|| ಜೆಡಿಎಸ್ ಜೊತೆ ಮೈತ್ರಿ ಬೇಡ ಅಂತಿರೋ ಬಿಜೆಪಿ ಶಾಸಕರಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ || || ಮೈತ್ರಿ ಧರ್ಮ ಪಾಲನೆ ಮಾಡ್ತೇವೆ, ಯಾರೋ ಪ್ರಚಾರಕ್ಕಾಗಿ ಮಾತಾಡ್ತಾರೆ ಎಂದು ನಿಖಿಲ್ ಕಿಡಿ|| ||ಅಣ್ಣ ತಮ್ಮಂದಿರ ರೀತಿ ಕೆಲಸ ಮಾಡಿ, 140 ರಿಂದ 150 ಸೀಟ್ ಗೆದ್ದು ಇತಿಹಾಸ ಸೃಷ್ಟಿಸುತ್ತೇವೆ||
ಬೆಂಗಳೂರು : ಮೈತ್ರಿ ಬಗ್ಗೆ ಹಾದಿ ಬೀದಿಯಲ್ಲಿ ಚರ್ಚೆಯಾದರೆ ಬಗೆಹರಿಯುವುದಿಲ್ಲ. ನಾಲ್ಕು ಗೋಡೆಗಳ ಒಳಗಡೆ ಚರ್ಚೆಯಾಗಿರುವುದು ಆ ಗೋಡೆಗಳ ಒಳಗೆಯೇ ಇರಬೇಕು. ಬೀದಿಯಲ್ಲಿ ಚರ್ಚೆ ಆಗಬಾರದು ಎಂದು ಬಿಜೆಪಿ ನಾಯಕರು ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.
ಬೆಂಗಳೂರಿನ ಜೆ.ಪಿ ನಗರ ನಿವಾಸದ ಬಳಿ ರಾಜ್ಯ ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಗೊಂದಲ ವಿಚಾರ ಕುರಿತು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು,ಈ ವಿಚಾರಗಳು ನಾಲ್ಕು ಗೋಡೆಗಳ ಒಳಗೆ ಚರ್ಚೆ ಆಗಬೇಕು. ಹಾದಿಬೀದಿಯಲ್ಲಿ ಚರ್ಚಿಸಿ ಇತ್ಯರ್ಥವಾಗುವ ವಿಚಾರ ಅಲ್ಲ. ಲೋಕಸಭೆ ಚುನಾವಣೆಯಲಿಂದಲೂ ಎರಡೂ ಪಕ್ಷಗಳ ಮೈತ್ರಿ ಇದೆ. ಅಂದಿನಿಂದಲೂ ನಮ್ಮನ್ನ ಅತ್ಯಂತ ಗೌರವದಿಂದ ನೋಡಿಕೊಂಡಿದ್ದಾರೆ ಎಂದು ಹೇಳಿದರು.
ಬಿಜೆಪಿಯಿಂದ ಮೈತ್ರಿ ಮುರಿಯುವ ಹೇಳಿಕೆಗಳೇ ಬರುತ್ತಿದೆಯಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಮೈತ್ರಿ ಧರ್ಮವನ್ನು ಅತ್ಯಂತ ಗೌರವದಿಂದ ಪಾಲಿಸುತ್ತಿದ್ದೇವೆ. ನಮ್ಮ ಮೈತ್ರಿಗೆ ಬಿಜೆಪಿ ಹೈಕಮಾಂಡ್ ನಾಯಕರ ಮಾರ್ಗದರ್ಶನ ಇದೆ . ಬಿಜೆಪಿಯಾಗಿರಲಿ ಜೆಡಿಎಸ್ ಆಗಿರಲಿ ಯಾರು ಕೂಡ ಹೊರಗೆ ಬಂದು ಮಾತನಾಡಬಾರದು. ಸಮಸ್ಯೆ ಉದ್ಭವ ಆಗಿರೋದು ಯಾವುದೋ ಎರಡು ಜಿಲ್ಲೆಯಲ್ಲಿ. ಅಲ್ಲಿನ ಮೂರ್ನಾಲ್ಕು ಜನ ಪ್ರಚಾರಕ್ಕೆ ಮಾತನಾಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ NDA ಸರ್ಕಾರ ಗೆದ್ದು ಇತಿಹಾಸ ಸೃಷ್ಟಿಸುತ್ತೆ
ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಅಲ್ಲ ಎನ್ ಡಿಎ 140ರಿಂದ 150 ಸ್ಥಾನ ಗೆಲ್ಲುತ್ತೆ.
ನಾವು ಮೈತ್ರಿ ಧರ್ಮವನ್ನ ಪಾಲಿಸುತ್ತೇವೆ ಲೋಕಸಭೆ ಗೆದ್ದಂತೆ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುತ್ತೇವೆ.ಗೆದ್ದು ದಾಖಲೆಯನ್ನು ಸೃಷ್ಟಿ ಮಾಡುತ್ತೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ರವರು ರಾಜ್ಯ ರಾಜಕಾರಣಕ್ಕೆ ಬರುತ್ತಿರುವ ವಿಚಾರವಾಗಿ ಬಿಜೆಪಿಗೆ ಆತಂಕವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವೆಲ್ಲಿಯೂ ಕೂಡ ಅಭ್ಯರ್ಥಿಗಳನ್ನ ಘೋಷಣೆ ಮಾಡಿಯೇ ಇಲ್ಲ. ಕೆ. ಆರ್ ಪೇಟೆಯಲ್ಲಿ ಮಂಜು ನೀವು ಈಗಾಗಲೇ ಶಾಸಕರಾಗಿದ್ದೀರಿ ಮತ್ತೆ ಆರಿಸಿ ಬರುವುದಕ್ಕೆ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿ ಮಂಜಣ್ಣ ಅಂತ ಹೇಳಿದ್ದೆ. ಆದ್ರೆ ನನ್ನ ಹೇಳಿಕೆಯನ್ನ ತಿರುಚಿದ್ದಾರೆ ಎಂದರು.
ಅಭ್ಯರ್ಥಿಗಳ್ಳನ್ನ ಘೋಷಣೆ ಮಾಡೋದಕ್ಕೆ ನಾನು ಯಾರು? ನಾನು ಜನರ ವಿಶ್ವಾಸವನ್ನು ಉಳಿಸಿಕೊಂಡು ಹೋಗಿ ಅಂತ ಹೇಳುವುದರಲ್ಲಿ ತಪ್ಪೇನಿದೆ? ಎಂದು ಹೇಳಿದರು.
ಪ್ರಿಯಾಂಕ ಖರ್ಗೆಗೆ ಟಾಂಗ್ ಕೊಟ್ಟ ನಿಖಿಲ್ ಕುಮಾರಸ್ವಾಮಿ
ಒಂದು ಪ್ರಾದೇಶಿಕ ಪಕ್ಷ 25 ವರ್ಷಗಳನ್ನು ತುಂಬಿ ಮೊನ್ನೆ ಅಷ್ಟೇ ಬೆಳ್ಳಿಹಬ್ಬವನ್ನು ಕೂಡ ಆಚರಿಸಿದ್ದೇವೆ.50ಕ್ಕೂ ಹೆಚ್ಚು ಜನ ಈ ಪಕ್ಷವನ್ನು ರಾಜಕೀಯ ವೇದಿಕೆಯಾಗಿ ಉಪಯೋಗಿಸಿ ನಂತರ ವೈಯಕ್ತಿಕ ಕಾರಣಗಳಿಂದ ಬೇರೆ ಬೇರೆ ಪಕ್ಷಗಳಿಗೆ ಹೋಗಿದ್ದಾರೆ. ಪ್ರಿಯಾಂಕ ಖರ್ಗೆ ಅವರಿಗೂ ಜನತಾದಳದ ಶಕ್ತಿ ಏನು ಅಂತ ಗೊತ್ತಿದೆ. ಆದರೆ ಹೊರಗಡೆ ಮಾತನಾಡುವ ಸಂದರ್ಭದಲ್ಲಿ ಪಾಪ ಈ ರೀತಿ ಮಾತನಾಡಿದ್ದಾರೆ ಎಂದು ಹೇಳಿದರು.
ZP & TP ನಲ್ಲೂ ಮೈತ್ರಿ ಇರುತ್ತಾ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇನ್ನೂ ಎರಡು ಪಕ್ಷಗಳ ಚೌಕಟ್ಟಿನಲ್ಲಿ ಚರ್ಚೆಗೆ ಬಂದೇ ಇಲ್ಲ. ಮೊದಲನೆಯದಾಗಿ ಚುನಾವಣೆಗಳು ನಡೆಯುತ್ತಾ ಇಲ್ಲವಾ ಅನ್ನೋದೇ ಗೊತ್ತಿಲ್ಲ. ಕಾರ್ಯಕರ್ತರ ಹಿತ ದೃಷ್ಟಿಯನ್ನು ಮುಂದಿಟ್ಟುಕೊಂಡು ಮೈತ್ರಿಯಾಗಿ ಹೋಗಬೇಕಾ ಅಥವಾ ಪಕ್ಷವಾಗಿ ಹೋಗಬೇಕಾ ತೀರ್ಮಾನ ಮಾಡಲಾಗುತ್ತೆ ಎಂದು ಹೇಳಿದರು.
ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ವಿಚಾರವಾಗಿ ಮಾತನಾಡಿದ ಅವರು, ಅವರು ವಿದೇಶ ಅಥವಾ ಡೆಲ್ಲಿ ಪ್ರವಾಸಕ್ಕೆ ಹೋಗುವ ಬದಲು. ಪ್ರಣಾಳಿಕೆಯಲ್ಲಿ ಕೊಟ್ಟಂತ ಗ್ಯಾರಂಟಿಗಳನ್ನು ನಿಭಾಯಿಸಬೇಕು.ಬಳ್ಳಾರಿಗೆ ಹೋದಾಗ ಗೃಹಲಕ್ಷ್ಮಿ ಹಣ 5 ತಿಂಗಳಿಂದ ಬಂದಿಲ್ಲ ಅಂತ ತಿಳಿಸಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
135 ರಿಂದ 136 ಜನ ಇವರಿಗೆ ಕ್ಲಿಯರ್ ಮ್ಯಾನ್‌ಡೇಟ್ ಕೊಟ್ಟಿದ್ದಾರೆ. ಇವತ್ತಿನ ಮುಖ್ಯಮಂತ್ರಿಗಳ ನೇತೃತ್ವದಲ್ಲಿ 3 ಲಕ್ಷ ಕೋಟಿ ಸಾಲ ಆಗಿದೆ. 7,64,000 ಕೋಟಿ ರೂಪಾಯಿ ಸಾಲದಲ್ಲಿ 5 ಲಕ್ಷ ಕೋಟಿ ಇವರ ಕಾಲಘಟ್ಟದಲ್ಲೇ ಸಾಲ ಆಗಿದೆ. ಇದರ ಬಗ್ಗೆ ಚಿಂತನೆ ಮಾಡಬೇಕಾ.? ಆಡಳಿತದ ಬಗ್ಗೆ ಚಿಂತನೆ ಮಾಡಬೇಕಾ ಅಥವಾ ಪ್ರವಾಸಕ್ಕೆ ಹೋಗಬೇಕಾ? ಎಂದು ಕಿಡಿಕಾರಿದರು.






