"ಸಣ್ಣ ಕೈಗಾರಿಕೆಗಳಿಗೆ ಬಂಡವಾಳ ಹೂಡಿಕೆ ಪ್ರೋತ್ಸಾಹ — ಅಧಿಕಾರಿಗಳ ಅಹವಾಲು ಆಲಿಸಿದ ಸಚಿವ ವಿಜಯಾನಂದ ಕಾಶಪ್ಪನವರ"
ಬೆಂಗಳೂರು-ಸಣ್ಣ ಕೈಗಾರಿಕೆಮತ್ತು ಸಾರ್ವಜನಿಕ ಉದ್ಯಮಿಗಳ ಇಲಾಖೆಯಲ್ಲಿರುವ ಅವಕಾಶಗಳ ಕುರಿತು
ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳಿಗೆ ಮನವರಿಕೆ ಮಾಡಿಕೊಡಬೇಕೆಂದು ಸಚಿವ ವಿಜಯಾನಂದ ಕಾಶಪ್ಪನವರ ಅಧಿಕಾರಿಗಳಿಗೆ ಸಲಹೆ ಸೂಚಿಸಿದ್ದಾರೆ.
ಈ ಸಂಬಂಧ ಬುಧವಾರ ವಿಕಾಸಸೌಧದಲ್ಲಿ ಸಣ್ಣ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆಯ ಸಹಾಯಕ ನಿರ್ದೇಶಕ( AD)ರನ್ನು ಭೇಟಿ ಮಾಡಿ ಇಲಾಖೆ ಸ್ಥಿತಿಗತಿ ಕುರಿತು ಮಾತುಕತೆ ನಡೆಸಿದರು.
ಸಣ್ಣ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆಯಲ್ಲಿ ಬಂಡವಾಳ ಹೂಡಿಕೆ ಮಾಡಲು ಸಾಕಷ್ಟು ಅವಕಾಶಗಳಿವೆ. ಇಲಾಖೆಯಲ್ಲಿರುವ ಹೊಸ ಯೋಜನೆಗಳ ಬಗ್ಗೆ ಉದ್ಯಮಿಗಳಿಗೆ ಮನವರಿಕೆ
ಮಾಡಿಕೊಡಬೇಕು. ಕೆಲವರಿಗೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ ಅಧಿಕಾರಿಗಳು ಈ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕೆಂದು ಕಿವಿಮಾತು ಹೇಳಿದರು.
ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆಗಳು ಬಂಡವಾಳ ಹೂಡಿಕೆಯಿಂದ ಸಿಗಬಹುದಾದ ಅನುಕೂಲಗಳು, ಉದ್ಯೋಗಗಳ ಸೃಷ್ಟಿ, ಮೂಲಭೂತ ಸೌಕರ್ಯಗಳು, ಇತ್ಯಾದಿ ಅಂಶಗಳ ಬಗ್ಗೆ ಮನವರಿಕೆ ಮಾಡಿಕೊಡಿ .ಇದರಿಂದ ಸಣ್ಣ ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುತ್ತಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾಕಷ್ಟು ಸಬ್ಸಿಡಿಯನ್ನು ನೀಡುತ್ತದೆ .ಇಲಾಖೆಯಲ್ಲಿ ಈ ಬಗ್ಗೆ ಹೆಚ್ಚಿನ ಪ್ರಚಾರದ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ವಾಸ್ತವವಾಗಿ ದೇಶದಲ್ಲಿ ಯಾವುದೇ ರಾಜ್ಯಗಳು ಸಣ್ಣ ಕೈಗಾರಿಕೆಗಳಿಗೆ ನೀಡದಷ್ಟು ಪ್ರೋತ್ಸಾಹವನ್ನು ನಮ್ಮ ಕಾಂಗ್ರೆಸ್ ಸರ್ಕಾರ ನೀಡುತ್ತದೆ. ಹೀಗಾಗಿಯೇ ಈಗಲೂ ನಾವು ಇತರರಿಗಿಂತಲೂ ಮುಂದೆ ಇದ್ದೇವೆ ಎಂದು ತಿಳಿಸಿದರು.
ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಮಗೆ ಸಂಪೂರ್ಣವಾದ ಅರಿವಿದೆ. ಒಂದೇ ಹಂತದಲ್ಲಿ ಇವೆಲ್ಲವನ್ನೂ ಪರಿಹರಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಕಾಲಮಿತಿಯೊಳಗೆ ಬಗೆಹರಿಸಿಕೊಳ್ಳುವ ಭರವಸೆಯನ್ನು ಸಚಿವರು ನೀಡಿದರು.
ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಈಗಾಗಲೇ ಅಧಿಕಾರಿಗಳ ಜೊತೆ ಹಲವು ಸುತ್ತಿನ ಮಾತುಕತೆ ಸಭೆ ನಡೆಸಲಾಗಿದೆ .ಸಮಸ್ಯೆಗಳು ಪರಿಹರಿಸುವ ಬಗ್ಗೆ ತಾವು ವಿಶೇಷವಾದ ಕಾಳಜಿಯನ್ನು ಹೊಂದಿದ್ದೇನೆ .ಒಂದೇ ಹಂತದಲ್ಲಿ ಎಲ್ಲವೂ ಬಗೆಹರಿಸಲು ಸಾಧ್ಯವಿಲ್ಲ. ಸಂಪನ್ಮೂಲದ ಇತಿಮಿತಿಗಳಿಗೆ ಪರಿಹರಿಸುವ ಇಂಗಿತವನ್ನು ವ್ಯಕ್ತಪಡಿಸಿದರು.
ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳು
ಇನ್ನು ಸಚಿವರನ್ನು ಭೇಟಿ ಮಾಡಿದ ಸಹಾಯಕ ನಿರ್ದೇಶಕರುಗಳು, ಕಳೆದ 17 ರಿಂದ 18 ವರ್ಷದಲ್ಲಿ ಯಾವುದೇ ಸಚಿವರು ನಮ್ಮನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿರಲಿಲ್ಲ .
ಇದೇ ಮೊದಲ ಬಾರಿಗೆ ಸಚಿವರು ನಮ್ಮನ್ನು ಭೇಟಿಯಾಗುವುದರ ಜೊತೆಗೆ ಇಲಾಖೆಯ ಕುಂದುಕೊರತೆಗಳನ್ನು ಬಹಳ ಶಾಂತ ರೀತಿಯಾಗಿ ಸಹನೆಯಿಂದ ಆಲಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಯಾವುದೇ ಸಚಿವರು ಈವರೆಗೂ ನಮ್ಮ ಸಮಸ್ಯೆಗಳ ಬಗ್ಗೆ ಗಮನ ಕೊಡುವುದು ಇರಲಿ ಕನಿಷ್ಠಪಕ್ಷ ಭೇಟಿ ಮಾಡುವ ಸೌಜನ್ಯವನ್ನು ತೋರಿರಲಿಲ್ಲ. ಆದರೆ, ನೂತನ ಸಚಿವರು ನಮ್ಮ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ. ನಿಜಕ್ಕೂ ನಾವು ಇದನ್ನು ನಿರೀಕ್ಷೆಯೇ ಮಾಡಿರಲಿಲ್ಲ ಎಂದು ಬಹುತೇಕ ಅಧಿಕಾರಿಗಳು ತಮ್ಮ ಸಂತಸವನ್ನು ಹೊರಹಾಕಿದರು.







Comments
Leave a Comment