ರಾಜ್ಯದಲ್ಲಿ ಒಳ ಮೀಸಲಾತಿ ಹೆಸರಿನಲ್ಲಿ ಆರಂಭಿಸಲಾಗಿರುವ ಸಮೀಕ್ಷೆ ಸಂವಿಧಾನ ಮತ್ತು ಕಾನೂನು ಉಲ್ಲಂಘನೆಯಾಗಿದೆ ಎಂದು ಪರಿಶಿಷ್ಟ ಜಾತಿಗಳು ಹಾಗು ಬುಡಕಟ್ಟುಗಳ ಸಂಘ ಸಂಸ್ಥೆಗಳ ಒಕ್ಕೂಟ ಆಪಾದಿಸಿದೆ.

Mangalore:

Font size:

ರಾಜ್ಯದಲ್ಲಿ ಒಳ ಮೀಸಲಾತಿ ಹೆಸರಿನಲ್ಲಿ ಆರಂಭಿಸಲಾಗಿರುವ ಸಮೀಕ್ಷೆ ಸಂವಿಧಾನ ಮತ್ತು ಕಾನೂನು ಉಲ್ಲಂಘನೆಯಾಗಿದೆ ಎಂದು ಪರಿಶಿಷ್ಟ ಜಾತಿಗಳು ಹಾಗು ಬುಡಕಟ್ಟುಗಳ ಸಂಘ ಸಂಸ್ಥೆಗಳ ಒಕ್ಕೂಟ ಆಪಾದಿಸಿದೆ.

From : Jayaram Udupi

ಮಂಗಳೂರು: ರಾಜ್ಯದಲ್ಲಿ ಒಳ ಮೀಸಲಾತಿ ಹೆಸರಿನಲ್ಲಿ ಆರಂಭಿಸಲಾಗಿರುವ ಸಮೀಕ್ಷೆ ಸಂವಿಧಾನ ಮತ್ತು ಕಾನೂನು ಉಲ್ಲಂಘನೆಯಾಗಿದೆ ಎಂದು ಪರಿಶಿಷ್ಟ ಜಾತಿಗಳು ಹಾಗು ಬುಡಕಟ್ಟುಗಳ ಸಂಘ ಸಂಸ್ಥೆಗಳ ಒಕ್ಕೂಟ ಆಪಾದಿಸಿದೆ.
ಮಂಗಳೂರಿನಲ್ಲಿ ಇಂದು‌ ಮಾಧ್ಯಮಗಳ ಜೊತೆ‌ಮಾತನಾಡಿದ‌ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಅವರು ಒಳ ಮೀಸಲಾತಿ ಸಮೀಕ್ಷೆಯ ನೇತೃತ್ವ ವಹಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರು ಸಂದರ್ಶನವೊಂದರಲ್ಲಿ ಧರ್ಮಾಚರಣೆಯಲ್ಲಿ‌ ಕ್ರೈಸ್ತರಾಗಿದ್ದರೂ ಅದಕ್ಕೆ ಸಂಬಂಧಿಸಿದ ಪ್ರಮಾಣಪತ್ರ ಪಡೆದಿರದಿದ್ದರೆ ಸರಕಾರದ ಪ್ರಯೋಜನಗಳನ್ನು ಪಡೆಯಲು ಪರಿಶಿಷ್ಟ ಜಾತಿ ಎಂದು‌ ಬರೆಸಬಹುದು ಎಂದಿದ್ದಾರೆ, ಇದು ಸಂವಿಧಾನ ಮತ್ತು ಕಾನೂನು ಬಾಹಿರ ಎಂದಾರೋಪಿಸಿದರು.

ಇದರಿಂದ ನಿಜವಾಗಿ ಮೀಸಲಾತಿ ಸೌಲಭ್ಯ ದೊರೆಯಬೇಕಾದವರಿಗೆ ವಂಚನೆಯಾಗುತ್ತದೆ. ಅಧ್ಯಕ್ಷರು ಈ ವಂಚನೆಯನ್ನು ಸಮರ್ಥಿಸುವ ಮಾತುಗಳನ್ನು ಆಡುತ್ತಿರುವುದು ಖೇದಕರ ಎಂದು ಲೋಲಾಕ್ಷ ಬೇಸರ ವ್ಯಕ್ತಪಡಿಸಿದರು.
ಆಯೋಗದ ಅಧ್ಯಕ್ಷರ ಮಾತು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ದೌರ್ಜನ್ಯ ಕಾಯಿದೆ ೧೯೮೯ರ ಸೆಕ್ಷನ್ ೩(೧) (ಕ್ಯೂ) ಮತ್ತು (ಯು) ಅನ್ವಯ ಶಿಕ್ಷಾರ್ಹ ಅಪರಾಧವಾಗಿದೆ . ಈ ಬಗ್ಗೆ ಡಿ.ಆರ್.ಇ.ಸಿ. ಎಸ್ಪಿ ಅವರಿಗೆ ದೂರು ನೀಡಲಾಗಿದೆ ಎಂದವರು ಹೇಳಿದರು.
ಕ್ರೈಸ್ತ ಅಥವಾ ಮುಸ್ಲಿಂ ಧರ್ಮಗಳಿಗೆ ಮತಾಂತರಗೊಂಡವರಿಗೆ ಪರಿಶಿಷ್ಟ ಸ್ಥಾನ ನೀಡಬಾರದು.ಸಮೀಕ್ಷೆಯಲ್ಲಿ ಧರ್ಮದ ಹೆಸರು ನಮೂದಿಸಲು ತಕ್ಷಣ ಕ್ರಮ ಜರುಗಿಸಬೇಕು ಎಂದು ಲೋಲಾಕ್ಷ ಒತ್ತಾಯಿಸಿದರು.
ಕಾಂತಪ್ಪ ಅಲಂಗಾರು , ಅನಿಲ್ ಕಂಕನಾಡಿ, ಪ್ರದೀಪ್ ಕಾಪಿಕಾಡು, ಸುಂದರ ಮೇರ, ಅಶೋಕ ಕೊಂಚಾಡಿ ಮೋಹನಾಂಗಯ್ಯ ಸ್ವಾಮಿ ಉಪಸ್ಥಿತರಿದ್ದರು.

Prev Post ಮೇ ೧೦ರಂದು ನವೋದಯ ಸ್ವಸಹಾಯ ಗುಂಪುಗಳ "ರಜತ ಸಂಭ್ರಮ"
Next Post ದೇಶದ ಸೇನಾಪಡೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ ಪರಾಕ್ರಮ ಮೆರೆದಿದ್ದಾರೆ. ದೇಶದ ರಾಜ್ಯದ ಪರವಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ