ರ್ವತ್ರಿಕ ವರ್ಗಾವಣೆ ಮಾರ್ಗಸೂಚಿ ಪ್ರಕಟ ದಿನಾಂಕ: ೦೯.೦೫.೨೦೨೫ರ ಸಚಿವ ಸಂಪುಟದ ನಿರ್ಣಯಗಳು
ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿ ಪ್ರಕಟ
ದಿನಾಂಕ: ೦೯.೦೫.೨೦೨೫ರ ಸಚಿವ ಸಂಪುಟದ ನಿರ್ಣಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ಕಾನೂನು ಸಚಿವ ಹೆಚ್ ಕೆ ಪಾಟೀಲ್ ವಿವರಣೆ ನೀಡಿದರು.
ಸಾಮಾಜಿಕ ಸಮಿಕ್ಷಾ ವರದಿ ನಿರ್ಣಯ ಮುಂದೂಡಿಕೆ
ದಿನಾಂಕ: ೨೯.೦೨.೨೦೨೪ ರಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯಾಧ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ೫೪ ಮಾನದಂಡಗಳಿಗೆ ಅನುಗುಣವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ೨೦೧೫ರ ದತ್ತಾಂಶಗಳ ಅಧ್ಯಯನ ೨೦೨೪ ಮತ್ತು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ೨೦೧೫ರ ಅಂಕಿ-ಅAಶಗಳನ್ನು ಒಳಗೊಂಡ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿತ್ತು. ಮುಚ್ಚಿದ ಲಕೋಟೆಯನ್ನು ಸಚಿವ ಸಂಪುಟದಲ್ಲಿ ತೆರೆಯಲಾಗಿತ್ತು. ದತ್ತಾಂಶ ಹಾಗೂ ಅಧ್ಯಯನ ವರದಿ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ಸಚಿವ ಸಂಪುಟದ ಮುಂದೆ ಮಂಡಿಸಲಾಗಿತ್ತು ಈ ವಿಷಯವನ್ನು ಮುಂದಿನ ಸಂಪುಟ ಸಭೆಗೆ ಮುಂದೂಡಲಾಯಿತು.
**********
ಕೆ.ಎ.ಟಿ ತೀರ್ಪಿನ ವಿರುದ್ಧ ಮೇಲ್ಮನವಿ
ಸರ್ಕಾರವು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿ ಸಂಖ್ಯೆ: ೫೧೮೧೯/೨೦೧೯ ತಿರಸ್ಕೃತಗೊಂಡಿರುವುದರಿAದ, ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಅರ್ಜಿ ಸಂಖ್ಯೆ: ೫೭೦೪/೨೦೧೨ ರಲ್ಲಿ ದಿನಾಂಕ: ೧೪.೧೨.೨೦೧೭ ರಂದು ನೀಡಿರುವ ತೀರ್ಪಿನಂತೆ ಶ್ರೀ ಎಸ್.ಸುರೇಶ್, ಸರ್ಕಾರಿ ಸೇವೆಯಿಂದ ವಜಾಗೊಂಡಿರುವ ಉಪ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಇವರನ್ನು ಸರ್ಕಾರಿ ಸೇವೆಗೆ ಪುನರ್ ಸ್ಥಾಪಿಸುವ ಬದಲು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಶ್ರೀ ಎಸ್.ಸುರೇಶ್ ರವರ ವಜಾ ಆದೇಶವನ್ನು ಕರ್ನಾಟಕ ಆಡಳಿತ ಮಂಡಳಿಯು ರದ್ದುಗೊಳಿಸಿ ತೀರ್ಪು ನೀಡಿದೆ. ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಉಚ್ಛ ನ್ಯಾಯಾಲಯವು ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಶ್ರೀ ಎಸ್.ಸುರೇಶ್ ರವರನ್ನು ಸೇವೆಗೆ ಪುನರ್ ಸ್ಥಾಪಿಸಲು ಪ್ರಸ್ತಾಪಿಸಿ, ಮಂಡಿಸಲಾಗಿತ್ತು.
*********
ಅಂಗವಿಕಲರಿಗೆ ಶೇ.೪ ರಷ್ಟು ಮೀಸಲಾತಿ
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ೨೦೧೬ ರಲ್ಲಿ ಪರಿಭಾಷಿಸಲಾಗಿರುವ ಎದ್ದುಕಾಣುವ ಅಂಗವೈಕಲ್ಯವುಳ್ಳ ಅಧಿಕಾರಿಗಳಿಗೆ ಗುಂಪು-ಬಿ ಮತ್ತು ಗುಂಪು-ಎ (ಕಿರಿಯ ಶ್ರೇಣಿ) ಹುದ್ದೆಗಳಲ್ಲಿ ಮುಂಬಡ್ತಿಯಲ್ಲಿ ಶೇ.೪ ರಷ್ಟು ಮೀಸಲಾತಿ ಕಲ್ಪಿಸಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಸಚಿವರು ವಿವರಿಸಿದರು.
********
ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿ ಪ್ರಕಟ
೨೦೨೫-೨೬ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿಗಳನ್ನು ಹೊರಡಿಸಲು ಮತ್ತು ಸದರಿ ಮಾರ್ಗಸೂಚಿಯನ್ನು ಪರಿಷ್ಕರಿಸಲು ಹಾಗೂ ವರ್ಗಾವಣಾ ಅವಧಿಯನ್ನು ವಿಸ್ತರಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಸಚಿವರು ವಿವರಿಸಿದರು.
ಆಯಾ ವೃಂದಗಳ ಕಾರ್ಯನಿರತ ವೃಂದ ಬಲದ ಶೇ.೬ನ್ನು ಮೀರದಂತೆ ದಿ:೧೫.೦೫.೨೦೨೫ ರಿಂದ ೧೪.೦೬.೨೦೨೫ ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ ಅಧಿಕಾರಿಗಳಿಗೆ ಸಂಬAಧಿಸಿದAತೆ ಆಯಾ ಇಲಾಖಾ ಸಚಿವರಿಗೆ ಹಾಗೂ ಗ್ರೂಪ್ ‘ಸಿ’ ಮತ್ತು ‘ಡಿ’ ವೃಂಧದ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ಪ್ರತ್ಯಾಯೋಜಿಸಲು ಪ್ರಸ್ತಾಪಿಸಲಾಗಿದೆ.
********
ಸರ್ಕಾರಿ ಸೇವೆಯಿಂದ ಡಾ. ಬಾಲಕೃಷ್ಣ ವಜಾ
ಡಾ|| ಜಿ.ಎಸ್.ಬಾಲಕೃಷ್ಣ, ಪ್ರಸೂತಿ ತಜ್ಞರು, ಸಾರ್ವಜನಿಕ ಆಸ್ಪತ್ರೆ ಕೊಪ್ಪ, ಚಿಕ್ಕಮಗಳೂರು ಜಿಲ್ಲೆ ಇವರು ಕುಮಾರಿ. ಕಲ್ಪನ ಎಂಬ ಗರ್ಭಿಣಿಗೆ ದಿ:೧೪.೦೩.೨೦೨೦ ರಂದು ಹೆರಿಗೆ ಮಾಡಿಸಿ, ಅವರಿಗೆ ಜನಿಸಿದ ಹೆಣ್ಣು ಮಗುವನ್ನು ರೂ.೫೦,೦೦೦/- ಗಳಿಗೆ ಶ್ರೀಮತಿ ಪ್ರೇಮಲತಾ ಎಂಬುವವರಿಗೆ ಮಾರಾಟ ಮಾಡಿ, ಶ್ರೀಮತಿ. ಪ್ರಮಲತಾ ಎಂಬುವವರಿಗೆ ಹೆರಿಗೆಯಾದಂತೆ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿರುವ ಆರೋಪಕ್ಕಾಗಿ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆಯಲ್ಲಿ ದುರ್ನಡತೆಯ ಆರೋಪವು ಸಾಬೀತಾಗಿರುವುದರಿಂದ, ಇವರನ್ನು ಕೆಸಿಎಸ್ (ಸಿಸಿಎ) ನಿಯಮಗಳು ೧೯೫೭ರ ನಿಯಮ ೮(vi) ರಡಿಯಲ್ಲಿ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ದಂಡನೆಯನ್ನು ವಿಧಿಸಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಮಾನ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ವಿವರಿಸಿದರು.
ಪ್ರಸ್ತಾಪಿತ ಪ್ರಕರಣದಲ್ಲಿ ಕುಮಾರಿ ಕಲ್ಪನ ಎಂಬ ಗರ್ಭಿಣಿಗೆ ದಿ:೧೪.೦೩.೨೦೨೦ ರಂದು ಹೆರಿಗೆ ಮಾಡಿಸಿ, ಅವರಿಗೆ ಜನಿಸಿದ ಹೆಣ್ಣು ಮಗುವನ್ನು ಶ್ರೀಮತಿ ಪೇಮಲತಾ ಎಂಬುವವರಿಗೆ ಮಾರಾಟ ಮಾಡಿ ಶ್ರೀಮತಿ ಪ್ರೇಮಲತಾ ಎಂಬುವವರಿಗೆ ಹೆರಿಗೆಯಾದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ದುರ್ನಡತೆ ಸಾಬೀತಾಗಿರುವುದರಿಂದ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲು ತೀರ್ಮಾನಿಸಿದೆ.
*******
ಇ.ಎಸ್.ಐ ವೃಂದ ನೇಮಕಾತಿಗಳ ಅನುಮೋದನೆ
ಕರಡು ಕರ್ನಾಟಕ ಕಾರ್ಮಿಕ ರಾಜ್ಯ ವಿಮಾ ಯೋಜನೆ (ವೈದ್ಯಕೀಯ) ಸೇವೆಗಳ (ನೇಮಕಾತಿ) ನಿಯಮಗಳು ೨೦೨೫ನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿ ಭಾದಿತರಾಗಬಹುದಾದಂತಹ ವ್ಯಕ್ತಿಗಳಿಂದ ಸಲಹೆ/ ಆಕ್ಷೆಪಣೆಗಳನ್ನು ಆಹ್ವಾನಿಸಲು; ಮತ್ತು ಸಲಹೆ/ಆಕ್ಷೇಪಣೆಗಳು ಸ್ವೀಕೃತವಾಗದಿದ್ದಲ್ಲಿ ಅಥವಾ ಸ್ವೀಕೃತವಾದ ಸಲಹೆ / ಆಕ್ಷೇಪಣೆಗಳನ್ನು ಪರಿಗಣಿಸಿ ಕರಡು ನಿಯಮಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳು ಇಲ್ಲದಿದ್ದಲ್ಲಿ ಮತ್ತೊಮ್ಮೆ ಸಚಿವ ಸಂಪುಟದ ಮುಂದೆ ಮಂಡಿಸದೆ ಸದರಿ ನಿಯಮಗಳನ್ನು ಇಲಾಖಾ ಹಂತದಲ್ಲಿಯೇ ಅಂತಿಮಗೊಳಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ವಿವರಿಸಿದರು.
ಹಿಂದಿನ ವೃಂದ ಮತ್ತು ನೇಮಕಾತಿ ನಿಯಮಗಳನ್ನು ೨೦೦೭ ರಲ್ಲಿ ಪರಿಷ್ಕರಣೆ ಮಾಡಲಾಗಿದೆ. ೧೦ ವರ್ಷಗಳಿಗೊಮ್ಮೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಿಸುವುದು ಕಡ್ಡಾಯವಾಗಿದೆ. ೧೭ ವರ್ಷಗಳಾಗಿದ್ದರೂ ಇಎಸ್‌ಐಎಸ್ ನ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಂಪೂರ್ಣವಾಗಿ ಮರುಪರಿಶೀಲಿಸಲಾಗಿಲ್ಲ. ಹೊಸದಾಗಿ ಸೃಜಿಸಲಾದ ಹುದ್ದೆಗಳ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಲು ಪ್ರಸ್ತಾಪಿಸಲಾಗಿದೆ.
********
ಕಾರವಾರ ಮೆಡಿಕಲ್ ಕಾಲೇಜ್ ಪೀಠೋಪಕರಣಗಳ ಖರೀದಿಗೆ ಒಪ್ಪಿಗೆ
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಿಸಿರುವ ೪೫೦ ಹಾಸಿಗೆಗಳ ಹೊಸ ಆಸ್ಪತ್ರೆಗೆ ಅವಶ್ಯವಿರುವ ವೈದ್ಯಕೀಯ ಯಂತ್ರೋಪಕರಣಗಳು ಹಾಗೂ ಪೀಠೋಪಕರಣಗಳನ್ನು ರೂ.೨೬.೯೮ ಕೋಟಿಗಳ ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಸಚಿವರು ವಿವರಿಸಿದರು.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ೪೫೦ ಹಾಸಿಗೆಗಳ ಹೊಸ ಆಸ್ಪತ್ರೆಯ ಕಟ್ಟಡ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು, ಸದರಿ ಆಸ್ಪತ್ರೆಯನ್ನು ಸಾರ್ವಜನಿಕ ಸೇವೆಗೆ ಅರ್ಪಿಸುವ ಮೂಲಕ ಜಿಲ್ಲೆಯ ಬಡ ರೋಗಿಗಳ ಮತ್ತು ವಿದ್ಯಾರ್ಥಿಗಳ ಕಲಿಕೆ ಸಾಮರ್ಥ್ಯವನ್ನು ಹೆಚ್ಚಿಸಲು ಆಸ್ಪತ್ರೆಯ ವಿಭಾಗವಾರು ಮತ್ತು ಪೀಠೋಪಕರಣಗಳ ಪರಿಷ್ಕೃತ ಸಂಕ್ಷಿಪ್ತ ಬೇಡಿಕೆಯನ್ನು ಪ್ರಸ್ತಾಪಿಸಲಾಗಿದೆ.
********
ಸರ್ಕಾರಿ ಸೇವೆಯಿಂದ ವಜಾ
ಶ್ರೀ ಬಿ.ಪದ್ಮನಾಭ, ಹಿಂದಿನ ಅಧೀಕ್ಷಕ ಇಂಜಿನಿಯರ್, ಹೇಮಾವತಿ ಕಾಲುವೆ ವೃತ್ತ, ಚನ್ನರಾಯಪಟ್ಟಣ, ಹಾಸನ ಜಿಲ್ಲೆ (ಪ್ರಸ್ತುತ ಅಧೀಕ್ಷಕ ಇಂಜಿನಿಯರ್, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ, ಬೆಂಗಳೂರು) ಹಾಗೂ ಶ್ರೀ ಪ್ರಕಾಶ್ ಎಫ್.ಹೊಸಮನಿ, ಹಿಂದಿನ ಕಿರಿಯ ಇಂಜಿನಿಯರ್ ಎಂ.ಆರ್.ಬಿ.ಸಿ, ಶಿರಸಂಗಿ ತಾಲ್ಲೂಕು, ಸವದತ್ತಿ (ಪ್ರಸ್ತುತ ಕಿರಿಯ ಇಂಜಿನಿಯರ್ ಶಿಗ್ಗಾಂವಿ ಏತ ನೀರಾವರಿ ವಿಭಾಗ, ಧಾರವಾಡ) ರವರುಗಳನ್ನು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು-೧೯೫೭ರ ನಿಯಮ-೨(viii) ರನ್ವಯ ಸರ್ಕಾರಿ ಸೇವೆಯಿಂದ ವಜಾಗೊಳಿಸಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ವಿವರಿಸಿದರು.
ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟು ದಂಡನೆಗೆ ಗುರಿಯಾದ ಸರ್ಕಾರಿ ನೌಕರರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಸರ್ಕಾರಿ ಆದೇಶದಂತೆ ಶ್ರೀ ಬಿ.ಪದ್ಮನಾಭ ಮತ್ತು ಶ್ರೀ ಪ್ರಕಾಶ್ ಎಫ್ ಹೊಸಮನಿ ಅವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಲು ಪ್ರಸ್ತಾಪಿಸಲಾಗಿತ್ತು.
********
ಬೆಳಂದೂರು ಕೆರೆ ಅಭಿವೃದ್ಧಿ
ಮಾನ್ಯ ರಾಷ್ಟಿçÃಯ ಹಸಿರು ನ್ಯಾಯಾಧೀಕರಣ ಪೀಠದ ನಿರ್ದೇಶನದಂತೆ ಬೆಳ್ಳಂದೂರು ಕೆರೆಯ ಸರ್ವಾಂಗೀಣ ಅಭಿವೃದ್ಧಿ ಮಾಡಿ, ಸುಸ್ಥಿತಿಯಲ್ಲಿಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚುವರಿಯಾಗಿ ಅಗತ್ಯವಿರುವ ರೂ.೭೯.೬೭ ಕೋಟಿಗಳ (ಉSಖಿ + Pಡಿiಛಿe ಂಜರಿusಣmeಟಿಣ & Pಒಅ ಅhಚಿಡಿges ಒಳಗೊಂಡAತೆ) ಪೈಕಿ ಶೇ.೨೫ ರಷ್ಟು ಮೊತ್ತವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೆರೆ ಪುನಶ್ಚೇತನ ಶುಲ್ಕ ಒಳಗೊಂಡAತೆ ಇತರೆ ಸ್ವಂತ ಆರ್ಥಿಕ ಸಂಪನ್ಮೂಲಗಳಿAದ ಭರಿಸಲು ಸೂಚಿಸಿ, ಶೇ.೭೫ ರಷ್ಟು ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಮಾನ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಬೆಳ್ಳಂದೂರು ಕೆರೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿ ಹಣ ಅವಶ್ಯಕತೆಯಿದ್ದಲ್ಲಿ ಪ್ರತ್ಯೇಕವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ರಾಷ್ಟಿçÃಯ ಹಸಿರು ನ್ಯಾಯಾಧೀಕರಣ ಪೀಠ ಸೂಚಿಸಿತ್ತು. ಬೆಳ್ಳಂದೂರು ಕೆರೆಯ ಪುನಶ್ಚೇತನ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ರೂ.೭೯.೬೭ ಕೋಟಿಗಳ ಹೆಚ್ಚುವರಿ ಅನುದಾನ ಒದಗಿಸುವ ಅವಶ್ಯಕತೆಯಿದೆ ಎಂದು ಪ್ರಸ್ತಾವನೆ ಸಚಿವ ಸಂಪುಟಕ್ಕೆ ಮಂಡಿಸಲಾಗಿತ್ತು.
*******
ಗ್ರೇಟರ್ ಬೆಂಗಳೂರು ಅಧಿಸೂಚನೆ
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, ೨೦೨೪ರ ಕಲಂ ೧(೨)ರಲ್ಲಿ ಅವಕಾಶದಂತೆ ಮತ್ತು ಕಲಂ ೩ನ್ನು ಓದಿಕೊಂಡAತೆ ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶವನ್ನು ಗ್ರೇಟರ್ ಬೆಂಗಳೂರು ಪ್ರದೇಶವೆಂದು ಅಧಿಸೂಚಿಸಲು ಮತ್ತು ೨೦೨೪ರ ಕಾಯ್ದೆದ ಕಲಂ ೧(೩)ರ ಅವಕಾಶದಂತೆ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, ೨೦೨೪ರ ನೇಮಕಾತಿ ದಿನಾಂಕವಾಗಿ ತಿಳಿಸಬೇಕಾದ ದಿನಾಂಕ ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, ೨೦೨೪ರ ಕಲಂ ೧೩೧ರ ಅವಕಾಶದಂತೆ ಆಡಳಿತಾಧಿಕಾರಿಯವರ ನೇಮಕಾತಿ ಅಧಿಸೂಚನೆಯನ್ನು ಪರಿಷ್ಕರಿಸಲು; ಸಚಿವ ಸಂಪುಟ ಅನುಮೋದಿಸಿದೆ ಎಂದು ಸಚಿವರು ತಿಳಿಸಿದರು ಎಂದು ವಿವರಿಸಿದರು.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, ೨೦೨೪ನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಪ್ರಸ್ತುತವಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶವನ್ನು “ಗ್ರೇಟರ್ ಬೆಂಗಳೂರು ಪ್ರದೇಶ” ಎಂದು ಅಧಿಸೂಚನೆ ಹೊರಡಿಸುವ ವರೆಗೆ ಈ ಕಾಯ್ದೆ ಜಾರಿಗೆ ಬರಲು ಸಾಧ್ಯವಿಲ್ಲ. ಈ ಕಾಯ್ದೆಯ ಅನುಷ್ಠಾನದಲ್ಲಿ ಮತ್ತಷ್ಟು ಮುಂದುವರೆಯಲು ಗ್ರೇಟರ್ ಬೆಂಗಳೂರು ಪ್ರದೇಶ ವಿಸ್ತರಣೆಯನ್ನು ಸಹ ತಿಳಿಸಬೇಕಾಗಿದೆ.
*******
ಕಾಂಗ್ರೆಸ್ ಭವನಕ್ಕೆ ಜಮೀನು
ಚಿಕ್ಕಬಳ್ಳಾಪುರ ತಾಲ್ಲೂಕು, ಕಸಬಾ ಹೋಬಳಿ, ಅನಕನೂರು ಗ್ರಾಮದ ಸ.ನಂ.೩೪/೧ರಲ್ಲಿ ೦೧ಎ-೦೦ಗು, ೩೪/೨ರಲ್ಲಿ ೦೧-೦೦ಗು, ೩೪/೩ರಲ್ಲಿ ೦೨ಎ-೦೦ಗು, ೩೪/೪ರಲ್ಲಿ ೦೩ಎ-೦೦ಗು ೩೫/೧ರಲ್ಲಿ ೦೨ಎ-೧೨.೦೮ಗು ಸ.ನಂ೩೫/೨ರಲ್ಲಿ ೦೨ಎ-೧೨.೦೮ಗು, ಸ.ನಂ.೪೬/೧ರಲ್ಲಿ ೦೩ಎ-೦೦ಗು, ಸ.ನಂ.೪೬/೨ರಲ್ಲಿ ೦೦ಎ-೩೫.೦೮ಗು, ಸ.ನಂ.೪೬/೩ ೦೧ಎ-೧೧.೦೮ಗು ರಲ್ಲಿ ಒಟ್ಟು ೧೬ ಎಕರೆ ೩೨ ಗುಂಟೆ ಜಮೀನಿನ ವಸತಿ ವಿನ್ಯಾಸ ನಕ್ಷೆ ಅನುಮೋದನೆಯಾಗಿರುವ ಬಡಾವಣೆಯಲ್ಲಿನ ನಾಗರೀಕ ಸೌಲಭ್ಯ ನಿವೇಶನದ ಒಟ್ಟು ವಿಸ್ತೀರ್ಣ ೩೪೦೪.೨೬ ಚ.ಮೀ. ವಿಸ್ತೀರ್ಣವುಳ್ಳ ನಾಗರಿಕ ಸೌಲಭ್ಯ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್ (ರಿ.) ಬೆಂಗಳೂರು ಇವರಿಗೆ ಮಾರ್ಗಸೂಚಿ ಬೆಲೆಯ ಶೇ.೫ ರಷ್ಟನ್ನು ಸಂಗ್ರಹಿಸಿ ಮಂಜೂರು ಮಾಡಲು ನಿರ್ಣಯಿಸಲಾಯಿತು ಎಂದು ಮಾನ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ವಿವರಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಭವನದ ಕಟ್ಟಡ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಣಕನೂರು ಗ್ರಾಮದ ಅನುಮೋದಿತ ಬಡಾವಣೆಯಲ್ಲಿ ೩೪೦೪.೨೬ ಚ.ಮೀ ವಿಸ್ತೀರ್ಣದ ನಾಗರಿಕ ಸೌಲಭ್ಯಗಳ ನಿವೇಶನವನ್ನು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಭವನ ಟ್ರಸ್ಟ್ ಇವರಿಗೆ ಉಚಿತವಾಗಿ ಮಂಜೂರು ಮಾಡಲು ಪ್ರಸ್ತಾಪಿಸಲಾಗಿತ್ತು.
************
ಹೆಸರು ಬದಲಾವಣೆ
“ಸರ್ಕಾರದ ಆದೇಶ ಸಂಖ್ಯೆ: ನಅಇ ೧೫೬ ಹೆಚ್‌ಡಿಎಂಸಿ ೨೦೨೪ (ಇ), ದಿನಾಂಕ:೨೭.೦೨.೨೦೨೫ರಲ್ಲಿ ಹುಬ್ಬಳ್ಳಿ ತಾಲ್ಲೂಕು ಸಿಟಿಎಸ್ ನಂ:೪೫೫೩/ಬಿ ನೇದ್ದರಲ್ಲಿಯ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಒಡೆತನದ ೨೯೮೮.೨೯ ಚ.ಮೀ ವಿಸ್ತೀರ್ಣದ ಜಾಗವನ್ನು ಜಿಲ್ಲಾ ಕಾರ್ಯಾಲಯ ನಿರ್ಮಿಸಲು “ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಮೀಟಿ, ಧಾರವಾಡ” ರವರಿಗೆ ಮಂಜೂರು ಮಾಡಲಾಗಿದೆ ಎಂದು ನಮೂದಿಸಿರುವುದರ ಬದಲಿಗೆ “ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಮೀಟಿ, ಬೆಂಗಳೂರು” ಇವರಿಗೆ ಮಂಜೂರು ಮಾಡಿದೆ ಎಂದು ತಿದ್ದುಪಡಿ ಮಾಡಲು” ಸಚಿವ ಸಂಪುಟ ನಿರ್ಧರಿಸಿದೆ ಎಂದು ಮಾನ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ವಿವರಿಸಿದರು.
“ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ, ಧಾರವಾಡ” ರವರಿಗೆ ಮಂಜೂರು ಮಾಡಲಾಗಿದೆ ಎಂದು ದಿನಾಂಕ: ೨೭.೦೨.೨೦೨೫ ರ ಸರ್ಕಾರಿ ಆದೇಶದಲ್ಲಿ ನಮೂದಿಸಲಾಗಿದ್ದು, ಅದರ ಬದಲಿಗೆ “ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ, ಬೆಂಗಳೂರು” ಎಂದು ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿತ್ತು.
**********
ಬೆನಕನಹಳ್ಳಿ ಇನ್ನು ಪಟ್ಟಣ ಪಂಚಾಯಿತಿ
ಬೆಳಗಾವಿ ಜಿಲ್ಲೆಯ ಬೆನಕನಹಳ್ಳಿ ಗ್ರಾಮ ಪಂಚಾಯಿತಿ ೨೦೧೧ರ ಜನಗಣತಿ ಅನ್ವಯ ೧೪,೦೧೧ ಜನಸಂಖ್ಯೆ ಹೊಂದಿದ್ದು, ೧೨. ಚ.ಕಿ.ಮೀ ವಿಸ್ತೀರ್ಣ ಮತ್ತು ಜನಸಾಂದ್ರತೆ ಪ್ರತಿ ಚ.ಕಿ.ಮೀ ೧,೧೬೭ ಇದೆ. ಕೃಷಿಯೇತರ ಚಟುವಟಿಕೆಗಳು ಶೇ.೬೨ ರಷ್ಟು ಇದ್ದು, ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಗ್ರಾಮ ಪಂಚಾಯಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಕರ್ನಾಟಕ ಪೌರಸಭೆಗಳ ಕಾಯ್ದೆ ೧೯೬೪ರ ಕಲಂ-೩, ೪, ೯, ೩೪೯, ೩೫೦, ೩೫೧ ಮತ್ತು ೩೫೫ ರನ್ವಯ ಶೆಡ್ಯೂಲ್-ಎ ರಲ್ಲಿ ಒಳಗೊಂಡ ಪ್ರದೇಶ ಹಾಗೂ ಶೆಡ್ಯೂಲ್-ಬಿ ರಲ್ಲಿ ಆ ಪ್ರದೇಶದ ಗಡಿರೇಖೆ ಗುರುತಿಸಲಾಗಿರುವಂತೆ ಬೆಳಗಾವಿ ಜಿಲ್ಲೆಯ, ಬೆನಕನಹಳ್ಳಿ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ‘ಬೆಳಗಾವಿ ಪಟ್ಟಣ ಪಂಚಾಯಿತಿ’ ಪ್ರದೇಶವೆಂದು ಉದ್ಘೋಷಿಸಲು” ಸಚಿವ ಸಂಪುಟ ನಿರ್ಣಯಿಸಿದೆ.
*********
ಹಿಂಡಲಗಾ ಇನ್ನು ಪಟ್ಟಣ ಪಂಚಾಯಿತಿ
ಹಿAಡಲಗಾ ಗ್ರಾಮ ಪಂಚಾಯಿತಿಯನ್ನು ೨೦೧೧ರ ಜನಗಣತಿಯನ್ವಯ ಜನಸಂಖ್ಯೆ ೧೩,೭೪೧ ಇದ್ದು, ವಿಸ್ತೀರ್ಣ ೧೪.೮೦ ಚ.ಕಿ.ಮೀ ಇದೆ. ಜನಸಾಂದ್ರತೆ ಪ್ರತಿ ಚ.ಕಿ.ಮೀ ೯೨೮ ಇರುತ್ತದೆ. ೨೦೨೨ರ ಸಾಲಿಗೆ ೧೮,೪೨೫ ರಷ್ಟು ಅಂದಾಜು ಜನಸಂಖ್ಯೆ ಇರಬಹುದು ಎಂದು ವರದಿ ಸಲ್ಲಿಸಿರುತ್ತಾರೆ. ಈ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಗ್ರಾಮ ಪಂಚಾಯಿತಿ ನಿರ್ಣಯ ಕೈಗೊಂಡಿದೆ.
“ಕರ್ನಾಟಕ ಪೌರಸಭೆಗಳ ಕಾಯ್ದೆ ೧೯೬೪ರ ಕಲಂ-೩, ೪, ೯, ೩೪೯, ೩೫೦, ೩೫೧ ಮತ್ತು ೩೫೫ ರನ್ವಯ ಶೆಡ್ಯೂಲ್-ಎ ರಲ್ಲಿ ಒಳಗೊಂಡ ಪ್ರದೇಶ ಹಾಗೂ ಶೆಡ್ಯೂಲ್-ಬಿ ರಲ್ಲಿ ಆ ಪ್ರದೇಶದ ಗಡಿರೇಖೆ ಗುರುತಿಸಲಾಗಿರುವಂತೆ ಬೆಳಗಾವಿ ಜಿಲ್ಲೆಯ, ಹಿಂಡಲಗಾ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ‘ಹಿಂಡಲಗಾ ಪಟ್ಟಣ ಪಂಚಾಯಿತಿ’ ಪ್ರದೇಶವೆಂದು ಉದ್ಘೋಷಿಸಲು” ಸಚಿವ ಸಂಪುಟ ನಿರ್ಧರಿಸಿದೆ ಎಂದು ಮಾನ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ವಿವರಿಸಿದರು.
**********
ಹಿರೇಬಾಗೇವಾಡಿ ಇನ್ನು ಪಟ್ಟಣ ಪಂಚಾಯಿತಿ
ಹಿರೇಬಾಗೇವಾಡಿ ಗ್ರಾಮ ಪಂಚಾಯಿತಿಯನ್ನು ೨೦೧೧ರ ಜನಗಣತಿಯನ್ವಯ ಜನಸಂಖ್ಯೆ ೧೨,೬೮೪ ಇದ್ದು, ವಿಸ್ತೀರ್ಣ ೨೩.೫೩ ಚ.ಕಿ.ಮೀ ಇದೆ. ಜನಸಾಂದ್ರತೆ ಪ್ರತಿ ಚ.ಕಿ.ಮೀ ೫೩೯ ಇರುತ್ತದೆ. ೨೦೨೨ರ ಸಾಲಿಗೆ ೧೫,೨೯೯ ರಷ್ಟು ಅಂದಾಜು ಜನಸಂಖ್ಯೆ ಇರಬಹುದು ಎಂದು ವರದಿ ಸಲ್ಲಿಸಿರುತ್ತಾರೆ. ಈ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಗ್ರಾಮ ಪಂಚಾಯಿತಿ ನಿರ್ಣಯ ಕೈಗೊಂಡಿದೆ.
“ಕರ್ನಾಟಕ ಪೌರಸಭೆಗಳ ಕಾಯ್ದೆ ೧೯೬೪ರ ಕಲಂ-೩, ೪, ೯, ೩೪೯, ೩೫೦, ೩೫೧ ಮತ್ತು ೩೫೫ ರನ್ವಯ ಶೆಡ್ಯೂಲ್-ಎ ರಲ್ಲಿ ಒಳಗೊಂಡ ಪ್ರದೇಶ ಹಾಗೂ ಶೆಡ್ಯೂಲ್-ಬಿ ರಲ್ಲಿ ಆ ಪ್ರದೇಶದ ಗಡಿರೇಖೆ ಗುರುತಿಸಲಾಗಿರುವಂತೆ ಬೆಳಗಾವಿ ಜಿಲ್ಲೆಯ, ಹಿರೇಬಾಗೇವಾಡಿ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ‘ಹಿರೇಬಾಗೇವಾಡಿ ಪಟ್ಟಣ ಪಂಚಾಯಿತಿ’ ಪ್ರದೇಶವೆಂದು ಉದ್ಘೋಷಿಸಲು” ಸಚಿವ ಸಂಪುಟ ಒಪ್ಪಿದೆ ಎಂದು ಮಾನ್ಯ ಕಾನೂನು ಸಚಿವರು ವಿವರಿಸಿದರು.
********
ಸರ್ಕಾರಿ ಸೇವೆಯಿಂದ ವಜಾ ರದ್ದು
ಮಾನ್ಯ ಉಚ್ಚ ನ್ಯಾಯಾಲಯ, ಕಲಬುರಗಿ ಪೀಠವು ಕ್ರಿಮಿನಲ್ ಅಪೀಲ್ ಸಂಖ್ಯೆ:೨೦೦೧೦೮/೨೦೨೫ರಲ್ಲಿ ದಿನಾಂಕ:೦೫೧೨.೨೦೨೨ರAದು ನೀಡಿರುವ ತೀರ್ಪಿನ ಹಿನ್ನಲೆಯಲ್ಲಿ ದಿ||ಲಕ್ಷö್ಮಣ. ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ನಿವೃತ್ತ) ಇವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಿ ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ:ಜಸAಇ ೧೪೭ ಸೇಇವಿ ೨೦೦೭ ದಿನಾಂಕ: ೦೮.೦೫.೨೦೧೭ರ ಆದೇಶವನ್ನು ಹಿಂಪಡೆಯಲು; ಹಾಗೂ ಶ್ರೀ ಲಕ್ಷö್ಮಣ, ಇವರು ಸೇವೆಯನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಮರುಸ್ಥಾಪಿಸಲು ಹಾಗೂ ಇವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಿರುವ ದಿ:೦೮.೦೫.೨೦೧೭ರಿಂದ ದಿ:೩೧.೦೫.೨೦೨೧(ನಿವೃತ್ತ ದಿನಾಂಕ)ರ ವರೆಗಿನ ಅವಧಿಯನ್ನು ಲೆಕ್ಕಕ್ಕಿಲ್ಲದ ಅವಧಿಯೆಂದು (ಆies-ಟಿoಟಿ) ಪರಿಗಣಿಸಲು ಮತ್ತು ಇವರು ಸೇವೆಯಿಂದ ವಜಾಗೊಂಡ ದಿನಾಂಕಕ್ಕೆ ಲಭ್ಯವಾಗುವ ವೇತನದ ಆಧಾರದ ಮೇರೆಗೆ ಇವರಿಗೆ ನಿವೃತ್ತಿ ಸೌಲಭ್ಯಗಳನ್ನು ನಿಯಮಾನುಸಾರ ಪಾವತಿಸಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಮಾನ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ರಾಜ್ಯ ಉಚ್ಛ ನ್ಯಾಯಾಲಯವು ಸದರಿಯವರ ಪ್ರಕರಣವನ್ನು ರದ್ದುಗೊಳಿಸಿರುವುದರಿಂದ ಶ್ರೀ ಲಕ್ಷö್ಮಣ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸೇವೆಯಲ್ಲಿ ಪುನರ್ ಸ್ಥಾಪಿಸಲು ಹಾಗೂ ಲಭ್ಯವಾಗುವ ಸೌಲಭ್ಯಗಳನ್ನು ನಿಯಮಾನುಸಾರ ಬಿಡುಗಡೆಗೊಳಿಸಲು ನಿರ್ಣಯಿಸಿರುತ್ತದೆ. ದಿ:೦೮.೦೨.೨೦೨೩ ರಂದು ಆಪಾದಿತ ನೌಕರ ಶ್ರೀ ಲಕ್ಷö್ಮಣ ರವರು ನಿಧನ ಹೊಂದಿರುತ್ತಾರೆ.
**********
ಅರ್ಕಾವತಿಯಿಂದ ೪೬ ಕೆರೆ ಭರ್ತಿ
ರಾಮನಗರ ಜಿಲ್ಲೆಯ ಗನಾಳು ಬಳಿ ಅರ್ಕಾವತಿ ನದಿಯಿಂದ ನೀರನ್ನು ಎತ್ತಿ ರಾಮನಗರ ಮತ್ತು ಕನಕಪುರ ತಾಲ್ಲೂಕಿನ ೪೬ ಕೆರೆಗಳನ್ನು ತುಂಬಿಸುವ ರೂ.೧೧೦.೦೦ ಕೋಟಿಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆಗೆ ಪ್ರಸ್ತಾಪಿಸಲಾಗಿತ್ತು.
ಖಚಿmಚಿಟಿಚಿgಚಿಡಿ ಂಟಿಜ ಏಚಿಡಿಟಿಚಿಣಚಿಞಚಿ ಖಿಚಿಟuಞ ಔಜಿ ಖಚಿmಚಿಟಿಚಿgಚಿಡಿಚಿ ಆisಣಡಿiಛಿಣ”
ರೂ.೧೧೦.೦೦ ಕೋಟಿ ಮೊತ್ತದ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ವಿವರಿಸಿದರು.
********
ಶಿಂಷಾ ನದಿಗೆ ಸೇತುವೆ
ರೂ.೧೫.೦೦ ಕೋಟಿ ಮೊತ್ತದ ಯೋಜನಾ ವರದಿಗೆ ಅನುದಾನ ಹಾಗೂ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಮಾನ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಮಳೆಗಾಲದಲ್ಲಿ ಶಿಂಷಾ ನದಿಯಲ್ಲಿ ನೀರು ಹರಿಯುವುದರಿಂದ ಸದರಿ ಊರಿನ ಗ್ರಾಮಸ್ಥರು ಮತ್ತು ರೈತರು ಬೇರೆ ಮಾರ್ಗವಾಗಿ ಸುಮಾರು ೧೦-೧೨ ಕಿ.ಮೀ ದೂರ ಕ್ರಮಿಸಿ ಸಂಚರಿಸಬೇಕಾಗಿರುತ್ತದೆ. ಸದರಿ ಸೇತುವೆ ನಿರ್ಮಾಣದಿಂದ ಸರಗೂರು, ವಿ.ಜಿ ದೊಡ್ಡಿ, ನೇರಲೂರು, ಇಗ್ಗಲೂರು, ಹೊಸಪುರ, ಬೆಳತೂರು, ಬೆಳತೂರು ದೊಡ್ಡಿ, ಹುಸ್ಕೂರು, ಕಾಲದೇವನಹಳ್ಳಿ, ಯತ್ತಂಬಾಡಿ ಹಾಗೂ ಇತರ ಅನೇಕ ಗ್ರಾಮದ ಜನರಿಗೆ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಸೇತುವೆ ಕಾಮಗಾರಿ ಅವಶ್ಯಕತೆಯಿದೆ ಎಂದು ಪ್ರಸ್ತಾಪಿಸಲಾಗಿತ್ತು.
*********
ಮಾಗಡಿ, ರಾಮನಗರ ಮತ್ತು ಕುಣಿಗಲ್ ಕೆರೆ ತುಂಬಿಸಲು ಯೋಜನೆ
ಕಾಮಗಾರಿಯ ರೂ.೯೦.೦೦ ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಮಾನ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ರಾಮನಗರ ಜಿಲ್ಲೆಯ ಮಾಗಡಿ ಮತ್ತು ರಾಮನಗರ ವಿಧಾನ ಸಭಾ ಕ್ಷೇತ್ರಗಳಲ್ಲಿ ಮಳೆಯ ಅಭಾವದಿಂದ ಹಲವಾರು ವರ್ಷಗಳಿಂದ ಈ ಭಾಗದ ಕೆರೆಗಳು ತುಂಬಿರುವುದಿಲ್ಲ. ಕಾರಣ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗುವಂತೆ, ನೀರಿನ ಕೊರತೆಯನ್ನು, ಆರೋಗ್ಯ ಸಮಸ್ಯೆಗಳನ್ನು ಮತ್ತು ರೈತರ ನೀರಾವರಿ ಸಮಸ್ಯೆಗಳನ್ನು ಪರಿಹರಿಸಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಹಾಗೂ ಈ ನೀರನ್ನು ೩೮ ಕೆರೆಗಳು ಹಾಗೂ ಕಟ್ಟೆಗಳನ್ನು ತುಂಬಿಸಲು ಪ್ರಸ್ತಾಪಿಸಲಾಗಿದೆ.
**********
ದಿನಾಂಕ: ೦೯.೦೫.೨೦೨೫ರ ಸಚಿವ ಸಂಪುಟದ ಹೆಚ್ಚುವರಿ ವಿಷಯಗಳ ನಿರ್ಣಯಗಳು
ಬೀಳಗಿ ವಿರುದ್ಧ ಕ್ರಮವಿಲ್ಲ
ಮಾನ್ಯ ಉಪಲೋಕಾಯುಕ್ತ-೧, ಕರ್ನಾಟಕ ಲೋಕಾಯುಕ್ತ ಇವರ ಶಿಫಾರಸ್ಸು ವರದಿಯನ್ವಯ ಶ್ರೀ ಮಹಾಂತೇಶ್ ಬೀಳಗಿ, ಪ್ರಸ್ತುತ ಭಾ.ಆ.ಸೇ. ಹಿಂದಿನ ಕೆ.ಎ.ಎಸ್ (ಹಿರಿಯ ಶ್ರೇಣಿ) ಅಧಿಕಾರಿ, ವಿಶೇಷ ಭೂ ಸ್ವಾಧೀನಾಧಿಕಾರಿ, ಕೆ.ಐ.ಎ.ಡಿ.ಬಿ, ಧಾರವಾಡ, ಶ್ರೀ ಹೆಚ್.ಡಿ.ನಾಗಾವಿ, ಹಿಂದಿನ ವ್ಯವಸ್ಥಾಪಕರು ಮತ್ತು ಶ್ರೀ ಶ್ರೀಕಾಂತ ತ್ರö್ಯಂಬಕ ಕುಲಕರ್ಣಿ, ಹಿಂದಿನ ವಿಷಯ ನಿರ್ವಾಹಕರು ಇವರುಗಳ ವಿರುದ್ಧದ ವಿಚಾರಣಾ ಪ್ರಕರಣವನ್ನು ಮುಕ್ತಾಯಗೊಳಿಸಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ತಿಳಿಸಿದರು.
*********
ಸನ್ನಡತೆ ಆಧಾರದ ಮೇಲೆ ಸಜಾ ಬಂಧಿಗಳ ಬಿಡುಗಡೆ
ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ಅನುಬಂಧ-೧ ರಲ್ಲಿ ನಮೂದಿಸಿರುವ ೪೫ ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೊಳಿಸಲು ಹಾಗೂ ಅನುಬಂಧ-೨ ರಲ್ಲಿ ನಮೂದಿಸಿರುವ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ೦೩ ಶಿಕ್ಷಾ ಬಂದಿಗಳನ್ನು ಕೇಂದ್ರ ಗೃಹ ಮಂತ್ರಾಲಯದ ಸಹಮತಿ ದೊರಕಿದ ನಂತರ ಭಾರತ ಸಂವಿಧಾನದ ಅನುಚ್ಛೇದ-೧೬೧ರ ಪ್ರಕಾರ ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೊಳಿಸಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಮಾನ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
*************
ಪ್ರಧಾನಮಂತ್ರಿ ಆವಾಸ್ ಯೋಜನೆ ಅನುಷ್ಠಾನಕ್ಕೆ ನಿರ್ಧಾರ
ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ೨.೦ ಅನ್ನು ಕೇಂದ್ರ ಸರ್ಕಾರವು ದಿನಾಂಕ: ೦೧.೦೯.೨೦೨೪ ರಿಂದ ಅನುಷ್ಠಾನಗೊಳಿಸುತ್ತಿದ್ದು, ಈ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನ ಗೊಳಿಸಬೇಕೆ ಅಥವಾ ಬೇಡವೆ ಎಂಬ ಬಗ್ಗೆ ತೀರ್ಮಾನಿಸಲು; ಮತ್ತು Pಒಂಙ(U)-೨.೦ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಟಾನಗೊಳಿಸಲು ಸರ್ಕಾರವು ಒಪ್ಪಿದ್ದಲ್ಲಿ, ಈ ಕೆಳಕಂಡ ಉಪ-ಅಂಶಗಳಿಗೆ ಸಚಿವ ಸಂಪುಟದ ಅನುಮೋದನೆ ನೀಡಲು ಮಾನ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ವಿವರಿಸಿದರು.
*************
ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ವಯೋನಿವೃತ್ತಿ ಹೆಚ್ಚಳ
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ವಯೋನಿವೃತ್ತಿ ವಯಸ್ಸನ್ನು ೬೦ ರಿಂದ ೬೫ ವರ್ಷಕ್ಕೆ ಹೆಚ್ಚಿಸಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ತಿಳಿಸಿದರು.
**************
ವೃಷಭಾವತಿ ಕಣಿವೆಯಿಂದ ೪೧ ಕೆರೆ ಭರ್ತಿ
ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ೩೦೮ ಎಂ.ಎಲ್.ಡಿ ನೀರಿನಿಂದ ೨೫೯ ಕೆರೆಗಳನ್ನು ತುಂಬಿಸುವ ಮೂಲ ಯೋಜನೆಯ ಪೈಕಿ ಲಿಫ್ಟ್-೪ : ಗೋಪಾಲಪುರ ಕೆರೆಯಿಂದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ೪೧ ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಯನ್ನು ರೂ.೨೮೦.೦೦ ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಮಾನ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
******************
ಜಿಲ್ಲಾ ಪಂಚಾಯಿತಿ ನೌಕರರ ವಿರುದ್ಧ ಕ್ರಮ
ಶ್ರೀ ಎಲ್.ಸಿ.ಗಾಣಿಗೇರ್, ಹಿಂದಿನ ಕಾರ್ಯಪಾಲಕ ಇಂಜಿನಿಯರ್ ಮತ್ತು ಇತರರುಗಳಿಗೆ ಮಾನ್ಯ ಉಪ ಲೋಕಾಯುಕ್ತರವರು ಮಾಡಿರುವ ಶಿಫಾರಸ್ಸನ್ನು ಮಾರ್ಪಡಿಸಿ ಶ್ರೀ ಎಲ್.ಗಾಣಿಗೇರ್, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಇವರುಗಳಿಗೆ ಸಂಬAಧಿಸಿದAತೆ ಶೇ.೫೦ ರಷ್ಟು ನಿವೃತ್ತಿ ವೇತನವನ್ನು ಶಾಶ್ವತವಾಗಿ ತಡೆಹಿಡಿಯುವ ದಂಡನೆ ಮತ್ತು ಶ್ರೀ ಆರ್.ವಿ.ಶಿವರಾಯಿ, ಸಹಾಯಕ ಇಂಜಿನಿಯರ್, ಶ್ರೀ ವೈವಸಂತ್‌ಕುಮಾರ್, ಶ್ರೀ ರಾಜ್‌ಕುಮಾರ್, ಸಹಾಯಕ ಇಂಜಿನಿಯರ್ ಮತ್ತು ಶ್ರೀ ಎಂ.ಆರ್ ಕುಲಕರ್ಣಿ, ಸಹಾಯಕ ಇಂಜಿನಿಯರ್ ಇವರುಗಳಿಗೆ ಸಂಬAಧಿಸಿದAತೆ ಪ್ರಸ್ತುತ ಪಡೆಯುತ್ತಿರುವ ವೇತನ ಶ್ರೇಣಿಯಿಂದ ಒಂದು ಹಂತ ಕೆಳಗಿನ ಶ್ರೇಣಿಗೆ ಇಳಿಸುವ ದಂಡನೆಯನ್ನು ವಿಧಿಸಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಮಾನ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ವಿವರಿಸಿದರು.