ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಾಲಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಿದೆ.

udupi:

Font size:

ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಾಲಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಿದೆ.

from Jayaram Udupi

ಸಾಲಿಗ್ರಾಮ ಪಟ್ಟಣ ಪಂಚಾಯತ್ ಜೊತೆಗೂಡಿ ಅದು ಪ್ಲಾಸ್ಟಿಕ್ ಚೀಲದಲ್ಲಿ ಹಣ್ಣು ಕಾಯಿ ತರುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಈ ಬಗ್ಗೆ ಬ್ಯಾನರ್ ಅಳವಡಿಸಿ ತಿಳುವಳಿಕೆಯನ್ನೂ ನೀಡಿದೆ. ಸಾಮಾಜಿಕ ಜವಾಬ್ದಾರಿಯಿಂದ ದೇವಾಲಯ ಕೈಗೊಂಡ ಈ‌ ಕ್ರಮ ಪರಿಸರವಾದಿಗಳ ಮೆಚ್ಚುಗೆಗೆ ಕಾರಣವಾಗಿದೆ.
ಪ್ಲಾಸ್ಟಿಕ್ ಬಳಸಿ ಎಸೆಯುವ ಮೂಲಕ ಪರಿಸರಕ್ಕೆ ಹಾನಿ ಜೊತೆಗೆ ಪ್ರಾಣಿ, ಪಕ್ಷಿಗಳು, ಜಲಚರಗಳ ಸಾವಿಗೆ ಕಾರಣರಾಗುತ್ತಿರುವ ಮನುಷ್ಯರು ಈ ಪೋಸ್ಟರ್ ನೋಡಿಯಾದರೂ ಚೀಲ ತಂದಾರು, ಪ್ಲಾಸ್ಟಿಕ್ ಕೈ ಬಿಟ್ಟಾರು ಎಂಬುದು ಅವರ ಲೆಕ್ಕಾಚಾರ

000

ಕಾಸರಗೋಡು

ಅನುಮತಿ ಇಲ್ಲದೆ ಪಟಾಕಿ ಸಿಡಿಸಿದ್ದಕ್ಕೆ ಪಾಲಕುನ್ನು ಶ್ರೀ ಭಗವತಿ ದೇವಸ್ಥಾನ ಆಡಳಿತ ಅಧಿಕಾರಿಗಳ ವಿರುದ್ಧ ಬೇಕಲ ಪೊಲೀಸರು ಪ್ರಕರಣವನ್ನು ಧಾಖಲಿಸಿಕೊಂಡಿದ್ದಾರೆ . ಪಾಲಕುನ್ನು ದೇವಸ್ಥಾನದಲ್ಲಿ ಅನುಮತಿ ಇಲ್ಲದೆ ಪಟಾಕಿ ಸಿಡಿಸಿದ್ದಕ್ಕಾಗಿ ದೇವಸ್ಥಾನದ ಅಧಿಕಾರಿಗಳು ಮತ್ತು ಪಟಾಕಿ ಗುತ್ತಿಗೆದಾರರೂ ಸೇರಿದಂತೆ ಒಟ್ಟು 8 ಜನರ ವಿರುದ್ಧ ಬೇಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ಶೈನ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉತ್ಸವ ವೀಕ್ಷಿಸಲು ಬಂದಿದ್ದ ಸಾರ್ವಜನಿಕರಿಗೆ ಅಪಾಯವನ್ನುಂಟು ಮಾಡುವ ರೀತಿಯಲ್ಲಿ ಪಟಾಕಿಗಳನ್ನು ಸಿಡಿಸಲಾಗಿತ್ತು. ಕೇರಳದ ಕಾಸರಗೋಡು ಜಿಲ್ಲೆಯ ನಿಲೇಶ್ವರದ ವೀರ ಕಾವ್ ದೇವಾಲಯದಲ್ಲಿ ಸುಡುಮದ್ದು ಪ್ರದರ್ಶನದ ವೇಳೆ ಉಂಟಾದ ಅವಘಡ ಬಳಿಕ ಪಟಾಕಿ ಪ್ರದರ್ಶನ ನಿಷೇಧ ಹೇರಲಾಗಿತ್ತು . ಕಾನೂನಿನ ವಿರುದ್ಧವಾಗಿ ನಡೆದುದರಿಂದ ದೂರು ದಾಖಲಾಗಿದೆ . ಪೊಲೀಸರು ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರನಾಥ್,. ಪಟಾಕಿ ಗುತ್ತಿಗೆದಾರ ನೀಲೇಶ್ವರದ ಪಿ.ವಿ. ದಾಮೋದರನ್ ಮತ್ತು ಇತರ ಆಡಳಿತ ಮಂಡಳಿಯವರ ವಿರುದ್ದ ಕೇಸು ದಾಖಲಿಸಿದ್ದಾರೆ.

Prev Post *ವಚನ ದರ್ಶನ: ಸತ್ಯ v/s ಮಿಥ್ಯ' ಕೃತಿ ಬಿಡುಗಡೆ ಸಮಾರಂಭ
Next Post ದಕ್ಷಿಣ ರಾಜ್ಯಗಳ ಲೋಕಸಭಾ ಕ್ಷೇತ್ರಗಳನ್ನು ಕುಗ್ಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್