ಸ್ಪೀಕರ್ ಸರಕಾರದ ಏಜೆಂಟ್ . ಸಂಸದ ಕ್ಯಾ. ಬ್ರಿಜೇಶ್ ಚೌಟ ಟೀಕಿಸಿದ್ದಾರೆ. ಬಿಜೆಪಿ ಶಾಸಕರಿಗೆ ರೌಡಿ ಶೀಟರ್‌ಗಳ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ..?ಕಾಂಗ್ರೆಸ್ ದಕ ಜಿಲ್ಲಾ ಅಧ್ಯಕ್ಷ ಕೆ.ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.
news from Jayaram Udupi
ಸ್ಪೀಕರ್ ಸರಕಾರದ ಏಜೆಂಟ್
ಮಂಗಳೂರು: ಬಿಜೆಪಿಯ ೧೮ ಮಂದಿ ಶಾಸಕರನ್ನು ಆರು ತಿಂಗಳು ಅಮಾನತು ಮಾಡುವ ಮೂಲಕ ಸ್ಪೀಕರ್ ಯು.ಟಿ. ಖಾದರ್ ಅವರು ಸರಕಾರದ ಏಜೆಂಟ್ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ದ. ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಟೀಕಿಸಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಂದ ಆಯ್ಕೆಯಾದ ಶಾಸಕರನ್ನು ಆರು ತಿಂಗಳು ಅಮಾನತು ಮಾಡುವುದು ಸರ್ವಾಧಿಕಾರಿ ನಿರ್ಧಾರವಾಗಿದೆ. ಶಾಸಕರ ಹಾಗೂ ಆಯಾ ಕ್ಷೇತ್ರದ ಜನತೆಯ ಧ್ವನಿಯನ್ನು ದಮನಿಸುವ ಪ್ರಯತ್ನ. ಸುಸಂಸ್ಕೃತ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಸ್ಪೀಕರ್ ಅವರು ಈ ರೀತಿಯ ಕೆಟ್ಟ ಸಂಪ್ರದಾಯ ಆರಂಭಿಸಿರುವುದು ನಾಚಿಕೆಗೇಡು ಎಂದು ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಎಲ್ಲ ರೀತಿಯಲ್ಲೂ ಸಂವಿಧಾನ ವಿರೋಧಿಯಾಗಿ ವರ್ತಿಸುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂವಿಧಾನ ಬದಲು ಹೇಳಿಕೆಯ ಮೂಲಕ ಅವರು ಮನಸ್ಸಿನಲ್ಲಿ ಇರುವುದನ್ನು ಬಾಯಿಯಲ್ಲಿ ಹೇಳಿದ್ದಾರೆ. ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿ ಮಾತನಾಡಿದ್ದಾರೆ. ಸರಕಾರಿ ಕಾಮಗಾರಿಯಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಶೇ. ೪ರಷ್ಟು ಮೀಸಲಾತಿ ನೀಡಲು ಉದ್ದೇಶಿಸಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಹೇಳಿದರು.
ಮಂಗಳೂರು: ಬಿಸಿರೋಡ್- ಸುರತ್ಕಲ್ ನಡುವೆ ೩೭.೪೨ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ತಾತ್ಕಾಲಿಕ ದುರಸ್ತಿ ಕಾರ್ಯಗಳಿಗೆ ೨೬ ಕೋಟಿ ರೂ. ಅನುದಾನ ಮಂಜೂರುಗೊಂಡಿದೆ. ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಎ.೧೦ರಿಂದ ದುರಸ್ತಿ ಕಾರ್ಯ ಆರಂಭಗೊಳ್ಳಲಿದ್ದು, ಮಳೆಗಾಲ ಪ್ರಾರಂಭದ ಮುನ್ನ ಪೂರ್ಣಗೊಳಿಸಲಾಗುವುದು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದರು.
ಹೆದ್ದಾರಿ ಮರು ಡಾಂಬರೀಕರಣ, ತುಂಬೆ ಕಾಲೇಜು ಬಳಿ ಹೆದ್ದಾರಿಯಲ್ಲಿ ನೀರು ನಿಲ್ಲುವ ಸ್ಥಳದಲ್ಲಿ ಸಮಸ್ಯೆ ಬಗೆಹರಿಸಲು ಚರಂಡಿ ವ್ಯವಸ್ಥೆ, ಸುರಕ್ಷತಾ ವ್ಯವಸ್ಥೆ ಅಳವಡಿಕೆ, ಸರ್ವಿಸ್ ರಸ್ತೆಗಳ ದುರಸ್ತಿ, ರಸ್ತೆ ಬದಿ ಸ್ವಚ್ಛತೆ ಕಾಮಗಾರಿಯಲ್ಲಿ ಒಳಗೊಂಡಿದೆ. ಸುರತ್ಕಲ್‌ನಿಂದ ಬೈಕಂಪಾಡಿ, ಕೂಳೂರಿನಿಂದ ಎಜೆ ಆಸ್ಪತ್ರೆ, ನಂತೂರಿನಿಂದ ಪಡೀಲ್‌ವರೆಗೆ ಡಾಂಬರೀಕರಣ ನಡೆಯಲಿದೆ. ಒಂದೂವರೆ ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸುರತ್ಕಲ್- ಬಿಸಿರೋಡ್ ನಡುವೆ ಹೆದ್ದಾರಿ ನಿರ್ವಹಣೆಯನ್ನು ವಿಶೇಷ ಉದ್ದೇಶದ ವಾಹನ (ಎಸ್‌ಪಿವಿ) ನವ ಮಂಗಳೂರು ಬಂದರು ರಸ್ತೆ ಕಂಪೆನಿ ಲಿಮಿಟೆಡ್ ನಿರ್ವಹಿಸುತ್ತಿದ್ದು, ಇದರಿಂದ ಸಮಸ್ಯೆಗಳಾಗಿವೆ. ಈ ಹಿನ್ನೆಲೆಯಲ್ಲಿ ಎಸ್‌ಪಿವಿ ವಿಸರ್ಜಿಸಿ ಹೆದ್ದಾರಿ ನಿರ್ವಹಣೆಯ ಹೊಣೆಯನ್ನು ಎನ್‌ಎಚ್‌ಎಐಗೆ ವಹಿಸುವಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಇಲಾಖೆ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ. ಸಚಿವರಿಂದ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಶೀಘ್ರದಲ್ಲಿ ಎಸ್‌ಪಿವಿ ವಿಸರ್ಜನೆಗೊಳ್ಳಲಿದೆ ಎಂದರು.
ಮಂಗಳೂರಿನ ನಂತೂರು ವೃತ್ತದಲ್ಲಿ ಹೆದ್ದಾರಿ ಕಾಮಗಾರಿಗಳು ಗುತ್ತಿಗೆದಾರರ ಸಮಸ್ಯೆಯಿಂದ ವಿಳಂಬವಾಗಿದೆ. ಮಳೆಗಾಲಕ್ಕೆ ಮುನ್ನ ಫ್ರೀ ಲೆ- ಕೆಲಸ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಂಸದರು ಹೇಳಿದರು.
ಮಂಗಳೂರು- ಕಬಕ ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್‌ಗೆ ವಿಸ್ತರಿಸಲು ರೈಲ್ವೆ ಇಲಾಖೆ ಅನುಮೋದನೆ ನೀಡಿದ್ದು, ಎಪ್ರಿಲ್ ಎರಡನೇ ವಾರದಲ್ಲಿ ಹೊಸ ರೈಲು ಪ್ರಯಾಣಕ್ಕೆ ಚಾಲನೆ ದೊರೆಯಲಿದೆ ಎಂದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಎಲ್ಲ ರೀತಿಯಲ್ಲೂ ಸಂವಿಧಾನ ವಿರೋಽಯಾಗಿ ವರ್ತಿಸುತ್ತಿದೆ. ಮುಸಲ್ಮಾನರಿಗಾಗಿ ಸಂವಿಧಾನ ಬದಲಾಯಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮನಸ್ಸಿನಲ್ಲಿ ಇರುವುದನ್ನು ಬಾಯಿಯಲ್ಲಿ ಹೇಳಿದ್ದಾರೆ. ಆ ಮೂಲಕ ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿ ಮಾತನಾಡಿದ್ದಾರೆ. ಸರಕಾರಿ ಕಾಮಗಾರಿಯಲ್ಲಿ ಮುಸಲ್ಮಾನ ಗುತ್ತಿಗೆದಾರರಿಗೆ ಶೇ. ೪ರಷ್ಟು ಮೀಸಲಾತಿ ನೀಡಲು ರಾಜ್ಯ ಸರಕಾರ ಹೊರಟಿರುವುದು ಸಂವಿಧಾನ ವಿರೋಽಯಾಗಿದ್ದು, ಇದನ್ನು ಖಂಡಿಸುವ ಜತೆಗೆ ಈ ನಿರ್ಧಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು.
ಮಾಜಿ ಕಾರ್ಪೋರೇಟರ್‌ಗಳಾದ ಸುನೀತಾ, ಭಾಸ್ಕರಚಂದ್ರ ಶೆಟ್ಟಿ, ಪ್ರಮುಖರಾದ ಸಂಜಯ ಪ್ರಭು, ವಸಂತ ಪೂಜಾರಿ ಉಪಸ್ಥಿತರಿದ್ದರು.
=================
ಬಿಜೆಪಿಯ ೧೮ ಮಂದಿ ಶಾಸಕರನ್ನು ಆರು ತಿಂಗಳು ಅಮಾನತು ಮಾಡುವ ಮೂಲಕ ಸ್ಪೀಕರ್ ಯು.ಟಿ. ಖಾದರ್ ಅವರು ಸರಕಾರದ ಏಜೆಂಟ್ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಜನರಿಂದ ಆಯ್ಕೆಯಾದ ಶಾಸಕರನ್ನು ಆರು ತಿಂಗಳು ಅಮಾನತು ಮಾಡುವುದು ಸರ್ವಾಽಕಾರಿ ನಿರ್ಧಾರವಾಗಿದೆ. ಶಾಸಕರ ಹಾಗೂ ಆಯಾ ಕ್ಷೇತ್ರದ ಜನತೆಯ ಧ್ವನಿಯನ್ನು ದಮನಿಸುವ ಪ್ರಯತ್ನವಿದು. ಈ ರೀತಿಯ ಕೆಟ್ಟ ಸಂಪ್ರದಾಯವನ್ನು ಸುಸಂಸ್ಕೃತ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಸ್ಪೀಕರ್ ಅವರು ಆರಂಭಿಸಿರುವುದು ನಾಚಿಕೆಗೇಡು ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.
ಶಾಸಕರನ್ನು ಆರು ತಿಂಗಳು ಅಮಾನತು ಮಾಡಿರುವುದು ಸರಿಯಾದ ಕ್ರಮವಲ್ಲ. ಇದು ರಾಜಕೀಯ ಪ್ರೇರಿತ ನಿರ್ಧಾರವಾಗಿದೆ. ಇದರ ವಿರುದ್ಧ ಜನಾಭಿಪ್ರಾಯ ರೂಪಿಸುವ ಜತೆಗೆ ಕಾನೂನು ಹೋರಾಟ ನಡೆಸುತ್ತೇವೆ ಎಂದರು.
0000
ಬಿಜೆಪಿ ಶಾಸಕರಿಗೆ ರೌಡಿ ಶೀಟರ್‌ಗಳ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ..?
ಮಂಗಳೂರು: ರೌಡಿ ಶೀಟರ್ ಎಂದು ಗುರುತಿಸಿರುವ ಕಾಂಗ್ರೆಸ್ ಪಕ್ಷದ ಹರೀಶ್ ಎಂಬಾತನನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಸಮಿತಿ ಸದಸ್ಯರಾಗಿ ನೇಮಿಸಲು ಜಿಲ್ಲಾ ಉಸ್ತುವಾರಿ ಸಚಿವರು ಶಿಫಾರಸು ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಶಾಸಕರು ನೀಡಿರುವ ಹೇಳಿಕೆ ವೈರಲ್ ಆಗಿದೆ. ಆದರೆ ಬಿಜೆಪಿಯ ಶಾಸಕರಿಗೆ ರೌಡಿ ಶೀಟರ್‌ಗಳ ಬಗ್ಗೆ ಮಾತನಾಡುವ
ನೈತಿಕತೆ ಇದೆಯೇ? ಎಂದು ಕಾಂಗ್ರೆಸ್ ದಕ ಜಿಲ್ಲಾ ಅಧ್ಯಕ್ಷ ಕೆ.ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.
ನಗರದಲ್ಲಿರುವ ಜಿಲ್ಲಾ ಕಾಂಗ್ರೆಎಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪ ಮಾಡಿರುವ ಶಾಸಕರ ಪಕ್ಷದ ಸಂಘಟನೆಗಳಲ್ಲಿ ಒಂದು ಚಯರ್ ಸಿಗಬೇಕಾಗಿದ್ದರೂ ರೌಡಿ
ಶೀಟರ್ ಆಗುವುದು ಕನಿಷ್ಠ ಅರ್ಹತೆ. ಅವರ ಹೆಸರಿನಲ್ಲಿ ಕೆಲವು ಕೇಸುಗಳು ಆದರೂ ಇರಬೇಕು. ಆರ್‌ಟಿಐ ಕಾರ್ಯಕರ್ತರೋರ್ವರ ಕೊಲೆ ನಡೆಸಿದ ವ್ಯಕ್ತಿ ಶಾಸಕರ ರಾಜಕೀಯ ಸಲಹೆಗಾರ. ಇವರ
ಬಲಗೈ ಬಂಟ. ಇವರು ಇತರ ರೌಡಿ ಶೀಟರ್‌ಗಳ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ಕದ್ರಿ ದೇವಸ್ಥಾನದಲ್ಲಿ ಹುಂಡಿಗೆ ಕೈ ಹಾಕಿದ ವ್ಯಕ್ತಿ ಇದೇ ಶಾಸಕರು ನೇಮಿಸಿದ ಟ್ರಸ್ಟಿಯಾಗಿದ್ದಾರೆ. ಅವರು ತಮ್ಮ ತಟ್ಟೆಯಲ್ಲಿ ಸತ್ತು ಬಿದ್ದಿರುವ ಹೆಗ್ಗಣವನ್ನು ಬಿಟ್ಟು ಉಳಿದವರ ತಟ್ಟೆಯನ್ನು ತೋರಿಸುತ್ತಿದ್ದಾರೆ. ಶಾಸಕರು ಆರೋಪಿಸಿರುವ ಕಾಂಗ್ರೆಸ್‌ನ ಹರೀಶ್ ದೇವಸ್ಥಾನದ ಕಟ್ಟಡದಲ್ಲಿ ಅಂಗಡಿ ಬಾಡಿಗೆ ತೆಗೆದು ಸಮಸ್ಯೆಯಿಂದ ಆರಂಭದಲ್ಲಿ ಬಾಡಿಗೆ ಪಾವತಿಸಿರಲಿಲ್ಲ. ಆದರೆ ಬಳಿಕ ಪೂರ್ಣ ೯ ಲಕ್ಷ ರೂ ಬಾಡಿಗೆ
ಪಾವತಿಸಿದ್ದಾರೆ. ಹರೀಶ್ ಕುಮಾರ್ ಹೆಸರು ಒಂದು ಕಾಲದಲ್ಲಿ ರೌಡಿ ಶೀಟರ್‌ಗಳ ಪಟ್ಟಿಯಲ್ಲಿ ಇದ್ದದ್ದು ಕೂಡ ನಿಜ. ಆದರೆ ೧೨ ವರ್ಷಗಳ ಹಿಂದೆಯೇ ರೌಡಿ ಶೀಟರ್ ಪಟ್ಟಿಯಿಂದ ಹರೀಶ್ ಅವರ ಹೆಸರು ಕೈಬಿಡಲಾಗಿದೆ. ಬಳಿಕ ಅವರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇದು ಅವರಲ್ಲಿ ಆಗಿರುವ ಬದಲಾವಣೆಗೆ ಸಾಕ್ಷಿ ಎಂದವರು ವಿವರಿಸಿದರು.
ಉಸ್ತುವಾರಿ ಸಚಿವರು ಕ್ಲಬ್ ನಡೆಸಲು ಮುಂದಾಗಿದ್ದಾರೆಯೇ ಎಂದು ಶಾಸಕರು ಪ್ರಶ್ನಿಸಿದ್ದಾರೆ. ಶಾಸಕರ ಆಪ್ತರು ಎಷ್ಟು ಮಂದಿ ಇಸ್ಪೀಟು ಕ್ಲಬ್ ನಡೆಸುತ್ತಿದ್ದಾರೆ ಎಂದು ಅವರ ಜತೆ ಬಹಿರಂಗ ಚರ್ಚೆಗೆ ಸಿದ್ದವಾಗಿರುವುದಾಗಿ ಅವರು ಹೇಳಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಳೀಯರು ಎಲ್ಲ ವಿಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇವಸ್ಥಾನಗಳನ್ನು ನಿರ್ವಹಿಸುವುದು ತುಂಬಾ ಹಿಂದಿನಿಂದಲೂ ನಡೆಯುತ್ತಾ ಬಂದಿರುವುದು. ಆದರೆ ಬಿಎಸ್ವೈ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇವಸ್ಥಾನಗಳ ಆಡಳಿತ ಸಮಿತಿಗೆ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ನೇಮಿಸುವ ಮೂಲಕ ದೇವಸ್ಥಾನಗಳಿಗೆ ಪ್ರಥಮ ಬಾರಿಗೆ ರಾಜಕೀಯ ಪ್ರವೇಶ ಮಾಡಿತು. ಬಳಿಕ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಇದು ಮುಂದುವರಿಯಿತು ಎಂದು ಅವರು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಪದ್ಮರಾಜ್, ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮುಖಂಡರಾದ ಜಾಕಿಂ, ವಿಕಾಸ್, ಕಿರಣ್ ಉಪಸ್ಥಿತರಿದ್ದರು.

