ್ 2ರಂದು ‘10 ಕೋಟಿ ವ್ಯಸನಮುಕ್ತ ಪ್ರತಿಜ್ಞಾ ಮಹಾ ಅಭಿಯಾನ’ಕ್ಕೆ ಭವ್ಯ ಚಾಲನೆ"
ಬೆಂಗಳೂರು ಜಕ್ಕೂರು ರಾಜಯೋಗ ಭವನದಲ್ಲಿ ಆಗಸ್ಟ್ 2ರಂದು ‘10 ಕೋಟಿ ವ್ಯಸನಮುಕ್ತ ಪ್ರತಿಜ್ಞಾ ಮಹಾ ಅಭಿಯಾನ’ಕ್ಕೆ ಭವ್ಯ ಚಾಲನೆ"
"ಬೆಂಗಳೂರು ಜು.31-ನಗರದಲ್ಲಿ ಬ್ರಹ್ಮಾಕುಮಾರೀಸ್ ಸಂಸ್ಥೆಯ ಮಹತ್ವಾಕಾಂಕ್ಷಿ ‘10 ಕೋಟಿ ವ್ಯಸನಮುಕ್ತ ಪ್ರತಿಜ್ಞಾ ಮಹಾ ಅಭಿಯಾನ’ಕ್ಕೆ ಆಗಸ್ಟ್ 2, 2026 ರಂದು ಭವ್ಯ ಚಾಲನೆ ದೊರೆಯಲಿದೆ. ಜಕ್ಕೂರು ರಾಜಯೋಗ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಬೆಂಗಳೂರು ಸಿಟಿ ಉಪವಲಯ ನಿರ್ದೇಶಕಿ ಆದರಣೀಯ ರಾಜಯೋಗಿನಿ ಬಿ.ಕೆ. ಲೀಲಾ ಅಕ್ಕ ಅವರು ಅಧ್ಯಕ್ಷತೆ ವಹಿಸಲಿದ್ದು, ರಾಜಯೋಗಿನಿ ಬಿ.ಕೆ. ಪವಿತ್ರ ಅಕ್ಕ ಅವರ ಗೌರವಾನ್ವಿತ ಉಪಸ್ಥಿತಿ ಇರಲಿದೆ.
ಈ ಮಹಾಭಿಯಾನವು ದೇಶವ್ಯಾಪಿ ಜನಚಳವಳಿಯಾಗಿ ರೂಪುಗೊಳ್ಳುವ ಗುರಿ ಹೊಂದಿದ್ದು, ವಿದ್ಯಾರ್ಥಿಗಳು, ಯುವಜನರು, ಸಮಾಜದ ವಿವಿಧ ವಲಯಗಳು ಹಾಗೂ ಮಾಧ್ಯಮಗಳ ಸಹಕಾರದೊಂದಿಗೆ ವ್ಯಸನಮುಕ್ತ ಜೀವನಶೈಲಿಯನ್ನು ಉತ್ತೇಜಿಸುವುದಾಗಿ ಆಯೋಜಕರು ಘೋಷಿಸಿದ್ದಾರೆ.
ರಾಷ್ಟ್ರೀಯ ಉದ್ಘಾಟನಾ ಸಮಾರಂಭವು ಇದೇ ದಿನ, ಆಗಸ್ಟ್ 2 ರಂದು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿಯವರಿಂದ ನಡೆಯಲಿದ್ದು, ಸರ್ಕಾರ, ಶಿಕ್ಷಣ, ಆರೋಗ್ಯ, ಸಾಮಾಜಿಕ ಸಂಸ್ಥೆಗಳು ಹಾಗೂ ಬ್ರಹ್ಮಾಕುಮಾರೀಸ್ ಸಂಸ್ಥೆಯ ಹಿರಿಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಆಗಸ್ಟ್ 6 ರಿಂದ 20ರವರೆಗೆ ದೇಶದಾದ್ಯಂತ ಸಾರ್ವಜನಿಕ ಜಾಗೃತಿ ಅಭಿಯಾನಗಳು ನಡೆಯಲಿದ್ದು, ಶಾಲೆ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಯುವಜನರಿಗಾಗಿ ಪ್ರೇರಣಾದಾಯಿ ಗೋಷ್ಠಿಗಳು, ಸಮುದಾಯ ಸಂಪರ್ಕ ಕಾರ್ಯಕ್ರಮಗಳು ಹಾಗೂ ಡಿಜಿಟಲ್ ಮಾಧ್ಯಮ ಅಭಿಯಾನಗಳು ನಡೆಯಲಿವೆ.
ಈ ಸಂದರ್ಭದಲ್ಲಿ ಗಣ್ಯ ಅತಿಥಿಗಳ ಸೇವೆಯನ್ನು ಗೌರವಿಸುವ ಸಲುವಾಗಿ ‘ಈಶ್ವರೀಯ ಸೇವಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ.
ಗಣ್ಯ ಅತಿಥಿಗಳಲ್ಲಿ ನಟ ಹಾಗೂ ಮಾಜಿ ಸಚಿವ ಶ್ರೀ ಕುಮಾರ್ ಬಂಗಾರಪ್ಪ, ಮಾಜಿ ಶಾಸಕರಾದ ಶ್ರೀ ಮಹಿಮಾ ಜೆ. ಪಟೇಲ್, ಸಮಾಜ ಸೇವಕಿ ಶ್ರೀಮತಿ ಮೀನಾಕ್ಷಿ, ವೈದ್ಯರು ಹಾಗೂ ಸಮಾಜ ಸೇವಕರಾದ ಡಾ. ರಮೇಶ್ ರಾಥೋಡ್, ಕೆಪಿಸಿಸಿ ಸದಸ್ಯೆ ಶ್ರೀಮತಿ ರಕ್ಷಿತಾ, ಹಾಗೂ ಪೊಲೀಸ್ ಉಪ ಆಯುಕ್ತರಾದ ಶ್ರೀ ಜಿ.ಕೆ. ಮಿಥುನ್ ಕುಮಾರ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.
ಸುಮಾರು 90 ವರ್ಷಗಳಿಂದ, ಬ್ರಹ್ಮಾಕುಮಾರೀಸ್ ಸಂಸ್ಥೆಯು 110 ಕ್ಕೂ ಹೆಚ್ಚು ದೇಶಗಳಲ್ಲಿ ರಾಜಯೋಗ ಧ್ಯಾನ, ಮೌಲ್ಯಾಧಾರಿತ ಶಿಕ್ಷಣ, ಸಕಾರಾತ್ಮಕ ಚಿಂತನೆ, ಮಾನಸಿಕ ಆರೋಗ್ಯ ಮತ್ತು ಆಧ್ಯಾತ್ಮಿಕ ಸಬಲೀಕರಣದ ಮೂಲಕ ಸಮಾಜದ ಸೇವೆ ಮಾಡುತ್ತಿದೆ. ವ್ಯಸನದಿಂದ ಶಾಶ್ವತ ಮುಕ್ತಿಯು ಕೇವಲ ಜಾಗೃತಿಯಿಂದ ಮಾತ್ರವಲ್ಲದೆ, ಆಂತರಿಕ ಶಕ್ತಿ, ಸ್ವ-ಪರಿವರ್ತನೆ ಮತ್ತು ಸಕಾರಾತ್ಮಕ ಜೀವನಶೈಲಿಯ ಮೂಲಕವೂ ಸಾಧ್ಯವಾಗುತ್ತದೆ ಎಂದು ಸಂಸ್ಥೆ ನಂಬುತ್ತದೆ. ಆದ್ದರಿಂದ, ಈ ಅಭಿಯಾನವು ರಾಜಯೋಗದ ಮೂಲಕ ವ್ಯಕ್ತಿಗಳಲ್ಲಿ ಆತ್ಮವಿಶ್ವಾಸ, ಸ್ವಯಂ ನಿಯಂತ್ರಣ ಮತ್ತು ಉತ್ತಮ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸುತ್ತದೆ.



Comments
Leave a Comment