ಕರ್ನಾಟಕದಲ್ಲಿ 253 ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭ
ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಮಹತ್ವದ ಆದೇಶ ಹೊರಬಿದ್ದಿದೆ. ಸರ್ಕಾರವು ಒಟ್ಟು 600 ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದ್ದು, ಅದರಲ್ಲಿ 253 ಹುದ್ದೆಗಳು ಈಗ ಖಾಲಿ ಇದ್ದು, ಅವುಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಕಚೇರಿಯಿಂದ ಹೊರಬಂದ ಪತ್ರದಲ್ಲಿ, ಕೆ.ಸಿ.ಎಸ್ ನಿಯಮ-32ರ ಅಡಿಯಲ್ಲಿ ಸ್ವತಂತ್ರ ಪ್ರಭಾರದಲ್ಲಿರುವ ಹುದ್ದೆಗಳನ್ನು ಪರಿಗಣಿಸಿ, ಮುಂದಿನ ವರ್ಷದಲ್ಲಿ ನೇರ ನೇಮಕಾತಿ ಅಡಿಯಲ್ಲಿ ಖಾಲಿಯಾಗುವ ಹುದ್ದೆಗಳನ್ನೂ ಸೇರಿಸಿ PSI (ಸಿವಿಲ್) ಹುದ್ದೆಗಳನ್ನು ಭರ್ತಿ ಮಾಡಲು ಸೂಚಿಸಲಾಗಿದೆ.
📊 ಹುದ್ದೆಗಳ ಹಂಚಿಕೆ (ಅನುಬಂಧ-1 ಪ್ರಕಾರ):
ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಚೇರಿ: 108
ಮೈಸೂರು ನಗರ: 22
ಮಂಗಳೂರು ನಗರ: 6
ಕಲಬುರಗಿ ನಗರ: 3
ಕೇಂದ್ರ ವಲಯ, ಬೆಂಗಳೂರು: 17
ದಕ್ಷಿಣ ವಲಯ, ಮೈಸೂರು: 10
ಪೂರ್ವ ವಲಯ, ದಾವಣಗೆರೆ: 44
ಪಶ್ಚಿಮ ವಲಯ, ಮಂಗಳೂರು: 8
ಈಶಾನ್ಯ ವಲಯ, ಗುಲ್ಬರ್ಗಾ: 8
ಬಳ್ಳಾರಿ ವಲಯ: 13
ರೈಲ್ವೇಸ್: 29
ಇತರ ವಲಯಗಳನ್ನು ಸೇರಿಸಿ ಒಟ್ಟು: 253 ಹುದ್ದೆಗಳು.
ಈ ಕುರಿತು ಎಲ್ಲಾ ನಗರ ಪೊಲೀಸ್ ಆಯುಕ್ತರು ಹಾಗೂ ವಲಯಾಧಿಕಾರಿಗಳಿಗೆ ಪತ್ರ ಕಳುಹಿಸಲಾಗಿದ್ದು, ತಮ್ಮ ಘಟಕಗಳಿಗೆ ಹಂಚಿಕೆ ಮಾಡಿರುವ ಹುದ್ದೆಗಳ ವರ್ಗೀಕರಣವನ್ನು ನೇಮಕಾತಿ ವಿಭಾಗಕ್ಕೆ ಒದಗಿಸಲು ಸೂಚಿಸಲಾಗಿದೆ.





Comments
Leave a Comment