ಶಾಸಕರು ದೆಹಲಿಗೆ ಹೋಗೋದು, ಫಾರಿನ್ ಗೆ ಹೋಗೋದು ಗೊತ್ತಿಲ್ಲ; ನಾನು ಆ ವಿಚಾರದಲ್ಲಿ ಬಾಯಿ ಹಾಕುವುದೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

Bangalore:

Font size:

ಶಾಸಕರು ದೆಹಲಿಗೆ ಹೋಗೋದು, ಫಾರಿನ್ ಗೆ ಹೋಗೋದು ಗೊತ್ತಿಲ್ಲ; ನಾನು ಆ ವಿಚಾರದಲ್ಲಿ ಬಾಯಿ ಹಾಕುವುದೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

*ಸಿಎಂ ನನ್ನ ಬೆಂಬಲಕ್ಕೆ ಇದ್ದಾರೆ*

*ಬೆಂಗಳೂರು, ಫೆ.28:*

"ಶಾಸಕರು ದೆಹಲಿಗೆ ಹೋಗುವುದೂ ಗೊತ್ತಿಲ್ಲ. ಫಾರಿನ್ ಗೆ ಹೋಗುವುದೂ ಗೊತ್ತಿಲ್ಲ. ಈ ಬಗ್ಗೆ ನನ್ನನ್ನು ಯಾರೂ ಕೇಳಿಯೂ ಇಲ್ಲ, ಈ ವಿಚಾರದಲ್ಲಿ ನಾನು ಬಾಯಿ ಹಾಕುವುದೂ ಇಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಪ್ರಸಕ್ತ ರಾಜಕೀಯ ಬೆಳಣಿಗೆಗಳು, ಶಾಸಕರು ದೆಹಲಿ ಪ್ರವಾಸ ಹೋಗುವುದಾಗಿ ಹೇಳಿರುವ ಬಗ್ಗೆ ಕೇಳಿದಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೀಗೆ ಉತ್ತರಿಸಿದರು.

ನಗರದ ಚಿತ್ರಕಲಾ ಪರಿಷತ್ತಿನ ಬಳಿ ಮಾಧ್ಯಮಗಳಿಗೆ ಶನಿವಾರದಂದು ಪ್ರತಿಕ್ರಿಯೆ ನೀಡಿದರು.

ಅಣ್ಣನ ಹಣೆಬರಹದಲ್ಲಿ ಬರೆದಿದ್ದರೆ ಮುಖ್ಯಮಂತ್ರಿ ಆಗುವರು ಎನ್ನುವ ಸಹೋದರ ಡಿ.ಕೆ.ಸುರೇಶ್ ಅವ ಮಾತಿನ ಬಗ್ಗೆ ಕೇಳಿದಾಗ, "ಎಲ್ಲರೂ ಅದೇ ರೀತಿ ಹೇಳುತ್ತಾರೆ. ನಾನೇನು ಆ ಸುದ್ದಿಯನ್ನು ಮಾತನಾಡಿಲ್ಲವಲ್ಲ" ಎಂದು ಹೇಳಿದರು.

ನಿಮ್ಮ ಪರವಾಗಿ ಜನರು, ಬೆಂಬಲಿಗರು, ಶಾಸಕರು ಮಾತನಾಡುತ್ತಿದ್ದಾರೆ ಎಂದು ಕೇಳಿದಾಗ, "139 ಜನ ಶಾಸಕರು ಸೇರಿ ಮುಖ್ಯಮಂತ್ರಿಯವರು ನನ್ನ ಬೆಂಬಲಕ್ಕೆ ಇದ್ದೇ ಇದ್ದಾರೆ" ಎಂದು ಹೇಳಿದರು.

Prev Post ರಾಜ್ಯದಲ್ಲಿ ಗರ್ಭಕಂಠ ಕ್ಯಾನ್ಸರ್‌ ತಡೆಯಲು ಲಸಿಕೆ ಅಭಿಯಾನಕ್ಕೆ ಚಾಲನೆ