ಬುದ್ದ ಮತ್ತು ಅಂಬೇಡ್ಕರ್ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು: ಪ್ರೇಮಿಳಾ ನೇಸರ್ಗಿ
ಬುದ್ದ ಮತ್ತು ಅಂಬೇಡ್ಕರ್ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು: ಪ್ರೇಮಿಳಾ ನೇಸರ್ಗಿ
ಬೆಂಗಳೂರು: ಜಗತ್ತಿಗೆ ಜ್ಞಾನದ ಜ್ಯೋತಿಯನ್ನು ಬೆಳಗಿದ ಬುದ್ದ ಮತ್ತು ಭಾರತದ ಸಂವಿಧಾನ ಶಿಲ್ಪಿ B. R. Ambedkar ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ವಕೀಲರಾದ Premila Nesargi ಹೇಳಿದರು.
ನಗರದ Nayana Auditorium ನಲ್ಲಿ “ಇದು ನಿಮ್ಮ ವಾಹಿನಿ ಕಲಾ ವೇದಿಕೆ” ವತಿಯಿಂದ ಹಮ್ಮಿಕೊಂಡಿದ್ದ ಬುದ್ದ ಹಾಗೂ B. R. Ambedkar ಅವರ ಜಯಂತೋತ್ಸವ ಮತ್ತು 22ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ದನು ಶಾಂತಿಯ ಮೂಲಕವೇ ಜಗತ್ತಿನ ಮನಸ್ಸುಗಳನ್ನು ಗೆದ್ದು ಜ್ಞಾನಜ್ಯೋತಿಯಾಗಿ ಬೆಳಗಿದ ಮಹಾನ್ ವ್ಯಕ್ತಿ. ಅದೇ ರೀತಿ ಬುದ್ದನ ಮಾರ್ಗದಲ್ಲಿ ನಡೆದ B. R. Ambedkar ಅವರು ಶೋಷಿತರ ಪರವಾಗಿ ಕಾನೂನುಗಳನ್ನು ಜಾರಿಗೆ ತಂದು ಮಹಾನ್ ಚೇತನರಾಗಿದ್ದಾರೆ. ಇವರಿಬ್ಬರ ತತ್ವ ಮತ್ತು ಆದರ್ಶಗಳು ಇಂದಿನ ಪೀಳಿಗೆಗೆ ಅತ್ಯಂತ ಅವಶ್ಯಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಆಯುಕ್ತ ಡಾ. ಹೆಚ್. ಮಂಜುನಾಥ್ ಬಾಬು ಮಾತನಾಡಿ, “ನಾವೆಲ್ಲರೂ ಇಂದು ಕಾನೂನಿನ ಅಡಿಯಲ್ಲಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಪ್ರಮುಖ ಕಾರಣ B. R. Ambedkar ಅವರು. ಬುದ್ದನ ಶಾಂತಿ ಮಾರ್ಗ ಹಾಗೂ ಅಂಬೇಡ್ಕರ್ ಅವರ ಹೋರಾಟದ ಮನೋಭಾವವನ್ನು ಪ್ರತಿಯೊಬ್ಬರೂ ಮಾದರಿಯಾಗಿ ತೆಗೆದುಕೊಳ್ಳಬೇಕು” ಎಂದರು.
ನಗರದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಅದನ್ನು ತಡೆಗಟ್ಟಲು ಪೋಷಕರ ಪಾತ್ರವೂ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಾದ ಗಂಡಸಿ ಸದಾನಂದಸ್ವಾಮಿ, ಸುಬ್ರಹ್ಮಣ್ಯ ಹಂಡಿಗೆ ಹಾಗೂ ಶಿವರಾಜ್ ಮೌರ್ಯ ಅವರಿಗೆ “ಮಾಧ್ಯಮ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ವಕೀಲರಾದ Premila Nesargi ಹಾಗೂ ಡಿಸಿಪಿ ಡಾ. ಹೆಚ್. ಮಂಜುನಾಥ್ ಬಾಬು ಅವರಿಗೆ “ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ” ನೀಡಿ ಸತ್ಕರಿಸಲಾಯಿತು.
ಇದೇ ವೇಳೆ ಸಂಜೀವಿನಿ ರೇಖಿ ಹೀಲಿಂಗ್ ಸೆಂಟರ್‌ನ ಡಾ. ವಿ. ಭರಣಿ ರಾಜು ಅವರಿಗೆ “ವಿಶಿಷ್ಟ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಪ್ರೇಕ್ಷಕರ ಮನರಂಜಿಸಿದರು.
ಈ ಸಂದರ್ಭದಲ್ಲಿ ಇದು ನಿಮ್ಮ ವಾಹಿನಿಯ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಕೆ.ಎಸ್., ಇವೆಂಟ್ ಕೋ-ಆರ್ಡಿನೇಟರ್ ಚಂದ್ರಿಕಾ ಬಿ.ವಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.






Comments
Leave a Comment