ರಾಯಚೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ‘ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’ ಎಂಬ ವಿನೂತನ ಅಭಿಯಾನ
ರಾಯಚೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ‘ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’ ಎಂಬ ವಿನೂತನ ಅಭಿಯಾನ
ರಾಯಚೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ‘ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’ ಎಂಬ ವಿನೂತನ ಅಭಿಯಾನಕ್ಕೆ ಇ-ಖಾತಾ ಪ್ರಮಾಣ ಪತ್ರ ವಿತರಿಸುವ ಮೂಲಕ ಸಚಿವ ಎನ್ . ಎಸ್ ಬೋಸ್ ರಾಜು ಚಾಲನೆ ನೀಡಿದರು.
ಜನರ ಮನೆಯ ಕದ ತಟ್ಟಿ ಸೌಲಭ್ಯಗಳನ್ನು ನೀಡುವ ಮಹಾನಗರ ಪಾಲಿಕೆಯ ವಿಶಿಷ್ಟ ಪ್ರಯತ್ನದಿಂದಾಗಿ ಜನರು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಈ ಅಭಿಯಾನವು ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವುದಲ್ಲದೇ, ಜನರ ಸಮಸ್ಯೆಗಳನ್ನು ಅವರ ಮನೆಯ ಹೊಸ್ತಿಲಲ್ಲೇ ನಿವಾರಣೆ ಮಾಡಲು ಮುಂದಾಗಿದೆ. ಹೀಗಾಗಿ, ಸಾರ್ವಜನಿಕರು ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಮಹಾನಗರ ಪಾಲಿಕೆಯೊಂದಿಗೆ ರಾಯಚೂರು ನಗರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ನರಸಮ್ಮ ನರಸಿಂಹಲು ಮಾಡಗಿರಿ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬೇನ್ ಮಹಾಪತ್ರ, ಹಿರಿಯ ಮುಖಂಡರಾದ ಶ್ರೀ ಕೆ.ಶಾಂತಪ್ಪ, ಶ್ರೀ ಜಯಣ್ಣ, ಶ್ರೀ ನರಸಿಂಹಲು ಮಾಡಗಿರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.






