Our Story
Who we are
ಸುದ್ದಿಗಳನ್ನು ಓದುಗರಿಗೆ ಬಹುಬೇಗ ತಲುಪಿಸಬೇಕು ಎಂಬುವ ಉದ್ದೇಶದಿಂದ ನಾನು ತೊಂಬತ್ತರ ದಶಕದ ಅಂತ್ಯದಲ್ಲಿ ಪ್ರಭಾವ ಡಾಟ್ ಕಾಮ್ ಪ್ರಾರಂಭ ಮಾಡಿದೆ.
ಸುಮಾರು 1997ರ ವೇಳೆಗೆ ನಾನು ಪ್ರದೇಶ ಭಾಷಾ ವಾರ್ತಾ ಪತ್ರಿಕೆಯನ್ನ ಪ್ರಾರಂಭ ಮಾಡಿದ ನಂತರ prabhavaa.com ಆರಂಭಿಸಿದೆ . ಪ್ರಭಾವಾ ಎಂದರೆ ಪ್ರದೇಶ ಭಾಷಾ ವಾರ್ತೆ.
ನನ್ನ ಗೆಳೆಯರಾದ ಹಾಗೂ ಗುರುಗಳಾದ ಶೇಷರಾಘವಾಚಾರ್ 80 ದಶಕದಲ್ಲಿ ಪ್ರದೇಶ ಭಾಷೆ ಸಮಾಚಾರ ಎಂಬ ಸುದ್ದಿ ಸಂಸ್ಥೆಯನ್ನು ನಡೆಸುತ್ತಿದ್ದರು ನಾನು ಸಹ ಇಂತಹ ಒಂದು ಸುದ್ದಿ ಸಂಸ್ಥೆಯನ್ನು ಪ್ರಾರಂಭ ಮಾಡಬೇಕೆಂದು ಆಗ ತೀರ್ಮಾನಿಸಿದೆ.
ಪ್ರಭಾಸ ಸುದ್ದಿ ಸಂಸ್ಥೆಯನ್ನು ನಾನು ನಡೆಸಿಕೊಂಡು ಹೋಗುತ್ತೇನೆ ದಯವಿಟ್ಟು ನನಗೆ ಅ ಟೈಟಲ್ ನೀಡಿ ಎಂದು ಅವರನ್ನು ಹೇಳಿದಾಗ ಇದೇನು ದೊಡ್ಡ ವಿಷಯ ಬಿಡಯ್ಯ ನೀನೆ ಒಂದು ಸಂಸ್ಥೆಯನ್ನು ಹುಟ್ಟು ಹಾಕು ಎಂದರು. ಅದರ ಪರಿಣಾಮವೇ ಪ್ರಭಾವ ಹುಟ್ಟಿಕೊಂಡಿತು ,.ಇದಕ್ಕಾಗಿ ಗೆಳೆಯ ನಾರಾಯಣರವರ ಸಹಕಾರ ಕೋರಿದಾಗ ಅವರು ನನಗೆ ಪ್ರದೇಶ ಬಾಷಾ ವಾರ್ತೆ ಎಂಬ ಟೈಟಲ್ನ್ನು ಅವರದೇ ಖರ್ಚಿನಲ್ಲಿ ತರಿಸಿಕೊಟ್ಟರು.
ನಂತರ ಇದರ ಹಿಂದೆಯೇ ಪ್ರಭಾವ ಡಾಟ್ ಕಾಮ್ ಸಹ ಪ್ರಾರಂಭ ಮಾಡಿದೆ .
ಪ್ರಭಾವ ಡಾಟ್ ಕಾಮ್ ಸುದ್ದಿಗಳನ್ನು ತುಮಕೂರಿನಿಂದ ಪ್ರಕಟವಾಗುವ ಸೊಗಡು , ಪ್ರಕಟವಾಗುತ್ತಿದ್ದ ಸಂಜೆ ಪತ್ರಿಕೆ ಮಂಗಳೂರು ಮಿತ್ರ ,ಕೋಲಾರದ ಇನ್ನಿತರ ಪತ್ರಿಕೆಗಳು ನಮ್ಮ ಸಂಸ್ಥೆ ನೀಡುತ್ತಿದ್ದ ವರದಿಗಳಿಗೆ ಕ್ರೆಡಿಟ್ ಕೊಡುತ್ತಿದ್ದವು.
ಈಗ ನನ್ನ ಬಳಿ ಈ ಸಂಬಂಧ ಕೆಲವು ದಾಖಲೆಗಳನ್ನು ಇಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಪ್ರದೇಶ ಭಾಷೆ ಪತ್ರಿಕೆಯನ್ನು ಹಣಕಾಸಿನ ತೊಂದರೆಯಿಂದಾಗಿ ನಡೆಸಲು ಸಾಧ್ಯವಾಗದಿದ್ದರೂ ಪ್ರಭಾವ ಡಾಟ್ ಕಾಮ್ ಸಂಸ್ಥೆಯನ್ನು 1997 ರಿಂದಲೂ ನಡೆಸಿಕೊಂಡು ಬಂದಿದ್ದೇನೆ .
1982 ರಿಂದ 42 ವರ್ಷಗಳ ಕಾಲ ನಾನು ಪತ್ರಕರ್ತನಾಗಿ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದೇನೆ ಕಾರ್ಯನಿರ್ವಹಿಸಿತ್ತಿದ್ದೇನೆ.
ನಾನು 1982 ಜನವಾಣಿ ಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸಿ ಹಾಗೂ ಮುಂಬೈನಿಂದ ಪ್ರಕಟವಾಗುವ ಕರ್ನಾಟಕ ಅಲ್ಲ ದಿನಪತ್ರಿಕೆಯಲ್ಲಿ ಕೆಲಸ ಕಾರ್ಯ ನಿರ್ವಹಿಸುತ್ತಿದ್ದು ಈಗಲೂ ಸಹ ಕರ್ನಾಟಕ ಮಲ್ಲ ಪತ್ರಿಕೆಯ ಬೆಂಗಳೂರು ವರದಿಗಾರನಾಗಿ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.






