ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ದೇವೇಗೌಡರು ಮತ್ತು ಕುಮಾರಣ್ಣ ಪ್ರೀತಿಸುವ ದೊಡ್ಡ ವರ್ಗ ಕ್ಷೇತ್ರದಲ್ಲಿದ್ದಾರೆ ;ನಿಖಿಲ್ ಕುಮಾರಸ್ವಾಮಿ

Hassan:

Font size:

ಏನೇ ಬಗೆ ಹರಿಯಬೇಕಾದರೂ ಕಾಲ ಬರಬೇಕು, ಕಾಲ ನಿರ್ಣಯ ಮಾಡುತ್ತೆ ಹಾಸನದ ಕೆಲಗಳಲೆ ಗ್ರಾಮದಲ್ಲಿ ನಿಖಿಲ್‌ ಕುಮಾರಸ್ವಾಮಿ ಹೇಳಿಕೆ ಹಾದಿ ಬೀದಿಯಲ್ಲಿ ರಂಪಾಟ ಮಾಡಿ, ಎರಡು ಪಕ್ಷದ ಕಾರ್ಯಕರ್ತರು, ನಾಯಕರು ಗೌರವ ಕಳೆದುಕೊಂಡು ಮಾತನಾಡಬೇಡಿ ಪ್ರೀತಂಗೌಡಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟಾಂಗ್

ಹಾಸನ : ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ದೇವೇಗೌಡರು ಮತ್ತು ಕುಮಾರಣ್ಣನ ಅಭಿಮಾನಿಗಳು ಇರುವ ಕ್ಷೇತ್ರ. ನಮ್ಮನ್ನು ಪ್ರೀತಿಸುವ ದೊಡ್ಡ ವರ್ಗ ಆ ಕ್ಷೇತ್ರದಲ್ಲಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಹಾಸನ ಜಿಲ್ಲೆಯ ಅರಕಲಗೂಡು ಕೆಲಗಳಲೆ ಗ್ರಾಮದ‌ಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಶಾಸಕ ಜಿ.ಟಿ.ದೇವೇಗೌಡರ ಬಗ್ಗೆ ಕುಮಾರಣ್ಣ ಹೇಳಿಕೆ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಿಂದ ಸಾ.ರಾ.ಮಹೇಶ್ ಸ್ಪರ್ಧೆ ವಿಚಾರಕ್ಕೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ಇವತ್ತಿನ ಕಾಲಘಟ್ಟದಲ್ಲಿ ಇವೆಲ್ಲವನ್ನೂ ಚರ್ಚೆ ಮಾಡುವುದು ಅಪ್ರಸ್ತುತ. ಏನೇ ಬಗೆ ಹರಿಯಬೇಕಾದರೂ ಕಾಲ ಬರಬೇಕು, ಕಾಲ ನಿರ್ಣಯ ಮಾಡುತ್ತೆ. ಸ್ವಾಭಾವಿಕವಾಗಿ ಸಾರ್ವಜನಿಕ ವಲಯದಲ್ಲಿ ನಿಂತು ಚುನಾಯಿತ ಪ್ರತಿನಿಧಿಗಳು ಚರ್ಚೆ ಮಾಡಿದ ಸಂದರ್ಭದಲ್ಲಿ ಕಾರ್ಯಕರ್ತರಲ್ಲಿ ಸ್ವಲ್ಪ ಇರುಸು ಮುರುಸು ಆಗಿರುವುದು ಸತ್ಯ. ಇದನ್ನ ಮಾಧ್ಯಮದ ಮುಂದೆ ಮಾತನಾಡಿ ಇತ್ಯರ್ಥ ಆಗುವುದು ಏನು ಅಲ್ಲ ಎಂದು ಹೇಳಿದರು.

ವರಿಷ್ಠರು ಕಾರ್ಯಕರ್ತರ ಗೌರವವನ್ನು ಕಾಪಾಡಿಕೊಳ್ಳುವ ದೃಷ್ಟಿಯಲ್ಲಿ, ಕ್ಷೇತ್ರವನ್ನು ಉಳಿಸಿಕೊಳ್ಳಲು ಆಯಾ ಸಂದರ್ಭದಲ್ಲಿ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆಂದು ಪಕ್ಷದ ಕಾರ್ಯಕರ್ತನಾಗಿ ನಂಬಿಕೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.

ಇನ್ನೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿ ಬಗ್ಗೆ ಪ್ರೀತಂಗೌಡ ವಿರೋಧ ವಿಚಾರಕ್ಕೆ ಮಾತನಾಡಿದ ಅವರು,
ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಶಿಸ್ತು ಪಾಲನೆ ಕಮಿಟಿ ಇರುತ್ತೆ, ಆ ಶಿಸ್ತು ಪಾಲನೆ ಕಮಿಟಿ ಯಾ‌ರ‌್ಯಾರು ಪಕ್ಷದ ಅಶಿಸ್ತಿನ ನಡವಳಿಕೆಗೆ ಕಾರಣರಾಗುತ್ತಾರೆ. ಆಯಾ ಪಕ್ಷದ ಕಮಿಟಿಯಲ್ಲಿ ಇವೆಲ್ಲವೂ ತೀರ್ಮಾನ ಮಾಡುತ್ತಾರೆ ಎಂದು ಪ್ರೀತಂಗೌಡಗೆ ಟಾಂಗ್ ನೀಡಿದರು.

ಹಾದಿ ಬೀದಿಯಲ್ಲಿ ರಂಪಾಟ ಮಾಡಿಕೊಂಡು, ಎರಡು ಪಕ್ಷದ ಕಾರ್ಯಕರ್ತರು, ನಾಯಕರು ಗೌರವ ಕಳೆದುಕೊಂಡು ಮಾತನಾಡಬೇಡಿ ಎಂದು ಅವರು, ಪಕ್ಷದಲ್ಲಿ ತಿದ್ದಿ ಬುದ್ದಿ ಹೇಳ್ತಾರೆ ಎಂದು ನಂಬಿದ್ದೀನಿ, ಕಾದು ನೋಡೋಣ ಎಂದು ಸೂಕ್ಷ್ಮವಾಗಿ ಉತ್ತರಿಸಿದರು.

ಜನತಾದಳ ಪಕ್ಷದ ನಾಯಕತ್ವದ ಹಿಡಿದಿರುವುದು ಸನ್ಮಾನ್ಯ ಕುಮಾರಣ್ಣ ಅವರು, ದೇವೇಗೌಡ ಅವರ ಮಾರ್ಗದರ್ಶನ, ರೇವಣ್ಣ ಸಾಹೇಬರ ಅವರ ರಾಜಕೀಯ ಶಕ್ತಿ ಬಹಳ ಪ್ರಬಲವಾಗಿದೆ.ಇವತ್ತಿಗೂ ಕುಮಾರಣ್ಣ ಅವರು ಕೊಟ್ಟಂತಹ ಆಡಳಿತ ಜನರ ಮನದಲ್ಲಿ ಉಳಿದಿದೆ ಎಂದರು.

ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ, ಕೆಲಗಳಲೆ ಗ್ರಾಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಹೇಳಿಕೆ

ನಾನು ಜನರೊಂದಿಗೆ ಜನತಾದಳ 52 ಕ್ಷೇತ್ರದಲ್ಲಿ 9 ಸಾವಿರ ಕಿಲೋಮೀಟರ್ ಪ್ರವಾಸ ಮಾಡಿದ್ದೆ, ಎಲ್ಲೇ ಹೋದರು ಇವತ್ತಿನ ಈ ಸರ್ಕಾರದ ದುರಾಡಳಿತ, ಸರ್ಕಾರದ ಕೆಲವೊಂದು ನಡವಳಿಕೆ ನೋಡಿ ಜನರು ಬೇಸತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲೇ ಹೋದರು ಜನ ಕುಮಾರಣ್ಣನಂತಹ ನಾಯಕ ಈ ರಾಜ್ಯದ ಚುಕ್ಕಾಣಿಯನ್ನು ಹಿಡಿಯಬೇಕೆಂಬ ಪ್ರಸ್ತಾಪಗಳು ಬಹಳ ಗಟ್ಟಿಯಾಗಿ ನಡೆಯುತ್ತಿದೆ ಅದಕ್ಕೆ ನಾನು ಸಾಕ್ಷಿ ಇದ್ದೇನೆ ಎಂದು ಹೇಳಿದರು.

2028 ಜನತಾದಳ ಪಕ್ಷ ಎಂದರೆ ಕುಮಾರಣ್ಣನ ನೇತೃತ್ವದಲ್ಲಿ ಚುನಾವಣೆ ನಡೆಯುತ್ತೆ.ಇದು ಕಾರ್ಯಕರ್ತರ ಅಪೇಕ್ಷೆ ಅಲ್ಲಾ, ಜನರ ಭಾವನೆ ಕೂಡ ಅದೇ ಆಗಿದೆ ಅದನ್ನು ನಾನು ಹೊರಗಡೆ ಹಾಕಿದ್ದೀನಿ. ನಮ್ಮದು ಪ್ರಾದೇಶಿಕ ಪಕ್ಷ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ಅವರು ಜೊತೆ ಒಂದಾಗಿದ್ದೇವೆ ರಾಜ್ಯದ ಜನತೆಯೂ ಅದಕ್ಕೆ ಪೂರಕವಾಗಿ ಸಹಿ ಹಾಕಿದ್ದಾರೆ.

ಲೋಕಸಭೆಗೆ 19 ಜನ ಸಂಸದರನ್ನು ಗೆಲ್ಲಿಸಿಕೊಟ್ಟಿದ್ದಾರೆ. ಕುಮಾರಣ್ಣ ಅವರು ಮುಂದೆ ಮುಖ್ಯಮಂತ್ರಿ ಆಗ್ತಾರೋ, ಆಗಬೇಕೋ, ಏನು ಆಗಬೇಕು, ರಾಜ್ಯ ರಾಜಕಾರಣಕ್ಕೆ ಯಾವಾಗ ಬರಬೇಕು. ಇವೆಲ್ಲವನ್ನು ರಾಷ್ಟ್ರೀಯ ನಾಯಕರು ಕಾಲ ಬಂದಂತಹ ಸಂದರ್ಭದಲ್ಲಿ ಕುಳಿತು ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

Prev Post ಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆ
Next Post ಯುತ್ ಕಾಂಗ್ರೆಸ್ಸಿನಿಂದ ರಾಜಕೀಯ ದಂಗೆಗೆ ಪ್ರಚೋದನೆ: ಬಿಜೆಪಿಯಿಂದ ಪೊಲೀಸ್ ಠಾಣೆಗೆ ದೂರು