PRABHAVAA.COM

ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ? ಸಾರಿಗೆ ಇಲಾಖೆ ದಿವಾಳಿ, ಬೆಂಗಳೂರು ಗಾರ್ಬೇಜ್ ಸಿಟಿ ಆಗಿದೆ;ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

Bengaluru Urban:

Font size:

ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ? ಸಾರಿಗೆ ಇಲಾಖೆ ದಿವಾಳಿ, ಬೆಂಗಳೂರು ಗಾರ್ಬೇಜ್ ಸಿಟಿ ಆಗಿದೆ;ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ? ಸಾರಿಗೆ ಇಲಾಖೆ ದಿವಾಳಿ, ಬೆಂಗಳೂರು ಗಾರ್ಬೇಜ್ ಸಿಟಿ ಆಗಿದೆ;ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ಬಸ್ ಇಲ್ಲ, ಟಯರ್ ಇಲ್ಲ, ಮೆಂಟೇನೆನ್ಸ್ ಇಲ್ಲ ಎಂದು ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ||

ಬಿಡದಿ ಟೌನ್​ಶಿಪ್ ಬಗ್ಗೆ ಡಿಕೆಶಿ ಆರೋಪಕ್ಕೆ ನಿಖಿಲ್ ಕೌಂಟರ್, ಈ ತರ ಯಾವದಾದ್ರು ಇದ್ರೆ ತೋರಿಸಲಿ ತಲೆ ಬಾಗ್ತೀವಿ||

ದೇವೇಗೌಡರ ಕುಟುಂಬ ಓಡಿ ಹೋಗಲ್ಲ, ಸಾರ್ವಜನಿಕವಾಗಿ ಚರ್ಚೆ ಮಾಡೋಣ - ನಿಖಿಲ್ ಕುಮಾರಸ್ವಾಮಿ ||

***

ಬೆಂಗಳೂರು: ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡುತ್ತಿದ್ದಾರೆ.ನಾವು ಕಟ್ಟಿರೋ ಹಣದಲ್ಲಿ ಮೋಜು-ಮಸ್ತಿ ಮಾಡಿಕೊಂಡು ಕೂತಿದ್ದಾರೆ. ಇದರಿಂದ ಯಾರ ಹೊಟ್ಟೆ ತುಂಬಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು,ಜನ ಸಾಮಾನ್ಯರೇ ವಿಪಕ್ಷಗಳಿಗಿಂತ ಹೆಚ್ಚು ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಶಕ್ತಿ ಯೋಜನೆ ಮೂಲಕ ಫ್ರೀ ಬಸ್ ಅಂದು ಇವತ್ತು ಸಾರಿಗೆ ಇಲಾಖೆ ಎಲ್ಲಿಗೆ ಬಂದು ನಿಂತಿದೆ ಎಂದು ಕಿಡಿಕಾರಿದರು.

ಇದುವರೆಗೂ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಒಂದೇ ಒಂದು ಬಸ್ ಖರೀದಿ ಮಾಡಿಲ್ಲ. ಒಂದು ಟಯರ್ ಬದಲಾವಣೆ ಮಾಡೋಕೆ ಆಗಿಲ್ಲ ಈ ಸರ್ಕಾರಕ್ಕೆ. ಬಸ್ ಮೇಂಟೇನ್ ಮಾಡೋಕೆ ಸರ್ಕಾರದ ಬಳಿ ಹಣವಿಲ್ಲ. ಕುಮಾರಣ್ಣ ಅವರು 4,500 ಇವಿ ಬಸ್ ಬೆಂಗಳೂರಿಗೆ ಕೊಡದೇ ಹೋಗಿದ್ರೆ ಪರಿಸ್ಥಿತಿ ಎಲ್ಲಿಗೆ ಬಂದು ನಿಲ್ಲುತ್ತಿತ್ತು" ಎಂದು ಅವರು ಪ್ರಶ್ನಿಸಿದರು.

ಸಾಧನಾ ಸಮಾವೇಶ ಬಿಟ್ಟು ಬೆಂಗಳೂರಿನಲ್ಲಿ ಕಸದ ರಾಶಿ ಆಗಿದೆ. ಜನ ಒದ್ದಾಡುತ್ತಿದ್ದಾರೆ. ಬೆಂಗಳೂರು ನಗರ ಸಿಲಿಕಾನ್ ವ್ಯಾಲಿಯಾಗಿ ಉಳಿದಿಲ್ಲ. ಗಾರ್ಬೇಜ್ ನಗರವಾಗಿದೆ. ಇವೆಲ್ಲ ಮುಂದಿಟ್ಟುಕೊಂಡು ಸಾಧನಾ ಸಮಾವೇಶ ಮಾಡುತ್ತಿದ್ದಾರೆ" ಎಂದು ಟೀಕಿಸಿದರು.

ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟು ಅತಿ ಹೆಚ್ಚು ಅವಧಿ ಸಿಎಂ ಆದೆ ಅಂತ ಚಾಂಪಿಯನ್ ಲೀಡರ್ ಅಂತ ಸಿಎಂ ಅವರು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಎಷ್ಟು ದಿನ ಸಿಎಂ ಕುರ್ಚಿಯಲ್ಲಿ ಕೂತಿದ್ವಿ, ಎಷ್ಟು ದಿನ ಆಡಳಿತ ಮಾಡಿದ್ವಿ ಅನ್ನೋದು ಮುಖ್ಯವಲ್ಲ. ಅಧಿಕಾರ ಇದ್ದಾಗ ಎಷ್ಟು ಜನರ ಜೀವನ ಬದಲಾವಣೆ ಮಾಡಿದ್ದೀರಾ. ಎಷ್ಟು ಜನರ ಬದುಕು ಹಸನು ಮಾಡಿದ್ದೀರಾ ಅನ್ನೋದು ಮುಖ್ಯ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.

ಬಿಡದಿಯಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ; ಡಿಕೆಶಿಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು

ಬಿಡದಿ ಟೌನ್‌ಶಿಪ್‌ಗೆ ನಾವು ಎಲ್ಲಿ ಎಲ್ಲಿ ಜಮೀನು ಮಾಡಿದ್ದೇವೋ ಅಂತ ಸರ್ಕಾರ ತೆಗೆಯಲಿ. ಸರ್ಕಾರ ಅವರದ್ದೇ ಅಲ್ಲವೇ. ಆದರೆ ರೈತರ ಭೂಮಿ ಮುಟ್ಟಬೇಡಿ"
ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ನಿಖಿಲ್ ಕುಮಾರಸ್ವಾಮಿ ಅವರು ಸವಾಲು ಹಾಕಿದರು.

"ಕುಮಾರಸ್ವಾಮಿ ಅವರು ಸಿನಿಮಾ ಹಂಚಿಕೆಯ ದುಡ್ಡಿನಲ್ಲಿ ಕೇತಗಾನಹಳ್ಳಿಯಲ್ಲಿ ಜಮೀನು ಖರೀದಿಸಿದ್ದರು. ಅದಕ್ಕೆ ಬಂದು ಮುಟ್ಟುಗೋಲು ಹಾಕಿಕೊಂಡು ಎಸ್‌ಐಟಿ ಮಾಡಿ ಯಾವ ಯಾವ ರೀತಿ ತನಿಖೆ ಮಾಡಿದರು. ಎಸ್‌ಐಟಿ ಸ್ವತಂತ್ರವಾಗಿ ಕೆಲಸ ಮಾಡಬೇಕು. ರಾಜಕೀಯವಾಗಿ ಬಳಸಿಕೊಂಡರು ಎಂದು ಆರೋಪಿಸಿದರು.

ಕುಮಾರಣ್ಣ ಅವರು ಬೆಂಗಳೂರು ನಗರ ಬೆಳೆಯುವುದರಿಂದ ನಾಲ್ಕು ಭಾಗದಲ್ಲಿ ಪರಿವರ್ತನೆ ಆಗಬೇಕು ಎಂದು ಉಪನಗರಗಳ ಅಭಿವೃದ್ಧಿಗೆ ಮುಂದಾಗಿದ್ದರು. ಆದರೆ ರೈತರು ಬಂದು ಬೇಡ ಅಂದಾಗ ಸುಮ್ಮನಾದರು. ಆದೇಶ ವಾಪಸ್ ಪಡೆದರು. ಇವತ್ತು ಬಿಡದಿಯಲ್ಲಿ ಇರುವ ರೈತರು ಏನ್ ಆಗಬೇಕು? ಅಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಇದೆ. ಡಿಸಿಎಂ ಅವರು ತಮ್ಮ ಪಟಾಲಂನಿಂದ ಬೇಲಿ ಹಾಕಿ ಕೂತಿದ್ದಾರೆ ಎಂದು ನಿಖಿಲ್ ವಾಗ್ದಾಳಿ ನಡೆಸಿದರು.

Comments

Leave a Comment

Prev Post ತುಮಕೂರಿನ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ: ವಿಜಯೇಂದ್ರ
Next Post ಜಿ.ಪರಮೇಶ್ವರ್ ಅಧ್ಯಕ್ಷತೆಯ‌ ಪ್ರಣಾಳಿಕೆ ಸಮಿತಿ ಸಿದ್ದಪಡಿಸಿದ್ದ ಪ್ರಣಾಳಿಕೆಯಲ್ಲಿನ‌ 580 ಭರವಸೆಗಳಲ್ಲಿ 290 ಕ್ಕೂ ಹೆಚ್ಚು ಭರವಸೆ ಈಡೇರಿಸಿದ್ದೇವೆ: ಸಿ.ಎಂ ಸಿದ್ದರಾಮಯ್ಯ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News