Font size:
ಡ್ರೈವರ್ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿದ್ದು, ಆ ಸಂಬಂಧಿತ ವೀಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.
from Jayaram Udupi
ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯ ಬ್ರಹ್ಮರಕೂಟ್ಲೂ ಟೋಲ್ ಗೇಟ್ ಬಳಿ ಶುಕ್ರವಾರ ಸಂಜೆ ಟ್ರಕ್ ಡ್ರೈವರ್ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿದ್ದು, ಆ ಸಂಬಂಧಿತ ವೀಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.
ಮೊದಲೇ ಹೊಂಡ ಗುಂಡಿ ಯಿಂದ ಕೂಡಿದ ರಸ್ತೆ ಇದಾಗಿದ್ದು, ಇಂತಹ ರಸ್ತೆಗೆ ಟೋಲ್ ಕಟ್ಟುವ ಪರಿಸ್ಥಿತಿ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಬಂದಿದೆ. ಅದರ ಜೊತೆ ಇಂತಹ ದುರ್ವರ್ತನೆ ತೋರುತ್ತಿರುವ ಇಲ್ಲಿನ ಸಿಬ್ಬಂದಿ ಈ ಟೋಲ್ ಗೇಟ್ ಯಾವ ಕಾರಣಕ್ಕೆ ಇದೆ ಎಂದು ಪ್ರಶ್ನಿಸುವಂತೆ ಮಾಡಿದೆ.ಈ ಟೋಲ್ ನ ಹಿಂದೆ ಯಾವ ಸಂಸ್ಥೆ ಇದೆ, ಈ ಟೋಲ್ ನಿಂದ ಯಾರಿಗೆ ಲಾಭ ಎಂಬುದೂ ಸಾರ್ವಜನಿಕರು ಎತ್ತಿರುವ ಪ್ರಶ್ನೆ. ಹಲ್ಲೆ ಮಾಡಿದ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಲು ಪೋಲೀಸ್ ಇಲಾಖೆ ಗಮನ ಹರಿಸಲಿ ಎಂಬುದು ಸಾರ್ವಜನಿಕರ ಆಗ್ರಹಿಸಿದ್ದಾರೆ.

Prev Post
ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಇದೇ ಜ. 21 ರಂದು ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಅನಾವರಣ ಆಗಲಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪೂರ್ವಸಿದ್ಧತೆ ಪರಿಶೀಲನೆ ನಡೆಸಿದರು

Next Post
ಸುವರ್ಣಸೌಧ ಗಾಂಧಿ ಪ್ರತಿಮೆ ಅನಾವರಣ; ಸ್ವಾತಂತ್ರ್ಯ ಹೋರಾಟಗಾರರಿಗೂ ಆಹ್ವಾನ: ಡಿಸಿಎಂ ಡಿ.ಕೆ. ಶಿವಕುಮಾರ್