೨೦೨೪-೨೫ನೇ ಸಾಲಿನಲ್ಲಿ ೧೦ ಸಾವಿರ ವಸತಿ ರಹಿತ ಮೀನುಗಾರರಿಗೆ ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ ಮನೆಗಳನ್ನು ನಿರ್ಮಿಸಲು ಸಹಾಯಧನ ನೀಡಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ
೨೦೨೪-೨೫ನೇ ಸಾಲಿನಲ್ಲಿ ೧೦ ಸಾವಿರ ವಸತಿ ರಹಿತ ಮೀನುಗಾರರಿಗೆ ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ ಮನೆಗಳನ್ನು ನಿರ್ಮಿಸಲು ಸಹಾಯಧನ ನೀಡಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಗುರುವಾರ ನಡೆದ ಸಚಿವ ಸಂಪುಟದಲ್ಲಿ ತರ‍್ಮಾನ ತೆಗೆದುಕೊಳ್ಳಲಾಗಿದೆ ಎಂದು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರ ಎಚ್.ಕೆ ಪಾಟೀಲ ಮಾಧ್ಯಮದವರಿಗೆ ವಿವರಿಸಿದರು.
ದಿನಾಂಕ: ೨೦.೦೨.೨೦೨೫ರ ಸಚಿವ ಸಂಪುಟದ ಇತರ ನಿರ್ಣಯಗಳು
ಮೀನುಗಾರರಿಗೆ ವಸತಿ ಸೌಲಭ್ಯ
೨೦೨೪-೨೫ನೇ ಸಾಲಿನ ಆಯವ್ಯಯ ಕಂಡಿಕೆ-೬೧ ರಲ್ಲಿ ಘೋಷಿಸಲಾದಂತೆ ೨೦೨೪-೨೫ನೇ ಸಾಲಿನಲ್ಲಿ ೧೦ ಸಾವಿರ ವಸತಿ ರಹಿತ ಮೀನುಗಾರರಿಗೆ ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ ಮನೆಗಳನ್ನು ನಿರ್ಮಿಸಲು ಸಹಾಯಧನ ನೀಡಲಾಗುವುದು ಎಂಬ ಯೋಜನೆಯನ್ನು ರಾಜೀವಗಾಂಧಿ ವಸತಿ ನಿಗಮ ನಿಯಮಿತ ದವರು ಅನುಸರಿಸುವ ಫಲಾನುಭವಿ ಆಧಾರಿತ ವಿಧಾನ ಹಾಗೂ ಸದರಿಯವರು ಅನುಸರಿಸುವ ತಂತ್ರಜ್ಞಾನವನ್ನೇ ಅಳವಡಿಸಕೊಂಡು ಅನುಬಂಧ ದಲ್ಲಿನಮೂದಿಸಿರುವ ಷರತ್ತು ಮತ್ತು ನಿಬಂಧನೆಗಳನ್ನು ಅನುಸರಿಸಿ ಮೀನುಗಾರಿಕೆ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು ಇವರ ಮುಖಾಂತರ ಅನುಷ್ಠಾನಗೊಳಿಸುವುದು. ಅನುದಾನವು ಮನೆಗಳ ಮಂಜೂರಾತಿ / ಪ್ರಗತಿಗೆ ಅನುಗುಣವಾಗಿ ಬಿಡುಗಡೆ ಮಾಡಲು ಮತ್ತು ಇಲಾಖೆಯ ಮನೆಗಳ ಮಂಜೂರಾತಿಯ ನಂತರ ಅನುದಾನ ಬಿಡಗಡೆಗೆ ಪ್ರಸ್ತಾವನೆ ಸಲ್ಲಿಸಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರ ಎಚ್.ಕೆ ಪಾಟೀಲ ಮಾಧ್ಯಮದವರಿಗೆ ವಿವರಿಸಿದರು.
ವಸತಿ ರಹಿತ ಮೀನುಗಾರರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರಾಷ್ಟಿçÃಯ ಮೀನುಗಾರಿಕೆ ಕಲ್ಯಾಣ ಯೋಜನೆಯಡಿ ಮೀನುಗಾರರ ಮಾದರಿ ಗ್ರಾಮಗಳ ಅಬಿವೃದ್ಧಿಗಾಗಿ “ಮತ್ಸಾಶ್ರಯ ಯೋಜನೆ” ೧೦,೦೦೦ ಮನೆಗಳನ್ನು ಮಂಜೂರು ಮಾಡಲು ಪ್ರಸ್ತಾಪಿಸಲಾಗಿತ್ತು.
********
ಅನ್ನಭಾಗ್ಯ ನಗದು ಬದಲು ಅಕ್ಕಿ
ಕೇಂದ್ರ ಸರ್ಕಾರವು ಜನವರಿ-೨೦೨೫ ರಿಂದ ಜೂನ್-೨೦೨೫ ಔಒSS (ಆ) ರಡಿ ಪ್ರತಿ ಕೆ.ಜಿ. ಗೆ ರೂ. ೨೨.೫೦/- ದರದಲ್ಲಿ ಸರಬರಾಜು ಮಾಡಲು ಒಪ್ಪಿಗೆ ನೀಡಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಪ್ರತಿತಿಂಗಳು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥೆ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮುಖಾಂತರ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಯ ಬದಲಾಗಿ ಫೆಬ್ರವರಿ-೨೦೨೫ ರ ಮಾಹೆಯಿಂದ ಜಾರಿಗೆ ಬರುವಂತೆ ಸರ್ಕಾರದ ಆದೇಶ ಸಂಖ್ಯೆ: ಅನಾಸ ೮೪ ಡಿಆರ್‌ಎ ೨೦೨೩, ದಿನಾಂಕ: ೦೬.೦೭.೨೦೨೩ ರ ಮಾರ್ಗ ಸೂಚಿಗಳನ್ವಯ ಅರ್ಹ ಫಲಾನುಭವಿಗಳಿಗೆ ೫ ಕೆ.ಜಿ. ಅಕ್ಕಿಯನ್ನು ಸಾರ್ವಜನಿಕ ವಿತರಣಾ ಪದ್ದತಿಯಡಿ ವಿತರಿಸಲು ನಿರ್ಣಯಿಸಿ ದಿನಾಂಕ: ೧೯.೦೨.೨೦೨೫ ರಂದು ಆದೇಶ ಹೊರಡಿಸಲಾಗಿರುತ್ತದೆ. ಈ ಕ್ರಮಕ್ಕೆ ಘಟೋನೋತ್ತರ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ವಿವರಿಸಿದರು.
ಪ್ರತಿ ಕೆ.ಜಿ ಅಕ್ಕಿಯ ದರ ರೂ.೨೨.೫೦/- ಪ್ರಸ್ತುತ ಪ್ರತಿ ಕೆ.ಜಿಗೆ ರೂ.೩೪/- ರಂತೆ ರೂ.೧೭೦.೦೦ ಗಳನ್ನು ಕುಟುಂಬದ ಪ್ರತಿ ಸದಸ್ಯರಿಗೆ ಅವರ ಕುಟುಂಬದ ಮುಖ್ಯಸ್ಥರ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ.
ರಾಷ್ಟಿçÃಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ ೫ ಕೆ.ಜಿ ಆಹಾರ ಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ ೦೫ ಕೆ.ಜಿ ಆಹಾರ ಧಾನ್ಯವನ್ನು ಸೇರಿಸಿ, ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದ್ದು, ಇನ್ನುಮುಂದೆ ೦೫ ಕೆ.ಜಿಗೆ ತಲಾ ರೂ.೧೭೦/- ಗಳ ಬದಲಾಗಿ ೦೫ ಕೆ.ಜಿ ಅಕ್ಕಿಯನ್ನು ವಿತರಿಸಲು ಪ್ರಸ್ತಾಪಿಸಲಾಗಿದೆ.
********
ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ
ಸಮಾಜ ಕಲ್ಯಾಣ ಇಲಾಖೆಯ ೬೩ ಡಾ, ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳಿಗೆ (ಅನುಬಂಧ-೧ ರಂತೆ) ಅಂದಾಜು ರೂ. ೪೪೧-೦೦ ಕೋಟಿಗಳ ವೆಚ್ಚದಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ಮತ್ತು ಸದರಿ ಕಾಮಗಾರಿಗಳನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಕೆ.ಟಿ.ಪಿ.ಪಿ. ಅಧಿನಿಯಮ ೧೯೯೯ ರಂತೆ ಇ-ಸಂಗ್ರಹಣೆ ಟೆಂಡರ್ ಮೂಲಕ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ವಿವರಿಸಿದರು.
ಮೇಟ್ರಿಕ್ ಪೂರ್ವ ೩೨ ಮತ್ತು ಮೇಟ್ರಿಕ್ ನಂತರದ ೩೧ ಡಾ. ಬಿ.ಆರ್. ಅಂಬೇಡ್ಕರ್ ಒಟ್ಟು ೬೩ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ರೂ.೪೪೧.೦೦ ಕೋಟಿಗಳ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಪ್ರಸ್ತಾಪಿಸಿದೆ.
********
ಅಧಿವೇಶನ ದಿನಾಂಕ ನಿಗಧಿ
ಕನಾಟಕ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನವನ್ನು ಸಮಾವೇಶಗೊಳಿಸಲು ಹೊರಡಿಸಿದ ಅಧಿಸೂಚನೆ ಸಂ: ಸಂವ್ಯಶಾಇ ೦೧ ಸಂವ್ಯವಿ ೨೦೨೫ ದಿನಾಂಕ: ೧೮.೦೨.೨೦೨೫ ಕ್ಕೆ ಘಟನೋತ್ತರ ಅನುಮೋದನೆಯನ್ನು ಹಾಗೂ ಭಾರತ ಸಂವಿಧಾನದ ೧೭೬ನೇ ಅನುಚ್ಚೇದದ (೧)ನೇ ಖಂಡದ ಮೂಲಕ ಅಗತ್ಯಪಡಿಸಿದಂತೆ ಒಟ್ಟಿಗೆ ಸೇರಿರುವ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಉದ್ದೇಶಿಸಿ ಭಾಷಣ ಮಾಡಲು ಮಾನ್ಯ ರಾಜ್ಯಪಾಲರನ್ನು ಕೋರುವಂತೆ ಸಚಿವ ಸಂಪುಟ ನಿರ್ಣಯಿಸಿದೆ ಎಂದು ವಿವರಿಸಿದರು.
ರಾಜ್ಯಪಾಲರು ಉಭಯ ಸದನಗಳ ಉದ್ದೇಶಿಸಿ ಭಾಷಣ ಮಾಡಲು ಕೋರಲು ಸಚಿವ ಸಂಪುಟ ಅನುಮೋದನೆಗೆ ಮಂಡಿಸಲಾಗಿದೆ.
ಕರ್ನಾಟಕ ವಿಧಾನ ಮಂಡಲ ಅಧಿವೇಶನ ಸಮಾವೇಶಗೊಳಿಸಲು ಮಾನ್ಯ ಮುಖ್ಯಮಂತ್ರಿಗಳು ಜರೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದು, ಈ ಕ್ರಮಕ್ಕೆ ಘಟನೋತ್ತರ ಮಂಜೂರಾತಿ ನೀಡಲು ಪ್ರಸ್ತಾಪಿಸಲಾಗಿತ್ತು.
********
ಬೀದರನ ಪಾಪನಾಶ ದೇವಸ್ಥಾನಕ್ಕೆ ಮೂಲಸೌಕರ್ಯ
“ಕೇಂದ್ರ ಪುರಸ್ಕೃತ “ಪ್ರಸಾದ್ ೨.೦” ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಬೀದರ್ ಜಿಲ್ಲೆಯ ಬೀದರ್ ಶ್ರೀ ಪಾಪನಾಶ ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯಗಳನ್ನು (ಶೇ ೧೦೦% ರಷ್ಟು ಕೇಂದ್ರ ಸಹಾಯಧನ) ಅಭಿವೃದ್ಧಿ ಪಡಿಸುವ ಯೋಜನೆಯನ್ನು ರೂ. ೨೨೪೧-೦೯ ಲಕ್ಷಗಳ ಅಂದಾಜು ಮೊತ್ತದಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಕೈಗೊಳ್ಳಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಸಚಿವರು ವಿವರಿಸಿದರು.
ಒಟ್ಟು ಯೋಜನಾ ವೆಚ್ಚ ರೂ.೨೨.೪೧ ಕೋಟಿಗಳು. ವಾಹನ ನಿಲುಗಡೆ ವ್ಯವಸ್ಥೆ, ಶೌಚಾಲಯ, ಕ್ಲಾಕ್ ರೂಂ, ಜಾತ್ರೆ ಕಾಂಪ್ಲೆಕ್ಸ್, ಬಟ್ಟೆ ಬದಲಾಯಿಸುವ ಕೊಠಡಿ, ಪ್ರಸಾದ ನಿಲಯ, ಸಾಂಸ್ಕೃತಿಕ ಭವನ, ಅನ್ನ ದಾಸೋಹ ಭವನ, ಕುಡಿಯುವ ನೀರಿನ ವ್ಯವಸ್ಥೆ, ಮೆಟ್ಟಿಲುಗಳು ಮತ್ತು ಪಾದಚಾರಿ ಮಾರ್ಗ, ದೇವಸ್ಥಾನದ ಮುಖ್ಯದ್ವಾರ, ಕಂಪೌAಡ್, ಎಸ್‌ಟಿಪಿ ಘಟಕ ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.
ಬೀದರ್ ಜಿಲ್ಲೆಯ ಬೀದರನ ಶ್ರೀ ಪಾಪನಾಶ ದೇವಸ್ಥಾನದಲ್ಲಿ ರೂ.೨೨.೪೧ ಕೋಟಿ ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದ (Piಟgಡಿimಚಿge ಖeರಿuveಟಿಚಿಣioಟಿ ಚಿಟಿಜ Sಠಿiಡಿiಣuಚಿಟ ಂugmeಟಿಣಚಿಣioಟಿ ಆಡಿive-PಖಂSAಆ) ಯೋಜನೆಯಡಿಯಲ್ಲಿ ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ.
*******
ಸವದತ್ತಿ ಯಲ್ಲಮ್ಮ ಕ್ಷೇತ್ರ ಅಭಿವೃದ್ಧಿ
ಕೇಂದ್ರ ಪುರಸ್ಕೃತ “ಪ್ರಸಾದ್ ೨.೦” ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಬೆಳಗಾವಿ ಜಿಲ್ಲೆ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವನ್ನು (ಶೇ ೧೦೦% ರಷ್ಟು ಕೇಂದ್ರ ಸಹಾಯಧನ) ಅಭಿವೃದ್ಧಿ ಪಡಿಸಲು ರೂ.೧೮.೩೭ ಕೋಟಿಗಳ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಅನುಮೋದಿಸಿದೆ ಎಂದು ವಿವರಿಸಿದರು.
ಒಟ್ಟು ಯೋಜನಾ ವೆಚ್ಚ ರೂ.೧೮.೩೭ ಕೋಟಿಗಳು. ಬಹುಪಯೋಗಿ ಕಟ್ಟಡ, ಪುರುಷರ/ಮಹಿಳೆಯರ ಶೌಚಾಲಯ, ಕಂಪೌAಡ್ ಗೋಡೆ, ಭಕ್ತಾದಿಗಳ ವಿಶ್ರಾಂತಿ ಕೊಠಡಿ, ಪ್ರವಾಸಿಗರಿ/ಭಕ್ತಾದಿಗಳಿಗೆ ಮಾಹಿತಿ ಕೇಂದ್ರ, ಪ್ರಥಮ ಚಿಕಿತ್ಸಾ ಕೊಠಡಿ, ಸೋಲಾರ ಪ್ಯಾನಲ್, ಎಸ್‌ಟಿಪಿ, ಸ್ಮಾರ್ಟ್ ಡಿಸ್ಪೆ÷್ಲöÊ, ಮಾಹಿತಿ ಫಲಕಗಳು, ಲ್ಯಾಂಡ್ ಸ್ಕೇಪಿಂಗ್ ಮತ್ತು ಪಾಥವೇ ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲಾಗುವುದು.
ಕೇಂದ್ರ ಪುರಸ್ಕೃತ “ಪ್ರಶಾದ್ ೨.೦” ಯೋಜನೆಯಡಿಯಲ್ಲಿ ಅನುಮೋದನೆ ಗೊಂಡಿರುವ ಬೆಳಗಾವಿ ಜಿಲ್ಲೆ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವನು (ಶೇ.೧೦೦ ರಷ್ಟು ಕೇಂದ್ರ ಸಹಾಯಧನ) ಅಭಿವೃದ್ಧಿಪಡಿಸುವ ಯೋಜನೆಯನ್ನು ರೂ.೧೮.೩೭ ಕೋಟಿಗಳ ಮೊತ್ತದಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಗೆ ಪ್ರಸ್ತಾಪಿಸಲಾಗಿದೆ.
********
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ
“ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿAದ “ಪ್ರಸಾದ್” ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ರೂ.೬೧.೯೯ ಕೋಟಿಗಳ (ರೂಪಾಯಿ ಅರವತ್ತೊಂದು ಕೋಟಿ ತೊಂಭತ್ತೊAಭತ್ತು ಲಕ್ಷಗಳು ಮಾತ್ರ) (ಕೇಂದ್ರದ ಪಾಲು ರೂ.೪೫.೭೧ ಕೋಟಿಗಳು ಹಾಗೂ ರಾಜ್ಯದ ಪಾಲು ರೂ.೧೬.೨೮ ಕೋಟಿಗಳು) ಪರಿಷ್ಕೃತ ಅಂದಾಜು ಮೊತ್ತದಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಅನುಮೋದಿಸಿದೆ ಎಂದು ವಿವರಿಸಿದರು.
ಕೇಂದ್ರ ಪುರಸ್ಕೃತ “ಪ್ರಶಾದ್ ೨.೦” ಯೋಜನೆಯಡಿಯಲ್ಲಿ ಅನುಮೋದನೆ ಗೊಂಡಿರುವ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ರೂ.೬೧.೯೯ ಕೋಟಿಗಳ ಮೊತ್ತದಲ್ಲಿ (ಕೇಂದ್ರದ ಪಾಲು ರೂ.೪೫.೭೧ ಕೋಟಿ, ರಾಜ್ಯದ ಪಾಲು ರೂ.೧೬.೨೮ ಕೋಟಿ) ಪ್ರವಾಸೋದ್ಯಮ ಇಲಾಖೆಯ ಮೂಲಕ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಗೆ ಪ್ರಸ್ತಾಪಿಸಲಾಗಿದೆ.
********
ವಸ್ತು ಪ್ರದರ್ಶನ ಪ್ರಾಧಿಕಾರ ಮೈದಾನಕ್ಕೆ ಮೂಲಸೌಕರ್ಯ
ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣವನ್ನು ರೂ.೨೦೦೦.೦೦ ಲಕ್ಷಗಳ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿಗಳಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ವಿವರಿಸಿದರು.
ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣವನ್ನು ರೂ.೨೦.೦೦ ಕೋಟಿಗಳ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಆಡಳಿತಾತ್ಮಕ ಅನುಮೋದನೆಗೆ ಪ್ರಸ್ತಾಪಿಸಲಾಗಿದೆ.
********
ಎ.ಪಿ.ಎಮ್.ಸಿ ಕಾಯ್ದೆ ತಿದ್ದುಪಡಿ
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ & ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ ೨೦೨೫”ಕ್ಕೆ ಅನುಮೋದನೆ ಹಾಗೂ ಇದನ್ನು ವಿಧಾನಮಂಡಲದಲ್ಲಿ ಮಂಡಿಸಲು ಅನುಮೋದಿಸಿದೆ.
ಮಾರಾಟ ಚಟುವಟಿಕೆಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಾರುಕಟ್ಟೆ ಸಮಿತಿಗಳ ಜವಬ್ದಾರಿಯಾಗಿರುತ್ತದೆ. ಪ್ರಸ್ತುತ ಮಾರುಕಟ್ಟೆ ತಿದ್ದುಪಡಿಯು ಮಾರುಕಟ್ಟೆ ಸಮಿತಿಯ ಅಧಿಕಾರದ ವ್ಯಾಪ್ತಿಯನ್ನು ಮಾರುಕಟ್ಟೆ ಕ್ಷೇತ್ರಕ್ಕೆ ವಿಸ್ತರಿಸಿರುವುದರಿಂದ ಮಾನ್ಯ ನ್ಯಾಯಾಲಯದ ನಿರ್ದೇಶನ ಮೇರೆಗೆ ಚಿಲ್ಲರೆ ವಹಿವಾಟಿಗೆ ಸಂಬAಧಿಸಿದAತೆ ವರ್ಗೀಕರಣ ಮಾಡುವ ಪ್ರಸ್ತಾವವನ್ನು ಅಂಗೀಕಾರ ಪಡೆಯುವುದು ಅಗತ್ಯವಿದೆ ಎಂದು ಪ್ರಸ್ತಾಪಿಸಲಾಗಿತ್ತು.
*********
ಅಧಿಕ ಬಡ್ಡಿ ವಿಧಿಸಿದರೆ ೧೦ ವರ್ಷ ಶಿಕ್ಷೆ
ಕರ್ನಾಟಕ ಅಧಿಕ ಬಡ್ಡಿ ನಿಷೇಧ ಅಧಿನಿಯಮ, ೨೦೦೪ಕ್ಕೆ ತಿದ್ದುಪಡಿ ಮಾಡುವ ಕುರಿತು ಪ್ರಸ್ತಾಪಿತ ತಿದ್ದುಪಡಿ ವಿಧೇಯಕ ೨೦೨೫ಕ್ಕೆ ಸಚಿವ ಸಂಪುಟದ ಅನುಮೋದನೆ ನೀಡಿದೆ ಎಂದು ವಿವರಿಸಿದರು.
ಸಹಕಾರ ಸಂಘಗಳು, ನಿಬಂಧಕರು ಈಗಾಗಲೇ ಅಸ್ತಿತ್ವದಲ್ಲಿರುವ ಕರ್ನಾಟಕ ಅಧಿಕ ಬಡ್ಡಿ ನಿಷೇಧ ಕಾಯ್ದೆಯನ್ನು ಅಪರಾಧಿಗಳಿಗೆ ೧೦ ವರ್ಷ ಶಿಕ್ಷೆ ಮತ್ತು ೫ ವರ್ಷ ದಂಡ ವಿಧಿಸುವ ಮೂಲಕ ಮತ್ತಷ್ಟು ಬಿಗಿಗೊಳಿಸಲು ತಿದ್ದುಪಡಿ ಪ್ರಸ್ತಾಪಿಸಿದೆ.
********
ಗಿರವಿ ಉಲ್ಲಂಘನೆಗೆ ಕಠಿಣ ಶಿಕ್ಷೆ
ಕರ್ನಾಟಕ ಗಿರಿವಿದಾರರ ಅಧಿನಿಯಮ, ೧೯೬೧ಕ್ಕೆ ತಿದ್ದುಪಡಿ ಮಾಡುವ ಕುರಿತು ಪ್ರಸ್ತಾಪಿತ ತಿದ್ದುಪಡಿ ವಿಧೇಯಕ ೨೦೨೫ಕ್ಕೆ ಸಚಿವ ಸಂಪುಟದ ಅನುಮೋದನೆ ನೀಡಿದೆ ಎಂದು ವಿವರಿಸಿದರು.
ಬಡವರು ಮತ್ತು ದುರ್ಬಲರು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತಂತೆ ಕರ್ನಾಟಕದ ಗಿರವಿದಾರರ ಅಧಿನಿಯಮಕ್ಕೆ ತಿದ್ದುಪಡಿ ಪ್ರಸ್ತಾಪಿಸಲಾಗಿದೆ.
**********
ಲೇವಾದೇವಿ ಉಲ್ಲಂಘನೆಗೆ ಕಠಿಣ ಶಿಕ್ಷೆ
ಕರ್ನಾಟಕ ಲೇವಾದೇವಿದಾರರ ಅಧಿನಿಯಮ ೧೯೬೧ಕ್ಕೆ ತಿದ್ದುಪಡಿ ಮಾಡುವ ಕುರಿತು ಪ್ರಸ್ತಾಪಿತ ತಿದ್ದುಪಡಿ ವಿಧೇಯಕ ೨೦೨೫ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ವಿವರಿಸಿದರು.
ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ವಿಧೇಯಕ, ೨೦೨೫”ಕ್ಕೆ ಅನುಮೋದನೆಗೆ ಪ್ರಸ್ತಾಪಿಸಲಾಗಿದೆ. ಬಡವರು ಮತ್ತು ದುರ್ಬಲರು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತಂತೆ ಈ ಕಾಯ್ದೆಯನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿದೆ.
***********
ಕನ್ನಡ ಮಾಧ್ಯಮ ಮತ್ತು ಕನ್ನಡ ಪರೀಕ್ಷೆ ಪಾಸಾದವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಕಡ್ಡಾಯವಿಲ್ಲ.
ಕೆಲವೊಂದು ಅರ್ಹ ಅಭ್ಯರ್ಥಿಗಳಿಗೆ ಅಂದರೆ ತತ್ಸಮಾನ ಎಸ್.ಎಸ್.ಎಲ್.ಸಿ ಮತ್ತು ಅದರ ತತ್ಸಮಾನ ವಿದ್ಯಾರ್ಥಿಗಳ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಾಸಿಸಿರುವ ಮತ್ತು ಸದರಿ ವಿದ್ಯಾಬ್ಯಾಸವನ್ನು ಕನ್ನಡ ಮಾಧ್ಯಮದಲ್ಲಿ ಮಾಡಿರುವ ಮತ್ತು ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗ ಮತ್ತು ಇತರ ಆಯ್ಕೆ ಪ್ರಾಧಿಕಾರಗಳು ನಡೆಸಿರುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯಥಿಗಳಿಗೆ ಸದರಿ ಪರೀಕ್ಷೆಯಿಂದ ವಿನಾಯಿತಿ ನೀಡಲು ಪ್ರಸ್ತಾಪಿಸಲಾಗಿದೆ.
ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ)(೩ನೇ ತಿದ್ದುಪಡಿ) ನಿಯಮಗಳು, ೨೦೨೫ನ್ನು ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ, ೧೯೭೮ರ ಕಲಂ ೩ ಮತ್ತು ೮ರ ಅನುಸಾರ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿ, ತರುವಾಯ ೧೫ ದಿನಗಳ ಒಳಗಾಗಿ ಅದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಆಕ್ಷೇಪಣೆ/ಸಲಹೆಗಳನ್ನು ಆಹ್ವಾನಿಸಲು; ಹಾಗೂ ಪ್ರಕಟಗೊಂಡ ೧೫ ದಿನಗಳ ಒಳಗಾಗಿ ಕರಡು ನಿಯಮಗಳಿಗೆ ಸಂಬAಧಿಸಿದAತೆ ಯಾವುದೇ ಆಕ್ಷೇಪಣೆ/ಸಲಹೆಗಳು ಸ್ವೀಕೃತವಾಗದೇ ಇದ್ದಲ್ಲಿ ಅಥವಾ ಸ್ವೀಕೃತವಾದ ಆಕ್ಷೇಪಣೆ/ಸಲಹೆಗಳು ಗುರುತರವಾಗಿರದೇ ಇದ್ದಲ್ಲಿ ಅಥವಾ ಆಕ್ಷೇಪಣೆ/ಸಲಹೆಗಳನ್ನು ಪರಿಗಣಿಸಿ (ಸದರಿ ಕರಡು ನಿಯಮಗಳಲ್ಲಿ) ಮಾಡಬಹುದಾದ ಮಾರ್ಪಾಡುಗಳು ಪ್ರಮುಖವಾದಂತಹವುಗಳಾಗದೇ ಇದ್ದಲ್ಲಿ ಪುನಃ ಸಚಿವ ಸಂಪುಟದ ಅನುಮೋದನೆಗಾಗಿ ಮಂಡಿಸದೇ ಸದರಿ ಕರಡು ನಿಯಮಗಳನ್ನು ಅಂತಿಮವಾಗಿ ಹೊರಡಿಸಲು ಸಚಿವ ಸಂಪುಟ ಅನುಮೋದಿಸಿದೆ.
************
ಮರು ಟೆಂಡರ್
ಎ. ಮುಖ್ಯ ಆಯುಕ್ತರು, ಬಿ.ಬಿ.ಎಂ.ಪಿ. ರವರು ದಿನಾಂಕ: ೨೩.೦೮.೨೦೨೪ರ ಅಧಿಕಾರಯುಕ್ತ ಸಮಿತಿ ಸಭೆಯಲ್ಲಿ ವಿವರಿಸಿದಂತೆ ವಿಶೇಷ ಮಾದರಿಯ ಕಾಮಗಾರಿ/ ಯೋಜನೆ ಆಗಿರುವುದರಿಂದ, ಈಜೀಪುರ ಮೇಲ್ಸೇತುವೆ ಕಾಮಗಾರಿಯಲ್ಲಿ ಆಗಿರುವ ವಿಳಂಬವನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲವನ್ನು ಸಾಧ್ಯವಾದಷ್ಟು ಬೇಗನೆ ತಪ್ಪಿಸಿ, “ಅoಟಿsಣಡಿuಛಿಣioಟಿ oಜಿ ಇಟevಚಿಣeಜ ಖoಣಚಿಡಿಥಿ ಈಟಥಿoveಡಿ ಚಿಣ Iಔಅ ಎuಟಿಛಿಣioಟಿ ಚಿಟಿಜ ಅoಟಿsಣಡಿuಛಿಣioಟಿ oಜಿ ಚಿಜಜiಣioಟಿಚಿಟ ೨ ಐಚಿಟಿe ಖಔಃ ಚಿಣ ಃಚಿiಥಿಥಿಚಿಠಿಠಿಚಿಟಿಚಿhಚಿಟಟi ಖಚಿiಟತಿಚಿಥಿ ಐeveಟ ಅಡಿossiಟಿg oಟಿ ಖಿuಡಿಟಿಞeಥಿ –ಐumಠಿsum –ಈixeಜ Pಡಿiಛಿe –ಓo ಗಿಚಿಡಿiಚಿಣioಟಿ – ಓo ಇsಛಿಚಿಟಚಿಣioಟಿ bಚಿsis” ಯೋಜನೆಯ ಬೃಹತ್ ಕಾಮಗಾರಿಗಳನ್ನು ಕಾಲಮಿತಿಯೊಳಗೆ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಲಭ್ಯಗೊಳಿಸಲು ಅನುವಾಗುವಂತೆ ಚಾಲ್ತಿ ದರಕ್ಕೆ ಶೇ.೨೧ ರಷ್ಟು ಹೆಚ್ಚಿನ ಲಾಭಾಂಶವುಳ್ಳ ಸಂಧಾನಿತ ಟೆಂಡರ್ ಪ್ರಸ್ತಾವನೆಯಾದ Smಣ. ಏusumಚಿ (Sಣಚಿಡಿ Iಟಿಜಿಡಿಚಿಣeಛಿh ಜಿoಡಿmeಡಿಟಥಿ ಏಟಿoತಿಟಿ ಚಿs Sಣಚಿಣe ಃuiಟಜeಡಿs ಚಿಟಿಜ ಆeveಟoಠಿeಡಿs) ರವರ ಬಿಡ್ಡನ್ನು ೨೦೨೪-೨೫ನೇ ಸಾಲಿಗೆ ಮುಂದುವರೆದಿರುವ ೨೦೨೩-೨೪ನೇ ಸಾಲಿನ ಚಾಲ್ತಿ ದರಗಳಿಗೆ ಟೆಂಡರ್‌ಗಿಟ್ಟ ಮೊತ್ತವಾದ ರೂ. ೩೫೨,೪೮,೦೦,೦೦೦.೦೦ ಗಳಿಗೆ ಹೋಲಿಸಿದಾಗ ಶೇಕಡ (+) ೨೧.೦೦% ರಷ್ಟು ಇರುವ ಅಂದರೆ, ರೂ. ೪೨೬,೫೦,೦೮,೦೦೦.೦೦ ಗಳ ಸಂಧಾನಿತ ಮೊತ್ತಕ್ಕೆ ಸಚಿವ ಸಂಪುಟವು ಒಪ್ಪದೆ ಮರು ಟೆಂಡರ್ ಕರೆಯಲು ತೀರ್ಮಾನಿಸಿದೆ.
ಬೆಂಗಳೂರಿನ ಬೈಯಪ್ಪನಹಳ್ಳಿ ಐಓಸಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಿಸುವ ಬಗ್ಗೆ ಹಾಗೂ ಐಟಿಸಿ ಫ್ಯಾಕ್ಟರಿ ಜಂಕ್ಷನ್‌ನಿAದ ಬೈಯಪ್ಪನಹಳ್ಳಿ ಜಂಕ್ಷನ್‌ವರೆಗೆ ಹೆಚ್ಚುವರಿ ಎರಡು ಪಥದ ಆರ್‌ಓಬಿ ಯನ್ನು (ಸಂಯೋಜಿತ ಫ್ಲೆöÊಓವರ್ ನೊಂದಿಗೆ) ನಿರ್ಮಾಣ ಮಾಡಲು ಟೆಂಡರ್ ಸಂಧಾನಿತ ಮೊತ್ತ ರೂ.೪೨೬.೫೦ ಕೋಟಿಗಳಿಗೆ ಅನುಮೋದನೆಗೆ ಪ್ರಸ್ತಾಪಿಸಲಾಗಿತ್ತು.
***********
ಮಾಲೂರು ನೂತನ ಬಸ್ ನಿಲ್ದಾಣಕ್ಕೆ ಅನುಮೋದನೆ
ಕೋಲಾರ ಜಿಲ್ಲೆಯ ಮಾಲೂರು ಪುರಸಭೆ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಬಸ್ ನಿಲ್ದಾಣದ ಕಾಮಗಾರಿಯನ್ನು ರೂ.೨೦.೯೮ ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
“ಕೋಲಾರ ಜಿಲ್ಲೆಯ ಮಾಲೂರು ಪುರಸಭೆ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಬಸ್ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣದ ಕಾಮಗಾರಿಗಳನ್ನು ಮಾಲೂರು ಯೋಜನಾ ಪ್ರಾಧಿಕಾರದಿಂದ ಮಂಜೂರು ಮಾಡಿರುವ ಮೊತ್ತ ರೂ. ೫೦೦.೦೦ ಲಕ್ಷಗಳು, ನಗರ ಭೂ ಸಾರಿಗೆ ನಿರ್ದೇಶನಾಲಯದ ಈ ಯೋಜನೆಯಡಿ ನೀಡಿರುವ ಮೊತ್ತ ರೂ.೪೯೦.೦೦ ಲಕ್ಷಗಳು, ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ರೂ.೪೬.೫೫ ಲಕ್ಷಗಳನ್ನು ಮುಂದಿನ ದಿನಗಳಲ್ಲಿ ಮಾಲೂರು ಪುರಸಭೆಗೆ ಬಿಡುಗಡೆಯಾಗುವ ಅನುದಾನದಲ್ಲಿ ಭರಿಸಿ ಒಟ್ಟು ಅಂದಾಜು ಮೊತ್ತ ರೂ. ೨೦೯೮.೫೫ ಲಕ್ಷಗಳಲ್ಲಿ ಕೈಗೊಳ್ಳುವ ಕಾಮಗಾರಿಗೆ ಆರ್ಥಿಕ ಇಲಾಖೆಯು ವಿಧಿಸಿರುವ ಷರತ್ತಿಗೊಳ್ಳಪಟ್ಟು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ವಿವರಿಸಿದರು.
*********
ವಿಶ್ವಕರ್ಮ ಸಮಾಜಕ್ಕೆ ಜಮೀನು
ಶ್ರೀ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸೇವಾ ಸಂಸ್ಥೆ, ಹುಬ್ಬಳ್ಳಿ ತಾಲ್ಲೂಕು ಕೃಷ್ಣಪೂರ ಗ್ರಾಮದಲ್ಲಿ ಇವರಿಗೆ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾಗರಿಕ ಸೌಲಭ್ಯ ನಿವೇಶನವನ್ನು ೩೦ ವರ್ಷಗಳ ಗುತ್ತಿಗೆ ಅವಧಿಗೆ ದಿನಾಂಕ: ೨೮.೧೧.೨೦೨೨ ರಂದು ಹಂಚಿಕೆ ಮಾಡಲಾಗಿದ್ದು, ನಿವೇಶನದ ವೆಚ್ಚದ ಶೇಕಡಾ ೧೦ರಷ್ಟು ಮೌಲ್ಯಕ್ಕೆ ಹಂಚಿಕೆ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.
ಶ್ರೀ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸೇವಾ ಸಂಸ್ಥೆ (ರಿ),. ಗೋಕುಲ ರಸ್ತೆ ಹುಬ್ಬಳ್ಳಿ ಇವರಿಗೆ ಸಾಮಾಜಿಕ ಉದ್ದೇಶಕ್ಕಾಗಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರು ಮಾಡಲಾಗಿರುವ ಹುಬ್ಬಳ್ಳಿ ತಾಲ್ಲೂಕು, ಕೃಷ್ಣಾಪೂರ ಗ್ರಾಮದ ರಿ.ಸ.ನಂ.೯೫ಅ+೯೫ಬ ರ ನಾಗರಿಕ ಸೌಲಭ್ಯ ನಿವೇಶನ ಸಂಖ್ಯೆ: ೩೩೮ ನೇದ್ದರ ಕ್ಷೇತ್ರ ೧೨ ಗುಂಟೆ ೭ ಆಣೆ ೧೨೫೮.೩೦ ಚ.ಮೀ.ವಿಸ್ತೀರ್ಣವುಳ್ಳ ನಾಗರಿಕ ಸೌಲಭ್ಯ ನಿವೇಶನವನ್ನು ರೂ.೭೦,೪೬,೪೮೦/-ಗಳಿಗೆ ೩೦ ವರ್ಷಗಳ ಅವಧಿಗೆ ಗುತ್ತಿಗೆ (ಲೀಸ್) ಆಧಾರದ ಮೇಲೆ ಹಂಚಿಕೆ ಮಾಡಲಾಗಿರುತ್ತದೆ. ಶ್ರೀ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸೇವಾ ಸಂಸ್ಥೆ (ರಿ)., ಗೋಕುಲ ರಸ್ತೆ, ಹುಬ್ಬಳ್ಳಿ ಇವರು ಪ್ರಾಧಿಕಾರಕ್ಕೆ ಪಾವತಿಸಬೇಕಾಗಿರುವ ಬಾಕಿ ಮೊತ್ತಕ್ಕೆ ವಿನಾಯಿತಿ ನೀಡಿ ೩೦ ವರ್ಷಗಳ ಅವಧಿಗೆ ಗುತ್ತಿಗೆ (ಲೀಜ್) ಮಾಡಿಕೊಡುವ ಕು








