ಫೆಬ್ರವರಿ 12 ಮಹಾ ಮುಷ್ಕರ ಬೆಂಬಲಿಸಿ ಬಂದರು ಹಮಾಲಿ ಕಾರ್ಮಿಕರ ಸಭೆ
From Jayaram Udupi
ಮಹಾಮುಷ್ಕರ ಬೆಂಬಲಿಸಿ ಸಭೆ
ಮಂಗಳೂರು:
ಫೆಬ್ರವರಿ 12 ಮಹಾ ಮುಷ್ಕರ ಬೆಂಬಲಿಸಿ ಬಂದರು ಹಮಾಲಿ ಕಾರ್ಮಿಕರ ಸಭೆ ನಡೆಯಿತು
ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆ ರದ್ದೂಗೊಳಿಸಲು ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಫೆಬ್ರವರಿ 12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ.
ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಪ್ರಸ್ತಾವಿತ ಮುಷ್ಕರ ಬೆಂಬಲಿಸಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಹಳೆ ಬಂದರಿನ ಕಾರ್ಮಿಕರ ಕಟ್ಟೆ ಬಳಿ ಸಭೆ ನಡೆಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಕೇಂದ್ರದ ಬಿಜೆಪಿ ಸರಕಾರ ಕಾರ್ಮಿಕ ಸಂಹಿತೆ ಜಾರಿ ಮಾಡಿ ಕಾರ್ಮಿಕರ ಕಾನೂನುಗಳನ್ನು ಶೈತ್ಯಾಗಾರದಲ್ಲಿ ಇಟ್ಟಿದೆ, ಕಾರ್ಮಿಕರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದೆ ಎಂದು ಆಪಾದಿಸಿದರು.
ಸಂಘದ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡಿ ಕೇಂದ್ರವನ್ನಾಳುವ ನರೇಂದ್ರ ಮೋದಿ ಸರಕಾರ ಕಾರ್ಪೋರೇಟ್ ಕಂಪೆನಿಗಳ ಅಡಿಯಾಳಾಗಿ ಕೆಲಸ ಮಾಡುತ್ತಿದೆ. ಕಾರ್ಮಿಕ ಸಂಹಿತೆಯನ್ನು ಜಾರಿ ಮಾಡಿ ಕಾರ್ಮಿಕರ ಹಿತವನ್ನು ಬಲಿ ಕೊಡುತ್ತಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಫಾರೂಕ್ ಉಳ್ಳಾಲಬೈಲ್, ಖಜಾಂಜಿ ಶಮೀರ್ ಬೋಳಿಯಾರ್, ಪ್ರಮುಖರಾದ ಮಜೀದ್ ಉಳ್ಳಾಲಬೈಲ್, ಮೋಹನ್ ಕುಂಪಲ, ಅನಿಲ್, ಪದ್ಮನಾಭ, ಸಿದ್ದಿಕ್ ಬೆಂಗ್ರೆ, ಸಿರಾಜ್,ಶರಣಪ್ಪ, ಬಷೀರ್ ಪಾವೂರ್ ಉಪಸ್ಥಿತರಿದ್ದರು





