ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಬೆಂಬಲ ; ತಿರಂಗಾ ಯಾತ್ರೆ

Banglore:

Font size:

ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಬೆಂಬಲ ; ತಿರಂಗಾ ಯಾತ್ರೆ

ಪಹಲ್ಗಮ್ ನರಮೇಧಕ್ಕೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆಗೆ ಬೆಂಬಲ ವ್ಯಕ್ತಪಡಿಸಿ ಬೆಂಗಳೂರಿನ ಕೆ ಆರ್ ಸರ್ಕಲ್ ನಿಂದ ಮಿನ್ಸ್ಕ್ ಚೌಕದವರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಗುರುವಾರ
ತಿರಂಗಾ ಯಾತ್ರೆ ನಡೆಸಲಾಯಿತು.

ಸಚಿವರಾದ ಎಚ್ ಕೆ ಪಾಟೀಲ್, ಪರಮೇಶ್ವರ್, ಕೆ ಎಚ್ ಮುನಿಯಪ್ಪ, ಮಹದೇವಪ್ಪ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಡಾ ಎಂ ಸಿ ಸುಧಾಕರ್, ಬೋಸರಾಜು, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕಾರದ ರಿಜ್ವಾನ್ ಆರ್ಶದ್ ಮತ್ತಿತರರು ಭಾಗವಹಿಸಿದ್ದರು.

ಸರಕಾರಿ, ಖಾಸಗಿ ಉದ್ದಿಮೆಗಳ ಅಧಿಕಾರಿಗಳು, ನೌಕರರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾವಿರಾರು ವಿದ್ಯಾರ್ಥಿಗಳು ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

Prev Post ನವೋದಯ ರಜತ ಸಂಭ್ರಮ ಐತಿಹಾಸಿಕ ಸಮಾವೇಶ - ಸಿದ್ಧತೆಗಳು ಪೂರ್ಣ: ಡಾ.ರಾಜೇಂದ್ರ ಕುಮಾರ್
Next Post ರ್ವತ್ರಿಕ ವರ್ಗಾವಣೆ ಮಾರ್ಗಸೂಚಿ ಪ್ರಕಟ ದಿನಾಂಕ: ೦೯.೦೫.೨೦೨೫ರ ಸಚಿವ ಸಂಪುಟದ ನಿರ್ಣಯಗಳು