ಮಹಾದಾನಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಅವರಿಂದ "ಯಕ್ಷಧ್ರುವ ಪಟ್ಲ ದಶಮ ಸಂಭ್ರಮದ" ಶುಭ ಸಂದರ್ಭದಲ್ಲಿ ಫೌಂಡೇಶನ್ ಗೆ 3 ಕೋಟಿ ರೂಪಾಯಿ ದೇಣಿಗೆ

Mangalore:

Font size:

ಮಹಾದಾನಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಅವರಿಂದ "ಯಕ್ಷಧ್ರುವ ಪಟ್ಲ ದಶಮ ಸಂಭ್ರಮದ" ಶುಭ ಸಂದರ್ಭದಲ್ಲಿ ಫೌಂಡೇಶನ್ ಗೆ 3 ಕೋಟಿ ರೂಪಾಯಿ ದೇಣಿಗೆ

From ; Jayaram Udupi

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಅಭೂತಪೂರ್ವ ಕಾರ್ಯವೈಖರಿಯನ್ನು ಮೆಚ್ಚಿ ಫೌಂಡೇಶನ್ ನ ಗೌರವಾಧ್ಯಕ್ಷರಾದ ಮಹಾದಾನಿ, ಡಾ ಕೆ ಸದಾಶಿವ ಶೆಟ್ಟಿ ಯವರು ಫೌಂಡೇಶನ್ ಟ್ರಸ್ಟ್ ಗೆ ಮೂರು ಕೋಟಿ ರೂಪಾಯಿಗಳ ದೊಡ್ಡ ದೇಣಿಗೆಯನ್ನು ಘೋಷಿಸಿದ್ದಾರೆ. ಕನ್ಯಾನ ಸದಾಶಿವ ಶೆಟ್ಟಿಯವರು ಪಟ್ಲ ಫೌಂಡೇಶನ್ನಿನ ಗೌರವಾಧ್ಯಕ್ಷರಾದ ನಂತರ ಟ್ರಸ್ಟಿನ ಕಾರ್ಯ ಯೋಜನೆಗಳು ನಾಗಾಲೋಟದಲ್ಲಿ ಮುಂದುವರಿಯುತ್ತಿದ್ದು ಕಲಾಭಿಮಾನಿಗಳ, ಸಂಘಟಕರಿಂದ ಪ್ರಶಂಸೆಯ ಸುರಿಮಳೆ ಹರಿದು ಬರುತ್ತಿದೆ.
ಕಳೆದ ಫೆಬ್ರವರಿ ತಿಂಗಳಲ್ಲಿ ಗೋಲ್ಡ್ ಪಿಂಚ್ ಹೋಟೆಲ್ ನಲ್ಲಿ "ಪಟ್ಲ ದಶಮ" ಸಂಭ್ರಮದ ಸಮಾಲೋಚನಾ ಸಭೆಯ ದಿನದಂದು ಫೌಂಡೇಶನ್ ನ ಎಲ್ಲಾ ಮಹಾದಾನಿಗಳು, ಮತ್ತು ಫೌಂಡೇಶನ್ ನ ಪದಾಧಿಕಾರಿಗಳ ಸಮ್ಮುಖದಲ್ಲಿ ಪಟ್ಲ ಫೌಂಡೇಶನ್ ನ ದಶಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಎಂಆರ್ ಜಿ ಗ್ರೂಪ್ ನ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಮತ್ತು ಅಧ್ಯಕ್ಷರಾಗಿ ಬರೋಡ ಶಶಿಧರ ಶೆಟ್ಟಿ ಅವರು ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ದಶಮಾನೋತ್ಸವದ ಮುಖ್ಯ ಧ್ಯೇಯವಾಗಿ ಕನಿಷ್ಠ 10 ಕೋಟಿ ರೂಪಾಯಿ ಆದರೂ ಈ ವರ್ಷ ದೇಣಿಗೆ ಸಂಗ್ರಹ ಆಗಬೇಕೆಂದು ಎಲ್ಲಾ ದಾನಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು

ಅದರಂತೆ ಬರೋಡ ಶಶಿಧರ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿದ ಮಹಾದಾನಿಗಳಾದ ಡಾ. ಕೆ ಸದಾಶಿವ ಶೆಟ್ಟಿ ಅವರು ಫೌಂಡೇಶನ್ ಗೆ ತನ್ನ ದೇಣಿಗೆಯನ್ನು ಮೂರು ಕೋಟಿ ರೂಪಾಯಿಗೆ ಹೆಚ್ಚಿಸಿದರು.

Prev Post ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಪ್ರಾರಂಭಿಸಿ - ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ
Next Post ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ ಮಹತ್ವದ ಸಭೆ