ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಜನರೊಂದಿಗೆ ಜನತಾದಳ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Mysore /Hunasur:

Font size:

ತಂಬಾಕು ಬೆಳೆಗಾರರ ಸಮಸ್ಯೆ ಬಗೆಹರಿಸುತ್ತೀವಿ, ಯಾರು ಧೃತಿಗೆಡಬೇಡಿ-ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತೇವೆ ||

ಮೈಸೂರು, ಹುಣಸೂರು : ನಾಳೆಯೇ ಚುನಾವಣೆ ನಡೆದರೆ ರಾಜ್ಯದ ಜನ ಕಾಂಗ್ರೆಸ್‌ ಸರಕಾರವನ್ನು ತಿರಸ್ಕರಿಸಲಿದ್ದಾರೆ. ಸ್ಥಳೀಯ ಚುನಾವಣೆಗಳಲ್ಲಿ ಕಾಂಗ್ರೆಸ್‌ ಬೀದಿಗೆ ಬರುತ್ತೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಹುಣಸೂರಿನಲ್ಲಿ ಜರುಗಿದ ಜನರೊಂದಿಗೆ ಜನತಾದಳ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ತಂಬಾಕು ಬೆಳೆಗಾರರ ಸಮಸ್ಯೆ ಬಗೆಹರಿಸುತ್ತಿವೆ, ಯಾರು ಧೃತಿಗೆಡಬೇಡಿ

ಕಳೆದ ಸಾಲಿನಲ್ಲಿ ತಂಬಾಕು ಬೆಳೆ ದರ ಕುಸಿತ ಎದುರಾದಾಗ ಶಾಸಕ ಜಿ.ಡಿ.ಹರೀಶ್‌ ಗೌಡ ನೇತೃತ್ವದಲ್ಲಿ ರೈತರ ನಿಯೋಗವನ್ನು ಕರೆದೋಯ್ದು ಕುಮಾರಣ್ಣ ನೇತೃತ್ವದಲ್ಲಿ ವಾಣಿಜ್ಯ ಸಚಿವರನ್ನು ಭೇಟಿ ಮಾಡಿಸಿ ತಂಬಾಕು ಬೆಳೆಗಾರರ ಸಮಸ್ಯೆ ಚರ್ಚಿಸಿದ್ದೆ. ಈ ಬಾರಿಯೂ ರೈತರು ಅದೇ ಪರಿಸ್ಥಿತಿ ಎದುರಾಗಿದ್ದು ಮುಂದಿನ ಎರಡು ದಿನಗಳಲ್ಲಿ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ ವೈಜ್ಞಾನಿಕ ದರ ಸಿಗುವಂತೆ ಕ್ರಮವಹಿಸಲಾಗುವುದು ಎಂದರು.

ಜೆಡಿಎಸ್ ರೈತರ ಪಕ್ಷ, ಯಾರು ಕೂಡ ಧೃತಿಗೆಡಬೇಡಿ. ನಿಮ್ಮ ಜೊತೆ ನಾವಿದ್ದೇವೆ. ಶೀಘ್ರದಲ್ಲೇ ಕುಮಾರಣ್ಣ ಅವರ ನೇತೃತ್ವದಲ್ಲಿ ನಿಮ್ಮ ಸಮಸ್ಯೆಯನ್ನ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿ ಮಾಡಿಸಿ ಸಮಸ್ಯೆಯನ್ನ ಬಗೆಹರಿಸುತ್ತೇವೆ ಎಂದು ತಂಬಾಕು ಬೆಲೆಗಾರರಿಗೆ ನಿಖಿಲ್ ಅವರು ಭರವಸೆ ನೀಡಿದರು.

ಹಿಂದುಳಿದ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡ್ತಿದೆ. SCP-TSP ಹಣ ವನ್ನು ಗ್ಯಾರಂಟಿಗಳಿಗೆ ಯೋಜನೆಗಳಿಗೆ ಬಳಸುತ್ತಿದೆ. ಇಂಥ ಸಮುದಾಯವನ್ನು ಬೀದಿಪಾಲು ಮಾಡ್ತಿದೆ. ಗ್ಯಾರಂಟಿ ಹೆಸರಿನಲ್ಲಿ ಸರ್ಕಾರದ ದುಡ್ಡಲ್ಲಿ ಸಾಧನ ಸಮಾವೇಶ ಮಾಡ್ತಿದೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದಕ್ಕೆ ಗ್ಯಾರಂಟಿ ಹಣ ಹಾಕ್ತಾರೆ ಎಂದು ಅವರು ಆರೋಪಿಸಿದರು

ಬಡ ವಿದ್ಯಾರ್ಥಿಗಳಿಗೆ ಶೇ 40 ವಿದ್ಯಾರ್ಥಿವೇತನ ನೀಡುತ್ತಿಲ್ಲ. ನಿನ್ನೆಯ ದಿನ ಧಾರವಾಡದಲ್ಲಿ ವಿದ್ಯಾರ್ಥಿಗಳು ಬೀದಿಗೆ ಬಂದು ಹೋರಾಟ ನಡೆಸಿದರು. ಸರ್ಕಾರಿ ಉದ್ದೆಗಳು ಇಲ್ಲಿಯವರೆಗೆ ಬರ್ತಿಮಾಡಿಲ್ಲ. ಮಾನ್ಯ ಮುಖ್ಯಮಂತ್ರಿಗಳೇ ಕೊಟ್ಟ ಮಾತನ್ನ ಉಳಿಸಿಕೊಂಡಿಲ್ಲ ಎಂದು ಕಿಡಿಕಾರಿದರು.

ಬೀದಿಲಿ ಇಳಿದು ಹೋರಾಟ ಮಾಡುತ್ತೇವೆ

ಈ ಭಾಗದಲ್ಲಿ ವಿದ್ಯುತ್ ಸಮರ್ಪಕವಾಗಿ ಕೊಡುತ್ತಿಲ್ಲ. ಸಂಪೂರ್ಣವಾಗಿ ಸ್ಥಗಿತವಾಗಿದೆ. ಈ ಸರ್ಕಾರ ರೈತರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಇದಕೆಲ್ಲಾ ಮುಂದಿನ ದಿನಗಳಲ್ಲಿ ಜೆಡಿಎಸ್ ಉತ್ತರ ಕೊಡುತ್ತೆ. ನಾವ್ಯಾರು ಮನೆಯಲ್ಲಿ ಕೂತು ರಾಜಕೀಯ ಮಾಡಿಲ್ಲ. ಬೀದಿಯಲ್ಲಿ ಇಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕುಮಾರಣ್ಣರವರ ಅಧಿಕಾರ ಅವಧಿಯಲ್ಲಿ ಅಧಿಕಾರ ಹೋಗುವಾಗ ತಮ್ಮ ಸಮುದಾಯ ಮತ್ತು ಇತರ ವರ್ಗದವರನ್ನು ಬಳಸಿಕೊಂಡಿಲ್ಲ, ಆದರೆ ಈಗಿನ ನಾಯಕರು ಅಧಿಕಾರ ಕಿತ್ತುಕೊಳ್ಳುತ್ತಿದ್ದಾರೆ ಎಂದು ಸಮುದಾಯವನ್ನು ರಕ್ಷಣೆ ಪಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹಿಂದೆ ಐದು ವರ್ಷ ಈಗ ಮೂರು ವರ್ಷ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ 7ಲಕ್ಷ 60ಕೋಟಿ ಸಾಲ ಮಾಡಿ ಈ ರಾಜ್ಯದ ಜನರ ಮೇಲೆ ಸಾಲದ ಹೊರೆಯನ್ನು ಹೊರಿಸುವುದಲ್ಲದೆ ಅಧಿಕಾರಕ್ಕಾಗಿ ಕಿತ್ತಾಟ ನಡೆಸುತ್ತಿದ್ದಾರೆ ಎಂದು ಆಕ್ರೋಶವ್ಯಕ್ತ ಪಡಿಸಿದರು.

20 ಕೀ.ಮೀ ಬೈಕ್ ರ್ಯಾಲಿ ಮೂಲಕ ಅದ್ದೂರಿ ಸ್ವಾಗತ

ಹುಣಸೂರಿನಲ್ಲಿ ಜನರೊಂದಿಗೆ ಜನತಾದಳ ಸದಸ್ಯತ್ವ ಅಭಿಯಾನಕ್ಕೆ ಆಗಮಿಸಿದ ವೇಳೆ ನಿಖಿಲ್ ಕುಮಾರಸ್ವಾಮಿಗೆ ಮೂಸಂಬಿ, ಕಿತ್ತಳೆ, ಬೃಹತ್ ಸೇಬಿನ ಹಾರ ಹಾಕಿ ಅದ್ದೂರಿ ಸ್ವಾಗತಕೋರಿದರು ಹಾಗೂ ಜಾನಪದ ಕಲಾತಂಡದಿಂದ ರ‍್ಯಾಲಿಗೆ ಮೆರುಗು ತಂದವು. 2001 ಪೂರ್ಣಕುಂಭ ಹೊತ್ತ ಮಹಿಳೆಯರಿಂದ ಪ್ರೀತಿಯಿಂದ ಸ್ವಾಗತಕೋರಿದರು

ಹುಣಸೂರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜನರೊಂದಿಗೆ ಜನತಾದಳ ಕಾರ್ಯಕ್ರಮಕ್ಕೆ ಆಗಮಿಸಿದ ಯುವ ನಾಯಕ ನಿಖಿಲ್ ಕುಮಾರಸ್ವಾಮಿಯವರಿಗೆ ಕ್ಷೇತ್ರದ ಜನ ಕ್ರೇನ್ ಮೂಲಕ
ಬೃಹತ್ ಗಾತ್ರದ ಮೂಸಂಬಿ ಹಾರ, ಕಿತ್ತಳೆ ಹಾರ, ಸೇಬಿನ ಹಾರ ಹಾಕುವುದರ ಮೂಲಕ ಸ್ವಾಗತಿಸಿದರು.

ಹಾಗೆಯೇ ದೇವರಾಜು ಅರಸು ಸರ್ಕಲ್ ನಲ್ಲಿ ದಿ.ದೇವರಾಜು ಅರಸು ಅವರು ಪ್ರತಿಮೆಗೆ ಮಾಲಾರ್ಪಣೆ ಮಾಡಿ, ದಾರಿಯುದಕ್ಕೂ ಸಹಸ್ರಾರು ಸಂಖ್ಯೆಯಲ್ಲಿ ಯುವಕರು ಬೈಕ್ ರ್ಯಾಲಿಯ ಮೂಲಕ ಪಟ್ಟಣಕ್ಕೆ ಆಗಮಿಸಿದ ಯುವ ನಾಯಕರಿಗೆ ದಾರಿಯುದ್ದಕ್ಕೂ ಸಾರ್ವಜನಿಕರು ಪಟಾಕಿ ಸಿಡಿಸಿ ಹೂವಿನ ಹಾರ ಹಾಕುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಗೌಡ ಅವರು, ಮಾಜಿ ಸಚಿವರಾದ ಸಾರಾ ಮಹೇಶ್ ಅವರು, ಜಿಲ್ಲಾಧ್ಯಕ್ಷರರಾದ ಅಶ್ವಿನ್ ಕುಮಾರ್ , ಸಿ.ಎನ್. ಮಂಜೇಗೌಡ , ಕೆ. ಮಹದೇವ್ , ಎಸ್ ಬಿ ಎಂ ಮಂಜು , ಕೃಷ್ಣ ನಾಯಕ್
ಶ್ರೀ ಪ್ರಸನ್ನ ಅವರು ಸೇರಿದಂತೆ ಪ್ರಮುಖ ಮುಖಂಡರುಉಪಸ್ಥಿತರಿದ್ದರು.

Prev Post ಖಾಲಿಯಿರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು-ಮುಖ್ಯಮಂತ್ರಿ ಸಿದ್ದರಾಮಯ್ಯ