ಪರಿಶಿಷ್ಟ ಜಾತಿಗಳ ಒಳಮೀಸಲಾತಿ: ಹಳೆಯ ಆದೇಶದಿಂದ ಹೊಸ ಸೂತ್ರದವರೆಗೆ – ಸಾಮಾಜಿಕ ನ್ಯಾಯದ ಹೊಸ ಅಧ್ಯಾಯ
ಪರಿಶಿಷ್ಟ ಜಾತಿಗಳ ಒಳಮೀಸಲಾತಿ: ಹಳೆಯ ಆದೇಶದಿಂದ ಹೊಸ ಸೂತ್ರದವರೆಗೆ – ಸಾಮಾಜಿಕ ನ್ಯಾಯದ ಹೊಸ ಅಧ್ಯಾಯ
ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತಂತೆ 28-12-2022 ಮತ್ತು 25-08-2025ರಂದು ರಾಜ್ಯ ಸರ್ಕಾರದ ಹಳೆಯ ಆದೇಶದಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿತ್ತು. ಹಳೆಯ ಆದೇಶದಲ್ಲಿ ಪರಿಶಿಷ್ಟ ಜಾತಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿ, SC-1ಗೆ ಶೇಕಡಾ 20.6, SC-2ಗೆ ಶೇಕಡಾ 58.6 ಹಾಗೂ SC-3ಗೆ ಶೇಕಡಾ 0.5 ಮೀಸಲಾತಿ ನೀಡಲಾಗಿತ್ತು. ಒಟ್ಟು ಶೇಕಡಾ 79.7 ಮೀಸಲಾತಿ ನಿಗದಿಯಾಗಿದ್ದರೂ, ಹಲವು ವರ್ಷಗಳಿಂದ ಸಮುದಾಯಗಳ ನಡುವೆ ಗೊಂದಲಗಳು ಮುಂದುವರಿದಿದ್ದವು.
ಈ ಹಳೆಯ ಆದೇಶವು ದಶಕಗಳ ಕಾಲ ಜಾರಿಯಲ್ಲಿತ್ತು.ಕೆಲವು ಸಮುದಾಯಗಳು ತಮ್ಮ ಹಕ್ಕುಗಳನ್ನು ಸಮಾನವಾಗಿ ಪಡೆಯುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸುತ್ತಿದ್ದವು. ಹೀಗಾಗಿ, ಸರ್ಕಾರವು ತಾಂತ್ರಿಕ ಸಮಿತಿಯನ್ನು ರಚಿಸಿ, ಹೊಸ ಸೂತ್ರದ ಅಗತ್ಯವನ್ನು ಪರಿಶೀಲಿಸಿತು.
ತಾಂತ್ರಿಕ ಸಮಿತಿಯ ವರದಿ ಪ್ರಕಾರ, ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಶೇಕಡಾ 15ರ ಮೀಸಲಾತಿಯನ್ನು ಸಮಾನವಾಗಿ ಹಂಚುವಂತೆ ಶಿಫಾರಸು ಮಾಡಲಾಯಿತು. ಎಡಗೈ ಸಮುದಾಯಕ್ಕೆ ಶೇಕಡಾ 5.3, ಬಲಗೈ ಸಮುದಾಯಕ್ಕೆ ಶೇಕಡಾ 5.3 ಹಾಗೂ ಇತರರಿಗೆ ಶೇಕಡಾ 4.4 ಮೀಸಲಾತಿ ನೀಡುವಂತೆ ಸಲಹೆ ನೀಡಲಾಯಿತು.
ಈ ವರದಿ ಆಧರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಹೊಸ ನಿರ್ಧಾರ ಕೈಗೊಳ್ಳಲಾಯಿತು. ಸಂಪುಟ ಸಭೆಯಲ್ಲಿ ಚರ್ಚೆಯ ಬಳಿಕ ಅಂತಿಮವಾಗಿ ಎಡಗೈ ಸಮುದಾಯಕ್ಕೆ ಶೇಕಡಾ 5.25, ಬಲಗೈ ಸಮುದಾಯಕ್ಕೆ ಶೇಕಡಾ 5.25 ಹಾಗೂ ಸ್ಪೃಶ್ಯ–ಅಲೆಮಾರಿ ಸಮುದಾಯಗಳಿಗೆ ಶೇಕಡಾ 4.5 ಮೀಸಲಾತಿ ನೀಡುವಂತೆ ತೀರ್ಮಾನಿಸಲಾಯಿತು.
ಈ ನಿರ್ಧಾರ ಹೊರಬಂದ ತಕ್ಷಣ ಪರಿಶಿಷ್ಟ ಜಾತಿ ಸಮುದಾಯದ ನಾಯಕರು ಸಿಹಿ ಹಂಚಿ ಸಂಭ್ರಮಿಸಿದರು, ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಒಳಮೀಸಲಾತಿ ಬೇಗುದಿಗೆ ಕೊನೆಗೂ ತೆರೆ ಎಳೆಯಲ್ಪಟ್ಟಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ನಿರ್ಧಾರಕ್ಕೆ ಸರ್ವಾನುಮತದಿಂದ ಒಪ್ಪಿಗೆ ದೊರೆತಿದೆ ಎಂದು ಹೇಳಿದರು. ಪರಿಶಿಷ್ಟ ಜಾತಿ ಸಂಘ–ಸಂಸ್ಥೆಗಳು ಸಹ ಇದಕ್ಕೆ ಬೆಂಬಲ ನೀಡಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಕೆ.ಹೆಚ್. ಮುನಿಯಪ್ಪ ಅವರು, ಇದು ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ದಿನ ಎಂದು ಅಭಿಪ್ರಾಯಪಟ್ಟರು. 40 ವರ್ಷಗಳ ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದರು.
ಮುನಿಯಪ್ಪ ಅವರು, ಬಸವಣ್ಣವರ ಸಮಾನತೆ ತತ್ವವನ್ನು ಸರ್ಕಾರ ಕಾರ್ಯರೂಪಕ್ಕೆ ತಂದಿದೆ ಎಂದು ಹೇಳಿದರು. ಎಲ್ಲರೂ ಸಮಾನವಾಗಿ ಬದುಕಬೇಕು ಎಂಬ ಮುಖ್ಯಮಂತ್ರಿಗಳ ಬದ್ಧತೆ ಈಗ ಕಾರ್ಯರೂಪಕ್ಕೆ ಬಂದಿದೆ ಎಂದು ಅಭಿಪ್ರಾಯಪಟ್ಟರು ಅಲ್ಲದೆ ಈ ಪ್ರಕ್ರಿಯೆಯಲ್ಲಿ ಕಾನೂನು ಸಚಿವರು, ಗೃಹ ಸಚಿವರು ಹಾಗೂ ಮಹಾದೇವಪ್ಪ ಸೇರಿದಂತೆ ಹಲವು ಸಚಿವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಪ್ರಶಂಸಿಸಿದರು.ಎಡಗೈ–ಬಲಗೈ ವಿವಾದಕ್ಕೂ ಇದರಿಂದ ಅಂತ್ಯ ಕಂಡತಾಯಿತು.
ಹಳೆಯ ಆದೇಶದಲ್ಲಿ ಹೆಚ್ಚಿನ ಪ್ರಮಾಣದ ಮೀಸಲಾತಿ ಕೆಲವು ವಿಭಾಗಗಳಿಗೆ ನೀಡಲಾಗಿದ್ದರೆ, ಹೊಸ ಆದೇಶದಲ್ಲಿ ಸಮಾನ ಹಂಚಿಕೆ ಮೂಲಕ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗಿದೆ.
ಹಳೆಯ ಆದೇಶದ ದಿನಾಂಕಗಳು 28-12-2022 ಮತ್ತು 25-08-2025 ಎಂದು ದಾಖಲಾಗಿದ್ದು, ಈ ಅವಧಿಯಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತಂತೆ ಸರ್ಕಾರದ ನಿರ್ಧಾರಗಳು ಜಾರಿಯಲ್ಲಿದ್ದವು.
ಹೊಸ ಆದೇಶವು 2026ರಲ್ಲಿ ಜಾರಿಗೊಂಡಿದ್ದು, ಎಡಗೈ, ಬಲಗೈ ಹಾಗೂ ಸ್ಪೃಶ್ಯ–ಅಲೆಮಾರಿ ಸಮುದಾಯಗಳಿಗೆ ಸಮಾನ ಹಂಚಿಕೆ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ.
ಹಳೆಯ ಆದೇಶದಲ್ಲಿ ಕೆಲವು ವಿಭಾಗಗಳಿಗೆ ಹೆಚ್ಚಿನ ಮೀಸಲಾತಿ ನೀಡಲಾಗಿದ್ದರೆ, ಹೊಸ ಆದೇಶದಲ್ಲಿ ಸಮಾನ ಹಂಚಿಕೆ ಮೂಲಕ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗಿದೆ. ಹೀಗಾಗಿ, ಹಳೆಯ ಮತ್ತು ಹೊಸ ಮೀಸಲಾತಿ ನೀತಿಗಳ ಹೋಲಿಕೆಯಲ್ಲಿ, ಹೊಸ ಆದೇಶವು ಸಾಮಾಜಿಕ ನ್ಯಾಯದ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆದಂತಾಗಿದೆ.




Comments
Leave a Comment