ನಮ್ಮ ಪಕ್ಷವನ್ನ ಏನೆಂದುಕೊಡಿದ್ದೀರಾ.? ಸಿಪಿ ಯೋಗೇಶ್ವರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ
ರಾಮನಗರ, ಚನ್ನಪಟ್ಟಣ : ಉಪಚುನಾವಣೆ ಬಳಿಕ ಚನ್ನಪಟ್ಟಣದಲ್ಲಿ ನಡೆದ ರಾಜಕೀಯ ಬೆಳವಣಿಗೆಯನ್ನ ಗಮನಿಸಿದ್ದೇನೆ. ಇತ್ತೀಚಿಗೆ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಯಾಗಿದೆ. ನೀವು ನಾವೆಲ್ಲ ಒಂದೇ ಬಾರಣ್ಣ ಅಂತ್ತಿದ್ದಾರೆ. ಸ್ವಾರ್ಥಕ್ಕೆ, ನಿಮಗೆ ಬೇಕಾದಾಗ ಪಕ್ಷವನ್ನ ನೀವು ಬಿಟ್ಟೋದ್ರಿ. ನಮ್ಮ ಪಕ್ಷವನ್ನ ಏನೆಂದುಕೊಡಿದ್ದೀರಾ.? ಎಂದು ಶಾಸಕರ ಹೆಸರೇಳದೆ ಸಿಪಿ ಯೋಗೇಶ್ವರ್ ಅವರಿಗೆ ತಿರುಗೇಟು ನೀಡಿದರು.
ಚನ್ನಪಟ್ಟಣದಲ್ಲಿ BLA-2 ಸಭೆಯಲ್ಲಿ ಮಾತನಾಡಿದ ಅವರು, ಮತ್ತೆ ರಾಜ್ಯದಲ್ಲಿ 2028ಕ್ಕೆ NDA ಸರ್ಕಾರ ಬರುತ್ತೆ. ಬಿಜೆಪಿ ಬೇರೆ, ನಾವು ಬೇರೆಯಲ್ಲ ನಾವೆಲ್ಲ ಒಂದೇ ಎಂದು ಹೇಳಿಕೊಂಡು ರಾಜಕೀಯ ಮಾಡಿದ್ದಾರೆ. ಅದಕ್ಕೆ ದಯಮಾಡಿ ಮರುಳಾಗಬೇಡಿ ಎಂದು ಸಿಪಿವೈ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಾನು ಕಷ್ಟ ಕಾಲದಲ್ಲಿ ನಿಮಗೋಸ್ಕರ ಬಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೆ. ನಾನು ಮೂರು ಭಾರೀ ಚುನಾವಣೆ ಸೋತ ನಂತರವೂ 72 ಕ್ಷೇತ್ರ ರಾಜ್ಯ ಪ್ರವಾಸ ಮಾಡಿದ್ದೇನೆ ಈ ಒಂದು ತಿಂಗಳು ಮತದಾರರ ಪರಿಷ್ಕರಣೆ ಸಂದರ್ಭದಲ್ಲಿ ಕಾಲ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ. ಗ್ರಾಮದ ಹಿರಿಯರು ಜತೆ ಕೂತು ಚರ್ಚೆ ಮಾಡಿ. ಇದೊಂದು ಉತ್ತಮ ಅವಕಾಶ ಎಂದು ಮುಖಂಡರಿಗೆ ಮಾನವಿ ಮಾಡಿದ್ರು.
ನನಗೆ ಪಕ್ಷ ಮುಖ್ಯ, ಕಾರ್ಯಕರ್ತರು ಮುಖ್ಯ. ಕರ್ನಾಟಕ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ 25 ವರ್ಷದ ಬೆಳ್ಳಿ ಮಾಡುತ್ತಿರುವ ಏಕೈಕ ಪಕ್ಷ ಜೆಡಿಎಸ್. ಇದಕ್ಕೆ ನಿಮ್ಮಂಥ ನಿಷ್ಠಾವಂತ ಕಾರ್ಯಕರ್ತರಿಂದ ಸದ್ಯ ಎಂದರು.




Comments
Leave a Comment