ಅಂಗನವಾಡಿಯಲ್ಲಿ ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಪರಮೋಚ್ಛ ಗಮನ ನೀಡಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ
Jan. 14, 2026, 5:23 p.m.ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಆದೇಶ ಪತ್ರ ವಿತರಿಸಿದ ಸಚಿವರು
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಆದೇಶ ಪತ್ರ ವಿತರಿಸಿದ ಸಚಿವರು
ರಾಜೀವ್ ಗೌಡರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ
ಬಂಧಿಸಲು ಛಲವಾದಿ ನಾರಾಯಣಸ್ವಾಮಿ ಆಗ್ರಹ
ನಮ್ಮ ಪಕ್ಷದ ನಾಯಕರ ಜತೆಗಿನ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
16 ರಂದು ದೆಹಲಿಗೆ ಹೋಗುತ್ತೇನೆ
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಮಂಗಳವಾರ ಮೈಸೂರು ವಿಮಾನ ನಿಲ್ದಾಣದಲ್ಲಿ ಸಿಎಂ ಹಾಗೂ ಡಿಸಿಎಂ ಬರಮಾಡಿಕೊಂಡರು
MNREGA ಕಾಯ್ದೆ ಪುನ:ಸ್ಥಾಪಸಿ ವಿಬಿಜಿ ರಾಮ್ ಜಿ ಕಾಯ್ದೆ ರದ್ದಾಗುವವರೆಗೆ ಹೋರಾಟ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು ಭೇಟಿಗಾಗಿ ಆಗಮಿಸಿದ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಚಾನ್ಸೆಲರ್ ಫೆಡ್ರಿಕ್ ಮೆರ್ಜ್ -
ಆತ್ಮೀಯವಾಗಿ ಸ್ವಾಗತಿಸಿದ ಬಾರೀ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್
ಪ್ರಧಾನಿ ಮೋದಿ ಕನಸಿನ ರೇರ್ ಅರ್ಥ್ ಮ್ಯಾಗ್ನೆಟ್ಸ್ ಯೋಜನೆಗೆ ಶರವೇಗ
ಉದ್ಯಮಿಗಳಿಗೆ ವಿಕಸಿತ ಭಾರತದ ಗುರಿ ಒತ್ತಿ ಹೇಳಿದ ಕೇಂದ್ರ ಸಚಿವರು
ರಿವರ್ ಮೊಬಿಲಿಟಿ ತಯಾರಿಕೆಯ ವಿದ್ಯುತ್ ಚಾಲಿತ ಯಮಾಹಾ ಇಸಿ-06 ಬೈಕ್ ಹಸ್ತಾಂತರ
ಸ್ಥಳೀಯ ಉತ್ಪಾದನೆಗೆ ಸರಕಾರದ ಒತ್ತು: ಎಂ ಬಿ ಪಾಟೀಲ
ಆಗಸ್ಟ್ ಹೊತ್ತಿಗೆ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ
ಸಚಿವರಾದ ಎಂ.ಬಿ.ಪಾಟೀಲ ಮತ್ತು ಡಾ.ಎಂ.ಸಿ.ಸುಧಾಕರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ
ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕ್ಯಾಂಪಸ್; 4 ವಿಷಯಗಳಲ್ಲಿ ಪದವಿ, 1 ವಿಷಯದಲ್ಲಿ ಸ್ನಾತಕೋತ್ತರ ಪದವಿ
ಬೆಂಗಳೂರು: ಆಸ್ಟ್ರೇಲಿಯಾದ ಅಗ್ರಗಣ್ಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ನ್ಯೂಸೌತ್ ವೇಲ್ಸ್ ವಿವಿ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ತನ್ನ ಕ್ಯಾಂಪಸ್ ಆರಂಭಿಸಲಿದೆ. ಈ ಸಂಬಂಧದ ಒಪ್ಪಂದಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರ ಸಮ್ಮುಖದಲ್ಲಿ ಸಹಿ ಮಾಡಲಾಯಿತು.
ವಿಧಾನಸೌಧದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ನ್ಯೂಸೌತ್ ವೇಲ್ಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಟಿಲಾ ಬ್ರಂಗ್ಸ್ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರು ಒಪ್ಪಂದ ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಈ ವಿಶ್ವವಿದ್ಯಾಲಯವು ಸದ್ಯಕ್ಕೆ ವಾಣಿಜ್ಯ, ಮಾಧ್ಯಮ, ಕಂಪ್ಯೂಟರ್ ಮತ್ತು ಡೇಟಾ ವಿಜ್ಞಾನ ಕೋರ್ಸುಗಳಲ್ಲಿ ಪದವಿ ಹಾಗೂ ಸೈಬರ್ ಸೆಕ್ಯುರಿಟಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ನೀಡಲಿದೆ ಎಂದು ಸಚಿವರಾದ ಎಂ ಬಿ ಪಾಟೀಲ ಮತ್ತು ಸುಧಾಕರ ಅವರು ತಿಳಿಸಿದ್ದಾರೆ.
ನಿಯೋಗದೊಂದಿಗೆ ವಿಚಾರ ವಿನಿಮಯ ನಡೆಸಿದ ನಂತರ ಮಾತನಾಡಿದ ಪಾಟೀಲ ಅವರು, ನ್ಯೂಸೌತ್ ವೇಲ್ಸ್ ವಿ.ವಿ.ದ ಶೈಕ್ಷಣಿಕ ಮಂಡಲಿಯೇ ಬೆಂಗಳೂರು ಕ್ಯಾಂಪಸ್ಸಿನಲ್ಲಿ ಓದುವ ವಿದ್ಯಾರ್ಥಿಗಳ ಮೇಲೆ ನಿಗಾ ಇಡಲಿದೆ. ಅಲ್ಲಿ ತಾನು ಹೊಂದಿರುವ ಪಠ್ಯಕ್ರಮವನ್ನೇ ಇಲ್ಲೂ ಬೋಧಿಸಲಿದೆ. ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಹಲವು ಅಗ್ರಮಾನ್ಯ ಕಂಪನಿಗಳೂ ಇರುವುದರಿಂದ ವಿದ್ಯಾರ್ಥಿಗಳ ಕಲಿಕೆ, ಕೌಶಲ್ಯಾಭ್ಯಾಸಕ್ಕೆ ನೆರವು ಸುಗಮವಾಗಿ ಸಿಗಲಿದೆ. ಮುಂಬರುವ ದಿನಗಳಲ್ಲಿ ಕ್ವಿನ್ ಸಿಟಿಯಲ್ಲಿ ಇವರ ಕ್ಯಾಂಪಸ್ ಅಸ್ತಿತ್ವಕ್ಕೆ ಬರಲಿದೆ ಎಂದಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 2025-30ರ ಅವಧಿಯ ಶೈಕ್ಷಣಿಕ, ಸಂಶೋಧನಾತ್ಮಕ ಸಹಭಾಗಿತ್ವ ಕಾರ್ಯಕ್ರಮ ಈಗ ಚಾಲ್ತಿಯಲ್ಲಿದೆ. ನ್ಯೂಸೌತ್ ವೇಲ್ಸ್ ವಿ.ವಿ. ಬೆಂಗಳೂರಿನಲ್ಲಿರುವ ಐಐಎಂ, ಭಾರತೀಯ ವಿಜ್ಞಾನ ಮಂದಿರ, ರಾಷ್ಟ್ರೀಯ ಕಾನೂನು ವಿವಿ, ಕೇಂದ್ರ ಸರಕಾರದ ಹೆದ್ದಾರಿ ಮತ್ತು ಉಕ್ಕು ಸಚಿವಾಲಯ, ಹಾಗೂ ರಾಜ್ಯದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಅವರು ವಿವರಿಸಿದ್ದಾರೆ.
ಸಚಿವ ಸುಧಾಕರ ಮಾತನಾಡಿ, ನ್ಯೂಸೌತ್ ವೇಲ್ಸ್ ವಿಶ್ವವಿದ್ಯಾಲಯವು ಏಷ್ಯಾ-ಪೆಸಿಫಿಕ್ ವಲಯದಲ್ಲೇ ಅತ್ಯುತ್ತಮ ಉದ್ಯೋಗಾವಕಾಶನ್ನು ಸೃಷ್ಟಿಸುತ್ತಿರುವ ಶಿಕ್ಷಣ ಸಂಸ್ಥೆ ಎಂದು ಹೆಸರಾಗಿದೆ. ಇಲ್ಲಿಂದ ಪದವಿ/ ಸ್ನಾತಕೋತ್ತರ ಪದವಿ ಪಡೆದು ಹೊರಬರುವವರನ್ನು ಉದ್ಯೋಗದಾತರು ತಮ್ಮ ಕಂಪನಿಗಳಿಗೆ ಅರಸುತ್ತಿರುತ್ತಾರೆ. ಇಂತಹ ವಿ.ವಿ.ಯು ಬೆಂಗಳೂರಿನಲ್ಲಿ ಕ್ಯಾಂಪಸ್ ತೆರೆಯುತ್ತಿರುವುದರಿಂದ ಇಲ್ಲಿನ ನಾವೀನ್ಯತಾ ಕಾರ್ಯ ಪರಿಸರಕ್ಕೆ ಮತ್ತಷ್ಟು ಶಕ್ತಿ ಬರಲಿದೆ. ಜೊತೆಗೆ ಇಂತಹ ಇನ್ನಷ್ಟು ವಿದೇಶಿ ವಿ.ವಿ.ಗಳು ನಮ್ಮಲ್ಲಿಗೆ ಬರಲು ಉತ್ತೇಜನ ನೀಡಲಿದೆ ಎಂದು ಎಂದಿದ್ದಾರೆ.
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿಯ ಚರುಮುರಿ ಸ್ಟಾಲ್ ಬಳಿ ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿದ ಪ್ರಕರಣದಲ್ಲಿ ರಸ್ತೆಗೆ ದನ ಬಿಟ್ಟವರ ಮೇಲೂ ಸುಮೊಟೋ ಕೇಸು ದಾಖಲಾಗಿದೆ.
* ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದಲ್ಲಿ ಸಚಿವರ ಭರವಸೆ
ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಕಾಂಗ್ರೆಸ್ ಪಕ್ಷ ಅಪಪ್ರಚಾರ ನಡೆಸುತ್ತಿದೆ ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರತ್ಯೇಕ ನೀತಿ.
ಮಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಸರಕಾರದಿಂದ ಮೂಲಸೌಕರ್ಯ,
ಖಾಸಗಿಯವರಿಂದ ಹೂಡಿಕೆ.
ಸ್ಥಳೀಯರಿಗೆ ಅವರದೇ ನೆಲದಲ್ಲಿ ಉದ್ಯೋಗ ನೀಡುವ ಚಿಂತನೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಜಯಪುರ ಬಸ್ ನಿಲ್ದಾಣದ ಮುಂಬಾಗದ ವೃತ್ತದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರ ಮೂರ್ತಿಯನ್ನು ಅನಾವರಣಗೊಳಿಸಿದರು.
ಕಾಂಗ್ರೆಸ್ ನಾಯಕರಿಂದ ವಿಡಿಯೋ ಬ್ಲ್ಯಾಕ್‍ಮೇಲ್- ಛಲವಾದಿ ನಾರಾಯಣಸ್ವಾಮಿ
ನ್ಯಾಯಾಂಗ ತನಿಖೆ: ಆರ್.ಅಶೋಕ್ ಒತ್ತಾಯ
ನೆರೆ ರಾಜ್ಯಗಳಿಂದ ದಾವೆಗಳ ಮೂಲಕ ಅಡಚಣೆ
ಭೂಮಿ ಮುಳುಗಡೆ ಸಂತ್ರಸ್ತ ರೈತರಿಗೆ ಎಕರೆಗೆ 35-40 ಲಕ್ಷ ಪರಿಹಾರ