ದೈವದ ಭಂಡಾರ ಮೆರವಣಿಗೆಯಲ್ಲಿ ಅವಘಡ: ಪಲ್ಲಕ್ಕಿ ಕಾಲು ಸಂಕ ಮುರಿದು ಬಿದ್ದು ಎಂಟು ಮಂದಿಗೆ ಗಾಯ
ದೈವದ ಭಂಡಾರ ಮೆರವಣಿಗೆಯಲ್ಲಿ ಅವಘಡ: ಪಲ್ಲಕ್ಕಿ ಕಾಲು ಸಂಕ ಮುರಿದು ಬಿದ್ದು ಎಂಟು ಮಂದಿಗೆ ಗಾಯ
From : Jayaram Udupi
ಮಂಗಳೂರು :
ದೈವದ ಭಂಡಾರ ಮೆರವಣಿಗೆ ವೇಳೆ ಕಾಲು ಸಂಕ ಮುರಿದು ಬಿದ್ದು ಅವಘಡ ಸಂಭವಿಸಿದ್ದು ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪುಚ್ಚೆಮೊಗರು ಬಾವದಬೈಲು ಎಂಬಲ್ಲಿ ಈ ಘಟನೆ ನಡೆದಿದೆ.
ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೈವದ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮನೇಮಕ್ಕೆ ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ಅವಘಡ ಸಂಭವಿಸಿದೆ.
ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೊಂಬು ಮತ್ತು ಬ್ಯಾಂಡ್ ವಾದ್ಯಗಳೊಂದಿಗೆ ಭಂಡಾರದ ಮೆರವಣಿಗೆ ನಡೆಯುತ್ತಿತ್ತು.
ಕಾಲು ಸಂಕ ಏಕಾಏಕಿ ಮುರಿದು ಪಲ್ಲಕ್ಕಿ ಉರುಳಿ ಬಿತ್ತು.ಆಗ ಅದನ್ನು ಹೊತ್ತವರು ಕೂಡ ಕೆಳಗೆ ಬಿದ್ದರು.
ಅವಘಡದಲ್ಲಿ ಸುನಿಲ್ ಶೆಟ್ಟಿ (ಮಾರೂರು), ಲೋಕೇಶ್ ಭಂಡಾರಿ ಸೇರಿದಂತೆ
ಪಲ್ಲಕ್ಕಿ ಹೊತ್ತವರನ್ನೂ ಒಳಗೊಂಡು ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.
ಕಾಲು ಸಂಕ ಮುರಿದಾಗ ಅದರ ಬೀಮ್ ಪಲ್ಲಕ್ಕಿ ಹೊತ್ತವರ ಮೇಲೆ ಬಿತ್ತು.
ಪಲ್ಲಕ್ಕಿಯಲ್ಲಿದ್ದ ಮೊಗಮೂರ್ತಿ ಹಾಗೂ ಇತರ ಧಾರ್ಮಿಕ ಪರಿಕರಗಳಿಗೆ ಹಾನಿಯಾಗಿದೆ.






Comments
Leave a Comment