From Jayaram Udupi
ಅರ್ಚಕನೊಬ್ಬನ ನಗ್ನ ವಿಡಿಯೋ ಇಟ್ಟುಕೊಂಡು ಹಣ ವಸೂಲು ಮಾಡುತ್ತಿದ್ದ ಯಕ್ಷಗಾನ ಕಲಾವಿದನನ್ನು ಬ್ಲಾಕ್ ಮೇಲ್ ಆರೋಪದಲ್ಲಿ ಕಾಸರಗೋಡಿನಲ್ಲಿ ಬಂಧಿಸಲಾಗಿದೆ.
ಯಕ್ಷಗಾನ ಸ್ತ್ರೀ ವೇಷಧಾರಿ ಅರ್ಚಕರೋರ್ವರಿಗೆ ಬ್ಲಾಕ್ ಮೇಲ್ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಈಗ
ಮಂಗಳೂರು ಮೂಲದ ಯಕ್ಷಗಾನ ಕಲಾವಿದನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ವಿಡಿಯೋಗಳನ್ನ ಮುಂದಿಟ್ಟು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದರಿಂದ
ಕೇರಳದ ಕಾಸರಗೋಡಿನಲ್ಲಿ 10 ಲಕ್ಷ ರೂಪಾಯಿಗಳನ್ನು ಆರ್ಚಕ ಕಳೆದುಕೊಂಡಿದ್ದರು.
ಮಂಗಳೂರು ಮೂಲದ ಯಕ್ಷಗಾನ ಸ್ತ್ರೀವೇಷಧಾರಿ ಜೊತೆಯಲ್ಲಿ ವಿಡಿಯೋ ಕಾಲ್ ಮೂಲಕ ಅರ್ಚಕ ಸಂಪರ್ಕದಲ್ಲಿದ್ದರು.
ಮಂಗಳೂರು ಕೊಳಂಬೆ ನಿವಾಸಿಯಾಗಿರುವ ಯಕ್ಷಗಾನ ಕಲಾವಿದ ಅಶ್ವತ್ ಆಚಾರ್ಯ ಬಂಧಿತ ಆರೋಪಿ.
ಫೇಸ್ ಬುಕ್ ಮೂಲಕ ಅರ್ಚಕನನ್ನ ತನ್ನ ಬಲೆಗೆ ಬೀಳಿಸಿಕೊಂಡಿದ್ದ ಆರೋಪಿ ವಿಡಿಯೋ ಕಾಲ್ ವೇಳೆ ಅರ್ಚಕನ ನಗ್ನ ಚಿತ್ರಗಳನ್ನು ತೆಗೆದು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ದೂರಲಾಗಿದೆ.
ನವೆಂಬರ್ 2024ರಿಂದ ಬ್ಲ್ಯಾಕ್ ಮೆಲ್ ಮಾಡಲು ಆರಂಭ ಮಾಡಿದ್ದ ಆಚಾರ್ಯ
ಲಿಂಗ ಪರಿವರ್ತನೆ ಮಾಡಿಕೊಳ್ಳಲು ಹಣ ಬೇಕು ಎಂದು ಅರ್ಚಕರ ನಗ್ನ ಫೋಟೋ ಇಟ್ಟು ಬ್ಲಾಕ್ ಮೇಲ್ ಮಾಡುತ್ತಿದ್ದ.
ಗೂಗಲ್ ಪೇ ಮೂಲಕ ಸುಮಾರು 3 ಲಕ್ಷ ಅರ್ಚಕ ಪಾವತಿಸಿದ್ದರು.
ಬಳಿಕ ಅಶ್ವತ್ ಆಚಾರ್ಯನ ಬ್ಯಾಂಕ್ ಖಾತೆಗೆ 7 ಲಕ್ಷ ಹಣ ಜಮಾವಣೆ ಮಾಡಿದ್ದರು.
ಆದ್ರೆ ಬ್ಲ್ಯಾಕ್ ಮೇಲ್ ಮುಂದುವರೆದ ಕಾರಣ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ ಬದಿಯಡ್ಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.