ಪ್ರಯಾಣಿಕರ ಸುಗಮ ಸಂಚಾರಕ್ಕೆ ಹೊಸ ಕ್ರಮಗಳ ಜಾರಿಗೆ ಮುಖ್ಯಕಾರ್ಯದರ್ಶಿಗಳು ಹಾಗೂ ಬಿಐಎಎಲ್ ಅಧ್ಯಕ್ಷರ ಸೂಚನೆ
ಬೆಂಗಳೂರು, ಜ. 9 -
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ರ ಆಗಮನ ದ್ವಾರದ ಬಳಿ ಉಂಟಾಗುತ್ತಿರುವ ಅತಿಯಾದ ಸಂಚಾರ ದಟ್ಟಣೆ ಮತ್ತು ಪ್ರಯಾಣಿಕರ ದೂರುಗಳ ಹಿನ್ನೆಲೆಯಲ್ಲಿ, ಇಂದು ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್ ಹಾಗೂ ಬಿಐಎಎಲ್ ಅಧ್ಯಕ್ಷರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಮಯದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಐಎಎಲ್ ಅಧ್ಯಕ್ಷರು ಮುಖ್ಯ ಕಾರ್ಯದರ್ಶಿ ಅವರಿಗೆ ತಿಳಿಸಿದರು.
ಸಂಚಾರ ದಟ್ಟಣೆ ನಿರ್ವಹಣೆ ಮತ್ತು ಮೂಲಸೌಕರ್ಯ:
ಲೇನ್ ಸಾಮಥ್ರ್ಯ: ಪ್ರಸ್ತುತ ಟರ್ಮಿನಲ್-1 ಆಗಮನ ದ್ವಾರದಲ್ಲಿ 4 ಪಿಕ್‍ಅಪ್ ಕರ್ಬ್‍ಗಳಿದ್ದು, ಒಟ್ಟು 12 ಲೇನ್‍ಗಳಿವೆ. ಪ್ರತಿ 90 ಸೆಕೆಂಡುಗಳಿಗೆ 30 ಕಾರುಗಳ ಸಂಚರಿಸುವ ಸಾಮಥ್ರ್ಯವಿದ್ದರೂ, ಏಕಕಾಲಕ್ಕೆ 100ಕ್ಕೂ ಹೆಚ್ಚು ಕಾರುಗಳು ಬರುವುದರಿಂದ ಉಂಟಾಗುವ ವಿಳಂಬವನ್ನು ತಪ್ಪಿಸಲು ಹೊಸ ನಿಯಂತ್ರಣ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ವಾಲೆಟ್ ಪಾಕಿರ್ಂಗ್: ಪಿ-4 ಪಾಕಿರ್ಂಗ್ ಪ್ರದೇಶದಲ್ಲಿ ಖಾಸಗಿ ವಾಹನ ನಿಲ್ಲಿಸುವವರಿಗಾಗಿ ‘ವಾಲೆಟ್ ಪಾರ್ಕಿಂಗ್ ಸೇವೆ ಆರಂಭಿಸಲು ಸೂಚಿಸಲಾಗಿದೆ. ಇದರಿಂದ ಕೇವಲ 4 ನಿಮಿಷಗಳಲ್ಲಿ ವಾಹನವನ್ನು ಆಗಮನ ಲೇನ್‍ಗೆ ತರಲು ಸಾಧ್ಯವಾಗುತ್ತದೆ.
ಮಲ್ಟಿ ಲೆವೆಲ್ ಪಾಕಿರ್ಂಗ್: ಪ್ರಸ್ತುತ 1,000 ವಾಹನಗಳ ಸಾಮಥ್ರ್ಯವಿರುವ ಪಿ-4 ಪಾರ್ಕಿಂಗ್ ಪ್ರದೇಶವನ್ನು ಮುಂದಿನ ದಿನಗಳಲ್ಲಿ ಮಲ್ಟಿ ಲೆವೆಲ್ ಪಾಕಿರ್ಂಗ್ ವ್ಯವಸ್ಥೆಯನ್ನಾಗಿ ಪರಿವರ್ತಿಸಲು ನಿರ್ದೇಶಿಸಲಾಗಿದೆ ಎಂದು ಹೇಳಿದರು.
ವಾಹನಗಳ ನಿಯಂತ್ರಣ ಮತ್ತು ಶಿಸ್ತು:
ಶಬ್ದರಹಿತ ವಲಯ: ಬಿಸಿಎಎಸ್ ಮಾರ್ಗಸೂಚಿಯಂತೆ ಆಗಮನ ದ್ವಾರದ 100 ಮೀಟರ್ ವ್ಯಾಪ್ತಿಯಲ್ಲಿ ಪಾಕಿರ್ಂಗ್ ನಿಷೇಧಿಸಲಾಗಿದೆ. ಈ ಪ್ರದೇಶವನ್ನು ‘ಶಬ್ದರಹಿತ ವಲಯ' ಎಂದು ಘೋಷಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಖಾಸಗಿ ಮತ್ತು ವಾಣಿಜ್ಯ ವಾಹನಗಳು:
ಖಾಸಗಿ (ವೈಟ್ ಬೋರ್ಡ್) ವಾಹನಗಳಿಗೆ ಉಚಿತ ಪ್ರವೇಶ ಮುಂದುವರಿಯಲಿದ್ದು, ವಾಣಿಜ್ಯ (ಹಳದಿ ಬೋರ್ಡ್) ವಾಹನಗಳಿಗೆ ನಿಗದಿಪಡಿಸಿದ ವಲಯದಲ್ಲಿ ಮಾತ್ರ ಅವಕಾಶವಿರುತ್ತದೆ.
ಟ್ಯಾಕ್ಸಿ ಸೇವೆಗಳಿಗೆ ಹೊಸ ಮಾನದಂಡಗಳು:
ನಮ್ಮ ಯಾತ್ರಿ, ರಾಪಿಡೋ ಸೇರಿದಂತೆ ಅಗ್ರಿಗೇಟರ್ ವಾಹನಗಳ ಪಿಕ್‍ಅಪ್ ಸ್ಥಳವನ್ನು ಪಿ1 ಮತ್ತು ಪಿ2 ನಿಂದ ಪಿ4 ಪ್ರದೇಶಕ್ಕೆ ವರ್ಗಾಯಿಸಲಾಗಿದೆ.
ಕೆಎಸ್‍ಟಿಡಿಸಿ ನೋಂದಣಿ: ಕಡ್ಡಾಯ ಪೊಲೀಸ್ ಪರಿಶೀಲನೆ, ಆರ್ ಟಿ ಒ ಫಿಟ್‍ನೆಸ್ ಪ್ರಮಾಣಪತ್ರ, ಎಐಎಸ್-140 ಟ್ರ್ಯಾಕಿಂಗ್, ಪ್ಯಾನಿಕ್ ಬಟನ್, ಸುರಕ್ಷಾ ಮಿತ್ರ ಆಪ್, ಯುನಿಫಾರ್ಮ್ ಧರಿಸಿದ ಚಾಲಕರು ಮತ್ತು ಸ್ವಚ್ಛತೆ ಸೇರಿದಂತೆ ಸುರಕ್ಷತಾ ಮಾನದಂಡಗಳನ್ನು ಪೂರೈಸುವ ವಾಹನಗಳಿಗೆ ಮಾತ್ರ ಆಗಮನ ದ್ವಾರದ ಬಳಿ ಪಾಕಿರ್ಂಗ್ ಅವಕಾಶ ನೀಡಲಾಗುವುದು. ಈಗಾಗಲೇ 900 ಪರವಾನಗಿಗಳನ್ನು ನೀಡಲಾಗಿದ್ದು, ಅಗತ್ಯವಿದ್ದಲ್ಲಿ ಹೆಚ್ಚಿಸಲಾಗುವುದು ಎಂದರು.
ಪ್ರಯಾಣಿಕರ ಸಹಾಯ ಮತ್ತು ಸಾರಿಗೆ ಸೌಲಭ್ಯ:
ಶಟಲ್ ಸೇವೆ: ಟರ್ಮಿನಲ್-1 ಆಗಮನ ದ್ವಾರದ ಮೂರನೇ ಲೇನ್‍ನಲ್ಲಿ ಹೊಸ ಶಟಲ್ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದ್ದು, ಇದು ಆಗಮನ ಟರ್ಮಿನಲ್–1 ರಿಂದ ಪಿ–4 ಪಾರ್ಕಿಂಗ್ ಪ್ರದೇಶಕ್ಕೆ ಪ್ರತಿ ಐದು ನಿಮಿಷಗಳಿಗೊಮ್ಮೆ ಸಂಚರಿಸುತ್ತದೆ. ಈ ಸೇವೆಯ ಮೂಲಕ ಪ್ರಯಾಣಿಕರು ಕಡಿಮೆ ಸಮಯದಲ್ಲಿ, ಸುಲಭವಾಗಿ ಹಾಗೂ ಆರಾಮವಾಗಿ ಪಿ–4 ಪಾರ್ಕಿಂಗ್ ಪ್ರದೇಶವನ್ನು ತಲುಪಲು ಸಾಧ್ಯವಾಗುತ್ತದೆ.
ಸಹಾಯ ಹಸ್ತ (ಹೆಲ್ಪ್ ಡೆಸ್ಕ್): ಪ್ರಯಾಣಿಕರಿಗೆ ಮಾಹಿತಿ ನೀಡಲು ‘ಸಾರಿಗೆ ಸಹಾಯ ಡೆಸ್ಕ್' ಸ್ಥಾಪಿಸಲಾಗಿದೆ. ಲಗೇಜ್ ಸಹಾಯಕ್ಕಾಗಿ ಬಿಐಎಎಲ್‍ನ 20 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸುಲಭ ಸಂಚಾರಕ್ಕಾಗಿ ಹೊಸ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಹಿರಿಯ ನಾಗರೀಕರು, ಗರ್ಭಿಣಿಯರು, ವೀಲ್ ಚೇರ್ ಬಳಸುವವರು ಹಾಗೂ ಸಹಾಯ ಅಗತ್ಯವಿರುವ ಇತರ ಪ್ರಯಾಣಿಕರಿಗಾಗಿ ಹೈಡ್ರಾಲಿಕ್ ಸೌಲಭ್ಯವಿರುವ ಆರು ಕಾರ್ ಶಟಲ್ ವಾಹನಗಳನ್ನು ಪಿ-4 ಪಾಕಿರ್ಂಗ್ ಪ್ರದೇಶಕ್ಕೆ ತೆರಳುವ ಸಲುವಾಗಿ ಒದಗಿಸಲಾಗಿದೆ.
ಈ ಎಲ್ಲಾ ಶಟಲ್ ಮತ್ತು ಸಹಾಯಕ ಸೇವೆಗಳು ಪ್ರಯಾಣಿಕರ ಸಂಚಾರವನ್ನು ವೇಗವಾಗಿ, ಸುಗಮವಾಗಿ ಹಾಗೂ ಆರಾಮದಾಯಕವಾಗಿಸುವ ಉದ್ದೇಶದಿಂದ ಪ್ರಾರಂಭಿಸಲ್ಪಟ್ಟಿದ್ದು, ಇವುಗಳನ್ನು ಸಂಪೂರ್ಣವಾಗಿ ಉಚಿತವಾಗಿ ಪ್ರಯಾಣಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ತಿಳಿಸಿದರು.






