PRABHAVAA.COM

ಮಿನಾಮಿಡದಿಂದ 70 ಕೋಟಿ, ಟಿಎಚ್ಎಸ್ ಸ್ಪ್ರಿಂಗ್ಸ್ 50 ಕೋಟಿ ರೂ. ಹೂಡಿಕೆ

Bengaluru Urban:

Font size:

ಜಪಾನ್ ಪ್ರವಾಸದಲ್ಲಿರುವ ಕೈಗಾರಿಕಾ ಸಚಿವ ಎಂ ಬಿ ಪಾಟೀಲ

ಜಪಾನ್ ಪ್ರವಾಸದಲ್ಲಿರುವ ಕೈಗಾರಿಕಾ ಸಚಿವ ಎಂ ಬಿ ಪಾಟೀಲ

ಮಿನಾಮಿಡದಿಂದ 70 ಕೋಟಿ, ಟಿಎಚ್ಎಸ್ ಸ್ಪ್ರಿಂಗ್ಸ್ 50 ಕೋಟಿ ರೂ. ಹೂಡಿಕೆ

ಎರಡೂ ಕಂಪನಿಗಳಿಗೆ ತುಮಕೂರಿನಲ್ಲಿ ಅಗತ್ಯ ಜಾಗದ ಪೂರೈಕೆ

ಬೆಂಗಳೂರು: ಕೋಲ್ಡ್ ಫೋರ್ಜಿಂಗ್ ಮತ್ತು ವಾಹನಗಳ ಚಾಸಿಸ್ ಗಳಿಗೆ ಅಗತ್ಯವಿರುವ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ ತಯಾರಿಕೆಗೆ ಹೆಸರಾಗಿರುವ ಜಪಾನಿನ ಮಿನಾಮಿಡ ಕಂಪನಿಯು ರಾಜ್ಯದಲ್ಲಿ ಒಟ್ಟು ಐದು ವರ್ಷಗಳಲ್ಲಿ 70 ಕೋಟಿ ರೂ. ಬಂಡವಾಳ ಹೂಡಲಿದೆ. ಈ ಕಂಪನಿಗೆ ತುಮಕೂರು ಮಶೀನ್ ಟೂಲ್ ಪಾರ್ಕ್ ಪ್ರದೇಶದಲ್ಲಿ 7.25 ಎಕರೆ ಜಾಗ ಕೊಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಬಂಡವಾಳ ಆಕರ್ಷಿಸಲೆಂದು ಜಪಾನ್ ಪ್ರವಾಸಕ್ಕೆ ತೆರಳಿರುವ ಅವರು ಮಿನಾಮಿಡ ಸೇರಿದಂತೆ ಪೆಗಾಸಸ್, ಹಿರಾವೊಕ, ಸುಜಿಕಾವ, ಮಿಹಾನ್ ಶಿಂಕು, ಟಿಎಚ್ಎಸ್ ಸ್ಪ್ರಿಂಗ್ಸ್ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಆಟೋಮೋಟಿವ್ ಬಿಡಿಭಾಗಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಟಿಎಚ್ಎಸ್ ಸ್ಪ್ರಿಂಗ್ಸ್ ಕಂಪನಿ ಕೂಡ ಕರ್ನಾಟಕದಲ್ಲಿ 50 ಕೋಟಿ ರೂ. ಬಂಡವಾಳ ಹೂಡುತ್ತಿದೆ. ಈ ಕಂಪನಿಗೆ ಕೂಡ ತುಮಕೂರಿನಲ್ಲಿ 2 ಎಕರೆ ಜಾಗ ಕೊಡಲಾಗುತ್ತಿದೆ. ಇದು ಕಂಪನಿಯ ಮೊದಲನೇ ಹಂತದ ಹೂಡಿಕೆಯಾಗಿದೆ ಎಂದಿದ್ದಾರೆ.

ಮಿನಾಮಿಡ ಕಂಪನಿಯ ತಯಾರಿಕಾ ಘಟಕದಿಂದ 50 ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಸಂಬಂಧ ಅದು 2025ರ ಅಕ್ಟೋಬರಿನಲ್ಲೇ ಸರಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ. ಈಗಿನ ಗಡುವಿನ ಪ್ರಕಾರ, 2027ರ ಡಿಸೆಂಬರ್ ಹೊತ್ತಿಗೆ ತಯಾರಿಕಾ ಘಟಕವು ತನ್ನ ಚಟುವಟಿಕೆ ಆರಂಭಿಸಲಿದೆ. ಇದು ಕಂಪನಿಯ 2 ಮತ್ತು 3ನೇ ಹಂತಗಳ ವಿಸ್ತರಣೆಯ ಭಾಗವಾಗಿದೆ ಎಂದು ಅವರು ತಿಳಿಸಿದ್ದಾರೆ.

ಗಾರ್ಮೆಂಟ್ಸ್ ಮತ್ತು ಜವಳಿ ವಲಯಕ್ಕೆ ಬೇಕಾದ ಹೊಲಿಗೆ ಯಂತ್ರಗಳನ್ನು ತಯಾರಿಸುವ ಪೆಗಾಸಸ್ ಕಂಪನಿ ಕೂಡ ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರಿಸಿದೆ. ಈ ಕಂಪನಿಯು ಈಗಾಗಲೇ ಜಪಾನ್, ಚೀನಾ, ವಿಯಟ್ನಾಂ ಮತ್ತು ಮೆಕ್ಸಿಕೋದಲ್ಲಿ ತಯಾರಿಕಾ ಘಟಕಗಳನ್ನು ಹೊಂದಿದೆ. ಕಂಪನಿಯು ದಕ್ಷಿಣ ಕೊರಿಯಾ, ಜಪಾನ್ ಮತ್ತು ಭಾರತದ ಕಂಪನಿಗಳಿಗೆ ಬೇಕಾದ ಡೈಕಾಸ್ಟಿಂಗ್ ಸೇರಿದಂತೆ ಆಟೋಮೋಟೀವ್ ಬಿಡಿಭಾಗಗಳನ್ನು ರಾಜ್ಯದಲ್ಲಿ ತಯಾರಿಸಿ, ಪೂರೈಕೆ ಮಾಡಲು ಒಲವು ಹೊಂದಿದೆ ಎಂದು ಅವರು ನುಡಿದಿದ್ದಾರೆ.

ಹಿರಾವೋಕ ಕಂಪನಿಯು ರಬ್ಬರ್ ಮೌಲ್ಡ್ ಮತ್ತು ಪ್ರಿಸಿಷನ್ ಮಶೀನಿಂಗ್ ತಯಾರಿಕೆಗೆ ಪ್ರಸಿದ್ಧವಾಗಿದ್ದು, ಭಾರತದಲ್ಲಿ ಸೂಕ್ತ ಸಹಭಾಗಿತ್ವವನ್ನು ಶೋಧಿಸುತ್ತಿದೆ. ಜಪಾನಿನಲ್ಲಿ ಸಕ್ರಿಯವಾಗಿರುವ ಮೌಲ್ಡ್ ಮತ್ತು ಡೈ ಕೈಗಾರಿಕೆಗಳ ಒಕ್ಕೂಟದ ಭಾಗವಾಗಿರುವ ಕಂಪನಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ಕರೆತರುವ ಭರವಸೆಯನ್ನು ಅದು ನೀಡಿದೆ ಎಂದು ಸಚಿವರು ವಿವರಿಸಿದ್ದಾರೆ.

ಮಾತುಕತೆಯಲ್ಲಿ ಮಿನಾಮಿಡ ಪರವಾಗಿ ಸಿಇಒ ತಕೇಶಿ ಮಿನಾಮಿಡ, ಡಿಜಿಎಂ ಸುರೇಶ್ ರಾಮನ್, ಪೆಗಾಸಸ್ ಆಧ್ಯಕ್ಷ ಶಿಗೆಮಿ ಮಿಮ, ವ್ಯವಸ್ಥಾಪಕ ನಿರ್ದೇಶಕ ಮಿಸಾಮಿಚಿ ಮಿಮ, ಹಿರಾವೊಕ ಅಧ್ಯಕ್ಷ ಮತ್ತು ಸಿಇಒ ಹಿರಾವೊಕ ರೈಸುಕಿ, ಸುಜಿಕಾವ ನಿರ್ದೇಶಕ ಯಮಡ ತೊಮೊಕುಝು ಮತ್ತು ಕಾನೂನು ಸಲಹೆಗಾರ ತುಷಾರ್ ಅಸ್ರಾನಿ, ಮಿಹಾನ್ ಪರವಾಗಿ ಡಿಜಿಎಂ ಮೊಟೊಮಸ ನಿಶಿಯುರ, ಟಿಎಚ್ಎಸ್ ಸ್ಪ್ರಿಂಗ್ಸ್ ಸಿಇಒ ದೈಸುಕಿ ಹಶಿಮೊಟೊ ಮತ್ತು ಮಸನೋರಿ ಯಮಾಮೋಟೋ ಪಾಲ್ಗೊಂಡಿದ್ದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಖುಷ್ಬೂ ಗೋಯಲ್ ಕೂಡ ಉಪಸ್ಥಿತರಿದ್ದರು.

Comments

Leave a Comment

Prev Post ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಸ್ಥಾಪನೆ ಬಂಗಾರದ ಕೆಲಸ: ಸಚಿವ ಮಧು ಬಂಗಾರಪ್ಪ
Next Post "ಅರ್ಧರಾತ್ರಿ ಭೂಮಿ ವೀಕ್ಷಣೆಗೆ ಸಿಎಂ ಹೋಗಿದ್ದರಾ? ಸತ್ಯ-ಸುಳ್ಳು ಮುಖ್ಯಮಂತ್ರಿಗಳೇ ಹೇಳಲಿ: ಹೆಚ್.ಡಿ. ಕುಮಾರಸ್ವಾಮಿ"

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News