ಮಂಗಳೂರಿಗೆ ಹೊರವಲಯದ ಕೋಟೆಕಾರ್ ಸಹಕಾರಿ ಸಂಘ ಬ್ಯಾಂಕಿನಲ್ಲಿ ಇಂದು ಹಾಡುಹಗಲೇ ದರೋಡೆ ನಡೆದಿದೆ

Mangalore:

Font size:

ಮಂಗಳೂರಿಗೆ ಹೊರವಲಯದ ಕೋಟೆಕಾರ್ ಸಹಕಾರಿ ಸಂಘ ಬ್ಯಾಂಕಿನಲ್ಲಿ ಇಂದು ಹಾಡುಹಗಲೇ ದರೋಡೆ ನಡೆದಿದೆ

From Jayaram Udupi

ಮಂಗಳೂರು:
ಮಂಗಳೂರಿಗೆ ಹೊರವಲಯದ ಕೋಟೆಕಾರ್ ಸಹಕಾರಿ ಸಂಘ ಬ್ಯಾಂಕಿನಲ್ಲಿ ಇಂದು ಹಾಡುಹಗಲೇ ದರೋಡೆ ನಡೆದಿದೆ
ಮುಖಕ್ಕೆ ಮಾಸ್ಕ್ ಹಾಕಿದ್ದ ಐದು ಮಂದಿ ಯುವಕರು ಬೆಳಿಗ್ಗೆ ಹನ್ನೊಂದುವರೆ ಗಂಟೆಯಿಂದ ಹನ್ನೆರಡು ಗಂಟೆಯ ನಡುವೆ ಶಸ್ತ್ರಸಜ್ಜಿತರಾಗಿ ಬ್ಯಾಂಕಿಗೆ ನುಗ್ಗಿದ್ದಾರೆ, ಆಗ ಬ್ಯಾಂಕಿನೊಳಗೆ ನಾಲ್ಕು ಸಿಬ್ಬಂದಿಗಳು‌ ಕಾರ್ಯಾಚರಿಸುತ್ತಿದ್ದರು ಎಂದು‌ ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.
ಹಿಂದಿಯಲ್ಲಿ ಮಾತನಾಡುತ್ತಿದ್ದ ದುಷ್ಕರ್ಮಿಗಳು ಸಿಬ್ಬಂದಿಗಳಿಂದ ಬಲವಂತವಾಗಿ ಚಿನ್ನಾಭರಣಗಳನ್ನು ಇರಿಸಿದ್ದ ಕೊಠಡಿ ತೆರೆಸಿ ಚಿನ್ನಾಭರಣ‌ ದರೋಡೆ‌ ಮಾಡಿದ್ದಾರೆ. ಇದರ ಅಂದಾಜು ಮೌಲ್ಯ ಹನ್ನೆರಡು ಕೋಟಿ ರೂಪಾಯಿಗಳಷ್ಟು ಎನ್ನಲಾಗಿದೆ. ಬಳಿಕ ದರೋಡೆಕೋರರು ಕಪ್ಪು ಫಿಯೆಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಅವರ ಶೋಧಕ್ಕೆ ಪೊಲೀಸ್ ತಂಡಗಳನ್ನು‌ ರಚಿಸಲಾಗಿದೆ.

Prev Post ಬಜೆಟ್ ನಲ್ಲಿ ಘೋಷಿಸಿದ್ದನ್ನು ಜಾರಿ ಮಾಡಿ ನುಡಿದಂತೆ ನಡೆದ ಸಿಎಂ ಸಿದ್ದರಾಮಯ್ಯ
Next Post ಬೀದರ್ ದರೋಡೆ ಬೆನ್ನಲ್ಲೇ ಮಂಗಳೂರಿನಲ್ಲಿ ಹಾಡುಹಗಲೇ ದರೋಡೆ ಕೋಟೆಕಾರು ಸಹಕಾರಿ ಬ್ಯಾಂಕ್‌ನಿಂದ ೧೨ ಕೋಟಿ ಮೌಲ್ಯದ ನಗ, ನಗದು ಲೂಟಿ