ಸಾಂಪ್ರಾದಾಯಿಕ ಲಾಟರಿ ಮರು ಜಾರಿಗೊಳಿಸಬೇಕು – ಕರ್ನಾಟಕ ರಾಜ್ಯ ಚಿಲ್ಲರೆ ಲಾಟರಿ ಮಾರಾಟಗಾರರ ಸಂಘದ ಕಾರ್ಯದರ್ಶಿ ಆರ್. ಪದ್ಮೋಜಿ ರಾವ್ ಆಗ್ರಹ”
ಬೆಂಗಳೂರು, ಜುಲೈ 16 –ರಾಜ್ಯ ಸರ್ಕಾರವು ಸಾಂಪ್ರಾದಾಯಿಕ ಲಾಟರಿ ಟಿಕೆಟ್‌ಗಳನ್ನು ಪುನರ್ ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಚಿಲ್ಲರೆ ಲಾಟರಿ ಮಾರಾಟಗಾರರ ಸಂಘದ ಕಾರ್ಯದರ್ಶಿ ಆರ್. ಪದ್ಮೋಜಿ ರಾವ್ ಅವರು ಮನವಿ ಮಾಡಿಕೊಂಡಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರುಕರ್ನಾಟಕ ಸರ್ಕಾರವು ಲಾಟರಿ ಮಾರಾಟವನ್ನು ನಿಲ್ಲಿಸಿರುವುದರಿಂದ ಪ್ರತಿ ವರ್ಷ 5,000 ರಿಂದ 6,000 ಕೋಟಿ ರೂಪಾಯಿ ಆದಾಯವನ್ನು ಕಳೆದುಕೊಳ್ಳುತ್ತಿದೆ. ಇತ್ತ ಕೇರಳ ಸರ್ಕಾರವು ಸಾಂಪ್ರಾದಾಯಿಕ ಲಾಟರಿ ಮೂಲಕ 10-12 ಸಾವಿರ ಕೋಟಿ ರೂಪಾಯಿ ಸಂಪಾದಿಸುತ್ತಿದೆ. 2007ರಿಂದ 2026ರವರೆಗೆ ಕರ್ನಾಟಕ ಸರ್ಕಾರವು ಲಾಟರಿ ಉಲ್ಲಂಘನೆ ಕಾಯ್ದೆಯಡಿಯಲ್ಲಿ ಮೂರು ಅಧಿಸೂಚನೆಗಳನ್ನು ಹೊರಡಿಸಿದರೂ, ಅಕ್ರಮ ಲಾಟರಿಗಳು ಇನ್ನೂ ನಿಲ್ಲಿಲ್ಲ.”ಎಂದು ಹೇಳಿದರು.
“1998ರ ಸುಪ್ರೀಂ ಕೋರ್ಟ್ ಲಾಟರಿ ನಿಯಂತ್ರಣ ಕಾಯ್ದೆಯಂತೆ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿಲ್ಲ. ನಮ್ಮ ಸಂಘಟನೆ ಕಳೆದ 10-12 ವರ್ಷಗಳಿಂದ ನಿರಂತರವಾಗಿ ಲಾಟರಿ ಮಂತ್ರಾಲಯವನ್ನು ಸ್ಥಾಪಿಸಲು ಮನವಿ ಸಲ್ಲಿಸುತ್ತಿದ್ದರೂ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ನಾವು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನ್ಯಾಯಾಲಯವು ಸರ್ಕಾರಕ್ಕೆ ಲಾಟರಿ ಕಾಯ್ದೆ 1998ರ ಸೆಕ್ಷನ್ 4ರಂತೆ ಮರು ಜಾರಿಗೊಳಿಸಲು ಸ್ಪಷ್ಟ ಆದೇಶ ನೀಡಿದೆ.”ಎಂದು ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.
ಪತ್ರಿಕಾ ಘೋಷ್ಠಿಯಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಸಿ. ರಾಮಕೃಷ್ಣ ಹಾಗೂ ಭಾಸ್ಕರ್ ಬಾಬು ಹೆಚ್.ಜಿ (ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳು) ಹಾಜರಿದ್ದು, ನ್ಯಾಯಾಲಯದ ಆದೇಶದ ಪ್ರತಿಗಳನ್ನು ಮಾಧ್ಯಮದ ಮುಂದೆ ಪ್ರದರ್ಶಿಸಿದರು.
“ಕೇರಳ ಸರ್ಕಾರದ ಲಾಟರಿಗಳು ಕರ್ನಾಟಕದಲ್ಲಿ ಅಕ್ರಮವಾಗಿ ನಡೆಯುತ್ತಿದ್ದು, ಅದರಿಂದ ಕೇರಳಕ್ಕೆ ಸಂಪನ್ಮೂಲಗಳು ಹರಿದು ಹೋಗುತ್ತಿವೆ. ಇದು ಕರ್ನಾಟಕದ ಆರ್ಥಿಕತೆಗೆ ದೊಡ್ಡ ನಷ್ಟ. ಆದ್ದರಿಂದ ಸರ್ಕಾರವು ತಕ್ಷಣ ಕ್ರಮ ಕೈಗೊಂಡು ಸಾಂಪ್ರಾದಾಯಿಕ ಲಾಟರಿ ಮರು ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು






Comments
Leave a Comment