ಮೆಗಾ ಜ್ಯೂವೆಲರಿ ಪಾರ್ಕ್ ಗೆ 50 ಎಕರೆ ಕೊಡಿ: ಶರವಣ ಮನವಿ

BANGALURU:

Font size:

ಮೆಗಾ ಜ್ಯೂವೆಲರಿ ಪಾರ್ಕ್ ಗೆ 50 ಎಕರೆ ಕೊಡಿ: ಶರವಣ ಮನವಿ

ಮೆಗಾ ಜ್ಯೂವೆಲರಿ ಪಾರ್ಕ್ ಗೆ 50 ಎಕರೆ ಕೊಡಿ: ಶರವಣ ಮನವಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆದಿನಾರಾಯಣ ಹೊಸಹಳ್ಳಿಯ 2‌ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಮೆಗಾ ಜ್ಯೂವೆಲರಿ ಪಾರ್ಕ್ ಸ್ಥಾಪಿಸಲು ರಿಯಾಯಿತಿ ದರದಲ್ಲಿ 50 ಎಕರೆ ಭೂಮಿಯನ್ನು ಕೊಡಬೇಕು ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ಅವರು ಸೋಮವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಲಕ್ಷಾಂತರ ಜನ ಚಿನ್ನ-ಬೆಳ್ಳಿ ಕೆಲಸದಲ್ಲಿ ನಿರತರಾಗಿದ್ದಾರೆ. ಈ ವಲಯದಿಂದ ವರ್ಷಕ್ಕೆ 1 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ ಸಂದಾಯವಾಗುತ್ತಿದೆ. ಆದರೆ ಇದುವರೆಗೂ ಜ್ಯೂವೆಲರಿ ಪಾರ್ಕ್ ಸ್ಥಾಪಿಸದೆ ಇರುವುದರಿಂದ ಹಿನ್ನಡೆಯಾಗಿದೆ ಎಂದು ಅವರು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.

ಮೆಗಾ ಜ್ಯೂವೆಲರಿ ಪಾರ್ಕ್ ಸ್ಥಾಪಿಸಿದರೆ ಅದಕ್ಕೆ 495 ಕೋಟಿ ರೂಪಾಯಿ ಹೂಡಿಕೆ ಆಗಲಿದ್ದು, 10 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಆದ್ದರಿಂದ ಎರಡು ವರ್ಷಗಳ ಹಿಂದೆಯೇ ಬಜೆಟ್ಟಿನಲ್ಲಿ ಘೊಷಣೆ ಆಗಿರುವ ಈ ಯೋಜನೆಯನ್ನು ಕಾರ್ಯಗತಗೊಳಿಸಬೇಕು ಎಂದು ಅವರು ಹೇಳಿದ್ದಾರೆ.

ಮನವಿ ಸ್ವೀಕರಿಸಿದ ಸಚಿವರು, ಜ್ಯೂವೆಲರಿ ಪಾರ್ಕ್ ಸ್ಥಾಪನೆ ಯೋಜನೆಯ ಅನುಷ್ಠಾನ ಕುರಿತು ಸಕಾರಾತ್ಮಕವಾಗಿ ಪರಿಶೀಲಿಸಲಾಗುವುದು ಎಂದಿದ್ದಾರೆ.

Prev Post ೨೭ರಿಂದ ವಿಧಾನಸೌಧದಲ್ಲಿ ಪುಸ್ತಕ, ಸಾಂಸ್ಕೃತಿಕ ಉತ್ಸವ ;ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್
Next Post ರಾಹುಲ್ ಗಾಂಧಿ ಮೇಲೆ ಇಂಡಿ ಒಕ್ಕೂಟದ ಮಿತ್ರರಿಗೆ ವಿಶ್ವಾಸವೇ ಇಲ್ಲ